Homeಮುಖಪುಟಮಿತ್ರೋ ಸ್ವಲ್ಪ ಇಲ್ಲಿ ಕೇಳಿ. - ಭರತ್ ಹೆಬ್ಬಾಳ್ ರವರ ಮಿತ್ರೋ ಬರಹಗಳು

ಮಿತ್ರೋ ಸ್ವಲ್ಪ ಇಲ್ಲಿ ಕೇಳಿ. – ಭರತ್ ಹೆಬ್ಬಾಳ್ ರವರ ಮಿತ್ರೋ ಬರಹಗಳು

- Advertisement -
| ಭರತ್ ಹೆಬ್ಬಾಳ್ |
ಮೊನಚು ಹಾಸ್ಯದ ಮೂಲಕ ಆಳುವವರನ್ನು ಪ್ರಶ್ನಿಸುವುದು ಬಹಳಷ್ಟು ಜನರಿಗೆ ಬೇಗ ಮುಟ್ಟುತ್ತದೆ. ಈ ರೀತಿಯಾಗಿ ನರೇಂದ್ರ ಮೋದಿ ಸರ್ಕಾರ ಜನರಿಗೆ ಮಾಡುತ್ತಿರುವ ಮೋಸಗಳನ್ನು ಮಿತ್ರೋ ಸೀರೀಸ್ ನಲ್ಲಿ ಭರತ್ ಹೆಬ್ಬಾಳ್ ಬರೆಯುತ್ತಾರೆ. ಆಯ್ದ ಮಿತ್ರೋನ್ ಬರಹಗಳು ನಿಮ್ಮ ಓದಿ, ನಕ್ಕು ನಲಿಯಿರಿ.
Mithron, ಚುನಾವಣಾ ಪ್ರಚಾರದ ಪ್ರಯುಕ್ತ  ನಾನು ಹುಟ್ಟಿದ ನಾಡಾದ ಕರ್ನಾಟಕಕ್ಕೆ ಮತ್ತೆ ಬರ್ತಿದ್ದೀನಿ, ನಾನು ಕನ್ನಡಿಗ ಅಂದ್ರೆ  ನಿಮಗೆ ಆಶ್ಚರ್ಯವಾಗಬೊಹುದು.. ಆದರೆ ನಾನು ಹುಟ್ಟಿದ್ದು ಕರ್ನಾಟಕದಲ್ಲೇ.. ಇಲ್ದೆಇರೋ ಅಚ್ಛೇದಿನ್  ಜಿಲ್ಲೆಯ ಸಾಬ್ಕವಿಕಾಸ್ ತಾಲೂಕಿನ “ಸತ್ಯಸುಳ್ ಮಾಡೋಹಳ್ಳಿ” ನಾನು ಹುಟ್ಟಿದ್ದು ಎಂಬುವ ಸತ್ಯ  ಇಲ್ಲಿಯ ತನಕ ಯಾರಿಗೂ ಗೊತ್ತಿಲ್ಲ. ಚಿಕೊವ್ನಿದ್ದಾಗ ಮೈಸೂರ್ ದಸರಾ ಜಾತ್ರೆಲಿ ಕಳೆದು ಹೋಗಿ ಗುಜರಾತ್ ಸೇರ್ಕೊಂಡೆ.. ಆದ್ದರಿಂದ ನನ್ನನ್ನು ಅಂದರೆ ನಾನು ಸ್ಪರ್ದಿಸುತ್ತಿರುವ 27 ಕ್ಷೇತ್ರಗಳಲ್ಲಿ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಕೋರುತ್ತೇನೆ.. ಜೈ ಚೊಂಭೇಶ್ವರ..
