Homeಮುಖಪುಟಬಳ್ಳಾರಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಆತನ ಪತ್ನಿಯಿಂದಲೇ ಪ್ರಚಾರ

ಬಳ್ಳಾರಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಆತನ ಪತ್ನಿಯಿಂದಲೇ ಪ್ರಚಾರ

- Advertisement -
- Advertisement -

ಹೌದು ನಿಮಗೆ ಆಶ್ಚರ್ಯವಾದರು ಸಹ ಇದು ಸತ್ಯ. ಇಂತಹದೊಂದು ಅಪರೂಪದ ಪ್ರಕ್ರಿಯೆಗೆ ಬಳ್ಳಾರಿ ಚುನಾವಣಾ ಕಣ ಸಾಕ್ಷಿಯಾಗಿದೆ. ಕೇವಲ ಆರು ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ಜಿದ್ದಾಜಿದ್ದಿನ ಕಾಳಗ ನಡೆದು ಕೊನೆಗೆ ಕಾಂಗ್ರೆಸ್ ನ ವಿ.ಎಸ್ ಉಗ್ರಪ್ಪನವರು ಪ್ರಚಂಡ ಬಹುಮತದೊಂದಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗಿನ ಸಾರ್ವತ್ರಿಕ ಚುನಾವಣೆಯ ಕಣದಲ್ಲಿಯೂ ಅವರೇ ಕಾಂಗ್ರೆಸ್ ನ ಅಭ್ಯರ್ಥಿ. ಇವರ ವಿರುದ್ಧದ ಪ್ರತಿಸ್ಪರ್ಧಿ ಬಿಜೆಪಿಯಿಂದ ದೇವೆಂದ್ರಪ್ಪನವರು ಕಣಕ್ಕಿಳಿದಿದ್ದಾರೆ.

ವಿಶೇಷವೆನೆಂದರೆ ಬಳ್ಳಾರಿಯ ಹಾಲಿ ಜಿ.ಪಂ ಸದಸ್ಯೆ ಸುಶೀಲಮ್ಮನವರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದವರು. ಅವರ ಪತಿಯೇ ಬಿಜೆಪಿಯಿಂದ ಸ್ಪರ್ಧಿಸಿರುವ ದೇವೆಂದ್ರಪ್ಪನವರಾಗಿದ್ದಾರೆ. ಈ ಮುಂಚೆ ದೇವೆಂದ್ರಪ್ಪನವರು ಸಹ ಕಾಂಗ್ರೆಸ್ ನಲ್ಲಿದ್ದರು. ಕಳೆದ ಉಪಚುನಾವಣೆಯಲ್ಲಿನ ಹೀನಾಯ ಸೋಲಿನಿಂದ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲು ಅಭ್ಯರ್ಥಿಗಳ ಕೊರತೆ ಕಾಡಿತ್ತು. ಹರಕೆಯ ಕುರಿಯಾಗಲು ಯಾರು ಸಿಗದಿದ್ದಾಗ ಮುಂದೆ ಬಂದವರೆ ದೇವೆಂದ್ರಪ್ಪ.

