ನಾಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಪಕ್ಷದ ಭಿನ್ನಮತಿಯರ ನಡುವೆ ನಡೆಯಲಿರುವ ಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಭಾಗವಹಿಸಲಿದ್ದಾರೆ. “ಜಿ -23” ಎಂದು ಕರೆಯಲ್ಪಡುವ 23 “ಭಿನ್ನಮತೀಯರ” ಗುಂಪಿನೊಂದಿಗೆ ನಾಳೆ ಸಭೆ ನಡೆಯಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಕಾಂಗ್ರೆಸ್‌ನಲ್ಲಿ ನಾಯಕತ್ವ ಹಾಗೂ ಪಕ್ಷದೊಳಗೆ ಸಾಂಸ್ಥಿಕ ಬದಲಾವಣೆ ಮಾಡಬೇಕು ಎಂದು ಪತ್ರ ಬರೆದಿದ್ದ ನಾಯಕರೊಂದಿಗೆ ನಡೆಯುವ ಗಾಂಧಿ ಕುಟುಂಬದ ಸಭೆಯು ತಿಂಗಳುಗಳಿಂದ ನಡೆಯುತ್ತಿರುವ ಆಂತರಿಕ ಕಚ್ಚಾಟವನ್ನು ಸಾಮರಸ್ಯದೆಡೆಗೆ ಕೊಂಡೊಯ್ಯುಲು ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ; ’ಭಿನ್ನಮತೀಯ’ ಪತ್ರದ ಬಗ್ಗೆ ಭಾರಿ ಚರ್ಚೆ
ಆದರೆ ಸಭೆಗೆ ಪತ್ರಕ್ಕೆ ಸಹಿ ಹಾಕದ ಇತರ ನಾಯಕರು ಸಹ ಹಾಜರಾಗಲಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಸಾಂಸ್ಥಿಕ ಚುನಾವಣೆಗೆ ಮುಂಚಿತವಾಗಿ ಸೋನಿಯಾ ಗಾಂಧಿ ವಿವಿಧ ಗುಂಪುಗಳನ್ನು ಭೇಟಿಯಾಗುತ್ತಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಸಭೆಗೆ ಸೋನಿಯಾ ಗಾಂಧಿಯನ್ನು ಒಪ್ಪಿಸುವಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್‌ನಲ್ಲಿ ಪಕ್ಷದ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿಗೆ ಪಕ್ಷಾಂತರಗೊಂಡ ನಂತರ ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡ ಕಮಲ್ ನಾಥ್, ಇದುವರೆಗೂ ಭಿನ್ನಮತೀಯರಿಂದ ದೂರ ಉಳಿದಿದ್ದರು. ಮೂಲಗಳ ಪ್ರಕಾರ ಅವರು ಈಗ ಭಿನ್ನಮತೀಯರನ್ನು ಬೆಂಬಲಿಸಿದ್ದಾರೆ ಎನ್ನಲಾಗಿದೆ.
2014 ರಲ್ಲಿ ಅಧಿಕಾರ ಕಳೆದುಕೊಂಡಾಗಿನಿಂದ ಪಕ್ಷವು ಹಿನ್ನಡೆ ಅನುಭವಿಸುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಕಾಂಗ್ರೆಸ್‌ನ 23 ನಾಯಕರು “ಸಕ್ರಿಯ ಮತ್ತು ಗೋಚರ ನಾಯಕತ್ವ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆ”ಗೆ ಕರೆ ನೀಡಿದ್ದರು.
ಇದನ್ನೂ ಓದಿ: ಕಾಂಗ್ರೆಸ್‌ಗೆ ನ್ಯಾಯಯುತ, ವಾಸ್ತವಿಕ ನೆಲೆಗಟ್ಟಿನ ಅಧ್ಯಕ್ಷರ ಅಗತ್ಯವಿದೆ: ಕಪಿಲ್ ಸಿಬಲ್
ಜಿಯೋದಿಂದ ಪೋರ್ಟ್ ಆಗುತ್ತಿರುವ ರೈತ, ಕಸ್ಟಮರ್ ಕೇರ್ ಜೊತೆ ಹೇಳಿದ್ದೇನು? ವಿಡಿಯೋ ನೋಡಿ


