-ಸಂಜಯ್ ಬಸು ಮತ್ತು ಉಜ್ವಲ್ ಚೌಧರಿ
ಕನ್ನಡಕ್ಕೆ: ಮಲ್ಲನಗೌಡರ್ ಪಿ.ಕೆ
ಒಂದು ಕಡೆ ಸಾರ್ವಜನಿಕ ತನಿಖಾ ಸಂಸ್ಥೆಗಳನ್ನು ಬಿಜೆಪಿಯ ಏಜೆಂಟರನ್ನಾಗಿ ಪರಿವರ್ತಿಸಿದ ಮೋದಿ ಸರ್ಕಾರ, ಇನ್ನೊಂದು ಕಡೆ ಸಾರ್ವಜನಿಕ ಸೇವೆ ನೀಡುವ ಸರ್ಕಾರಿ ಇಲಾಖೆ, ಸಂಸ್ಥೆಗಳನ್ನು ಹಳ್ಳ ಹಿಡಿಸುತ್ತ ಬಂದಿತು. ಅನಿಲ್ ಅಂಬಾನಿಗಾಗಿ ಎಚ್‍ಎಎಲ್ ಅನ್ನು, ಮುಖೇಶ್ ಅಂಬಾನಿಗಾಗಿ ಬಿಎಸ್‍ಎನ್‍ಎಲ್‍ನ್ನು ವಂಚಿಸಿದ ಮೋದಿ ಸರ್ಕಾರ ರೈಲ್ವೇ ಇಲಾಖೆಗೂ ಒಂದು ದುರ್ಗತಿ ಕಾಣಿಸಿಯೇ ಬಿಟ್ಟಿದೆ…..
ಭಾರತದ ಜೀವನಾಡಿ ಎಂದೇ ಹೆಸರು ಪಡೆದ ರೈಲ್ವೇ ವ್ಯವಸ್ಥೆಯನ್ನು ಈ ಐದು ವರ್ಷಗಳಲ್ಲಿ ಹಳಿ ತಪ್ಪಿಸಿದ ‘ಕೀರ್ತಿ’ಯನ್ನು ಮೋದಿ ಸರ್ಕಾರ ಹೊತ್ತುಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ದೊರೆತ ಮತ್ತು ಲೋಕಸಭೆಗೆ ಕೇಂದ್ರ ಸರ್ಕಾರವೇ ನೀಡಿದ ಮಾಹಿತಿಗಳೆರಡೂ ಇದನ್ನು ಪುಷ್ಟಿಕರಿಸುತ್ತಿವೆ.
ವರ್ಷದಲ್ಲಿ 8 ಬಿಲಿಯನ್ (8 ಶತಕೋಟಿ) ಪ್ರಯಾಣಿಕರನ್ನು ಸಾಗಿಸುವ ವಿಶ್ವದ ನಾಲ್ಕನೇ ದೊಡ್ಡ ನೆಟ್‍ವರ್ಕ್, ಚೀನಾದ ನಂತರ ಸಾಮರ್ಥಯದಲ್ಲಿ ಎರಡನೇ ಸ್ಥಾನ ಹೊಂದಿರುವ ಭಾರತೀಯ ರೈಲ್ವೇ ಇವತ್ತು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಈ ಸರ್ಕಾರ ಬಂದ ಮೊದಲ ವರ್ಷ 2014-15ರಲ್ಲೇ 135 ರೈಲು ಅಪಘಾತ ಸಂಭವಿಸಿದವು, ಅದು ಕ್ರಮೇಣ ಇಳಿಯುತ್ತ ಬಂದು 2017-18ರಲ್ಲಿ 78ಕ್ಕೆ ಇಳಿದಿತು. 2018ರ ನವೆಂಬರರನಲ್ಲಿ ಆರ್‍ಟಿಐ ಅಡಿ ಸಿಕ್ಕ ಮಾಹಿತಿಯಿದು. ಆದರೆ ಅಪಘತಗಳ ಸಂಖ್ಯೆ ಇಳಿಮುಖಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಸುರಕ್ಷತಾ ಕ್ರಮಗಳು ಕಾರಣವಲ್ಲ, ಅದಕ್ಕೆ ಇತರ ಹಲವು ಕಾರಣಗಳಿವೆ.
