Homeಅಂಕಣಗಳುಭಾಜಪದ ಪ್ರಣಾಳಿಕೆ ನೋಡಿದರೆ ಮ್ಯಾಜಿಕ್ ಸ್ಲೇಟ್ ನೆನಪಾಗುತ್ತೆ.

ಭಾಜಪದ ಪ್ರಣಾಳಿಕೆ ನೋಡಿದರೆ ಮ್ಯಾಜಿಕ್ ಸ್ಲೇಟ್ ನೆನಪಾಗುತ್ತೆ.

- Advertisement -
- Advertisement -

| ಕೆ.ಪಿ ಸುರೇಶ್ |

ಭಾಜಪದ ಪ್ರಣಾಳಿಕೆ ನೋಡಿದರೆ ಮ್ಯಾಜಿಕ್ ಸ್ಲೇಟ್ ನೆನಪಾಗುತ್ತೆ. ಬರೆದಿದ್ದು ನೋಡಿ ಶೀಟ್ ಎತ್ತಿದರೆ ಖಾಲಿ ಶೀಟ್!!

ಈ ದೇಶದ ಯಾವ ಸಮಸ್ಯೆಯನ್ನೂ ಬಿಡದೇ ಅದರ ಪರಿಹಾರಕ್ಕೆ ತನ್ನಲ್ಲಿ ಮೂಲಿಕೆ ಇದೆ ಎಂಬಂತೆ ಪ್ರಣಾಳಿಕೆಯ ಆರಂಭದಲ್ಲಿ ಹೇಳಲಾಗಿದೆ. ಕೆಲವು ವಿವರ ನೋಡಿ:
ರಕ್ಷಣಾ ವಿಷಯದಲ್ಲಿ ಸ್ವಾವಲಂಬಿ ಆಗಲು ಎಕೆ 203ನ್ನು ನಮ್ಮ ದೇಶದಲ್ಲೇ ತಯಾರು ಮಾಡುತ್ತಿದ್ದೇವೆ ಎಂಬ ಹೇಳಿಕೆ ಇದೆ. ಇದರ ಹಿಂದೆ ರಾಫೇಲ್ ಯವಾರದ ವ್ಯಂಗ್ಯ ಹಲ್ಲು ಕಿರಿದರೆ ಮೋದಿಯ ತಪ್ಪೆಂದು ಹೇಳಬೇಡಿ!! ಮಾತು ವೈಯ್ಯಾರವಾಗುವುದು ಹೀಗೆ.
ರೈತರಿಗೆ ಒಂದು ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ಎನ್ನಲಾಗಿದೆ. ಅದರ ಜೊತೆಗೆ ‘ಅಸಲು ಕಟ್ಟಿದರೆ’ ಎಂಬ ಕುಂಟು ಪಂಕ್ತಿ..

2022ರ ಒಳಗೆ ಎಲ್ಲರಿಗೂ ಮನೆ, 2024ರ ಒಳಗೆ ಎಲ್ಲರಿಗೂ ನಲ್ಲಿ ನೀರು ಎಂಬ ಆಶ್ವಾಸನೆ ಇದೆ. ಇದೇ ಮೋದಿ ಸರ್ಕಾರ ಕುಡಿಯುವ ನೀರಿನ ಅನುದಾನಕ್ಕೆ ಕತ್ತರಿ ಹಾಕಿದ್ದು ಈ ಪ್ರಣಾಳಿಕೆಯಲ್ಲಿ ಇಲ್ಲ! ಮನೆ ಕಟ್ಟಿಸುವ ಪ್ರಗತಿ ಉತ್ತರದ ಭಾರತದ ರಾಜ್ಯಗಳಲ್ಲಿ ಶೇ.10ರಷ್ಟೂ ಪ್ರಗತಿಯಾಗಿಲ್ಲ ಎಂಬ ವರದಿ ಇತ್ತೀಚೆಗೆ ಬಂದಿತ್ತು. ಅದು ಈ ಪ್ರಣಾಳಿಕೆಯಲ್ಲಿ ಇಲ್ಲ!!

