ಅದು ಬಲಿಷ್ಠ ಮುಂಬೈ ತಂಡ. ಇವನು ಅಶಕ್ತ ಕೇರಳ ತಂಡದವನು. 54 ಎಸೆತಗಳಲ್ಲಿ ಈ ಯುವಕ 137 ರನ್ ಚಚ್ಚಿದ್ದಾನೆ. 100 ರನ್ ತಲುಪಲು ಆತನಿಗೆ ಕೇವಲ 37 ಎಸೆತ ಸಾಕಾಯಿತು. ಟ್ವೆಂಟಿ-20ಯಲ್ಲಿ ಭಾರತೀಯನೊಬ್ಬ ಗಳಿಸಿದ ವೇಗದ ಸೆಂಚುರಿಯಲ್ಲಿ ಇದೀಗ ಇದು ಮೂರನೆ ಸ್ಥಾನದಲ್ಲಿದೆ. ಹಿಂದೆ ರಿಷಬ್ ಪಂತ್ 32 ಎಸೆತಗಳಲ್ಲಿ ಮತ್ತು ರೋಹಿತ್ ಶರ್ಮಾ 35 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಕ್ರಿಕೆಟ್-ಕ್ರೇಜಿ ಹಿರಿಯ ಸಹೋದರ ಈ ಹುಡುಗನಿಗೆ ಹೆಚ್ಚಿನ ವೃತ್ತಿಜೀವನದ ಆಯ್ಕೆಯನ್ನು ನೀಡಲಿಲ್ಲ. ಅವನ ಹೆಸರನ್ನು ಅಜ್ಮಲ್‌ನಿಂದ ಮೊಹಮ್ಮದ್ ಅಜರುದ್ದೀನ್ ಎಂದು ಬದಲಾಯಿಸಿ ಕ್ರಿಕೆಟ್ ಅಂಗಳಕ್ಕೆ ದಬ್ಬಿಬಿಟ್ಟ!
ಇದಲ್ಲದೆ, ಈ ಅಜರ್ ಕಾಸರಗೋಡಿನ ಹೊರವಲಯದಲ್ಲಿರುವ ಕೇರಳದ ಅಪರೂಪದ ಪಟ್ಟಣವಾದ ತಲಂಗರಾದಿಂದ ಬಂದವನು. ಅಲ್ಲಿ ಮಕ್ಕಳು ಚೆಂಡನ್ನು ಬ್ಯಾಟ್‌ನಿಂದ ಹೊಡೆಯಲು ಬಯಸುತ್ತಾರೆ ಹೊರತು, ಅದನ್ನು ಕಿಕ್ ಮಾಡಲು ಅಲ್ಲ. ಕೇರಳದಲ್ಲಿ ಫುಟ್‌ಬಾಲ್ ಹೆಚ್ಚು ಜನಪ್ರಿಯ ಎಂಬುದನ್ನು ಗಮನಿಸಿ.

26ರ ಹರೆಯದ ಯುವಕ ಅಜರ್, ಭಾರತೀಯ ಬ್ಯಾಟಿಂಗ್ ಶ್ರೇಷ್ಠ ಮೊಹಮ್ಮದ್ ಅಜರುದ್ದೀನ್ ಅವರ “ಅಜೀವ ಅಭಿಮಾನಿ”ಯಾದ ತನ್ನ ಹಿರಿಯ ಸಹೋದರ ಕಮರುದ್ದೀನ್ ನಿರೀಕ್ಷೆಗೆ ತಕ್ಕಂತೆ ಏನಾದರೂ ವಿಶೇಷವಾದ ಕೆಲಸವನ್ನು ಮಾಡಬೇಕೆಂದು ನಿರ್ಧರಿಸಿದ್ದ. ತಲಂಗರಾ ಪಟ್ಟಣ ಕೂಡ ಅವರ “ನೆಕ್ಸ್ಟ್ ಅಜರ್”ನಿಂದ ಹೆಚ್ಚಿನ ಸಾಧನೆ ನಿರೀಕ್ಷಿಸಿತ್ತು.

ಮೊನ್ನೆ ಬುಧವಾರ, ಅಜರ್ ತನ್ನ ಏಳು ಸಹೋದರರು, ತನ್ನ ಸ್ವಂತೂರು ಮತ್ತು ಇಡೀ ರಾಜ್ಯ ಹೆಮ್ಮೆಪಡುವ ಆಟ ಆಡಿಬಿಟ್ಟ. ಈ ಎರಡು ದಶಕಗಳಲ್ಲಿ ಶ್ರೀಶಾಂತ್ ಬಿಟ್ಟರೆ ಕೇರಳದ ಕ್ರಿಕೆಟಿಗರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದು ಕಡಿಮೆಯೇ. ಆರ್‌ಸಿಬಿ ತಂಡಕ್ಕೆ ಆಡುವ ದೇವದತ್ತ ಪಡಿಕ್ಕಲ್ ಮೂಲತಃ ಕೇರಳದ ಹುಡುಗ. ದಶಕದಿಂದ ಬೆಂಗಳೂರು ನಿವಾಸಿಯಾಗಿರುವ ದೇವದತ್ತ ಈಗ ಟ್ವೆಂಟಿ-20 ಮಾದರಿಯಲ್ಲಿ ಗಮನ ಸೆಳೆಯುತ್ತಿರುವ ಪ್ರತಿಭೆ.