ಡಿಸೆಂಬರ್ 2018ರಲ್ಲಿ ಇಲಾಖೆ ನೀಡಿದ ಇನ್ನೊಂದು ಉತ್ತರದ ಪ್ರಕಾರ, 2014-15ರಲ್ಲಿ 3,591 ಟ್ರೇನುಗಳು ರದ್ದಾಗಿದ್ದರೆ, 2017-18ರಲ್ಲಿ 21,053 ಟ್ರೇನುಗಳು (ಏಳು ಪಟ್ಟು!) ರದ್ದಾಗಿದ್ದವು! ಟ್ರೇನುಗಳ ಓಡಾಟವೇ ಕುಸಿದ ಮೇಲೆ ಅಪಘಾತ ಸಂಖ್ಯೆ ಸಹಜವಾಗಿ ಕಡಿಮೆ ತಾನೇ? ರೈಲ್ವೇ ¸ಹಾಯಕ ಸಚಿವ ರಾಜೇನ ಗೋಹೆನ್ ಸಂಸತ್ತಿಗೆ ಕೊಟ್ಟ ವಿವರಗಳೂ ಇದನ್ನು ಪುಷ್ಟಿಕರಿಸಿವೆ. 2014-15ರಲ್ಲಿ 8.317 ಬಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದರೆ, 2016-17ರಲ್ಲಿ ಈ ಸಂಖ್ಯೆ 8.116 ಬಿಲಿಯನ್. 2017-18ರಲ್ಲಿ ಶೇ. 30ರಷ್ಟು ಟ್ರೇನುಗಳು ತಡಾವಾಗಿ ಚಲಿಸಿವೆ. ನಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬಂದಿದೆ.
ಮಾರ್ಗ ನವೀಕರಣ ಮತ್ತು ವಿದ್ಯುದೀಕರಣ
ಮಾರ್ಗ ನವೀಕರಣ ಮತ್ತು ವಿದ್ಯುದೀಕರಣದಲ್ಲೂ ಈ ಸರ್ಕಾರದ ಸಾಧನೆ ತೀರಾ ಕಳಪೆಯಾಗಿದೆ. ರೈಲ್ವೇ ಸುರಕ್ಷತೆಗೆ ಮಾರ್ಗ ನವೀಕರಣ ಅತ್ಯಂತ ಮುಖ್ಯವಾದ ಕ್ರಮ. ಫೆಬ್ರುವರಿ 2019ರಲ್ಲಿ ಆರ್‍ಟಿಐನಲ್ಲಿ ನೀಡಿದ ಮಾಹಿತಿ ಪ್ರಕಾರ, ಯುಪಿಎ ಸರ್ಕಾರ 2009-10ರಲ್ಲಿ ಮಾಡಿದ್ದ ಮಾರ್ಗ ನವೀಕರಣಗಳ ಸಂಖ್ಯೆಯನ್ನು 2017-18ರಲ್ಲಿ ಈ ಸರ್ಕಾರ ತಲುಪಿದೆ.
1 ಲಕ್ಷ 17 ಸಾವಿರ ಮಾರ್ಗ (ಟ್ರ್ಯಾಕ್)ವನ್ನು ರೈಲ್ವೆ ಹೊಂದಿದ್ದು, ಇದರಲ್ಲಿ ಬಹುಪಾಲು ಮಾರ್ಗಗಳು ತುಂಬ ಹಳೆಯವು ಇಲ್ಲವೇ ಓವರ್‍ಲೋಡ್‍ನಿಂದ ತತ್ತರಿಸುತ್ತಿರುವ ಸುವ ಮಾರ್ಗಗಳು. ಈ ಸರ್ಕಾರದ ಅವಧಿಯಲ್ಲಿ ಕೇವಲ 4 ಸಾವಿರ ಕಿ.ಮೀ (ಅಂದರೆ ಕೇವಲ ಶೇ. 3.57) ಮಾರ್ಗಗದ ನವೀಕರಣವಾಗಿದೆ! ಮೋದಿ ಸರ್ಕಾರದ ಮೊದಲ ಮೂರು ವರ್ಷಗಳಲ್ಲಿ ವಿದ್ಯುದೀಕರಣಪ್ರಕ್ರಿಯೆಯೇ ನಡೆಯಲಿಲ್ಲ. 2017-18ರಲ್ಲಿ ಕೇವಲ 4.087 ಕಿ.ಮೀ( 4 ಕಿಮೀ ಅನ್ನಿ) ಮಾರ್ಗದ ವಿದ್ಯುದೀಕರಣವಾಗಿದೆ!
ರೈಲ್ವೇಯನ್ನು ಸಶಕ್ತಗೊಳಿಸಲು ಹೊಸ ಹೊಸ ಲೈನ್‍ಗಳ ಸ್ಥಾಪನೆಯ ಅಗತ್ಯವಿದೆ. 2016-17ರಲ್ಲಿ 953 ಕಿಮೀ ಹೊಸ ಲೈನ್ ನಿರ್ಮಿಸಿದ ಮೋದಿ ಸರ್ಕಾರ, 2017-18ರಲ್ಲಿ ನಿರ್ಮಿಸಿದ್ದು ಕೇವಲ 409 ಕಿಮೀ!. ದಿನಕ್ಕೆ ಕೇವಲ 1.75 ಕೀಮೀ ಹೊಸ ಲೈನ್ ಮಾಡಿದ್ದನ್ನು ಸಾಧನೆ ಎನ್ನಲಾದೀತೆ?
