Homeಮುಖಪುಟನವದೆಹಲಿಯಿಂದ ಜನಸಂಕಲ್ಪ ಸಮಾವೇಶಕ್ಕೆ ಬಂದ ಯುವದನಿ ಉಮರ್ ಖಾಲಿದ್ ಭಾಷಣ ಕನ್ನಡ ಅನುವಾದ

ನವದೆಹಲಿಯಿಂದ ಜನಸಂಕಲ್ಪ ಸಮಾವೇಶಕ್ಕೆ ಬಂದ ಯುವದನಿ ಉಮರ್ ಖಾಲಿದ್ ಭಾಷಣ ಕನ್ನಡ ಅನುವಾದ

- Advertisement -
- Advertisement -

ನಾನು ಹಿಂದಿಯಲ್ಲಿ ಮಾತನಾಡಲು ಅನುಮತಿ ಕೇಳುತ್ತಿದ್ದೇನೆ.

ನಾವೆಲ್ಲರೂ 2019ರ ಚುನಾವಣೆಯ ಮಿಷನ್ ಬಗ್ಗೆ ಬಹಳ ಮಾತಾಡುತ್ತಿದ್ದೇವೆ. ಆದರೆ, 2019ರ ಚುನಾವಣೆಯಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವಷ್ಟಕ್ಕೆ ನಮ್ಮ ಮಿಷನ್ ಕೊನೆಯಾಗುವುದಿಲ್ಲ. ಇಂದು ಬಿಡುಗಡೆಯಾದ ರಿಕ್ಲೈಮಿಂಗ್ ರಿಪಬ್ಲಿಕ್ ಅನ್ನು ಜಾರಿಗೊಳಿಸುವುದು ಬಹಳ ಮುಖ್ಯ. ಯಾರೇ ಅಧಿಕಾರಕ್ಕೆ ಬಂದರೂ. ಇವೇ ಇಂದಿನ ಚುನಾವಣೆಯಲ್ಲಿ ಪ್ರಮುಖ ಚರ್ಚೆಯಾಗಬೇಕಿತ್ತು. ಆದರೆ ಚರ್ಚೆ ಯಾವುದು ನಡೆಯುತ್ತಿದೆ?

ಮೋದಿ ಎದುರು ಯಾರು ಎಂಬುದು ಇಲ್ಲಿನ ಮುಖ್ಯ ಚರ್ಚೆಯಾಗಿಬಿಟ್ಟಿದೆ. ಹೇಗೋ ಮಾಡಿ ಈ ಚುನಾವಣೆಯನ್ನು ಮೋದಿ ವರ್ಸಸ್ ರಾಹುಲ್ ಗಾಂಧೀ ಮಾಡುತ್ತಿದ್ದಾರೆ. ಇದು ಇಬ್ಬರ ನಡುವಿನ ಪರ್ಸನಾಲಿಟಿ ಕಂಟೆಸ್ಟ್ ಮಾಡುವಂತಹ ಫ್ಯಾಶನ್ ಶೋ ಅಲ್ಲ. ಇದು ಭಗತ್ ಸಿಂಗ್ ಮತ್ತು ಸಾವರ್ಕರ್ ನಡುವಿನ, ಅಂಬೇಡ್ಕರ್ ಮತ್ತು ಗೋಲ್ವಾಳ್ಕರ್ ನಡುವಿನ ಸಂಘರ್ಷ.

ಮೋದಿಯಿದ್ದರೆ ಸಾಧ್ಯ ಎಂಬ ಒಂದು ಘೋಷಣೆಯಡಿ ಪ್ರಚಾರ ನಡೆಯುತ್ತಿದೆ. ಹೌದು, ಈ 5 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಏನೇನಾಗಿದೆಯೋ ಅದು ಎಂದೂ ಹಿಂದೆ ಆಗಿರಲಿಲ್ಲ. ಬಾಬಾಸಾಹೇಬರು ನಮಗೆ ಕೊಟ್ಟ ಸಂವಿಧಾನವನ್ನು ಸಮಾನ ಗಣತಂತ್ರವಾಗಿ ಈ ದೇಶ ಇರಬೇಕೆಂದು ಹೇಳುವ ಸಂವಿಧಾನವನ್ನು ಸಂಸತ್ತಿನಿಂಧ ಕೇವಲ 2 ಕಿಮೀ ದೂರದ ಜಾಗದಲ್ಲಿ 9 ಆಗಸ್ಟ್ 2018ರಂದು ಸುಟ್ಟು ಹಾಕಲಾಯಿತು. ಅವರುಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ, ಅವರ ಬಗ್ಗೆ ಯಾವುದೇ ಟಿವಿ ಚರ್ಚೆ ಮಾಡಲಿಲ್ಲ. ಏಕೆ? ಏಕೆಂದರೆ ದೇಶವನ್ನು ಆಳುವವರಿಗೆ ಬೇಕಾಗಿದ್ದನ್ನೇ ಅವರು ಮಾಡಿದ್ದರು.

