- Advertisement -
| -ಮಲ್ಲಿ |
ಅಯ್ಯೋ ಮಾತೆತ್ತಿದರೆ ರಾಷ್ಟ್ರೀಯವಾದ, ಹಿಂದೂ ರಾಷ್ಟ್ರ ಎನ್ನುವವರೆಲ್ಲ ಆರೆಸ್ಸೆಸ್ ಸಂಸ್ಥಾಪಕ ಹೆಡಗೆವಾರ್ ಜನ್ಮದಿನದಂದು ಜೋರಾಗಿ ಮಾತೇ ಆಡಲ್ಲ! ಈಗ ಚುನಾವಣಾ ಸಮಯ, ಇವತ್ತು ಈ ‘ದೇಶಭಕ್ತ’ನ ಜನ್ಮದಿನ…(ಏಲ್ 01 ಎಂಬುದು ಕಾಕತಾಳೀಯ ಆಗಿರಕ್ಕಿಲ್ಲ!) ಚುನಾವಣೆ ಲಾಭಕ್ಕಾದರೂ ಈ ಪುಣ್ಯಾತ್ಮನ ಸ್ಟೋರಿಯನ್ನು ಅಲ್ಟ್ರಾ ದೇಶಭಕ್ತ ಮೋದಿಯಾದರೂ ವಿವರಿಸಬೇಕಿತ್ತು, ಚಿಲ್ಟೂ ತೇಜಸ್ವಿ ಸೂರ್ಯನಾದರೂ ಹೆಡಗೆವಾರ್ ಫೋಟೊಕ್ಕೆ ಹಾರ ಹಾಕಿ ಮಿಂಚಬಹುದಿತ್ತು ಅಲ್ಲವೇ?

ತಮಗೆ ಸಂಬಂಧವೇ ಇಲ್ಲದ, ತಮ್ಮ ಸಿದ್ದಾಂತಗಳನ್ನು ಪ್ರತಿಪಾದಿಸದೇ ಇದ್ದ ಗಾಂಧಿ, ಅಂಬೇಡ್ಕರ್, ವಿವೇಕಾನಂದ, ಭಗತ್‍ಸಿಂಗ್, ಬಸವಣ್ಣ, ವಲ್ಲಭಭಾಯಿ ಪಟೇಲ್-ಇವರೆಲ್ಲರ ಜನ್ಮದಿನ ಆಚರಿಸುವ ಚೆಡ್ಡಿಗಳಿಗೆ ತಮ್ಮದೇ ಗುರು ಹೆಡಗೆವಾರ್ ಜನ್ಮದಿನ ಅಂದರೆ ಅಸಡ್ಡೆ ಏಕೆ? ಅದನ್ನು ಕದ್ದುಮುಚ್ಚಿ ನಾಗಪುರದ ಕಚೇರಿಯಲ್ಲಿ ಮಾತ್ರ ಆಚರಿಸುವುದೇಕೆ?
ಇವತ್ತು ಮುಂಜಾನೆ ಸಾಫ್ಟ್‍ವೇರ್‍ನಲ್ಲಿರುವ ಮಿತ್ರನಿಗೆ ಹೆಡಗೆವಾರ್ ಜನ್ಮದಿನ ಇವತ್ತು…. ಆ ಬಗ್ಗೆ ಏನೂ ಮೆಸ್ಸೆಜೇ ಇಲ್ವಲ್ಲೋ ಎಂದೆ. ಅದಕ್ಕೆ ಆತ, ರಾಮಕೃಷ್ಣ ಹೆಗಡೆದಾ? ಹೊಗ್ಲಿಬಿಡು ಎಂದ!
ಸಂಘ ಪರಿವಾರದ ಸುಳ್ಳುಗಳನ್ನು ನಂಬಿ ‘ನಶಾ’ಕ್ಕೆ (ರಾಘವೇಂದ್ರ ಕುಷ್ಟಗಿಯವರ ಪ್ರಕಾರ, ನಶಾ- ನರೇಂದ್ರ-ಅಮಿತ್ ಶಾ) ಒಳಗಾಗಿರುವ ಇಂತಹ ಸುಶಿಕ್ಷಿತ ಯುವಕರಿಗೆ ಸತ್ಯ ದರ್ಶನ ಮಾಡಿಸುವ ಕೆಲಸ ನಮ್ಮದಾಗಬೇಕು ಅನಿಸಿತು…
ಹೆಡಗೆವಾರ್ ಸ್ವಾತಂತ್ರ್ಯ ಚಳವಳಿಯಲ್ಲಿ ಬ್ರಿಟಿಷರ ಜೊತೆ ಸಹಕರಿಸಿದ ಧೂರ್ತ. ಇಡೀ ದೇಶ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಪರ ನಿಂತಾಗ, ಆರೆಸ್ಸೆಸ್ ಕಾರ್ಯಕರ್ತರು, ಬೆಂಬಲಿಗರು ಅದರಲ್ಲಿ ಭಾಗವಹಿಸಬಾರದು ಎಂದು ಫರ್ಮಾನು ಹೊರಡಿಸಿದ ದೇಶದ್ರೋಹಿ ಈತ…
ಈತನ ಬಗ್ಗೆ ಹೇಳಿಕೊಳ್ಳಲು ಬಿಜೆಪಿಗೆ ಕಂಟೆಂಟೇ ಇಲ್ಲವೇ?