——
Mithron,  ಅತಿ ಭ್ರಷ್ಟ ಲೋಫರ್ ಲಫ್ಹಂಗಾಗಳು ಸರ್ಕಾರಿ ಕೆಲಸದಲ್ಲಿದ್ದುಕೊಂಡು ಸೈಟು, ಮನೆ, ಜಮೀನು, ಚಿನ್ನ ಇತ್ಯಾದಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಮಾಡ್ಕೊಂಡು “ನಾನು ಮಾತ್ರ ಭ್ರಷ್ಟನಲ್ಲ” ಅಂಥ ನನ್ನ ಬೆನ್ನ ಹಿಂದೆ ನಿಂತ್ಕೊಂಡ್ ನಾನು ಎನ್ ಹೇಳುದ್ರು ಮೋದಿ ಮೋದಿ ಎಂದು ಅರಚುತ್ತಾ, ಸ್ವಚ್ಛ ಭಾರತ, ಭ್ರಷ್ಟ ಕಾಂಗ್ರೆಸ್ ಅಂತೆಲ್ಲ ಮಾತಾಡ್ತಾರಲ್ಲ.. ಇವರುಗಳ ಬಗ್ಗೆ ಯೋಚನೆ ಮಾಡುದ್ರೆ ಒಂದೊಂದ್ ಸಾರ್ತಿ ಭಯ ಬಂದು ರಾತ್ರಿಯೆಲ್ಲ ನಿದ್ದೆ ಬರೋಲ್ಲ.. ಎಂಥ ಮನಗೆಟ್ಟ ಜನ್ಮ ಈ ಲೋಫರ್ಗಳದ್ದೂ.
——
Mithron, ಹಿಂದೂ ಸಂಸ್ಕೃತಿ ಸಂಪ್ರದಾಯದ ಪ್ರಕಾರ 15 ಲಕ್ಷ ಕೊಡುವುದು ಒಳ್ಳೆಯದಲ್ಲ. ಆದ್ದರಿಂದ ಈ ಭಾರಿ ನನ್ನನ್ನು ಗೆಲ್ಲಿಸಿದರೆ ಹಿಂದೂ ಸಂಸ್ಕೃತಿಯ ಪ್ರಕಾರ 15 ಲಕ್ಷದ ಒಂದು ರೂಪಾಯಿ ನಿಮ್ಮ ಅಕೌಂಟಿಗೆ  ಬಂದು ಬೀಳುವುದು ಗ್ಯಾರೆಂಟಿ..
——
Mithron, ಬೆಂಗಳೂರಿನ ಬೀದಿಗಳಲ್ಲಿ ಕಲ್ಲು ಬೀಸಿದರೆ ಒಂದೋ ಬೀದಿ ನಾಯಿಗೆ ತಗಲುತ್ತದೆ ಅಥವಾ ಸಾಫ್ಟ್ ವೆರ್ ಟೆಕಿಗಳಿಗೆ ಬೀಳುತ್ತದೆ ಎಂಬ ಮಾತಿತ್ತು.. ಭಾಹಿಯೋ ಔರ್ ಬೆಹೆನೋ ಇದರಲ್ಲಿ ವ್ಯತ್ಯಾಸ ಇಷ್ಟೇ, ನಾಯಿಗಳು ಕುಯ್ ಅಂಥವೇ, ಇಲ್ಲ ಎದುರು ಬಂದು ಬೊಗಳಿ ಕಚ್ಚುವ ಪ್ರಯತ್ನ ಮಾಡುತ್ತವೆ.. ಆದರೆ ಬಹುತೇಕ ಸಾಫ್ಟ್ ವೆರ್ ಟೆಕಿಗಳು ಮಾತ್ರ ಏನೇ ಆಗಲಿ ಮೋದಿ ಮೋದಿ ಎಂದು ಕೂಗುತ್ತಾರೆ ಅಷ್ಟೇ.. #ಮತ್ತೊಮ್ಮೆಮೋದಿ #ಕುಯ್ #ಜೈಚೊಂಭೇಶ್ವರ
——
Mithron, ಮೊನ್ನೆ ಚೆನ್ನಾಗಿ ಓದಿಕೊಂಡು ದೊಡ್ಡ ಹುದ್ದೆಯಲ್ಲಿರುವ  ನನ್ನ ಪರಮ ಭಕ್ತನೊಬ್ಬನನ್ನು ಪ್ರಶ್ನೆ ಮಾಡಿದೆ. ನಾಜಿ ಜರ್ಮನಿಯಲ್ಲಿ ಹಿಟ್ಲರ್ನನ ಪರವಾಗಿರ್ತೀಯ? ಅಥವಾ ಲಕ್ಷಗಟ್ಟಲೆ ಕೊಲ್ಲಲ್ಪಟ್ಟ ಯಹೂದಿಗಳ ಪರವಾಗಿರ್ತಿಯ ಅಂಥ.. ಅವನು ಹಿಟ್ಲರ್ ಪರವಾಗಿರ್ತೀನಿ ಅಂದ.