ಆಸಿಫಾ ಎಂಬ 9 ವರ್ಷದ ಬಾಲಕಿಯ ಮೇಲೆ ಭೀಕರ ಅತ್ಯಾಚಾರ-ಕೊಲೆ ನಡೆದಾಗ ಆ ಪ್ರಕರಣದ ಆರೋಪಿಗಳ ಪರವಾಗಿ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಮಾಡಲಾಯಿತು. ಮುಸ್ಲಿಮರನ್ನು ಬೀದಿಗಳಲ್ಲಿ ಸಿಗಿದು ಕೊಂದ ಆರೋಪಿಗಳು ಜೈಲಿನಿಂದ ಬಿಡುಗಡೆಯಾದ ನಂತರ ಹಾರ ಹಾಕಿ ಅಭಿನಂದಿಸಲು ಒಬ್ಬ ಯೂನಿಯನ್ ಮಿನಿಸ್ಟರ್ ಹೋಗಿದ್ದರು.

ಇದೆಲ್ಲ ಈ ಹಿಂದೆ ಎಂದೂ ನಡೆದಿರಲಿಲ್ಲ. ಮಧ್ಯರಾತ್ರಿ ನೋಟು ರದ್ಧತಿ ಘೋಷಣೆಯಾಗಿ, ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದ್ದು. ಹೌದು ನಾವೂ ಹೇಳುತ್ತೇವೆ ಇದು ಮೋದಿ ಇಲ್ಲದಿದ್ದರೆ ನಡೆಯುತ್ತಿರಲಿಲ್ಲ.

ನೀರವ್ ಮೋದಿ, ಮಲ್ಯ ಮೊದಲಾದ ಎಲ್ಲರೂ ಕದ್ದ ದುಡ್ಡು ಹೊತ್ತು ದೇಶ ಬಿಟ್ಟು ಓಡಿಹೋಗಲು ಅವಕಾಶವಾಗುವಂತಹ ಪರಿಸ್ಥಿತಿ ಸೃಷ್ಟಿಸಲಾಯಿತು. ನೀರವ್ ಮೋದಿ ಕೊನೆಯ ಸಲ ಬಹಿರಂಗವಾಗಿ ಕಾಣಿಸಿಕೊಂಡಿದ್ದು ನರೇಂದ್ರ ಮೋದಿಯವರ ಜೊತೆ ದಾವೂಸ್‍ನಲ್ಲಿ. ಮೋದಿಯವರು ಚೌಕಿದಾರರಲ್ಲ, ಅಂಬಾನಿಯ ನಂಬಿಕಸ್ಥ ಮತ್ತು ದೇಶವನ್ನು ಮಾರುವ ಗುತ್ತಿಗೆದಾರ.

ಈ ದೇಶದಲ್ಲಿ 12000 ರೈತರು ಪ್ರತಿವರ್ಷ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಮಂತ್ರಿ, ಮೀಡಿಯಾ ಯಾರೂ ಮಾತಾಡದಿದ್ದಾಗ ನಾವು ಅದರ ಬಗ್ಗೆ ಮಾತಾಡಬೇಕು. ಆಹಾರದ ಹಕ್ಕಿನ ಬಗ್ಗೆ ಮಾತಾಡುವುದೂ ಬಹಳ ಮುಖ್ಯ. ಅದನ್ನು ಮಾಡುತ್ತಿದ್ದ ದೊಡ್ಡ ಅರ್ಥಶಾಸ್ತ್ರಜ್ಞ ಜಾನ್ ಡ್ರೀಜ್óರನ್ನು ಜಾರ್ಖಂಡ್‍ನಲ್ಲಿ ಮೊನ್ನೆ ಬಂಧಿಸಲಾಯಿತು, ಪ್ರತಿವರ್ಷ 3000 ಮಕ್ಕಳು ಹಸಿವಿನಿಂದ ಸಾಯುವ ಈ ದೇಶದಲ್ಲಿ ಅದು ಚುನಾವಣೆಯ ಇಶ್ಯೂ ಅಲ್ಲದಿದ್ದರೆ ಇನ್ನು ಯವುದು?

