Homeಕರ್ನಾಟಕ'ಬ್ರಾಹ್ಮಣ' ಮಾಧ್ಯಮಗಳ ಕುರಿತು ದೇವೇಗೌಡರ ಸಿಟ್ಟು ಸಮರ್ಥನೀಯವಲ್ಲವೇ?

‘ಬ್ರಾಹ್ಮಣ’ ಮಾಧ್ಯಮಗಳ ಕುರಿತು ದೇವೇಗೌಡರ ಸಿಟ್ಟು ಸಮರ್ಥನೀಯವಲ್ಲವೇ?

- Advertisement -
- Advertisement -

ನೀವು ಗೂಗಲ್‍ನಲ್ಲಿ ಸಾಕಷ್ಟು ಹುಡುಕಿದರೂ ಈ ಸುದ್ದಿ ಎರಡು ಕಡೆ ಬಿಟ್ಟರೆ ಎಲ್ಲೂ ಕಾಣುವುದಿಲ್ಲ. ಅದರಲ್ಲೂ ಮಾಧ್ಯಮಗಳ ಕ್ಯಾಮೆರಾದ ಮುಂದೆ ನಡೆದ ಈ ವಿದ್ಯಮಾನದ ವಿಡಿಯೋದ ತುಣುಕೂ ಸಹಾ ಇಂಟರ್‍ನೆಟ್‍ನಲ್ಲಿ ಸುಲಭಕ್ಕೆ ಸಿಗುವುದಿಲ್ಲ. ಆದರೆ ಸಮಕಾಲೀನ ಸಂಧರ್ಭದ ಬಹುಮುಖ್ಯ ಹೇಳಿಕೆಯಾದ ಈ ಸುದ್ದಿ ಮತ್ತು ಅದರ ಕುರಿತ ವಿಶ್ಲೇಷಣೆಯನ್ನು ಮಾಡದಿದ್ದರೆ ಅದು ಪತ್ರಿಕಾಧರ್ಮಕ್ಕೇ ಅಪಚಾರ.

ಟಿವಿ 18 ಮತ್ತು ಡೆಕ್ಕನ್ ನ್ಯೂಸ್‍ಗಳಲ್ಲಿ ಬಂದಿರುವ ಈ ಸುದ್ದಿಯ ವಿವರ ಕೆಳಕಂಡಂತಿದೆ.