ಸಾವಯವ ಕೃಷಿಗೆ ಒತ್ತು ಎಂಬಲ್ಲಿ ಇಕೋ ಟೂರಿಸಂ ಮೂಲಕ ರೈತರ ಆದಾಯ ವೃದ್ಧಿಗೆ ಕ್ರಮ ಎಂಬ ವಾಕ್ಯ ಇದೆ. ಮಜಾ ಎಂದರೆ ಇದು ಹತ್ತು ವರ್ಷ ಹಿಂದಿನ ಕಾರ್ಯಕ್ರಮ. ಕರ್ನಾಟಕದ ಸಾವಯವ ಮಿಷನ್ ಮೂಲಕ ಇದನ್ನು ಜಾರಿ ಮಾಡುವ ಯತ್ನ ನಡೆದಿತ್ತು. ಮೋದಿ ಮತ್ತೆ ಯುಪಿಎ ಕಾರ್ಯಕ್ರಮವನ್ನು ಕದ್ದು ಹೆಸರು ಅಳಿಸಿ ಮಾರುವ ಯತ್ನ ಮುಂದುವರೆಸಿರುವುದಕ್ಕೆ ಇದು ಒಂದು ಉದಾಹರಣೆ.

ಪ್ರಣಾಳಿಕೆಯ ಆಷಾಡಭೂತಿತನ ಮುಖಕ್ಕೆ ರಾಚುವುದು ‘ಪಾರದರ್ಶಕ ಆರ್ಥಿಕತೆ ‘ ಎಂಬ ಸೆಕ್ಷನ್ನಿನಲ್ಲಿ. ಬೇನಾಮಿ ಆಸ್ತಿ ಮೇಲೆ ಪ್ರಹಾರ ಮಾಡುತ್ತೇವೆ, ಓಡಿ ಹೋಗಿರುವ ಆರ್ಥಿಕ ಅಪರಾಧಿಗಳನ್ನು ವಾಪಾಸು ತರಿಸುತ್ತೇವೆ’ ಎಂಬ ಆಶ್ವಾಸನೆ ಬೇರೆ ಇದೆ. ನೋಟು ರದ್ಧತಿ ಆದಾಗಲೇ ಐನೂರು ಕೋಟಿ ವೆಚ್ಚ ಮಾಡಿದ ರೆಡ್ಡಿಯಂಥವರು ದೇಶ ಬಿಟ್ಟು ಓಡಿ ಹೊಗುವ ಅಗತ್ಯವೇ ಇಲ್ಲದಷ್ಟು ನಿರಾಮಯವಾಗಿದ್ದಾರೆ. ಸಾಕಲ್ಲ!!

ಮುಖ್ಯತಃ ಗ್ರಾಮೀಣ, ಆದಿವಾಸಿ ಬದುಕು ಹಸನು ಮಾಡುವ ಕಾರ್ಯಕ್ರಮಗಳೆಲ್ಲಾ ಕೇವಲ ಹೇಳಿಕೆಯ ಮಟ್ಟದಲ್ಲಿವೆ. ತೋರಿಸಿರುವ ಗುರಿಯೂ ಪುಗಸಟ್ಟೆ ಕಿವಿಗೆ ಹೂವು.

ಅದೇ ಮೂಲ ಸಂರಚನೆ ಅಭಿವೃದ್ಧಿಗೆ 100 ಲಕ್ಷ ಕೋಟಿ ಮುಂದಿನ ವರ್ಷಗಳಲ್ಲಿ ಮೀಸಲಿಡಲಾಗುವುದು ಎನ್ನುತ್ತದೆ ಈ ಪ್ರಣಾಳಿಕೆ. ಕೋಟಿ ಕೋಟಿಗೆ ಎಷ್ಟು ಸೊನ್ನೆ ಅಂತ ಸ್ವತಃ ಮೋದಿಯವರಲ್ಲಿ ಕೇಳಬೇಕೇನೋ. ಭಾರತ ಸರ್ಕಾರದ ಆದಾಯ 25 ಲಕ್ಷ ಕೋಟಿ. ಅದರಲ್ಲೂ ಒಂದು ಭಾಗ ಸಾಲ!! ಅಂಥಾದ್ದರಲ್ಲಿ 100 ಲಕ್ಷ ಕೋಟಿ ಅಂತ ಹೇಳಲು ಯಮಗುಂಡಿಗೆ ಬೇಕು.

