“ಉತ್ತರ ಪ್ರದೇಶ ಸರ್ಕಾರದ ಕಾನೂನು ಬಾಹಿರ ಮತಾಂತರ ನಿಷೇಧ ಕಾಯ್ದೆಯು ರಾಜ್ಯವನ್ನು, ದ್ವೇಷ ರಾಜಕೀಯ, ವಿಭಜನೆ, ಧರ್ಮಾಂಧತೆಯ ಕೇಂದ್ರಬಿಂದುವಾಗಿ ಪರಿವರ್ತನೆಗೊಳಿಸಿದೆ” ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಸೇರಿದಂತೆ 104 ಮಾಜಿ ಐಎಎಸ್ ಅಧಿಕಾರಿಗಳು ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಪತ್ರ ಬರೆದಿದ್ದಾರೆ.
ಈ ವಿವಾದಾತ್ಮಕ ಕಾಯ್ದೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಮಾಜಿ ಐಎಎಸ್ ಅಧಿಕಾರಿಗಳು, “ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಸೇರಿದಂತೆ ಎಲ್ಲ ರಾಜಕಾರಣಿಗಳು ಸಂವಿಧಾನದ ಬಗ್ಗೆ ಅರಿವುಮೂಡಿಸಿಕೊಳ್ಳುವ ಅಗತ್ಯವಿದೆ” ಎಂದಿದ್ದಾರೆ.
“ಒಂದು ಕಾಲದಲ್ಲಿ ಗಂಗಾ-ಯಮುನಾ ನಾಗರಿಕತೆಯ ತೊಟ್ಟಿಲಾಗಿದ್ದ ಉತ್ತರಪ್ರದೇಶ, ಈಗ ರಾಜಕೀಯ ದ್ವೇಷ, ವಿಭಜನೆ, ಧರ್ಮಾಂಧತೆಯ ಕೇಂದ್ರವಾಗಿದೆ. ರಾಜ್ಯಾಡಳಿತ ಕೋಮು ವಿಷವನ್ನು ಕಕ್ಕುತ್ತಿದೆ. ಉತ್ತರಪ್ರದೇಶದಾದ್ಯಂತ ಯುವ ಭಾರತೀಯರ ಮೇಲೆ ನಿಮ್ಮ ಆಡಳಿತ ಹೀನಾಯವಾಗಿ ದೌರ್ಜನ್ಯ ನಡೆಸಿದೆ. ಅಮಾಯಕ ದಂಪತಿಯನ್ನು ದಾಳಿಕೋರರು ವಿಚಾರಣೆ ನಡೆಸಿದಾಗ ಹಾಗೂ ಕಿರುಕುಳ ನೀಡಿದಾಗ ಮೂಕ ಪ್ರೇಕ್ಷಕರಾಗಿದ್ದ ಪೊಲೀಸರು ಕ್ಷಮೆಗೆ ಅರ್ಹರಲ್ಲ” ಎಂದು ಮಾಜಿ ಐಎಎಸ್ ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.
ಈ ಪತ್ರದ ಪೂರ್ಣ ಪಠ್ಯವನ್ನು ಇಲ್ಲಿ ಓದಿ.
ಇದನ್ನೂ ಓದಿ: ಕಸಗುಡಿಸುತ್ತಿದ್ದ ಕಚೇರಿಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಆನಂದವಳ್ಳಿ!
ಇದನ್ನೂ ಓದಿ: ಉತ್ತರ ಪ್ರದೇಶ: ಯುವಕನನ್ನು ಹಾಡಹಗಲೇ ನಡುರಸ್ತೆಯಲ್ಲಿ ಥಳಿಸಿ ಕೊಂದ ದುಷ್ಕರ್ಮಿಗಳು
ಇತ್ತೀಚೆಗೆ ರಾಜ್ಯದಲ್ಲಿ ‘ಲವ್ ಜಿಹಾದ್’ ಎನ್ನುವ ಅಸಾಂವಿಧಾನಿಕ ಪದವನ್ನು ಬಳಸಿ ಅಮಾಯಕರನ್ನು ಅದರ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಈ ಕಾನೂನನ್ನು ಹಿಂದೂ ಸಂಘಟನೆಗಳು ಸ್ವೇಚ್ಚೆಯಾಗಿ ಬಳಸಿಕೊಳ್ಳುತ್ತಿದೆ.
ಆದರೆ, ಅಲಹಾಬಾದ್ ಹೈಕೋರ್ಟ್ ಸೇರಿದಂತೆ ಇತರೆ ನ್ಯಾಯಾಲಯಗಳು ಈ ಕಾನೂನನ್ನು ವಿಮರ್ಶಿಸಿವೆ. ಯಾವುದೆ ಒಬ್ಬ ವಯಸ್ಕ ಯುವತಿ ತನ್ನ ಇಚ್ಚೆಗೆ ಅನುಗುಣವಾಗಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದೆ.
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಸೇರಿದಂತೆ ನಾಲ್ವರು ಮಾಜಿ ನ್ಯಾಯಾಧೀಶರು ಈ ಸುಗ್ರೀವಾಜ್ಞೆಯನ್ನು ಟೀಕಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್‌ನ ಜಾತ್ಯಾತೀತತೆ ಪರೀಕ್ಷಿಸಿದವರಿಗೆ ಈ ಸಾವು ಉತ್ತರ ನೀಡಿರಬಹುದು: ಕುಮಾರಸ್ವಾಮಿ



Luucha cm