ಬೆಂಗಳೂರಿನ ಸಿ.ವಿ ರಾಮನ್‌ನಗರ ವಿಧಾನಸಭಾದ ಕ್ಷೇತ್ರದ ನ್ಯೂ ತಿಪ್ಪಸಂದ್ರ ವಾರ್ಡ್‌ನ ಕೃಷ್ಣಪ್ಪ ಗಾರ್ಡನ್‌ನ ಸ್ಲಂನಲ್ಲಿರುವ 86 ಕುಟುಂಬಗಳಿಗೆ ಯಾವುದೇ ಪರ್ಯಾಯ ಪುನರ್ವಸತಿ ವ್ಯವಸ್ಥೇ ಮಾಡದೆ ಏಕಾಏಕಿ ಒಕ್ಕಲೆಬ್ಬಿಸಿ ಬೀದಿಪಾಲು ಮಾಡಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಅಧ್ಯಕ್ಷರಾದ ಕೆ. ಮರಿಯಪ್ಪನವರು ಆರೋಪಿಸಿದ್ದಾರೆ.
ಇಂದಿರಾ ನಗರದ NGEF ಫ್ಯಾಕ್ಟರಿ ಹತ್ತಿರ ಕಳೆದ 30 ವರ್ಷಗಳಿಂದಲೂ ಕೂಲಿ ಮಾಡುವ 450 ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದರು. ಇತ್ತೀಚೆಗೆ ಅವರಲ್ಲಿ 303 ಕುಟುಂಬಗಳಿಗೆ ಮಾರತ್ತಹಳ್ಳಿಯಲ್ಲಿ ಸರ್ಕಾರದ ವತಿಯಿಂದ ಮನೆ ವ್ಯವಸ್ಥೆ ಮಾಡಲಾಗಿದೆ. ಉಳಿದ 86 ಕುಟುಂಬಗಳು ಸಹ ಅಲ್ಲಿಯೇ ವಾಸಿಸುತ್ತಿದ್ದು, ಅವರ ಬಳಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಒಳಗೊಂಡಂತೆ ಎಲ್ಲಾ ದಾಖಲಾತಿಗಿಳಿದ್ದರೂ ಸಹ ಅವರಿಗೆ ಮನೆ ವ್ಯವಸ್ಥೆ ಮಾಡಿಕೊಡಬೇಕೆಂದು ಕಳೆದ 2 ವರ್ಷಗಳಿಂದ ಹೋರಾಡುತ್ತಿದ್ದೇವೆ. ಸ್ಲಂ ಬೋರ್ಡ್, ಕಂದಾಯ ಅಧಿಕಾರಿಗಳಿಗೆ ಹತ್ತಾರು ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ.
ಬೆಂಗಳೂರಿನ ಸಿ.ವಿ ರಾಮನ್‌ನಗರ ವಿಧಾನಸಭಾದ ಕ್ಷೇತ್ರದ ನ್ಯೂ ತಿಪ್ಪಸಂದ್ರ ವಾರ್ಡ್‌ನ ಕೃಷ್ಣಪ್ಪ ಗಾರ್ಡನ್‌ನ ಸ್ಲಂನಲ್ಲಿರುವ 86 ಕುಟುಂಬಗಳಿಗೆ ಯಾವುದೇ ಪರ್ಯಾಯ ಪುನರ್ವಸತಿ ವ್ಯವಸ್ಥೇ ಮಾಡದೆ ಏಕಾಏಕಿ ಒಕ್ಕಲೆಬ್ಬಿಸಿ ಬೀದಿಪಾಲು ಮಾಡಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟದ ಸಮಿತಿಯ ಅಧ್ಯಕ್ಷರಾದ ಮರಿಯಪ್ಪನವರು ಆರೋಪಿಸಿದ್ದಾರೆ. pic.twitter.com/QTCV6pxOSK
— Naanu Gauri (@naanugauri) January 21, 2021