ಹಾಗೆ ನೋಡಿದರೆ ಹರಪನಹಳ್ಳಿಯ ನಿವಾಸಿಗಳಾದ ದೇವೆಂದ್ರಪ್ಪ ಮತ್ತು ಸುಶೀಲಮ್ಮ ದಂಪತಿಗಳು ಕಾಂಗ್ರೆಸ್ ನಲ್ಲಿದ್ದರೂ ಕೂಡ ಬಿಜೆಪಿ ಬಿ.ಶ್ರೀರಾಮುಲುರವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದವರಾಗಿದ್ದರು. ಹರಪನಹಳ್ಳಿ ತಾಲ್ಲೂಕಿನ ಜಿ.ಪಂ ಸ್ಥಾನಕ್ಕೆ ಸುಶೀಲಮ್ಮನವರು ಕಾಂಗೈನಿಂದ ಆಯ್ಕೆಯಾಗಿದ್ದರು. ಆದರೆ ಅವರ ಪತಿ ದೇವೆಂದ್ರಪ್ಪನವರು ಖಾಲಿ ಇದ್ದರು. ಈಗ ಬಿಜೆಪಿಗೆ ಅಭ್ಯರ್ಥಿಗಳಿಲ್ಲದ ಸಂದರ್ಭವನ್ನು ಬಳಸಿಕೊಂಡು ಬಿಜೆಪಿ ಹಾರಿದ್ದಾರೆ. ಆದರೆ ಅವರ ಪತ್ನಿ ಸುಶೀಲಮ್ಮನವರು ಈಗಲು ಸಹ ಕಾಂಗ್ರೆಸ್ ನ ಅಭ್ಯರ್ಥಿ ವಿ.ಎಸ್ ಉಗ್ರಪ್ಪನವರ ಪರ ಪ್ರಚಾರ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಎಂ.ಎಲ್.ಸಿ ಅಲ್ಲಂ ವೀರಭದ್ರಪ್ಪ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆ ಪ್ರತಿ ಲೋಕಸಭಾ ಚುನಾವಣೆಯಲ್ಲಿಯೂ ರಣರಂಗವಾಗುತ್ತಿತ್ತು. ಅಷ್ಟು ಸುಲಭಕ್ಕೆ ಸೋಲಪ್ಪಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸಿದ್ದರಿರಲಿಲ್ಲ. ಕಳೆದ ಐದು ವರ್ಷಗಳ ಹಿಂದೆ ರೆಡ್ಡಿ ಸಹೋದರರ ರಿಪಬ್ಲಿಕ್ ಆಗಿದ್ದ ಬಳ್ಳಾರಿಯಲ್ಲಿ ಇಂದು ಚುನಾವಣೆಗೂ ಮುನ್ನವೇ ಬಿಜೆಪಿ ಸೋಲಪ್ಪಿಕೊಂಡಿರುವುದು ನೋಡಿದರ ಅವರ ಮಹಾನ್ ತಪ್ಪುಗಳಿಗೆ ತಕ್ಕ ಶಿಕ್ಷೆ ಸಿಕ್ಕಿದ ಹಾಗೆ ಆಗಿದೆ. ಹಣದಿಂದ ಜನರನ್ನು ಕೊಂಡುಕೊಳ್ಳುತ್ತೇವೆಂಬ ಅವರ ಅಹಂಕಾರಕ್ಕೆ ದೊಡ್ಡ ಕೊಡಲಿ ಪೆಟ್ಟು ಬಿದ್ದಿದೆ. 2018ರ ವಿಧಾನಸಭಾ ಚುನಾಚಣೆಗುವರೆಗೂ ಸದ್ದು ಮಾಡುತ್ತಿದ್ದ ಬಿ.ಶ್ರೀರಾಮುಲು ಈಗ ಸೋತು ಸುಣ್ಣವಾಗಿದ್ದಾರೆ.

