Homeಮುಖಪುಟವಾಟ್ಸಾಪ್‌ಗೆ ಗುಡ್‌ಬೈ ಹೇಳಿ, ಸಿಗ್ನಲ್‌ಗೆ ಹೆಲೋ ಹೇಳಿ: ಏನಿದು ಸಿಗ್ನಲ್ ಆಪ್?

ವಾಟ್ಸಾಪ್‌ಗೆ ಗುಡ್‌ಬೈ ಹೇಳಿ, ಸಿಗ್ನಲ್‌ಗೆ ಹೆಲೋ ಹೇಳಿ: ಏನಿದು ಸಿಗ್ನಲ್ ಆಪ್?

ಈ ಅಪ್ಲಿಕೇಶನ್‌ನಲ್ಲಿನ ಎಲ್ಲಾ ಸಂದೇಶಗಳು ಮತ್ತು ಕರೆಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿವೆ. ಅಂದರೆ ಯಾವುದೇ ಮೂರನೇ ವ್ಯಕ್ತಿ ಮಾತ್ರವಲ್ಲ ಸ್ವತಃ ಸಿಗ್ನಲ್ ಸಹ ಅವುಗಳನ್ನು ನೋಡಲಾಗುವುದಿಲ್ಲ.

- Advertisement -
- Advertisement -

ವಾಟ್ಸಾಪ್ ತನ್ನ ಗೌಪ್ಯತಾ ನಿಯಮಗಳನ್ನು ಅಪ್‌ಡೇಟ್‌ ಮಾಡಿದ್ದು, ಬಳಕೆದಾರರ ಸಂದೇಶಗಳನ್ನು ಓದುವ ಮತ್ತು ಡೇಟಾ ಸಂಗ್ರಹಿಸುವುದಾಗಿ ಘೋಷಿಸಿಕೊಂಡಿದೆ. ಅಲ್ಲದೆ ಬಳಕೆದಾರರ ಡೇಟಾವನ್ನು ಫೇಸ್‌ಬುಕ್ ಸೇರಿದಂತೆ ಇತರ ಕಂಪನಿಗಳಿಗೆ ಮಾರುವುದಾಗಿ ಹೇಳಿದ್ದು ಎಲ್ಲರೂ ಈ ಷರತ್ತಿಗೆ ಒಪ್ಪಲೇಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಾಟ್ಸಾಪ್ ತ್ಯಜಿಸಿ, ಸಿಗ್ನಲ್ ಬಳಸಿ ಎಂಬ ಘೋಷಣೆ ಜನಪ್ರಿಯವಾಗಿದೆ. ಈ ಸಿಗ್ನಲ್ ಎಂದರೇನು? ಹೇಗೆ ಕೆಲಸ ಮಾಡುತ್ತದೆ ಎಂಬುದರ ವಿವರ ಇಲ್ಲಿದೆ.

ಸಿಗ್ನಲ್ ಆಪ್‌ನ ಘೋಷವಾಕ್ಯವೇ ಖಾಸಗಿತನಕ್ಕೆ ಹೆಲೋ ಹೇಳಿ ಎಂಬುದಾಗಿದೆ. ಇದರಲ್ಲಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಡೆಡ್ ಇದ್ದು ಯಾವುದೇ ಸಂದೇಶ-ಸಂಭಾಷಣೆಯನ್ನು ಬೇರೆಯವರು ತಿಳಿಯಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಸಿಗ್ನಲ್ ಆಪ್‌ ಅನ್ನು ಸ್ವತಂತ್ರ ಲಾಭರಹಿತ ಸಂಸ್ಥಯು ಅಭಿವೃದ್ದಿಪಡಿಸಿದೆ.

ಸಿಗ್ನಲ್ ಯಾರದು?

