Homeಮುಖಪುಟಭಾರತ-ಚೀನಾ ಗಡಿ: ಅರುಣಾಚಲ ಪ್ರದೇಶದಲ್ಲಿ ಒಂದು ಪುಟ್ಟ ಗ್ರಾಮವನ್ನೇ ನಿರ್ಮಿಸಿದ ಚೀನಾ!

ಭಾರತ-ಚೀನಾ ಗಡಿ: ಅರುಣಾಚಲ ಪ್ರದೇಶದಲ್ಲಿ ಒಂದು ಪುಟ್ಟ ಗ್ರಾಮವನ್ನೇ ನಿರ್ಮಿಸಿದ ಚೀನಾ!

- Advertisement -
- Advertisement -

ಚೀನಾ, ಅರುಣಾಚಲ ಪ್ರದೇಶದಲ್ಲಿ ಸುಮಾರು 101 ಮನೆಗಳಿರುವ ಹೊಸ ಗ್ರಾಮವನ್ನು ನಿರ್ಮಿಸಿದ್ದು, ಇವುಗಳನ್ನು ತೋರಿಸುವ ಉಪಗ್ರಹ ಚಿತ್ರಗಳು ದೊರಕಿವೆ. ಆದರೆ ಈ ಕೆಲಸವನ್ನು ಚೀನಾ ಹಲವು ವರ್ಷಗಳಿಂದ ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.

“ತ್ಸಾರ್ ಚು ನದಿ ದಂಡೆ ಪ್ರದೇಶದಲ್ಲಿರುವ ಈ ಗ್ರಾಮ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿದ್ದು. ಇದು ಭಾರತ-ಚೀನಾ ನಡುವಿನ ವಿವಾದಿತ ಪ್ರದೇಶಗಳಲ್ಲೊಂದಾಗಿದೆ. ಆಗಸ್ಟ್ 26, 2019 ರ ಉಪಗ್ರಹ ಚಿತ್ರದಲ್ಲಿ ಅಲ್ಲಿ ಯಾವುದೇ ಗ್ರಾಮದ ಕುರುಹು ಇರಲಿಲ್ಲ. ಹಾಗಾಗಿ ಈ ಗ್ರಾಮ ಕಳೆದ ವರ್ಷ ನಿರ್ಮಾಣವಾಗಿದೆ” ಎಂದು ಅಂದಾಜಿಸಲಾಗಿದೆ.

“ನವೆಂಬರ್ 1, 2020 ದಿನಾಂಕ ನಮೂದಿಸಲ್ಪಟ್ಟಿರುವ ಈ ಉಪಗ್ರಹ ಚಿತ್ರಗಳನ್ನು ಹಲವಾರು ತಜ್ಞರು ವಿಶ್ಲೇಷಿಸಿದ್ದಾರೆ. ಭಾರತ-ಚೀನಾ ನಡುವಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಬಳಿಯ ಭಾರತೀಯ ಭೂಭಾಗದಲ್ಲಿ ನಿರ್ಮಾಣಗೊಂಡಿರುವ ಈ ಗ್ರಾಮವು ವಾಸ್ತವಿಕ ಗಡಿ ರೇಖೆಯಿಂದ ಅಂದಾಜು 4.5 ಕಿಮೀ ಒಳಗಿದೆ” ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಹಿಂದಿ ಹೇರಿಕೆ ಮಾಡಿದ ರಾಜ್ಯ ಸರ್ಕಾರ: ಟಿ.ಎಸ್‌ ನಾಗಾಭರಣ ಆಕ್ರೋಶ

ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, “ಗಡಿ ಪ್ರದೇಶಗಳಲ್ಲಿ ಚೀನಾ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಕುರಿತಂತೆ ಇತ್ತೀಚಿಗಿನ ವರದಿಗಳನ್ನು ನೋಡಿದ್ದೇವೆ. ಹಿಂದೆ ಕೂಡ ಚೀನಾ ಇಂತಹ ನಿರ್ಮಾಣ ಕೆಲಸ ನಡೆಸಿದೆ” ಎಂದು ಹೇಳಿದೆ.

“ಗಡಿ ಪ್ರದೇಶದಲ್ಲಿನ ಮೂಲಭೂತ ಸೌಲಭ್ಯ ಉತ್ತಮ ಪಡಿಸಲು ಸರ್ಕಾರ ಬದ್ಧವಾಗಿದೆ. ಗಡಿ ಪ್ರದೇಶದ ಜನರಿಗೆ ಅನುಕೂಲವಾಗಲು ಅಲ್ಲಿ ರಸ್ತೆ, ಸೇತುವೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ” ಎಂದು ಸರ್ಕಾರ ಹೇಳಿದೆ.

ಈ ಉಪಗ್ರಹ ಚಿತ್ರಗಳನ್ನು ಪ್ಲಾನೆಟ್ ಲ್ಯಾಬ್ಸ್ ಇಂಕ್ ಮೂಲಕ ಪಡೆದಿದೆ ಎಂದು ಎನ್‍ಡಿಟಿವಿ ವರದಿ ಮಾಡಿದೆ. ಭಾರತ ಸರ್ಕಾರ ತನ್ನ ಅಧಿಕೃತ ನಕ್ಷೆ ಎಂದು ಬಳಸುವ ಸರ್ವೇಯರ್ ಜನರಲ್ ಆಫ್ ಇಂಡಿಯಾದ ಆನ್ಲೈನ್ ನಕ್ಷೆಯಲ್ಲೂ ಚೀನಾದ ಈ ಗ್ರಾಮ ಭಾರತದ ಭೂಭಾಗದಲ್ಲಿರುವುದು ಕಾಣಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: ಕೋಲ್ಕತ್ತಾ ಬಿಜೆಪಿ ರ್ಯಾಲಿಯಲ್ಲಿ ಘರ್ಷಣೆ: ಗೋ ಬ್ಯಾಕ್ ಘೋಷಣೆಗಳೊಂದಿಗೆ ಕಲ್ಲು ತೂರಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...