ಬ್ರಿಸ್ಬೇನ್‌‌ನಲ್ಲಿ ನಡೆದ ಆಸ್ಟ್ರೇಲಿಯಾ-ಭಾರತ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ರೋಚಕ ಜಯಗಳಿಸಿದೆ. ಆ ಮೂಲಕ 2-1 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿದೆ.

ಇಂದಿನ ಕೊನೆಯ ಪಂದ್ಯದ ಐದನೇ ದಿನದಾಟದಲ್ಲಿ ಭಾರತದ ಗೆಲುವಿಗೆ 328 ರನ್‌ಗಳ ಗುರಿ ಪಡೆದಿತ್ತು. ಶುಭ್‌ಮನ್ ಗಿಲ್ ಮತ್ತು ರಿಷಬ್ ಪಂತ್‌ರವರ ಅದ್ಭುತ ಬ್ಯಾಂಟಿಂಗ್‌ನಿಂದ ಭಾರತ ಮೂರು ವಿಕೆಟ್‌ಗಳ ಜಯ ಪಡೆಯಿತು.

ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್‌ನಲ್ಲಿ 369 ಮತ್ತು ದ್ವಿತೀಯ ಇನ್ನಿಂಗ್ಸ್‌ನಲ್ಲಿ 294 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 336 ರನ್ ಗಳಿಸಿದ್ದ ಭಾರತ, ಎರಡನೇ ಇನ್ನಿಂಗ್ಸ್‌ನಲ್ಲಿ 329 ರನ್ ಬಾರಿಸಿ ಜಯ ತನ್ನದಾಗಿಸಿಕೊಂಡಿತು.

ಕಳೆದ ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದಿದ್ದ ಭಾರತ ಈ ಬಾರಿಯೂ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿ ಟ್ರೋಫಿ ಉಳಿಸಿಕೊಂಡಿದೆ.

ಆರಂಭಿಕ ಆಟಗಾರ ಶುಭಮನ್‌ ಗಿಲ್ 146 ಎಸೆತಗಳಲ್ಲಿ 91 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರೆ, ಮಧ್ಯಮ ಕ್ರಮಾಂದ ಆಟಗಾರ ರಿಷಬ್ ಪಂತ್ 138 ಎಸೆತಗಳಲ್ಲಿ 89 ರನ್ ರನ್ ಗಳಿಸಿ ಜಯದ ದಡ ಸೇರಿಸಿದರು.

ಟೆಸ್ಟ್ ಪಂದ್ಯ ಕೊನೆ ಕೊನೆಗೆ 20-20 ಪಂದ್ಯದ ರೀತಿ ಪರಿವರ್ತನೆಯಾಗಿತ್ತು. 100 ಓವರ್‌ಗಳಗೆ 5 ದಿನದಾಟ ಮುಕ್ತಾಯವಾಗಬೇಕಿದ್ದು ಅಷ್ಟರೊಳಗೆ ಭಾರತ 328 ರನ್ ಗಳಿಸಬೇಕಿತ್ತು. ಅಷ್ಟರಲ್ಲಿ ವಿಕೆಟ್ ಉಳಿಸಿಕೊಂಡರೆ ಡ್ರಾ, ವಿಕೆಟ್ ಕಳೆದುಕೊಂಡರೆ ಸೋಲು ಅನುಭವಿಸಬೇಕಿತ್ತು ಒಂದು ಹಂತದಲ್ಲಿ 33 ಎಸೆತಗಳಿಗೆ 19 ರನ್ ಬೇಕಿದ್ದಾಗ ವಾಷಿಂಗ್ಟನ್ ಸುಂದರ್ ಔಟ್ ಆಗಿ ಆತಂಕ ಮೂಡಿಸಿದ್ದರು. ಆದರೆ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಪಂತ್ ಜಯ ತಂದುಕೊಟ್ಟರು.

ಶುಭ್‌ಮನ್ ಗಿಲ್, ರಿಷಬ್ ಪಂತ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ವಾಷಿಂಗ್‌ಟನ್ ಸುಂದರ್ ಮತ್ತು ನಟರಾಜನ್ ಈ ನಾಲ್ವರು ಯುವ ಆಟಗಾರರು ಅತ್ಯುತ್ತಮ ಪ್ರದರ್ಶನದಿಂದ ತಮ್ಮ ಟೆಸ್ಟ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ನಟರಾಜನ್ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಗಳಿಸಿ ಗಮನ ಸೆಳೆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 5 ವಿಕೆಟ್ ಗಳಿಸಿ ಸಾಧನೆಗೈದರು.

ಇದನ್ನೂ ಓದಿ: 37 ಎಸೆತಗಳಲ್ಲಿ 100 ರನ್: 9 ಬೌಂಡರಿ, 11 ಸಿಕ್ಸರ್ ಸಿಡಿಸಿದ ‘ಅಜರ್’


ಇದನ್ನೂ ಓದಿ: ಮುಷ್ತಾಕ್ ಅಲಿ ಟ್ರೋಫಿ: ಚಾಂಪಿಯನ್ ಕರ್ನಾಟಕ ನಾಕ್ ‌ಔಟ್ ಹಂತದತ್ತ…

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here