1.5 ಲಕ್ಷ ಆರೊಗ್ಯ ಕೇಂದ್ರಗಳನ್ನು ಮುಂದಿನ ಐದು ವರ್ಷಗಳಲ್ಲಿ ಸ್ಥಾಪಿಸಲಾಗುವುದು ಎನ್ನುವ ಈ ಪ್ರಣಾಳಿಕೆ ಈ ವರೆಗೆ ಕೇವಲ 17 ಸಾವಿರ ಇಂಥಾ ಕೇಂದ್ರಗಳನ್ನು ಸ್ಥಾಪಿಸಿರುವುದನ್ನೂ ದಾಖಲಿಸಿದೆ. ಅಂದರೆ ಈ ಟ್ರಾಕ್ ರೆಕಾರ್ಡ್ ಹೊಂದಿರುವ ಸರ್ಕಾರ ಇನ್ನು ಮುಂದೆ ಪ್ರತಿ ವರ್ಷ 30 ಸಾವಿರ ಇಂಥಾ ಕೇಂದ್ರ ಸ್ಥಾಪಿಸುವ ಭರವಸೆಯನ್ನು ನಾವು ನಂಬಬೇಕು.

ಭಾರತದಲ್ಲಿ ವರ್ಷಕ್ಕೆ 25 ಲಕ್ಷ ಜನ ಕ್ಷಯ ರೋಗಕ್ಕೆ ತುತ್ತಾಗಿ 3 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. ಜಗತ್ತಿನಲ್ಲೇ ಇದು ಅತ್ಯಂತ ಹೆಚ್ಚು. ಈಗ ಪ್ರಣಾಳಿಕೆ 2015ರ ಒಳಗೆ ಕ್ಷಯರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದಾಗಿ ಹೇಳಿದೆ. ಹೇಗೆಂದು ಕೇಳುವಂತಿಲ್ಲ!!

ಯುಪಿಎ ಕಾರ್ಯಕ್ರಮವನ್ನು ಕಾಪಿಚೀಟಿ ಮಾಡುವ ಚಾಳಿ ಎಷ್ಟರ ಮಟ್ಟಿಗೆ ಎಂದರೆ ಶಿಕ್ಷಣದಲ್ಲಿ ಜ್ಞಾನ ಪ್ರಸರಣಕ್ಕೆ ಅನುವಾದ ಮಿಷನ್ ಒಂದನ್ನು ಸ್ಥಾಪಿಸಲಾಗುವುದು ಎಂದು ಈ ಪ್ರಣಾಳಿಕೆ ಹೇಳಿದೆ. ಮೂಲತಃ ಏನನ್ನೂ ಈ ಭಾಜಪ ಮಂದಿ ಓದಿರುವ ದಾಖಲೆ ಇಲ್ಲದ ಕಾರಣ ಇದು ಸ್ವಾಗತಾರ್ಹ. ಆದರೆ ಈ ಮಿಷನ್ ಈಗಾಗಲೇ ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿ ವರ್ಷಗಳೇ ಕಳೆದಿವೆ.

ಉದ್ಯೋಗ ಸೃಷ್ಟಿ ಬಗ್ಗೆ ಎರಡೇ ವಾಕ್ಯದಲ್ಲಿ ಕೌಶಲ್ಯ ವೃದ್ಧಿ ಬಗ್ಗೆ ನಿವಾಳಿಸಿ ಉದ್ಯಮಪತಿಗಳಿಗೆ ಸಾಲ ಯೋಜನೆ ವಿಸ್ತರಿಸಲಾಗುವುದು ಎನ್ನುತ್ತೆ ಈ ಪ್ರಣಾಳಿಕೆ. ಅದಕ್ಕೆ ಅಡಿಗೆರೆಯಾಗಿ ಮುದ್ರಾ ಯೋಜನೆಯಲ್ಲಿ 17 ಕೋಟಿ ಮಂದಿ ಸಾಲ ಪಡೆದಿದ್ದಾರೆ ಎನ್ನುತ್ತೆ. ಇದೇ ರೀತಿ ಮುಂದುವರಿದರೆ ಇನ್ನೈದು ವರ್ಷದಲ್ಲಿ ನೂರು ಕೋಟಿ ಮಂದಿ ಉದ್ಯಮಪತಿಗಳಾಗುವುದು ಖಚಿತ. ಅಲ್ಲಿಗೆ ಬಡತನ ನಿರ್ಮೂಲನವಾದಂತೆ.

