ನಿನ್ನೆ ತಾನೇ ಖಾತೆ ಹಂಚಿಕೆ ಮಾಡಿ ನಿಟ್ಟುಸಿರು ಬಿಟ್ಟಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಮತ್ತಷ್ಟು ಒತ್ತಡ ಹಾಕಲಾಗುತ್ತಿದೆ. ತಮಗೆ ಸಿಕ್ಕ ಖಾತೆಗಳಿಂದ ತೃಪ್ತರಾಗದ ಸಚಿವರು ಖಾತೆ ಬದಲಾವಣೆಗೆ ಒತ್ತಡ ತಂದಿದ್ದು ಅದಕ್ಕೆ ಸಿಎಂ ಅಸ್ತು ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖಾತೆ ಬದಲಾವಣೆಯಿಂದ ಸಚಿವರಾದ ಡಾ.ಕೆ ಸುಧಾಕರ್, ಜೆ.ಸಿ ಮಾಧುಸ್ವಾಮಿಯವರೆ ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿ ನಿನ್ನೆ ಹರಿದಾಡಿತ್ತು. ಇಂದು ಸರ್ಕಾರ ರಚಿಸಲು ಕಾರಣರಾದ ಎಂಟಿಬಿ ನಾಗರಾಜ್, ಕೆ.ಗೋಪಾಲಯ್ಯ, ಆರ್ ಶಂಕರ್ ಮತ್ತು ಕೆ.ಸಿ ನಾರಾಯಣಗೌಡರವರ ಖಾತೆಗಳನ್ನು ಮತ್ತೊಮ್ಮೆ ಬದಲಿಸಿ ರಾಜ್ಯಪಾಲರ ಸಹಿಗಾಗಿ ಸಿಎಂ ಯಡಿಯೂರಪ್ಪ ಕಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಂಟಿಬಿ ನಾಗರಾಜ್‌ರವರಿಗೆ ಪೌರಾಡಳಿತ ಮತ್ತು ಸಕ್ಕರೆ, ಕೆ.ಗೋಪಾಲಯ್ಯನವರಿಗೆ ಅಬಕಾರಿ, ಆರ್ ಶಂಕರ್‌ರವರಿಗೆ ತೋಟಗಾರಿಕೆ ಮತ್ತು ರೇಷ್ಮೆ ಹಾಗೂ ಕೆ.ಸಿ ನಾರಾಯಣಗೌಡರಿಗೆ ಯುವಜನ ಕ್ರೀಡೆ, ವಕ್ಫ್, ಹಜ್ ಮತ್ತು ಹೆಚ್ಚುವರಿಯಾಗಿ ಯೋಜನೆ ಸಾಂಖ್ಯಿಕ ಅಂಕಿ ಅಂಶಗಳ ಖಾತೆಯನ್ನು ನೀಡಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ.
ಇದರಿಂದಾದರೂ ಈ ಅತೃಪ್ತರು ತೃಪ್ತರಾಗುತ್ತಾರಾ? ಇಲ್ಲ ಮತ್ತೆ ಬಂಡಾಯವೇಳುತ್ತಾರ? ಉಳಿದ ಸಚಿವರು ಸುಮ್ಮನೆ ಕೂರುತ್ತಾರೆ ಎಂಬೆಲ್ಲಾ ಪ್ರಶ್ನೆಗಳಿಗೆ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ.
ಇದನ್ನೂ ಓದಿ: ಖಾತೆ ಬದಲಾವಣೆ: ಯಡಿಯೂರಪ್ಪಗೆ ಸೆಡ್ಡು ಹೊಡೆದು ಶೆಟ್ಟರ್ ಪಾಳಯಕ್ಕೆ ಜಿಗಿದರೆ ಮಾಧುಸ್ವಾಮಿ?