ಮುಂಬೈ ವಿರುದ್ಧ 54 ಎಸೆತಗಳಲ್ಲಿ 137 ರನ್ ಗಳಿಸಿದ ಅಜರುದ್ದೀನ್ ಅಲಿಯಾಸ್ ಅಜ್ಮಲ್, ಶತಕ ಗಳಿಸಲು 37 ಎಸೆತ ತೆಗೆದುಕೊಂಡ. ರಿಷಭ್ ಪಂತ್ (32 ಎಸೆತಗಳು) ಮತ್ತು ರೋಹಿತ್ ಶರ್ಮಾ (35 ಎಸೆತಗಳು) ನಂತರ ಭಾರತೀಯರು ಮಾಡಿದ ಮೂರನೇ ಅತಿ ವೇಗದ ಟ್ವೆಂಟಿ-20 ಶತಕ ಇದು.

“ನಾವು ಮಾತ್ರವಲ್ಲ, ಇಡೀ ತಲಂಗರಾದ ಜನ ಅವತ್ತು ಟಿವಿಗೆ ಅಂಟಿಕೊಂಡಿದ್ದರು” ಎಂದು ಹಿರಿಯ ಸಹೋದರ ಕಮರುದ್ದೀನ್ ಹೆಮ್ಮೆ ಪಟ್ಟಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಜರುದ್ದೀನ್ ಅವರ ಬ್ಯಾಟಿಂಗ್ ರೇಸಿಂಗ್‌ನ ವಿಡಿಯೊ ತುಣುಕುಗಳೊಂದಿಗೆ, ಭಾರತ ಕ್ರಿಕೆಟ್ ವಲಯಗಳು ಮತ್ತೆ ಹಳೆಯ ‘ಅಜರ್’ ಅವರನ್ನು ನೆನಪಿಸಿಕೊಂಡಿವೆ. ಬಿಗ್ ಶಾಟ್ ವೀರ ವೀರೇಂದ್ರ ಸೆಹ್ವಾಗ್, “ವಾಹ್ ಅಜರುದ್ದೀನ್, ಬೆಹ್ತರೀನ್!. ನಿನ್ನ ಆಟವನ್ನು ಆನಂದಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಬಲಿಷ್ಠ ಬೌಲರ್‌ಗಳ ಬೆವರಿಳಿಸಿದ

ಮುಂಬೈ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಹಿಂದೆ ಭಾರತ ತಂಡಕ್ಕೆ ಆಡಿದ್ದ ವೇಗಿ ಧವನ್ ಕುಲಕರ್ಣಿ ಮತ್ತು 2020ರ ಟ್ವೆಂಟಿ-20ಯಲ್ಲಿ ಮಿಂಚಿದ ತುಷಾರ್ ದೇಶಪಾಂಡೆ ಎಸೆತಗಳನ್ನು ಹಿಗ್ಗಾಮುಗ್ಗಾ ಬಾರಿಸಿದ ಅಜರ್, ಅವರನ್ನು ಬೌಂಡರಿ ಲೈನಿನಾಚೆಗೆ ದೂಕಿಬಿಟ್ಟ.

ಭಾರತ ತಂಡಕ್ಕೆ ಆಡಿದ್ದ ವೇಗಿ ಮತ್ತು ಸದ್ಯ ಕೇರಳ ತಂಡದ ಕೋಚ್ ಆಗಿರುವ ಟಿನು ಯೊಹಾನ್ನನ್, ‘ಅವನಿಂದ ಅಂತಹ ಒಂದು ಆಟವನ್ನು ನಿರೀಕ್ಷೆ ಮಾಡಿದ್ದೆ. ಆದರೆ ಅದು ಈ ಪ್ರಮಾಣದಲ್ಲಿ ಎಂದು ಊಹೆ ಕೂಡ ಮಾಡಿರಲಿಲ್ಲ. ಅಜರ್‌ನ ಸ್ಕ್ವೇರ್ ಲೆಗ್ ಶಾಟ್‌ಗಳಿಗಿಂತ ಅವನ ಪಿಕ್-ಅಪ್ ಶಾಟ್‌ಗಳು ನನಗೆ ಇಷ್ಟ. ಇಂತಹ ಆಟ ನೋಡುವುದೇ ಸೊಬಗು. ಆದರೆ ಬೌಲರ್‌ಗಳ ಪಾಲಿಗೆ ಇದು ನರಕ. ಅವರು ಶಾರ್ಟ್ ಆಫ್ ಲೆಂಥ್ ಎಸೆದರೆ ಇವನು ಸೀದಾ ಬೌಂಡರಿಯಾಚೆ ಚೆಂಡನ್ನು ಅಟ್ಟಿದಾಗ ಅದು ಬೌಲರ್‌ಗಳ ನೈತಿಕ ಶಕ್ತಿಯನ್ನೇ ಕಸಿದು ಬಿಟ್ಟಿತ್ತು’ ಎಂದಿದ್ದಾರೆ.

ರಣಜಿ, ಮುಷ್ತಾಕ್ ಅಲಿ ಮುಂತಾದ ದೇಸಿ ಚಾಂಪಿಯನ್‌ಶಿಪ್‌ಗಳಲ್ಲಿ ಕೇರಳ ಬೇಗ ನಿರ್ಗಮಿಸುವುದರಿಂದ ಅಜರ್‌ಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಆದರೆ ಸಿಕ್ಕ ಅವಕಾಶವನ್ನು ಈ ಸಲ ಆತ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ‘ಮತ್ತೊಬ್ಬ ಅಜರ್’ಗಾಗಿ ಕಾಯೋಣ.


ಇದನ್ನೂ ಓದಿ: ವಿಮೋಚನೆಯ ಆಟವಾಗಿದ್ದ ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದ್ದು ಹೇಗೆ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here