Homeಅಂತರಾಷ್ಟ್ರೀಯಪುಲ್ವಾಮಾ ದಾಳಿಗೆ 3 ವಾರಗಳ ಮುಂಚೆಯೇ ಮಾಹಿತಿ ಸಿಕ್ಕಿದ್ದರೂ ನಿರ್ಲಕ್ಷಿಸಿದ ಆಡಳಿತ

ಪುಲ್ವಾಮಾ ದಾಳಿಗೆ 3 ವಾರಗಳ ಮುಂಚೆಯೇ ಮಾಹಿತಿ ಸಿಕ್ಕಿದ್ದರೂ ನಿರ್ಲಕ್ಷಿಸಿದ ಆಡಳಿತ

- Advertisement -
- Advertisement -

ಫೆ.14ರ ಪುಲ್ವಾಮಾ ದಾಳಿಯ ಕುರಿತು ಪೊಲೀಸರಿಗೆ, ಸೈನ್ಯಕ್ಕೆ ಸಾಕಷ್ಟು ಮುಂಚೆಯೇ ಮಾಹಿತಿ ಇತ್ತು ಎಂಬ ಸುದ್ದಿ ಈ ಮುಂಚೆಯೇ ಹರಿದಾಡಿತ್ತು. ಆದರೆ, ದಿ ಕ್ವಿಂಟ್ ವೆಬ್ ಪೋರ್ಟಲ್ ನಿರ್ದಿಷ್ಟವಾದ ದಾಖಲೆಗಳನ್ನು ಪಡೆದು ಅದು ನಿಜ ಎಂಬ ಆಘಾತಕಾರಿ ಸುದ್ದಿಯನ್ನು ಪ್ರಕಟಿಸಿದೆ. ‘ಹೊರಗಿನಿಂದ ಬಂದ ಭಯೋತ್ಪಾದಕರು’ ಪುಲ್ವಾಮಾ ಜಿಲ್ಲೆಯ ಆವಂತಿಪುರ ಪ್ರದೇಶಕ್ಕೆ ಬಂದಿದ್ದಾರೆ ಮತ್ತು ಅವರು ಸದ್ಯದಲ್ಲೇ ಭಾರೀ ದೊಡ್ಡ ಆತ್ಮಹತ್ಯಾತ್ಮಕ ದಾಳಿ ನಡೆಸುವ ಸಾಧ್ಯತೆ ಇದೆ ಎಂಬುದು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಜನವರಿ 24ಕ್ಕೇ ಮಾಹಿತಿ ಇತ್ತು.
ಅಷ್ಟೇ ಅಲ್ಲ, ಯಾವ ಭಯೋತ್ಪಾದಕ ಗುಂಪಿನ ಸದಸ್ಯರು ಅವರು ಮತ್ತು ಅವರಿಗೆ ಆಶ್ರಯದಾತರು ಯಾರಿರಬಹುದು ಎಂಬ ಬಗ್ಗೆಯೂ ಅವರಿಗೆ ಮಾಹಿತಿ ಇತ್ತು. ಅದನ್ನು ಪರಿಶೀಲಿಸಿದ ಜಮ್ಮು ಕಾಶ್ಮೀರದ ಪೊಲೀಸರು ಜನವರಿ 31ರಂದು ಅಡಿಷನಲ್ ಜನರಲ್ ಆಫ್ ಪೊಲೀಸ್ ಡಾ.ಬಿ.ಶ್ರೀನಿವಾಸ್ ಅವರ ಮೂಲಕ ಸಿಆರ್‍ಪಿಎಫ್ ಮತ್ತಿತರ ಪೊಲೀಸ್ ಬಳಗಕ್ಕೆ ಸುದ್ದಿ ಮುಟ್ಟಿಸಿದ್ದಾರೆ.