ನಿನ್ನೆ ತಾನೇ ವಿಶೇಷ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಬಡ ಕುಟುಂಬಗಳಿಗೆ ವಸತಿ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದೆವು. ಪುನರ್ವಸತಿ ವ್ಯವಸ್ಥೇ ಮಾಡಬೇಕೆಂದು ಅವರು ತಹಶೀಲ್ದಾರ್‌ರವರಿಗೆ ಸೂಚಿಸಿದರೂ ಸಹ ತಹಶೀಲ್ದಾರ್‌ರವರು ಅದಕ್ಕೆ ಸಿದ್ದರಿಲ್ಲ. ಹಾಗಾಗಿ ಇಂದು ಏಕಾಏಕಿ ಆ 86 ಕುಟುಂಬಗಳನ್ನು ಸಹ ಒಕ್ಕಲೆಬ್ಬಿಸಲಾಗಿದೆ. ಮನೆ ಕಳೆದುಕೊಂಡ ಆ ಕುಟುಂಬಗಳು ಪರ್ಯಾಯ ವ್ಯವಸ್ಥೆ ಇಲ್ಲದೆ ಬೀದಿಗೆ ಬಿದ್ದಿದ್ದಾರೆ. ಚಳಿಗಾಳಿಯಲ್ಲಿ ನಲುಗಿತ್ತಿದ್ದಾರೆ, ಕೂಡಲೇ ಪುನರ್ವಸತಿ ವ್ಯವಸ್ಥೆ ಮಾಡಬೇಕೆಂದು ಮರಿಯಪ್ಪ ಒತ್ತಾಯಿಸಿದ್ದಾರೆ.
ನಾವು 30 ವರ್ಷಗಳಿಂದ ಒಟ್ಟಿಗೆ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದೇವೆ. ಕಳೆದ ಚುನಾವಣೆಯಲ್ಲಿ ಓಟು ಕೂಡ ಹಾಕಿದ್ದೇವೆ. ಆದರೆ ಅರ್ಧ ಜನಕ್ಕೆ ಮಾತ್ರ ಮನೆ ಕೊಟ್ಟು ಇನ್ನರ್ಧ ಜನಕ್ಕೆ ಮೋಸ ಮಾಡಲಾಗಿದೆ. ಇಂದು ಬೆಳಿಗ್ಗೆ ಪೊಲೀಸರು ಬಂದು ನಮ್ಮ ಮನೆಗಳನ್ನು ಒಡೆದುಹಾಕಿದ್ದಾರೆ. ನಮಗೆ ಬೇರೆ ಯಾವುದೇ ಮನೆ ಇಲ್ಲ, ಅಲ್ಲಿ ಇರಲು ಪೊಲೀಸರು ಬಿಡುತ್ತಿಲ್ಲ ನಾವೇನು ಮಾಡಬೇಕು ಎಂದು ಅಲ್ಲಿನ ನಿವಾಸಿಗಳು ತಮ್ಮ ಗೋಳು ಹೊರಹಾಕಿದ್ದಾರೆ.
ಲಂಚ ಕೊಟ್ಟವರಿಗೆ ಮನೆ ಕೊಡಲಾಗಿದೆ. ಆದರೆ ನಾವು ಬಡವರು ಲಂಚ ಕೊಡುವಷ್ಟು ಶಕ್ತಿ ಇಲ್ಲ. ಹಾಗಾಗಿ ಮನೆ ಕಳೆದುಕೊಂಡು ಕೆ.ಆರ್ ಪುರಂ ತಹಶೀಲ್ದಾರ್ ಕಚೇರಿ ಬಳಿ ನ್ಯಾಯ ಕೇಳಿಕೊಂಡು ಬಂದಿದ್ದೇವೆ. ತಹಶೀಲ್ದಾರ್ ನಮಗೆ ನ್ಯಾಯ ಕೊಡಿಸುವವರೆಗೂ ನಾವು ಇಲ್ಲೇ ಇರುತ್ತೇವೆ, ಇಲ್ಲೇ ಮಲಗುತ್ತೇವೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Breaking: ಕೃಷಿ ಕಾನೂನುಗಳನ್ನು ಒಂದೂವರೆ ವರ್ಷ ತಡೆಯಲ್ಲಿಡಲು ಮುಂದಾದ ಕೇಂದ್ರ!