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿಕೆ, ಕನ್ನಡ ದೃಶ್ಯ ಮಾಧ್ಯಮಗಳ ಮೇಲೆ ಸಿಡಿಮಿಡಿಗೊಂಡ ಮಾಜಿ ಪ್ರಧಾನಿ, ಈ ರಾಜ್ಯದಲ್ಲಿ ಕನ್ನಡ ದೃಶ್ಯ ಮಾಧ್ಯಮಗಳು ಎಷ್ಟು ಉಪಕಾರ ಮಾಡುತ್ತಿವೆ, ಒಂದು ಪ್ರಾದೇಶಿಕ ಪಕ್ಷ ಉಳಿಯೋದಕ್ಕೆ ಎಷ್ಟು ಉಪಕಾರ ಮಾಡುತ್ತಿವೆ ನಿಮಗೆ ಧನ್ಯವಾದಗಳು. ನಾನು ಟಿವಿನೇ ನೋಡ್ಲಿಲ್ಲಾ ರೀ. ನಾನು ಭಾಷಣ ಮಾಡಿದ್ದನ್ನ ಬರೆಯಬೇಕು ಅಂತಾನೂ ಇಲ್ಲಾ ನೀವು ಬರೀರಿ ಇಲ್ಲಾ ಬಿಡಿ. ನನಗೆ 60 ವರ್ಷದ ರಾಜಕೀಯ ಜೀವನದಲ್ಲಿ ಇಷ್ಟು ಸಣ್ಣ ಮಟ್ಟಕ್ಕೆ ಟಿಬೇಟ್ ಮಾಡೋದನ್ನ ನಾನು ನೋಡಿಲ್ಲಾ ನಡೀರಿ ನಡೀರಿ. ಈ ದೇಶದ ಪ್ರಧಾನಿಯದು ಸಣ್ಣದು ಸಿಕ್ಕಲಿ ಅದು ಹೇಗೆ ಬರುತ್ತೆ? ನಾನು ಶೂದ್ರ ಅಷ್ಟೇನೇ, ಗೊತ್ತಿದೆ ನನಗೆ. ನಡೀರಿ ಎಂದು ಎದ್ದು ಮನೆಯೊಳಗೆ ಹೋದ ದೇವೇಗೌಡ. ಮಾಧ್ಯಮಗಳ ಮೇಲೆ ಬಾರೀ ಆಕ್ರೋಶಗೊಂಡ ದೇವೇಗೌಡ.
ಇದು ಸುದ್ದಿ. ಅವರ ಹೇಳಿಕೆಯನ್ನು ಸಮರ್ಥಿಸುವ ರೀತಿಯಲ್ಲಿ ಯಾವೊಂದು ಪತ್ರಿಕೆಯೂ ಇದನ್ನು ವರದಿ ಮಾಡಲಿಲ್ಲ. ಟಿವಿ 18 ಈ ಸುದ್ದಿಯನ್ನು ಹಾಕಿದ್ದರೂ, ಅದರೊಂದಿಗಿರುವ ದೇವೇಗೌಡರು ಮಾತಾಡುವ ವಿಡಿಯೋದಲ್ಲಿ ಈ ಭಾಗ ಇಲ್ಲ. ಆದರೆ, ಹಾಸನದಲ್ಲಿ ಗೌಡರು ಆಡಿದ ಈ ಮಾತನ್ನು ಅಲ್ಲಿನ ಎಲ್ಲಾ ವರದಿಗಾರರೂ ಕೇಳಿಸಿಕೊಂಡಿದ್ದಾರೆ, ರೆಕಾರ್ಡ್ ಸಹಾ ಮಾಡಿಕೊಂಡಿದ್ದಾರೆ.

ವಿಡಿಯೋ ನೋಡಿ

ಇರಲಿ, ಆದರೆ ದೇವೇಗೌಡರು ಹೇಳಿರುವ ಈ ಮಾತು ತಪ್ಪೇ? ಮಾಧ್ಯಮಗಳ ಮೇಲೆ ಈ ರೀತಿಯ ಜಾತಿ ಆರೋಪ ಮಾಡುವುದು ಸರಿಯೇ? ಕರ್ನಾಟಕದ ವಿವಿಧ ಮಾಧ್ಯಮ ಸಂಸ್ಥೆಗಳ ಮೇಲೆ ಯಾರ ಹಿಡಿತ ಇದೆ ಎಂದು ಅರಿಯಲು, ಹವ್ಯಕ ಬ್ರಾಹ್ಮಣರ ಸಮ್ಮೇಳನದಲ್ಲಿ ವಿಶ್ವೇಶ್ವರಭಟ್ ಮಾಡಿದ, ವೈರಲ್ ಆದ ಆಡಿಯೋ ಕೇಳಿದರೆ ಗೊತ್ತಾಗುತ್ತದೆ. ಕರ್ನಾಟಕದ ಪತ್ರಿಕಾ ಮಾಧ್ಯಮವನ್ನು ತಮ್ಮ ಕೈಯ್ಯಾರೆ ಹಾಳು ಮಾಡಿದ, ಅದನ್ನು ಬಿಜೆಪಿ ವಿರೋಧಿಗಳ ವಿರುದ್ಧ ಮಾಬ್ ಹಿಸ್ಟೀರಿಯಾ ಮೂಡಿಸಲು ಯತ್ನಿಸಿದವರು ಅವರು. ಇಂದು ಕನ್ನಡದ ಯಾವುದೇ ಮಾಧ್ಯಮ ಸಂಸ್ಥೆಗೆ ಹೋದರೆ ಅಲ್ಲೆಲ್ಲಾ ಹವ್ಯಕ ಬ್ರಾಹ್ಮಣ ಹುಡುಗರೇ ಕಾಣುತ್ತಾರೆ, ಇವರ ಸಂಖ್ಯೆ ಇನ್ನೂ ಹೆಚ್ಚಾಗಬೇಕು ಎಂದು ಅವರು ವಿವರವಾಗಿ ಮಾತನಾಡುತ್ತಾರೆ. ಕೆಳಹಂತದಲ್ಲಿ ಮಾತ್ರವಲ್ಲದೇ, ಕರ್ನಾಟಕದ ಇಂದಿನ ರಾಜ್ಯಮಟ್ಟದ ಹೆಚ್ಚಿನ ಪತ್ರಿಕೆಗಳು ಮತ್ತು ಚಾನೆಲ್‍ಗಳ ಮುಖ್ಯಸ್ಥರು ಬ್ರಾಹ್ಮಣರಾಗಿದ್ದಾರೆ. ಅವರಲ್ಲೂ ಶೇ.90ರಷ್ಟು ಹವ್ಯಕ ಬ್ರಾಹ್ಮಣರಾಗಿದ್ದಾರೆ.