ಇಂತಹ ಮಹತ್ವದ ಮಾಹಿತಿ ಬಂದಾಗ ಸಂಬಂಧಿಸಿದವರ ಬಂಧನ ಆಗುವವರೆಗೆ ಅಥವಾ ‘ಬೆದರಿಕೆಯ ನಿರ್ಮೂಲನೆ’ ಆಗುವವರೆಗೆ ಹೈ ಅಲರ್ಟ್ ಇರಬೇಕಿತ್ತು. ಹೈವೇಗಳ ಸುತ್ತ ಕಟ್ಟೆಚ್ಚರ ವಹಿಸಿ ನಮ್ಮ ದಳಗಳು ಸಂಚರಿಸುವ ಜಾಗದಲ್ಲಿ ಬೇರಾವುದೇ ವಾಹನಗಳಿಗೆ ಅವಕಾಶ ಇರಬಾರದಿತ್ತು. ಕಾರ್ಯಾಚರಣೆಗೆ ಹೆಚ್ಚಿನ ದಳಗಳನ್ನು ನಿಯೋಜಿಸಬೇಕಿತ್ತು. ಇವ್ಯಾವುವೂ ಆಗದೇ ನಮ್ಮ ರಕ್ಷಣಾ ಪಡೆಯ ಅಮೂಲ್ಯವಾದ ಜೀವಗಳನ್ನು ಬಲಿಕೊಟ್ಟಿದ್ದನ್ನು ಭಾರೀ ದೊಡ್ಡ ಇಂಟೆಲಿಜೆನ್ಸ್ ವೈಫಲ್ಯ ಎಂದೇ ಬಗೆಯಲಾಗುತ್ತದೆ.

ಇದಕ್ಕೆ ಇನ್ನೊಂದು ಕಾರಣವನ್ನೂ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ದಿ ಕ್ವಿಂಟ್ ವರದಿ ಮಾಡಿದೆ. ‘ಫೆ.9 ಮತ್ತು ಫೆ.11 ಅಫ್ಜಲ್‍ಗುರು ಮತ್ತು ಜೆಕೆಎಲ್‍ಎಫ್ ಸ್ಥಾಪಕ ಮಕ್ಬೂಲ್ ಬಟ್ ಅವರುಗಳನ್ನು ನೇಣಿಗೇರಿಸಿದ ದಿನಗಳು. ಹಾಗಾಗಿ ಅವರೆಡು ದಿನಗಳ ನಡುವೆ ಏನಾದರೂ ಆಗಬಹುದು ಎಂಬ ಎಚ್ಚರ ವಹಿಸಲಾಗಿತ್ತು. ಆಗ ಏನೂ ಆಗದಿದ್ದುದರಿಂದ ಎಲ್ಲರೂ ಸಡಿಲವಾದರು’. ಇಂತಹ ನಿರ್ಲಕ್ಷ್ಯದಿಂದ 40ಕ್ಕೂ ಹೆಚ್ಚು ಸಿಆರ್‍ಪಿಎಫ್ ಯೋಧರು ಪ್ರಾಣ ತೆತ್ತಬೇಕಾಯಿತು ಎಂಬುದನ್ನು ಮರೆಯಲಾಗದು.

ಆದರೆ, ಇದರ ಹೊಣೆ ಹೊರುವವರು ಯಾರು ಎಂಬುದೇ ಪ್ರಶ್ನೆ. ಎಲ್ಲರೂ ಸಾಧನೆಗಳಿಗೆ ತಾವೇ ಕಾರಣರು ಎಂದು ಹೇಳಿಕೊಳ್ಳಲು ಮುಂದಾಗುತ್ತಿದ್ದಾರೆ, ವೈಫಲ್ಯಕ್ಕೆ ಮಾತ್ರ ಯಾರೂ ದಿಕ್ಕಿಲ್ಲದಂತಾಗಿದೆ. ಜಮ್ಮು ಕಾಶ್ಮೀರದಲ್ಲಿ ಇಂದು ಚುನಾಯಿತ ಸರ್ಕಾರವೂ ಇಲ್ಲ. ರಾಷ್ಟ್ರಪತಿ ಆಡಳಿತ ಇರುವುದರಿಂದ, ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರವೇ ಆಳ್ವಿಕೆ ನಡೆಸುತ್ತದೆ. ಇನ್ನು ಕೇಂದ್ರೀಯ ದಳಗಳೂ ಅವರ ವ್ಯಾಪ್ತಿಯಲ್ಲೇ ಬರುತ್ತವೆ. ಹೀಗಿರುವಾಗ ಗಂಭೀರ ಆತ್ಮಾವಲೋಕನಕ್ಕೆ ಮುಂದಾಗುವ ಕೆಲಸ ಕೇಂದ್ರದ್ದೇ ಆಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮನೆ ವಿಳಾಸ ಬಹಿರಂಗ : ಹಿಂದುತ್ವ ಪೋರ್ಟಲ್‌ಗಳು, ಅಭಿಜಿತ್ ಅಯ್ಯರ್-ಮಿತ್ರ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಿಜೆಪಿಯ ಸೌರವ್ ದಾಸ್