ಫಂಡೂ ಇಲ್ಲ, ಬಾಂಡೂ ಇಲ್ಲ
ಆರಂಭಶೂರತ್ವ ತೋರಿದಂತೆ ಮಾಡಿದ ಸರ್ಕಾರ ರೈಲ್ವೆಗೆ ಅಗತ್ಯವಾದ ಬೃಹತ್ ಅನುದಾನ ಒದಗಿಸಲು ಎಲ್‍ಐಸಿಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಇದರ ಪ್ರಕಾರ ಎಲ್‍ಐಸಿ ಒಂದೂವರೆ ಲಕ್ಷ ಕೋಟಿ ರೂ ಒದಗಿಸಬೇಕಿತ್ತು. ಅಕ್ಟೋಬರ್ 25, 2015ರಂದು ಸಿಕ್ಕ ಮಾಹಿತಿ ಪ್ರಕಾರ, ಎಲ್‍ಐಸಿ ಮೊದಲ ಕಂತಾಗಿ 2 ಸಾವಿರ ಕೋಟಿ ನೀಡಿತ್ತು. ನಂತರ ಮಾರ್ಚ್ 26, 2018ರ ಮಾಹಿತಿ ಪ್ರಕಾರ, ನಂತರ ಅದು ಯಾವುದೇ ಫಂಡ್ ಬಿಡುಗಡೆ ಮಾಡಲೇ ಇಲ್ಲ. ಬಾಂಡ್‍ಗಳ ಮೂಲಕ ಎಲ್‍ಐಸಿ ನೆರವು ನೀಡಲಿದೆ ಎಂದು ಸರ್ಕಾರ ಹೇಳಿತು. ಹಾಗೇ ನೀಡಿದರೂ ಅದು 7 ಸಾವಿರ ದಾಟಲ್ಲ. ಒಂದೂವರೆ ಕೋಟಿ ಲಕ್ಷದಲ್ಲಿ ಉಳಿದ ಹಣ ಏಕೆ ಬರಲಿಲ್ಲ?
ಸರ್ಕಾರ ಹಲವು ಸ್ಟೇಷನ್‍ಗಳನ್ನು ನಿರ್ಮಿಸಲು ಖಾಸಗಿ-ಸಾರ್ವಜನಿಕ ಭಾಗವಹಿಸುವಿಕೆಯ (ಪಿಪಿಪಿ) ಮೊರೆ ಹೋಗಿತು. 13 ಸ್ಟೇಷನ್‍ಗಳ ಮರು ನಿರ್ಮಾಣದ ಘೋಷಣೆ ಮಾಡಲಾಗಿತು. ಇವತ್ತಿಗೂ ಒಂದೂ ಜಾರಿಗೆ ಬಂದಿಲ್ಲ!
ಮೋದಿಯ ವಿದೇಶಿ ನೆರವು!
ವಿದೇಶಗಳಿಗೆ ಹೋದಾಗ ಆ ದೇಶಗಳೊಂದಿಗೆ ರೈಲ್ವೇ ನವೀಕರಣ, ಅಭಿವೃದ್ಧಿಯ ಯೋಜನೆಗಳಿಗೆ ಮೋದಿ ಸಾಹೇಬರು ಸಹಿ ಹಾಕಿದ್ದಷ್ಟೇ ಬಂತು. ಯಾವವೂ ಅನುಷ್ಠಾನಕ್ಕೆ ಬgಲೇ ಇಲ್ಲ. ಏಪ್ರಿಲ್ 2015ರಲ್ಲಿ, ಫ್ರಾನ್ಸ್, ಮೇ 2015ರಲ್ಲಿ ಚೀನಾ ಮತ್ತು ಅಕ್ಟೋಬರ್ 2018ರಲ್ಲಿ ರಷ್ಯಾಗಳಿಗೆ ಭೇಟಿ ನೀಡಿದಾಗ ಮೋದಿ ರೈಲ್ವೇ ಅಭಿವೃದ್ಧಿಗೆ ಆ ದೇಶಗಳ ಜೊತೆಗೆ ಒಪ್ಪಂದ (ಒoU)ಗಳನ್ನು ಮಾಡಿಕೊಂಡು ಬಂದಿದ್ದರು. ಅವೆಲ್ಲ ಬರೀ ಶೋ ಆಗಿದ್ದವಷ್ಟೇ!
ಒಟ್ಟಿನಲ್ಲಿ ರೈಲ್ವೇ ವ್ಯವಸ್ಥೆಯನ್ನೇ ಹಳಿ ತಪ್ಪಿಸಿದ ಮೋದಿ ಸರ್ಕಾರ, ಕಾಲಕಾಲಕ್ಕೆ ಭಾರಿ ಸುಧಾರಣೆ ಎಂಬ ಹೆಡ್‍ಲೈನ್ಸ್ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುತ್ತ ಬಂದಿದೆ.
(ಕೃಪೆ: ಡೆಕ್ಕನ್ ಹೆರಾಲ್ಡ್)