ಹವ್ಯಕ ಬ್ರಾಹ್ಮಣರೆಂದರೆ ಗೊತ್ತಿರದವರಿಗೆ – ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ಪ್ರತಿನಿಧಿಸುವ ಜಾತಿ ಇದು. ಬ್ರಾಹ್ಮಣರಲ್ಲಿ ತೀರಾ ಇತ್ತೀಚಿನವರೆಗೂ ಕೃಷಿಯೇ ಪ್ರಧಾನ ಕಸುಬಾಗಿಸಿಕೊಂಡಿದ್ದ ಸಮುದಾಯವಿದು. ಇತ್ತೀಚೆಗೆ ಕಡಿಮೆಯಾಗುತ್ತಿದ್ದರೂ, ಈಗಲೂ ಕೃಷಿಯಲ್ಲಿ ತೊಡಗಿರುವವರ ಸಂಖ್ಯೆ ಗಣನೀಯವೇ ಆಗಿದೆ.
ಯಾವುದೋ ಸಾಂಧರ್ಭಿಕ ಅಥವಾ ಐತಿಹಾಸಿಕ ಕಾರಣಗಳಿಂದಾಗಿ ನಿರ್ದಿಷ್ಟ ಜಾತಿ ಮತ್ತು ಉಪಜಾತಿಗಳು ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅದನ್ನು ಆ ಜಾತಿಯದ್ದೇ ತಪ್ಪು ಎನ್ನಲಾಗುವುದಿಲ್ಲ. ಆದರೆ, ಅವರು ಅಲ್ಲಿದ್ದು ಏನು ಮಾಡುತ್ತಿದ್ದಾರೆ ಎಂಬುದು ಹೆಚ್ಚು ಮುಖ್ಯವಾದುದು. ನಿಸ್ಸಂದೇಹವಾಗಿ ಹೇಳಬಹುದಾದ ಒಂದು ಸಂಗತಿಯೆಂದರೆ, ಬಹುಪಾಲು ಮಾಧ್ಯಮಗಳು ಶೂದ್ರ ರಾಜಕಾರಣಿಗಳು, ಶೂದ್ರ ರಾಜಕಾರಣವನ್ನು ಹಣಿಯುತ್ತಿವೆ. ಬಿಜೆಪಿಯಲ್ಲಿ ಬೇರೆ ಬೇರೆ ಸಮುದಾಯಗಳಿಗೆ ಸೇರಿದವರು ಇದ್ದಾರಾದರೂ, ಅದು ವೈದಿಕ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಸಿದ್ಧಾಂತ ಮತ್ತು ರಾಜಕಾರಣ ಮಾಡುತ್ತಿರುವುದರಿಂದ, ಶೇ.90ರಷ್ಟು ಅದರ ಪರವಾಗಿ ನಿಲ್ಲುತ್ತಾರೆ. ದಲಿತ ಮುಖ್ಯಮಂತ್ರಿಯ ಪ್ರಶ್ನೆಯನ್ನು ಎತ್ತುವುದೂ ಸಹಾ ಶೂದ್ರರಾದ ಸಿದ್ದರಾಮಯ್ಯನವರನ್ನು ಹಣಿಯಲೇ ಆಗಿರುತ್ತದೆ.