ಶ್ರೀರಾಮುರವರ ಸಹೋದರಿ ಶಾಂತರವರು 2009ರಲ್ಲಿ ಬಿಜೆಪಿಯಿಂದ ಈ ಕ್ಷೇತ್ರದಲ್ಲಿ ಕಣಕ್ಕಿಳಿದು ಸಂಸದರಾಗಿದ್ದರೆ, 2014ರಲ್ಲಿ ಬಿ ಶ್ರೀರಾಮು ಜಯಶಾಲಿಯಾಗಿ ಸಂಸತ್ ಪ್ರವೇಶಿಸಿದ್ದರು. 2ಸಾವಿರ ಮತಗಳ ಅಂತರದಲ್ಲಿ 2009ರಲ್ಲಿ ಕಾಂಗ್ರೆಸ್ ಅಲ್ಲಿ ಸೋತಿದ್ದರೆ 2014ರಲ್ಲಿ ಸೋಲಿನ ಅಂತರ ಒಂದು ಲಕ್ಷಕ್ಕೆ ಏರಿಕೆಯಾಗಿತ್ತು. ಆದರೆ 2018ರಲ್ಲಿ ಬಿ.ಶ್ರೀರಾಮು ವಿಧಾನಸಭೆಗೆ ಆಯ್ಕೆ ಆದ ಕಾರಣ ತೆರವಾದ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಕಾಂಗ್ರೆಸ್ ನಿಂದ ಚಿಂತಕ ವಿ.ಎಸ್ ಉಗ್ರಪ್ಪ ಕಣಕ್ಕಿಳಿದಿದ್ದರು. ಮತ್ತೆ ರಾಮುಲು ಸಹೋದರಿ ಜೆ ಶಾಂತ ಬಿಜೆಪಿಯಿಂದ ಪ್ರತಿಸ್ಪರ್ಧಿಯಾಗಿದ್ದರು. ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಅಭ್ಯರ್ಥಿ ಕಣಕ್ಕಿಳಿಸಿರಲಿಲ್ಲ. ಜಿದ್ದಾಜಿದ್ದಿನ ಕಾಳಗದಲ್ಲಿ ಕಾಂಗ್ರೆಸ್ ನ ವಿ.ಎಸ್ ಉಗ್ರಪ್ಪ 2,43,161 ಮತಗಳ ಭಾರೀ ಅಂತರದಿಂದ ಗೆದ್ದು ಬಿಜೆಪಿಯನ್ನು ಧೂಳಿಪಟ ಮಾಡಿದ್ದರು.

Chief Minister BS Yeddyurappa and Opposition leader Siddaramaiah seen in an argument during Assembly Session at Vidhana Soudha in Bangalore on Friday. -KPN

ಗಣಿರೆಡ್ಡಿಗಳ ಮಿತಿಮೀರಿದ ಹಾವಳಿ ವಿರುದ್ಧ ತೊಡೆ ತಟ್ಟಿದ್ದ ಸಿದ್ದರಾಮಯ್ಯ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿ ಇತಿಹಾಸ ಸೃಷ್ಟಿಸಿದ್ದರು. ನಂತರ ಅಲ್ಲಿನ ವಾತವಾರಣ ನಿಧಾನವಾಗಿ ಬದಲಾಗಲು ಆರಂಭವಾಯಿತು. ಈಗ ಅಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಪಾರಮ್ಯ ಮೆರೆದಿದೆ. ಹಾಗಾಗಿ ಬಿಜೆಪಿಗೆ ಈ ಬಾರಿ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು. ಹಾಗಾಗಿ ಯಾರು ಕಣಕ್ಕಿಳಿಯಲು ಮನಸ್ಸ ಮಾಡಲಿಲ್ಲ. ಕೊನೆಗೆ ರಾಮುಲು ಹರಕೆಯ ಕುರಿ ದೇವೆಂದ್ರಪ್ಪನನ್ನು ತಂದು ಕಣಕ್ಕೆ ಕಟ್ಟಿದ್ದಾರೆ. ದೇವೆಂದ್ರಪ್ಪನೂ ಕಾಟಚಾರದ ಪ್ರಚಾರ ಮಾಡಿದರೆ ಕಾಂಗ್ರೆಸ್ ಪರ ಆತನ ಪತ್ನಿಯೂ ಸಹ ಕಾಟಚಾರದ ಪ್ರಚಾರವನ್ನಷ್ಟೇ ಮಾಡಲಿದ್ದಾರೆ. ಒಟ್ಟಿನಲ್ಲಿ ಫಲಿತಾಂಶಕ್ಕೆ ಮುನ್ನ ಕಾಂಗ್ರೆಸ್ ಹಬ್ಬ ಆಚರಿಸುತ್ತಿದೆ ಅಷ್ಟೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಪರೀಕ್ಷೆ, ಸಂತ್ರಸ್ತರಿಗೆ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

0
ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಒಪ್ಪಿಕೊಂಡ ಹಿನ್ನೆಲೆ, ವಕೀಲರೊಬ್ಬರು ಈ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಅಪಾಯದ ಅಂಶಗಳನ್ನು ಪರೀಕ್ಷಿಸಲು ವೈದ್ಯಕೀಯ...