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಕ್ತಾರ ಸೌರವ್ ದಾಸ್ ಅವರು ಹಿಂದುತ್ವ ಡಿಜಿಟಲ್ ಮಾಧ್ಯಮ ಪೋರ್ಟಲ್‌ಗಳು, ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮತ್ತು ಬಲಪಂಥೀಯ ರಾಜಕೀಯ ವಿಶ್ಲೇಷಕ ಅಭಿಜಿತ್ ಅಯ್ಯರ್-ಮಿತ್ರ ಅವರ ವಿರುದ್ಧ ದೆಹಲಿ...

ದಾಖಲೆಗಳಿದ್ದರೂ ಬಂಗಾಳಿ ಮಾತನಾಡುವ ಕಾರಣಕ್ಕೆ ಮಹಿಳೆಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಿದ ಅಧಿಕಾರಿಗಳು?

ನವಿ ಮುಂಬೈನ 40 ವರ್ಷದ ಬಂಗಾಳಿ ಮಾತನಾಡುವ ಮಹಿಳೆಯೊಬ್ಬರನ್ನು ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂಬ ಶಂಕೆಯ ಮೇಲೆ ಬಂಧಿಸಿ, ಆಕೆ ಭಾರತದಲ್ಲೇ ಜನಿಸಿ ವಾಸಿಸುತ್ತಿದ್ದ ದಾಖಲೆಗಳನ್ನು ಕುಟುಂಬದವರು ಒದಗಿಸಿದರೂ, ಗಡಿಯಾಚೆಗೆ ಕಳುಹಿಸಲಾಗಿದೆ ಎಂದು...

ಬಾರ್ ಕೌನ್ಸಿಲ್ ಅಧ್ಯಕ್ಷರ ವಿರುದ್ಧ ₹150 ಕೋಟಿ ಅಕ್ರಮ ಆರೋಪ: ತಕ್ಷಣವೇ ರಾಜೀನಾಮೆ ನೀಡಲು ಒತ್ತಾಯ

ಭಾರತೀಯ ಬಾರ್ ಕೌನ್ಸಿಲ್ (BCI) ಉಪಾಧ್ಯಕ್ಷ ಮತ್ತು ಹಿರಿಯ ವಕೀಲ ವೈ.ಆರ್. ಸದಾಶಿವ ರೆಡ್ಡಿ ಅವರು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ರಾಜೀನಾಮೆಗೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ...

ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಮಾಧ್ಯಮಕ್ಕೆ ಅನ್ಯಾಯ : ಹೈಕೋರ್ಟ್‌ಗೆ ಅರ್ಜಿ

ಕರ್ನಾಟಕ ಸರ್ಕಾರದ 15 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು ಮಾಧ್ಯಮ ಹಾಗೂ ಇತರ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಹುದ್ದೆಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನ ಧಾರವಾಡ ಪೀಠದ ಮುಂದೆ ಅರ್ಜಿ ಸಲ್ಲಿಕೆಯಾಗಿದೆ. ಉರ್ದು...

ಚುನಾವಣಾ ಆಯೋಗಕ್ಕೆ ನಕಲಿ ಆಕ್ಷೇಪಣೆ ಪತ್ರ ಸಲ್ಲಿಕೆ; ಉತ್ತರಾಖಂಡ್ ಹಾಲಿ ಕಾಂಗ್ರೆಸ್ ಶಾಸಕರ ಹೆಸರು ಡಿಲೀಟ್

ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ಕೋರಿ ಸಲ್ಲಿಸಲಾದ ಆಕ್ಷೇಪಣೆಯನ್ನು (ಅರ್ಜಿ) ನಾನು ಸಲ್ಲಿಸಿಲ್ಲ ಎಂದು ವ್ಯಕ್ತಿಯೊಬ್ಬರು ನಿರಾಕರಿಸಿದ ನಂತರ, ಉತ್ತರಾಖಂಡ್ ಕಾಂಗ್ರೆಸ್ ಶಾಸಕ ಫುರ್ಕಾನ್ ಅಹಮದ್ ಅವರು ಮತದಾರರ ಪಟ್ಟಿಯ ವಿಶೇಷ ತೀವ್ರ...

