Homeನಿಜವೋ ಸುಳ್ಳೋಫೋಟೋಶಾಪ್ಡ್ ಇಮೇಜಿನ ಕುತಂತ್ರ : ಪ್ರಿಯಾಂಕ ಕೊರಳಲ್ಲಿ ‘ಕ್ರಾಸ್’!

ಫೋಟೋಶಾಪ್ಡ್ ಇಮೇಜಿನ ಕುತಂತ್ರ : ಪ್ರಿಯಾಂಕ ಕೊರಳಲ್ಲಿ ‘ಕ್ರಾಸ್’!

- Advertisement -
- Advertisement -

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಿಯಾಂಕ ಗಾಂಧಿ ಕೊರಳಲ್ಲಿ ‘ಕ್ರಾಸ್’ ಧರಿಸಿರುವ ಫೋಟೊ ಒಂದು ಓಡಾಡುತ್ತಿದೆ.
ಮಿಥ್ಯ: ಪ್ರಿಯಾಂಕ ಗಾಂಧಿ ರುದ್ರಾಕ್ಷಿ ಸರ ಹಾಕಿದ ಫೋಟೊದ ಜೊತೆಗೆ ಆಕೆ ಕೊರಳಲ್ಲಿ ‘ಕ್ರಾಸ್’ ಹಾಕಿದ ಫೋಟೊವೊಂದನ್ನು ಜೋಡಿಸಿ, ಹೀಗಿದೆ ನೋಡಿ ಪ್ರಿಯಾಂಕ ಹಿಪಾಕ್ರಸಿ, ಕ್ರಿಶ್ಚಿಯನ್ ಮನಸ್ಸು ಹಿಂದೂ ಆಗಲು ಸಾಧ್ಯನಾ ಎಂದೆಲ್ಲ ಸುದ್ದಿಯನ್ನು ಹರಿಬಿಡಲಾಗಿದೆ.
ಸತ್ಯ: ಪ್ರಿಯಾಂಕ ಗಾಂಧಿ ಕ್ರಾಸ್ ಧರಿಸಿರುವ ಫೋಟೊ ಕೇರಳದಲ್ಲಿ ತೆಗೆದದ್ದು ಎಂದೂ ಹೇಳಲಾಗಿದೆ. ಆದರೆ ಅಲ್ಟ್‍ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದಾಗ, ಕ್ರಾಸ್ ಧರಿಸಿದ ಫೋಟೊವನ್ನು ಫೋಟೊಶಾಪ್ ಮಾಡಲಾಗಿದೆ ಎಂಬುದು ಪತ್ತೆಯಾಗಿದೆ. ಅಲ್ಲಿ ಕ್ರಾಸ್ ಅನ್ನು ತುರುಕಿರುವ ಕಿಡಿಗೇಡಿಗಳು, ಉತ್ತರ ಪ್ರದೇಶದಲ್ಲಿ ಪ್ರಿಯಂಕ ಪ್ರಚಾರಕ್ಕೆ ಹಿನ್ನಡೆ ಉಂಟು ಮಾಡಲು ಈ ಕುತಂತ್ರ ಮಾಡಿದ್ದಾರೆ.


2017ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ರ್ಯಾಲಿಯೊಂದರಲ್ಲಿನ ಫೋಟೊ ಅದು. ಮೂಲ ಫೋಟೊದಲ್ಲಿ ಪ್ರಿಯಂಕ ಒಂದು ಪದಕದ ಸರ ಹಾಕಿದ್ದಾರೆ. ಭಕ್ತರು ಪದಕದ ಜಾಗದಲ್ಲಿ ‘ಕ್ರಾಸ್’ ಕೂಡಿಸಿ ಫೋಟೊಶಾಪ್ ಮಾಡಿದ್ದಾರೆ. ಇನ್ನು ಕಳೆದ ಮಾರ್ಚ್ 20ರಂದು ವಾರಣಾಸಿಗೆ ಹೋದಾಗ ಪ್ರಿಯಾಂಕ ರುದ್ರಾಕ್ಷಿ ಸರ ಧರಿಸಿದ್ದರು. ಇದೇನೂ ಆಶ್ಚರ್ಯದ ವಿಷಯವಲ್ಲ. ಆದರೆ ಅವರು ಕ್ರಾಸ್ ಧರಿಸುತ್ತಾರೆ, ರುದ್ರಾಕ್ಷಿ ಧರಿಸಿ ಹಿಪಾಕ್ರಸಿ ಮಾಡುತ್ತಾರೆ ಎಂದೆಲ್ಲ ಸುಳ್ಳು ಹರಡಲಾಗುತ್ತಿದೆ.

ಈಗಲೂ ಮೋದಿರಾಜ್, ಮಿಷನ್ ಬಿಜೆಪಿ 2019, ಮೋದಿ ರನ್ಸ್ ಇಂಡಿಯಾ, ಯೋಗಿ ಆದಿತ್ಯನಾಥ್ ಕೆ ಸೇನಾ-ಮುಂತಾದ ಬಿಜೆಪಿ ಪರ ಖಾತೆಗಳು ಈ ಸುಳ್ಳನ್ನು ಹರಡುತ್ತಲೇ ಇವೆ. ಫ್ಯಾಕ್ಟ್ ಚೆಕ್ ಮಾಡುತ್ತೇನೆಂದು ಹೋಳು ಬಿಡುತ್ತಿರುವ ಫೇಸ್‍ಬುಕ್‍ಗೆ ಈ ಖಾತೆಗಳ ಬಗ್ಗೆ ಅರಿವೇ ಇಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...