ಪ್ರತಿ ವರ್ಷ ಮ್ಯಾನ್‍ಹೋಲ್‍ನಲ್ಲಿ ಸಾಯುವ ದಲಿತರಿಗಾಗಿ ಒಂದೇ ಒಂದು ರೂಪಾಯಿ ಸಮಾಜ ಕಲ್ಯಾಣ ಇಲಾಖೆ ಖರ್ಚು ಮಾಡಿಲ್ಲ. ಇದು ಇಶ್ಯೂ ಅಲ್ಲದಿದ್ದರೆ ಇನ್ಯಾವುದು?

ನೀವು ಚುನಾವಣಾ ಬಾಂಡ್ ಮತ್ತು ನೋಟುರದ್ದತಿ ಜಿಎಸ್‍ಟಿಯನ್ನು ಜೊತೆಗೆ ಸೇರಿಸಿ ನೋಡಿ. ದೊಡ್ಡ ಬಂಡವಾಳಿಗರಾದ ಅಂಬಾನಿಯಂತಹವರ ಲಾಭದಲ್ಲಿ ಭಾರಿ ಹೆಚ್ಚಳವಾಗಿದೆ. ಅಂದರೆ ಇದು ಸಣ್ಣ ಮೀನುಗಳನ್ನು ದೊಡ್ಡ ಮೀನುಗಳು ನುಂಗಲು ಮಾಡಿರುವ ಅವಕಾಶ.

ಸಾವಿರಾರು ಕೋಟಿಯಷ್ಟು ಹಣ ಚುನಾವಣೆಗೆ ಖರ್ಚಾಗುತ್ತದೆಂದರೆ, ಯಾರ ಬಳಿ ತೋಳ್ಬಲ, ಹಣಬಲ ಇಲ್ಲವೋ ಅವರು ಚುನಾವಣೆಯಲ್ಲಿ ಲೆಕ್ಕಕ್ಕಿಲ್ಲ. ಇದರಿಂದ ನಮ್ಮ ಪ್ರಜಾತಂತ್ರ ನಾಶವಾಗುತ್ತದೆ.

ಅಮಿತ್ ಶಾ ನಾಮಪತ್ರ ಹಾಕಿದಾಗ ಅವರ ಆಸ್ತಿಯ ಪ್ರಮಾಣ ಎಷ್ಟು ಹೆಚ್ಚಳವಾಗಿದೆ ಎಂಬುದು ಗೊತ್ತಾಗಿದೆ. ಅವರ ಮಗನ ಆದಾಯ ಸಾವಿರಾರು ಪಟ್ಟು ಹೆಚ್ಚಾಗಿದೆ. ಆದರೆ, ಕಳೆದ 45 ವರ್ಷಗಳಲ್ಲಿ ಎಂದೂ ಇಲ್ಲದಷ್ಟು ನಿರುದ್ಯೋಗ ಸೃಷ್ಟಿಯಾಗಿದೆ. 24 ಲಕ್ಷ ಖಾಲಿ ಹುದ್ದೆಗಳ್ನು ಕೇಂದ್ರ ಸರ್ಕಾರ ತುಂಬದೆ ಖಾಲಿ ಬಿಟ್ಟಿದೆ. 2014ರಲ್ಲಿ ಇಂಡಿಯಾ ಫಸ್ಟ್ ಎಂಬ ಚುನಾವಣಾ ಘೋಷಣೆ ನೀಡಲಾಗಿತ್ತು. ಈಗ ಸ್ವಲ್ಪ ಸತ್ಯ ಹೇಳಿ, ಅಂಬಾನಿ ಮತ್ತು ಅದಾನಿ ಫಸ್ಟ್, ಇಂಡಿಯಾ ಲಾಸ್ಟ್ ಎಂದು.

ಹರಿಯಾಣಾದ ಗುರ್‍ಗಾಂವ್‍ನಲ್ಲಿ ಒಂದು ಕುಟುಂಬದ ಮನೆಗೆ ನುಗ್ಗಿ ಭಯಂಕರವಾಗಿ ಥಳಿಸಿದರು. ಅವರನ್ನು ಭೇಟಿಯಾದಾಗ ನಾನು ನೋಡಿದೆ. ಅವರಿಗೆ ಹಲವೆಡೆ ಮೂಳೆಮುರಿತಗಳಾಗಿವೆ. ಭಯ ಆತಂಕ ಹುಟ್ಟಿದೆ. ಆದರೆ ಅವರ ಮೇಲೆಯೇ ಕೊಲೆಯತ್ನ ಕೇಸ್ ಹಾಕಲಾಗಿದೆ. ಅಖ್ಲಾಕ್, ಪಹ್ಲೂಖಾನ್ ಎಲ್ಲರ ಪೆಕರಣದಲ್ಲೂ ಸತ್ತವರ ಕುಟುಂಬದವರ ಮೇಲೆಯೇ ಪ್ರಕರಣ ದಾಖಲಾಗಿದೆ.