ತೀರಾ ಇತ್ತೀಚೆಗಿನ ಒಂದು ಉದಾಹರಣೆ ನೀಡುವುದಾದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಮೇಲೆ ‘ಮೀಟೂ’ ಆರೋಪಗಳು ಬಂದವು. ಸರ್ವಾಜನಿಕವಾಗಿ ಚರ್ಚೆಯಾಗಿದ್ದಕ್ಕಿಂತ ಹೆಚ್ಚು ಮಾಹಿತಿ ಈ ಮಾಧ್ಯಮಗಳಲ್ಲಿರುವವರ ಕೈಯ್ಯಲ್ಲಿ ಇತ್ತು. ಅದನ್ನೊಂದು ಸುದ್ದಿಯೇ ಅಲ್ಲ ಎಂಬಂತೆ ಪಕ್ಕಕ್ಕೆ ತಳ್ಳಿದ್ದಷ್ಟೇ ಅಲ್ಲದೇ, ಆತನ ವಿರುದ್ಧ ವರದಿ ಮಾಡಬಾರದೆಂಬ ಸಂವಿಧಾನ ವಿರೋಧಿ ತೀರ್ಪು ಬಂದ ಮೇಲೆ ಅದನ್ನು ಪ್ರಶ್ನಿಸಲೂ ಹೋಗಲಿಲ್ಲ. ಸ್ವಲ್ಪ ಕಾಲದ ನಂತರ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕೀಯ ತೀರ್ಪನ್ನು ಪ್ರಶ್ನಿಸಿತು, ಇನ್ನೂ ಒಂದು ವಾರದ ನಂತರ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡಾಗಳು ಬರೆದವು.

ಒಂದು ವೇಳೆ ಸದರಿ ವ್ಯಕ್ತಿ ಬ್ರಾಹ್ಮಣನಾಗಿರದೇ ಇದ್ದಲ್ಲಿ ಏನಾಗುತ್ತಿತ್ತು? ಆ ವ್ಯಕ್ತಿಯನ್ನು ಚುನಾವಣಾ ಕಣದಿಂದ ನಿವೃತ್ತಗೊಳಿಸುವ ಮಟ್ಟಿಗೆ ಕೂಗಾಟ ನಡೆದಿರುತ್ತಿತ್ತು. ಇಂತಹ ಒಂದಲ್ಲಾ, ಎರಡಲ್ಲಾ, ನೂರಲ್ಲಾ ಸಾವಿರ ಉದಾಹರಣೆಗಳನ್ನು ನೋಡಬಹುದು.

ಈ ಪ್ರಮಾಣದ ಜಾತಿ ರಾಜಕಾರಣವನ್ನು ಮಾಧ್ಯಮಗಳಲ್ಲಿ ಕುಳಿತಿರುವವರು ಮಾಡುತ್ತಿದ್ದಾರೆ. ಬಹಳ ಕ್ಷುದ್ರವಾದ ನಡವಳಿಕೆಯನ್ನು ಇವರೆಲ್ಲರೂ ತೋರಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಬಹಳ ಅಪಾಯಕಾರಿ. ಈ ಕುರಿತು ಚರ್ಚೆ ನಡೆಯದಿದ್ದರೆ ಅದು ಇನ್ನೂ ಅಪಾಯಕಾರಿ. ನ್ಯಾಯಪಥ-ನಮ್ಮ ಗೌರಿ ಪತ್ರಿಕೆ ಮತ್ತು https://naanugauri.com ಈ ಚರ್ಚೆಯನ್ನು ಗಂಭೀರವಾಗಿ ಮತ್ತು ಆರೋಗ್ಯಕರವಾಗಿ ನಡೆಸಲು ತೀರ್ಮಾನಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...