ನಿಮಗೆ ಗೊತ್ತಿರುವಂತೆ ವಾಟ್ಸಾಪ್‌ ಅನ್ನು ಫೇಸ್‌ಬುಕ್ ಕೊಂಡುಕೊಂಡಿದೆ. ಸಿಗ್ನಲ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ, ಇದು ಐಫೋನ್, ಐಪ್ಯಾಡ್, ಆಂಡ್ರಾಯ್ಡ್, ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್‌ಗಳಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಅನ್ನು ಲಾಭರಹಿತ ಕಂಪನಿಗಳಾದ ಸಿಗ್ನಲ್ ಫೌಂಡೇಶನ್ ಮತ್ತು ಸಿಗ್ನಲ್ ಮೆಸೆಂಜರ್ ಎಲ್ಎಲ್ ಸಿ ಅಭಿವೃದ್ಧಿಪಡಿಸಿವೆ.  ಈ ಅಪ್ಲಿಕೇಶನ್ ಅನ್ನು ಅಮೆರಿಕದ ಕ್ರಿಪ್ಟೋಗ್ರಾಫರ್ ಮತ್ತು ಪ್ರಸ್ತುತ ಸಿಗ್ನಲ್ ಮೆಸೆಂಜರ್ ಸಿಇಒ ಮೋಕ್ಸಿ ಮಾರ್ಲಿನ್ಸ್‌ಪೈಕ್ ರಚಿಸಿದ್ದಾರೆ.

ಸಿಗ್ನಲ್ ಫೌಂಡೇಶನ್ ಅನ್ನು ವಾಟ್ಸಾಪ್ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮತ್ತು ಮಾರ್ಲಿನ್ಸ್‌ಪೈಕ್ ರಚಿಸಿದ್ದಾರೆ. 2017 ರಲ್ಲಿ ವಾಟ್ಸಾಪ್ ಅನ್ನು ತೊರೆದ ಬ್ರಿಯಾನ್ ಆಕ್ಟನ್, ಸಿಗ್ನಲ್ ಆಪ್‌ಗಾಗಿ ಸುಮಾರು 50 ಮಿಲಿಯನ್ ಹಣ ಹಾಕಿದ್ದಾರೆ.

ಸಿಗ್ನಲ್ ಬಳಸಲು ಹಣ ಪಾವತಿಸಬೇಕೇ?

ಸಿಗ್ನಲ್ ಬಳಕೆ ಸಂಪೂರ್ಣ ಉಚಿತವಾಗಿದೆ. ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳ ರೀತಿ ಸಿಗ್ನಲ್ ನಲ್ಲಿ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು, ತಮ್ಮ ಸ್ನೇಹಿತರೊಂದಿಗೆ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಮಾಡಲು, ಫೋಟೋಗಳು, ವೀಡಿಯೊಗಳು ಮತ್ತು ಲಿಂಕ್‌ಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಇದು ಇತ್ತೀಚೆಗೆ ಡಿಸೆಂಬರ್ 2020 ರಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆಯನ್ನು ಪರಿಚಯಿಸಿದೆ. ಸಿಗ್ನಲ್‌ನಲ್ಲಿ ಗುಂಪುಗಳನ್ನು ಸಹ ರಚಿಸಬಹುದು. ಒಂದು ಗುಂಪು 150 ಸದಸ್ಯರಿಗೆ ಸೀಮಿತವಾಗಿದೆ.

ನಿಮಗೆಲ್ಲಾ ತಿಳಿದ ಹಾಗೆ ವಾಟ್ಸಾಪ್‌ನಲ್ಲಿ ಗುಂಪು ರಚಿಸಿದರೆ ನಿಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವ ಯಾರನ್ನು ಬೇಕಾದರೂ ಸೇರಿಸಬಹುದು (ಕೆಲವರು ಹೀಗೆ ಸೇರಿಸದಂತೆ ಸೆಟ್ಟಿಂಗ್ ಬದಲಿಸಿರುತ್ತಾರೆ). ಆದರೆ ಸಿಗ್ನಲ್‌ ನಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲ. ಮೊದಲು ಗ್ರೂಪ್‌ಗೆ ನಿಮ್ಮನ್ನು ಸೇರಿಸಲಾಗುತ್ತದೆ ಎಂದು ಇನ್ವೈಟ್ ಕಳಿಸಲಾಗುತ್ತದೆ. ಅದನ್ನು ಸ್ವೀಕರಿಸಿದರೆ ಮಾತ್ರ ಗ್ರೂಪ್‌ಗೆ ಸೇರಿಸಲಾಗುತ್ತದೆ.