ಜನಕಲ್ಯಾಣದ ಕಾಳಜಿ ಕುರಿತಂತೆ ಮೋದಿಯ ಅಸೀಮ ಉಡಾಫೆ ಕಾಣಿಸುವುದು ಅಪೌಷ್ಟಿಕತೆಯ ನಿವಾರಣೆಯ ಘೋಷಣೆಯಲ್ಲಿ. ಈ ದೇಶದ ಅರ್ಧಕ್ಕರ್ಧ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಕಾಲಕಾಲದ ಅಧ್ಯಯನಗಳು ಹೇಳುತ್ತಲೇ ಬಂದಿವೆ. ಈ ಪ್ರಣಾಳಿಕೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಇರ ಪ್ರಮಾಣವನ್ನು ಶೇ.10ರಷ್ಟು ಇಳಿಸಲಾಗುವುದು ಎಂಬ ಬರೋಬ್ಬರಿ ಹೇಳಿಕೆ ಇದೆ. ಇದರಿಂದಾಚೆ ಮಾತಾಡಲು ಏನೂ ಇಲ್ಲ!!

ರಾಮಮಂದಿರದಿಂದ ಹಿಡಿದು ನೂರಾರು ‘ಕಟ್ಟುವ ಮಾಡುವ’ ಮಾತುಗಳಿವೆ. ಇದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳುವ ಪ್ರಮೇಯ ಇಲ್ಲ ಅನ್ನಿಸುತ್ತೆ . ಯಾಕೆಂದರೆ ಸ್ವತಃ ಭಾಜಪಕ್ಕೇ ಈ ಬಗ್ಗೆ ನಂಬಿಕೆ ಇದ್ದಂತಿಲ್ಲ!!
ಇಡೀ ಪ್ರಣಾಳಿಕೆಯ ಕಳಶಪ್ರಾಯ ವಾಕ್ಯವೆಂದರೆ ಭ್ರಷ್ಟಾಚಾರ ಮುಕ್ತ ಭಾರತ ಎಂಬ ವಾಕ್ಯ!! ಕರ್ನಾಟಕದ ಆಪರೇಷನ್ ಕಮಲ, ಪಂಕಜಾ ಮುಂದೆಯವರ ಹಗರಣಗಳೆಲ್ಲಾ ಇದರಡಿ ಬರುವುದಿಲ್ಲ!!

ಗಮನಿಸಬೇಕಾದ್ದು ಈ ಪ್ರಣಾಳಿಕೆಯ ಒಳ ವಿವರಗಳನ್ನಲ್ಲ. ಪ್ರಣಾಲಿಕೆಯ ಮುಖ ಪುಟವನ್ನು ಗಮನಿಸಿದರೆ ಭಾಜಪ ತಲುಪಿರುವ ರಸಾತಳ ಗೊತ್ತಾಗುತ್ತದೆ. ಗಡದ್ದಾಗಿ ಪೋಸು ಕೊಟ್ಟಿರುವ ಮೋದಿ ಬಿಟ್ಟರೆ ಇನ್ನೇನು ಇಲ್ಲ! ಕಾಮ್ ಚೋರ್ ಪಕ್ಷವೊಂದು ಢಾಳಾಗಿ ಸಾಧನೆಯ ಸುಳ್ಳುಗಳನ್ನು ಕಣ್ಣು ಕೋರೈಸುವಂತೆ ಬಿತ್ತರಿಸುತ್ತಾ ಇರುವುದೇ ತನ್ನ ಕುಸಿದ ಆತ್ಮವಿಶ್ವಾಸದ ಕುರುಹು. ಈ ಪ್ರಣಾಳಿಕೆ ಅದರ ತಪ್ಪೊಪ್ಪಿಗೆಯಂತೆ ಇದೆ.

ಈ ಪ್ರಣಾಳಿಕೆಯನ್ನು ಹಾಳೆಯ ಎರಡೂ ಬದಿ ಮುದ್ರಿಸಿರುವ ಬಗ್ಗೆ ನನ್ನ ಆಕ್ಷೇಪ ಇದೆ. ಒಂದೇ ಪುಟ ಮುದ್ರಿಸಿದ್ದರೆ ನೋಟ್ ಬುಕ್ಕಾಗಿ ಬಳಸಬಹುದಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...