ಚೀನಾ ಸರ್ಕಾರವು, ಅರುಣಾಚಲ ಪ್ರದೇಶದಲ್ಲಿ ಸುಮಾರು 101 ಮನೆಗಳಿರುವ ಹೊಸ ಹಳ್ಳಿಗಳನ್ನು ನಿರ್ಮಿಸಿರುವ ವರದಿಗಳ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಈ ಹಿಂದೆ ನೀಡಿರುವ ವಾಗ್ದಾನಗಳನ್ನು ನೆನಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿಗಳನ್ನು ನಿರ್ಮಿಸಿರುವ ಪತ್ರಿಕಾ ವರದಿಯೊಂದರ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿರುವ ರಾಹುಲ್ ಗಾಂಧಿ, ”ನಾನು ದೇಶದವನ್ನು ತಲೆಬಾಗಿಸಲು ಬಿಡುವುದಿಲ್ಲ” ಎಂಬ ಮೋದಿಯ ಹೇಳಿಕೆಯನ್ನು ಹಿಂದಿಯಲ್ಲಿ ಬರೆದು, “ಅವರ ಈ ಭರವಸೆಯನ್ನು ನೆನಪಿಡಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತ-ಚೀನಾ ಗಡಿ: ಅರುಣಾಚಲ ಪ್ರದೇಶದಲ್ಲಿ ಒಂದು ಪುಟ್ಟ ಗ್ರಾಮವನ್ನೇ ನಿರ್ಮಿಸಿದ ಚೀನಾ!
Remember his promise- “मैं देश झुकने नहीं दूँगा।” pic.twitter.com/NdXT4hqkNK
— Rahul Gandhi (@RahulGandhi) January 19, 2021
ಇಷ್ಟೇ ಅಲ್ಲದೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಅವರು ಕೂಡಾ ಪ್ರಧಾನಿ ವಿರುದ್ದ ಕಿಡಿ ಕಾರಿದ್ದಾರೆ. ಅವರು ಕೂಡಾ ಘಟನೆಯ ಪತ್ರಿಕಾ ವರದಿಯ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಾಕಿ, “ಮೋದಿಜಿ ಎಲ್ಲಿದೆ ನಿಮ್ಮ 56 ಇಂಚಿನ ಎದೆ” ಎಂದು ಪ್ರಶ್ನಿದ್ದಾರೆ.
मोदी जी, वो “56 इंच” का सीना कहाँ है ? pic.twitter.com/FuLv3onexi
— Randeep Singh Surjewala (@rssurjewala) January 19, 2021
ಚೀನಾ ಸರ್ಕಾರವು, ಅರುಣಾಚಲ ಪ್ರದೇಶದಲ್ಲಿ ಸುಮಾರು 101 ಮನೆಗಳಿರುವ ಹೊಸ ಗ್ರಾಮವನ್ನು ನಿರ್ಮಿಸಿದ್ದು, ಇವುಗಳ ಉಪಗ್ರಹ ಚಿತ್ರಗಳನ್ನು ಮಾಧ್ಯಮಗಳು ಬಿಡಿಗಡೆ ಮಾಡಿದೆ.
ಇದನ್ನೂ ಓದಿ: ರೈಲು ಸುರಂಗ ನಿರ್ಮಿಸಲು ಚೀನಾ ಕಂಪೆನಿಗೆ ಗುತ್ತಿಗೆ ನೀಡಿದ ’ಆತ್ಮನಿರ್ಭರ್’ ಮೋದಿ ಸರ್ಕಾರ!