ಸರಿ, ಸದ್ಯದ ಪರಿಸ್ಥಿತಿಯಲ್ಲಿ ಪ್ರಜಾತಾಂತ್ರಿಕ ಜರ್ಮನಿಯನ್ನು ಸಪ್ಪೋರ್ಟ್ ಮಾಡ್ತಿಯ ಅಥವಾ ಪ್ಯಾಲೆಸ್ತೀನಿಯನ್ನರ ಮಾರಣಹೋಮ ಮಾಡುತ್ತಿರುವ ಇಸ್ರೇಲಿ ಯಹೂದಿಗಳ ಸಪ್ಪೋರ್ಟ್ ಮಾಡ್ತಿಯ ಅಂಥ.. ಅವನು ಇಸ್ರೇಲಿ ಯಹೂದಿಗಳ ಪರ ಎಂದ..
ಆ ಉತ್ತರಗಳನ್ನು ಕೇಳಿ ಕರುಳು ಕಿತ್ ಬಂತು ನಂಗೆ.. ಸೊ ನಾನು ಏನೇ ಮಾಡಿದರೂ, ನನ್ನ ಹಿಂದೆ ಸಾಮಾಜಿಕ ಪ್ರಜ್ಞೆಯಿಲ್ಲದ, ಸರ್ವಾಧಿಕಾರವನ್ನು ಬಯಸುವ ಇಂತ ಸುಶಿಕ್ಷಿತ ನಾಯಿಗಳಿರುವವರೆಗೂ ನನ್ನ ಸ್ಥಾನ  ಭದ್ರ ಎಂದು ಖಾತರಿಯಾಯಿತು..
——
Mithron, ನನ್ನ ಸಲಹೆಗಾರರು ನಂಗೆ ನಾಲ್ಕು ಆಯ್ಕೆ ಕೊಟ್ಟಿದ್ರು.
1. ನನ್ನ ಕಣ್ಣೋಟದಿಂದಲೇ ಕೆಳಮಟ್ಟದ ಉಪಗ್ರಹಗಳ ನಾಶ ಮಾಡುವ ಶಕ್ತಿ.
2. ಮಂತ್ರ ಜಪಿಸುತ್ತ ನನ್ನ ಮನಶಕ್ತಿಯಿಂದ ಕೆಳಮಟ್ಟದ ಉಪಗ್ರಹಗಳ ನಾಶ ಮಾಡುವ ಶಕ್ತಿ.
3. ನಾನು ಶಾ ಹೊಟ್ಟೆಮೇಲ್ ನಿತ್ಕೊಂಡ್ ಜಂಪ್ ಮಾಡಿ ಸೊಳ್ಳೆ ಬ್ಯಾಟ್ನಿಂದ ಉಪಗ್ರಹಗಳ ನಾಶ ಮಾಡುವ ಶಕ್ತಿ.
4. ಹತ್ತು ವರ್ಷದ ಹಿಂದೆಯೇ ಸಿದ್ಧಪಡಿಸಿದ್ದ ವಿಶೇಷ  ಅಗ್ನಿ 5 ಕ್ಷಿಪಣಿಯಿಂದ ಕೆಳಮಟ್ಟದ ಉಪಗ್ರಹಗಳನ್ನು ನಾಶ ಮಾಡುವ ಶಕ್ತಿ.
ನಾನು ನಾಲ್ಕನೇಯದನ್ನು ಆರಿಸಿಕೊಂಡೆ ಚೋಂಬೇಶ್ವರ
——
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...