ಸಂದೇಶಗಳಿಗೆ ಪ್ರತ್ಯೇಕವಾಗಿ ಪ್ರತ್ಯುತ್ತರಿಸಲು, ನಿರ್ದಿಷ್ಟ ಸಂದೇಶಕ್ಕೆ ಎಮೋಜಿ ಆಧಾರಿತ ಪ್ರತಿಕ್ರಿಯೆಗಳನ್ನು ಕಳುಹಿಸಲು ಮತ್ತು ‘ಎಲ್ಲರಿಗೂ ಅಳಿಸು’ ಆಯ್ಕೆಯನ್ನು ಆರಿಸುವ ಮೂಲಕ ಚಾಟ್‌ನಿಂದ ನಿರ್ದಿಷ್ಟ ಸಂದೇಶವನ್ನು ಅಳಿಸಲು ಸಿಗ್ನಲ್ ನಿಮಗೆ ಅನುಮತಿಸುತ್ತದೆ. ವಾಟ್ಸಾಪ್ ಸೇರಿದಂತೆ ಇತರ ಮೆಸೇಂಜಿಗ್ ಅಪ್ಲಿಕೇಶನ್‌ಗಳಲ್ಲಿ ನಾವು ನೋಡಿದ ಎಲ್ಲಾ ವೈಶಿಷ್ಟ್ಯಗಳು ಇಲ್ಲಿವೆ.

ಆದರೆ ಸಿಗ್ನಲ್‌ನ ಗಮನವು ಸಂಪೂರ್ಣವಾಗಿ ಗೌಪ್ಯತೆಯ ಮೇಲಿದೆ. ಎಂಡ್‌ ಟು ಎಂಡ್‌ ಎನ್‌ಕ್ರಿಪ್ಡೆಡ್ ಮಾತ್ರವಲ್ಲದೆ ಡೇಟಾ ಸಂಗ್ರಹಣೆಯ ಮೇಲೂ ಇದು ವಿಶೇಷ ಕಾಳಜಿ ವಹಿಸಿದೆ.

ಲ್ಯಾಪ್‌ಟಾಪ್ ಅಥವಾ ಐಪ್ಯಾಡ್‌ನಲ್ಲಿ ನೀವು ಸಿಗ್ನಲ್ ಅನ್ನು ಬಳಸಬಹುದೇ?

ಹೌದು, ನಿಮ್ಮ ಐಪ್ಯಾಡ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ನೀವು ಸಿಗ್ನಲ್ ಅನ್ನು ಬಳಸಬಹುದು, ಮತ್ತು ನಿಮ್ಮ ಫೋನ್‌ನಲ್ಲಿರುವ ಖಾತೆಯನ್ನು ಲಿಂಕ್ ಮಾಡಬಹುದು. ಆದರೆ ಇಲ್ಲಿ ಒಮ್ಮೆ ಲಿಂಕ್ ಮಾಡಿದರೆ ನಿಮ್ಮ ಹಿಂದಿನ ಚಾಟ್ ಹಿಸ್ಟರಿ ಲ್ಯಾಪ್‌ಟಾಪ್‌ ನಲ್ಲಿ ಗೋಚರಿಸುವುದಿಲ್ಲ. ಅಲ್ಲಿಂದ ಮುಂದಕ್ಕೆ ನಡೆಸುವ ಸಂಭಾಷಣೆಗಳು ಮಾತ್ರ ಗೋಚರಿಸುತ್ತವೆ. ಏಕೆಂದರೆ ಎಲ್ಲಾ ಹಿಸ್ಟರಿ ಆಯಾ ಪ್ರತ್ಯೇಕ ಸಾಧನಗಳಲ್ಲಿ ಸೇವ್ ಆಗುತ್ತದೆ.

ಸಿಗ್ನಲ್‌ನಲ್ಲಿ ನನ್ನ ಚಾಟ್‌ಗಳನ್ನು Google ಡ್ರೈವ್ ಅಥವಾ ಐಕ್ಲೌಡ್‌ಗೆ ಬ್ಯಾಕಪ್ ಮಾಡಬಹುದೇ?