RTI ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣ: ₹24 ಲಕ್ಷ ದೇವಸ್ಥಾನದ ಕಾಣಿಕೆ ಹಣ ಮನೆಗೆ ಕೊಂಡೊಯ್ದಿದ್ದ ನರೇಶ್ ಶೆಣೈ

RTI ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಲನ ಮೂಡಿಸುವಂತಹ ಮಹತ್ವದ ದಾಖಲೆಯೊಂದು ಬಹಿರಂಗವಾಗಿದೆ. ಬಾಳಿಗಾ ಹತ್ಯೆ ನಡೆಯುವುದಕ್ಕೂ ಕೆಲವೇ ದಿನಗಳ ಮುನ್ನ, ಪ್ರಕರಣದ ಪ್ರಮುಖ ಆರೋಪಿ ನರೇಶ್...

ಸಿಜೆಪಿ ಪ್ರತಿಭಟನೆ: ಪೊಲೀಸ್ ದೌರ್ಜನ್ಯಗಳ ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸುಪ್ರೀಂ ಆದೇಶ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಪೊಲೀಸರು ನಡೆಸಿದ ಅತಿಯಾದ ಬಲಪ್ರಯೋಗ, ಹಿಂಸಾಚಾರ ಮತ್ತು ಇತರ ಗಂಭೀರ ದುರ್ನಡತೆಯ ಆರೋಪಗಳ ತನಿಖೆಗೆ ಉನ್ನತ...

ನಕಲಿ ಔಷಧ ದಂಧೆ: ತನಿಖೆಗೆ ಕಾನೂನು ತೊಡಕು, ಎಸ್‌ಐಟಿಗೆ ವಿಶೇಷಾಧಿಕಾರಕ್ಕೆ ಬೇಡಿಕೆ

ರಾಮನಗರ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡೇರಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಬೆಳಕಿಗೆ ಬಂದಿರುವ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಬೃಹತ್ ನಕಲಿ ಔಷಧ ದಂಧೆಯ ತನಿಖೆಗೆ ಗಂಭೀರವಾದ ಕಾನೂನು ತೊಡಕು...

ಸಿಜೆಪಿ ಸ್ವಯಂ ಸೇವಕರ ಮೇಲೆ ದಾಳಿ | ರಾಜಸ್ಥಾನದ ಬಿಜೆಪಿ ಸರ್ಕಾರಕ್ಕೆ 3 ಬೇಡಿಕೆಗಳನ್ನು ಮುಂದಿಟ್ಟ ಅಭಿಜೀತ್ ದೀಪ್ಕೆ : ಈಡೇರಿಸಲು 48 ಗಂಟೆಗಳ ಗಡುವು

ಸರ್ಕಾರಿ ಶಾಲೆಯ ದುಃಸ್ಥಿತಿಯನ್ನು ಪರಿಶೀಲಿಸಲು ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಹ-ಸಂಘಟಕ ಆಶುತೋಷ್ ರಾಂಕಾ ಮತ್ತು ಇತರ ಸ್ವಯಂಸೇವಕರ ಮೇಲೆ ದಾಳಿ ನಡೆಸಿರುವುದನ್ನು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು...

ಸಾರ್ವಜನಿಕರ ಉಪಸ್ಥಿತಿಯಿಲ್ಲದ ಮುಚ್ಚಿದ ಸ್ಥಳದಲ್ಲಿ ಜಾತಿ ನಿಂದನೆ: ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ 

ಸಾರ್ವಜನಿಕ ಪ್ರವೇಶವಿಲ್ಲದ ಮತ್ತು ಸಾರ್ವಜನಿಕರ ಉಪಸ್ಥಿತಿಯಿಲ್ಲದ ನಾಲ್ಕು ಗೋಡೆಗಳ ನಡುವೆ ಅಥವಾ ಸುತ್ತುವರಿದ ಮುಚ್ಚಿದ ಜಾಗದಲ್ಲಿ ನಡೆದಿದೆ ಎನ್ನಲಾದ ಜಾತಿ ಆಧಾರಿತ ನಿಂದನೆ ಅಥವಾ ವಾಗ್ವಾದಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ...