‘ಕೃಷಿ ಸಚಿವ ನರೇಂದ್ರ ತೋಮರ್ ಈ ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ ಪಂಜಾಬ್‌ನ ಅತಿದೊಡ್ಡ ರೈತ ಸಂಘವು, “ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಅವರು ಆಂದೋಲನ ಮಾಡುತ್ತಿರುವ ರೈತರೊಂದಿಗೆ ಮಾತನಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಭಾರತೀಯ ಕಿಸಾನ್ ಒಕ್ಕೂಟದ (ಏಕ್ತಾ ಉಗ್ರಾಹನ್) ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಾಹನ್, “ಯಾವುದೇ ಸಮಿತಿಯು ಸರ್ಕಾರದಿಂದ ಅಥವಾ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ರಚನೆಯಾದರೆ ಅದರಲ್ಲಿ ಎಲ್ಲಾ ರೈತ ಸಂಘಗಳ ಪ್ರತಿನಿಧಿಗಳೂ ಸದಸ್ಯರಾಗಿರಬೇಕು” ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿ ಬಿಜೆಪಿ ಕಾರ್ಯಕರ್ತರ ಭೇಟಿ ಮಾಡಿದ್ದನ್ನು, ರೈತರೊಂದಿಗಿನ ಭೇಟಿಯೆಂದ ಮಾಧ್ಯಮಗಳು!
“ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಮಾತನಾಡುವುದು ಸ್ವೀಕಾರಾರ್ಹವಲ್ಲ. ಏಕೆಂದರೆ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೃಷಿ ಕಾನೂನುಗಳ ಬಗ್ಗೆ ಯಾವುದೇ ನಿರ್ಧಾರವನ್ನು ಪ್ರಧಾನ ಮಂತ್ರಿ ಮಟ್ಟದಲ್ಲಿ ತೆಗೆದುಕೊಳ್ಳುವುದರಿಂದ ಪ್ರಧಾನಿ ಅಥವಾ ಗೃಹ ಸಚಿವರು ಮಾತನಾಡಬೇಕು” ಎಂದು ಹೇಳಿದರು.
“ಕೇಂದ್ರದ ಸಂಸ್ಥೆಗಳು ರೈತರು ಮತ್ತು ಅವರಿಗೆ ಸಹಕಾರಿಯಾಗಿರುವ ಉದ್ಯಮಿಗಳನ್ನು ಗುರಿ ಮಾಡಿಕೊಂಡು ಅವರ ಕಛೇರಿಗಳ ಮೇಲೆ ದಾಳಿ ಮಾಡುತ್ತಿದೆ. ನಾವು ಆದಾಯ ತೆರಿಗೆ ಕಛೇರಿಗಳಿಗೆ ಮುತ್ತಿಗೆ ಹಾಕುತ್ತೇವೆ” ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್ ಹೇಳಿದರು.
ಇದನ್ನೂ ಓದಿ: ಮಾಲೆಗಾಂವ್ ಸ್ಪೋಟ: 2 ನೇ ಬಾರಿಯೂ ವಿಚಾರಣೆಗೆ ತಪ್ಪಿಸಿಕೊಂಡ ಪ್ರಜ್ಞಾ ಸಿಂಗ್ ಠಾಕೂರ್
ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಯನ್ನು ಪುನರುಚ್ಚರಿಸುತ್ತಾ, ಬಿಕೆಯು (ಕ್ಯಾಡಿಯನ್ ಗ್ರೂಪ್) ನ ಹರ್ಮೀತ್ ಸಿಂಗ್ ಕಡಿಯನ್, “ಸರ್ಕಾರದೊಂದಿಗಿನ ನಮ್ಮ ಮಾತುಕತೆಯಲ್ಲಿ, ನಾವು 18 ತಿದ್ದುಪಡಿಗಳನ್ನು ನೀಡಿದ್ದೇವೆ. ಸರ್ಕಾರವು ಈವರೆಗೆ ಎಂಟಕ್ಕೆ ಒಪ್ಪಿಗೆ ನೀಡಿದೆ. ಉಳಿದ 10 ತಿದ್ದುಪಡಿಗಳ ಕಥೆ ಏನು? ಕಾನೂನುಗಳನ್ನು ತಿದ್ದುಪಡಿ ಮಾಡುವ ಬದಲು ಅದನ್ನು ರದ್ದುಪಡಿಸುವುದು ಉತ್ತಮ ಪರಿಹಾರವಾಗಿದೆ” ಎಂದು ಹೇಳಿದರು.
ಡಿಸೆಂಬರ್ 25 ರಂದು ‘ದಿಲ್ಲಿ ಚಲೋ’ ಪ್ರತಿಭಟನೆಗೆ ಒಂದು ತಿಂಗಳು ಪೂರ್ಣಗೊಳ್ಳಲಿರುವುದರಿಂದ ದೆಹಲಿ ಗಡಿಯಲ್ಲಿ ನಡೆಯುವ ಹೋರಾಟಕ್ಕೆ ಹೆಚ್ಚಿನ ರೈತರು ಸೇರಲಿದ್ದಾರೆ. ಡಿಸೆಂಬರ್ 26 ರಂದು 15,000 ಪ್ರತಿಭಟನಾಕಾರರು ಖಾನೌರಿ ಗಡಿಯಿಂದ ಮೆರವಣಿಗೆ ನಡೆಸಲಿದ್ದು, ಡಿಸೆಂಬರ್ 27 ರಂದು 15,000 ಮಂದಿ ದಬ್ವಾಲಿಯಿಂದ ಮೆರವಣಿಗೆ ಆರಂಭಿಸಲಿದ್ದಾರೆ ಎಂದು ರೈತ ಸಂಘಟನೆಗಳು ತಿಳಿಸಿವೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ: ಸಂಸದೀಯ ಸಮಿತಿಗಳಿಗೆ ರಾಜೀನಾಮೆ ನೀಡಿದ RLP ಸಂಸದ