ಇಲ್ಲ, ವಾಟ್ಸಾಪ್‌ ನಂತೆ ಇದು ಸಾಧ್ಯವಿಲ್ಲ.

ಸಿಗ್ನಲ್‌ನಲ್ಲಿನ ಗೌಪ್ಯತೆ ವೈಶಿಷ್ಟ್ಯಗಳು ಯಾವುವು?

ಸಿಗ್ನಲ್ ಸಾಕಷ್ಟು ಗೌಪ್ಯತೆ-ಕೇಂದ್ರಿತ ವೈಶಿಷ್ಟ್ಯಗಳನ್ನು ಹೊಂದಿದೆ. ನಿಮ್ಮ ಐಪಿ ವಿಳಾಸವನ್ನು ಬಹಿರಂಗಪಡಿಸದೆ ನೀವು ಕರೆಗಳನ್ನು ಮಾಡಬಹುದು. ಆದರೆ ಕರೆ ಗುಣಮಟ್ಟ ಕಡಿಮೆಯಾಗುತ್ತದೆ.

ಇನ್ನು ನೀವು ಸಂದೇಶ ಓದಿದ್ದೀರೋ, ಇಲ್ಲವೋ? ಯಾವಾಗ ಓದಿದ್ದೀರಿ? ಇತ್ಯಾದಿ ಅಂಶಗಳನ್ನು ಸಿಗ್ನಲ್‌ನಲ್ಲಿ ಮರೆಮಾಚಬಹುದಾಗಿದೆ. ಅಲ್ಲದೆ ನೀವು ಆನ್‌ಲೈನ್‌ ನಲ್ಲಿ ಇದ್ದೀರೋ, ಇಲ್ಲವೋ ಎಂಬುದನ್ನು ಸಹ ಮರೆ ಮಾಚಬಹುದು.

ಸಿಗ್ನಲ್ ಯಾವ ಡೇಟಾವನ್ನು ಸಂಗ್ರಹಿಸುತ್ತದೆ?

ಸಿಗ್ನಲ್ ಸಂಗ್ರಹಿಸುವ ಏಕೈಕ ಡೇಟಾವೆಂದರೆ ‘ಸಂಪರ್ಕ ಮಾಹಿತಿ’ ಅದು ಫೋನ್ ಸಂಖ್ಯೆ. ಸಿಗ್ನಲ್‌ನ ಗೌಪ್ಯತೆ ನೀತಿಯ ಪ್ರಕಾರ, “ಯಾವುದೇ ಸೂಕ್ಷ್ಮ ಮಾಹಿತಿಯನ್ನು ಎಂದಿಗೂ ಸಂಗ್ರಹಿಸಲು ಈ ಆಪ್ ವಿನ್ಯಾಸಗೊಳಿಸಲಾಗಿಲ್ಲ”. ಅಪ್ಲಿಕೇಶನ್‌ನಲ್ಲಿನ ಎಲ್ಲಾ ಸಂದೇಶಗಳು ಮತ್ತು ಕರೆಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿವೆ. ಅಂದರೆ ಯಾವುದೇ ಮೂರನೇ ವ್ಯಕ್ತಿ ಮಾತ್ರವಲ್ಲ ಸ್ವತಃ ಸಿಗ್ನಲ್ ಸಹ ಅವುಗಳನ್ನು ನೋಡಲಾಗುವುದಿಲ್ಲ.

ಸಿಗ್ನಲ್‌ನ ಗೌಪ್ಯತೆ ನೀತಿಯ ಪ್ರಕಾರ, ಸಿಗ್ನಲ್ ಖಾತೆಯನ್ನು ರಚಿಸಲು ಬಳಸುವ ಫೋನ್ ಸಂಖ್ಯೆ ಮಾತ್ರ ತಿಳಿದಿರುತ್ತದೆ. ಪ್ರೊಫೈಲ್ ಹೆಸರು ಮತ್ತು ಚಿತ್ರದಂತಹ ಖಾತೆಗೆ ಸೇರಿಸಲಾದ ಇತರ ಮಾಹಿತಿಯು ಸಹ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಆಗಿದೆ ಎಂದು ಸಿಗ್ನಲ್ ಹೇಳುತ್ತದೆ.