ಇದು ಒಂದಿಡೀ ಸಮುದಾಯದಲ್ಲಿ ಭೀತಿ ಹುಟ್ಟಿಸಿ ಹಿಂದೆ ತಳ್ಳುವ ಆರೆಸ್ಸೆಸ್‍ನ ಹಳೆಯ ಕುತಂತ್ರ. ಸಾಚಾರ್ ಸಮಿತಿ ವರದಿ ಹೇಳುತ್ತದೆ. ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ರೈಲ್ವೇಸ್‍ಲ್ಲಿ, ಸೈನ್ಯದಲ್ಲಿ ಎಲ್ಲೂ ಮುಸ್ಲಿಮರಿಲ್ಲ. ಒಂದೇ ಸ್ಥಳದಲ್ಲಿ ಅವರು ತಮ್ಮ ಜನಸಂಖ್ಯೆಗಿಂತ ಹೆಚ್ಚು ಸರಾಸರಿಯಲ್ಲಿದ್ದಾರೆ, ಅದು ಭಾರತದ ಜೈಲುಗಳಲ್ಲಿ! ಈ ಸಮುದಾಯವು ಇಂದು ಇವೇನನ್ನೂ ಕೇಳುವ ಹಾಗಿಲ್ಲ. ನಮ್ಮ ವಿರುದ್ಧ ಗಲಭೆ ಮಾಡಬೇಡಿ, ರಕ್ಷಣೆ ಕೊಡಿ ಎಂದು ಕೇಳಿಕೊಳ್ಳಬೇಕಾಗಿದೆ.

ಯಾವ ಸಂಘಟನೆ ಬ್ರಿಟಿಷರ ಜೊತೆ ರಾಜಿ ಮಾಡಿಕೊಂಡು ಅವರಿಗೆ ಕ್ಷಮಾಪಣೆ ಪತ್ರ ಬರೆದು ಕಾಲಕಳೆಯಿತೋ ಅವರ ಇಂದು ದೇಶಪ್ರೇಮದ ಗುತ್ತಿಗೆ ಹಿಡಿದಿದ್ದಾರೆ. ಹೀಗೆ ಹೇಗೆ ಆಯಿತು? ಹೇಗೆಂದರೆ 2014ರಿಗಿಂತ ಹಿಂದೆಯೇ ಪ್ರಜಾತಂತ್ರ ದುರ್ಬಲಗೊಳ್ಳುತ್ತಿತ್ತು. ಇಂದು ಮೋದಿ ವಿರೋಧಿಗಳೆನ್ನುವವರದ್ದೂ ಅದರಲ್ಲಿ ಪಾತ್ರವಿದೆ. 1984ರ ದಂಗೆಯ ಬಗ್ಗೆ ಸರಿಯಾದ ತನಿಖೆ ಆಗಲೇ ಇಲ್ಲ. ಸಾರ್ವಜನಿಕ ಉದ್ದಿಮೆಗಳನು ದುರ್ಬಲಗೊಳಿಸುವುದರಲ್ಲಿ ಅವರ ಪಾತ್ರವಿದೆ. ಶ್ರೀಕೃಷ್ಣ ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡಿಲ್ಲ. ಜಾಗತೀಕರಣ ನೀತಿಗಳನ್ನು ಜಾರಿಗೆ ತಂದಿದ್ದಾರೆ.

ದೇಶದ ಜನರು ಇವೆಲ್ಲವನ್ನೂ ಅರ್ಥ ಮಾಡಿಕೊಂಡರೆ, 2019ರ ಚುನಾವಣೆಯಲ್ಲಿ ನಾವು ಅವರನ್ನು ಗುಜರಾತ್‍ಗೆ ಘರ್ ವಾಪಸಿ ಮಾಡಿಸುತ್ತೇವೆಂಬ ನಂಬಿಕೆ ನನಗಿದೆ. ಆದರೆ, ಇವರನ್ನು ಚುನಾವಣೆಯಲ್ಲಿ ಸೋಲಿಸುವುದಷ್ಠೆ ನಮ್ಮ ಕೆಲಸವಲ್ಲ. ಆರೆಸ್ಸೆಸ್ಸನ್ನು ಸೈದ್ಧಾಂತಿಕವಾಗಿ ಸೋಲಿಸುವುದು ಮತ್ತು ನಮ್ಮ ಸಂವಿಧಾನದ ಆಶಯವಾದ ಜೀವಪರ ದೇಶವನ್ನು ಕಟ್ಟುವುದು ನಮ್ಮ ಕೆಲಸವಾಗಬೇಕು ಈಗ.

 

ಇಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ. ಧನ್ಯವಾದಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...