ಸಿಗ್ನಲ್ ನಿಮ್ಮ ಸಂದೇಶಗಳನ್ನು ಅಥವಾ ನಿಮ್ಮ ಕರೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಅದರ ಸರ್ವರ್‌ಗಳಲ್ಲಿ ಸಂಗ್ರಹಿಸುವುದಿಲ್ಲ. ಆದರೆ ಇದು “ತಾತ್ಕಾಲಿಕವಾಗಿ ಆಫ್‌ಲೈನ್‌ನಲ್ಲಿರುವ ಸಾಧನಗಳಿಗೆ ತಲುಪಿಸಲು ಅದರ ಸರ್ವರ್‌ಗಳಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಮಾತ್ರ ಇಟ್ಟಿರುತ್ತದೆ.” ಉದಾಹರಣೆ ಎಂದರೆ ಫೋನ್‌ನ ಬ್ಯಾಟರಿ ಖಾಲಿಯಾಗಿದ್ದರೆ ಅಥವಾ ಇಂಟರ್ನೆಟ್ ಸಂಪರ್ಕವನ್ನು ಕಳೆದುಕೊಂಡಿದ್ದರೆ ಬಳಕೆದಾರರ ಸಂದೇಶ ಇತಿಹಾಸವನ್ನು ಅವರ ಸ್ವಂತ ಸಾಧನದಲ್ಲಿ ಸಂಗ್ರಹಿಸಲಾಗಿದೆ ಎಂದು ಸಿಗ್ನಲ್ ಹೇಳುತ್ತದೆ.

ಕೆಲವು ಸೇವೆಗಳನ್ನು ಒದಗಿಸಲು ಮೂರನೇ ವ್ಯಕ್ತಿಗಳೊಂದಿಗೆ ಕೆಲವು ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದು ಸಿಗ್ನಲ್ ಹೇಳುತ್ತದೆ. ಉದಾಹರಣೆಗೆ, ಪರಿಶೀಲನಾ ಕೋಡ್ ಅನ್ನು ಒದಗಿಸುವ ಮೂರನೇ ವ್ಯಕ್ತಿಯ ಸೇವೆಗಳು.

ಈ ಅಪ್ಲಿಕೇಶನ್ “ನಿಮ್ಮ ವೈಯಕ್ತಿಕ ಡೇಟಾ ಅಥವಾ ವಿಷಯವನ್ನು ಯಾವುದೇ ರೀತಿಯಲ್ಲಿ ಮಾನಿಟರ್ ಮಾಡುವುದಿಲ್ಲ, ಮಾರಾಟ ಮಾಡುವುದಿಲ್ಲ, ಬಾಡಿಗೆಗೆ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸುತ್ತದೆ.

ಸಿಗ್ನಲ್‌ನಲ್ಲಿ ಬುಸಿನೆಸ್ ಖಾತೆ ರಚಿಸಬಹುದೇ?

ಸಿಗ್ನಲ್ ಜನರ ನಡುವಿನ ನೇರ ಸಂಭಾಷಣೆಗೆ ಮೀಸಲಾತಿ ಆಪ್. ಇದು ಸಣ್ಣ, ಮಧ್ಯಮ, ದೊಡ್ಡ ಉದ್ಯಮಗಳಿಗೆ ಸೂಕ್ತವಾದುದ್ದಲ್ಲ. ಆದರೂ ನೀವು ಬುಸಿನೆಸ್ ಖಾತೆ ರಚಿಸಬಹುದು. ಜೊತೆಗೆ ಅದನ್ನು ರದ್ದುಪಡಿಸುವ ಅವಕಾಶ ನಿಮಗೆ ಇದ್ದೇ ಇರುತ್ತದೆ.

ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌


ಇದನ್ನೂ ಓದಿ:ನಿಮ್ಮ ವೈಯಕ್ತಿಕ ಡೇಟಾ ಬಳಸಲು ಅನುಮತಿಸಿ, ಇಲ್ಲವೆ ಹೊರನಡೆಯಿರಿ: ವಾಟ್ಸಾಪ್ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...