Homeಚಳವಳಿಉಂಡ ಮನೆಗೆ ದ್ರೋಹ ಬಗೆದ ಭಾರತೀಯ ಮಾಧ್ಯಮಗಳು; ಅನ್ನದಾತರನ್ನೇ ಭಯೋತ್ಪಾದಕರು-ದೇಶದ್ರೋಹಿಗಳು ಎನ್ನುತ್ತಿವೆ!

ಉಂಡ ಮನೆಗೆ ದ್ರೋಹ ಬಗೆದ ಭಾರತೀಯ ಮಾಧ್ಯಮಗಳು; ಅನ್ನದಾತರನ್ನೇ ಭಯೋತ್ಪಾದಕರು-ದೇಶದ್ರೋಹಿಗಳು ಎನ್ನುತ್ತಿವೆ!

ರೈತರು ಮಂಗಳವಾರ ತಮ್ಮ ಗಣರಾಜ್ಯೋತ್ಸವನ್ನು ಟ್ರಾಕ್ಟರ್‌ ರ್‍ಯಾಲಿ ಮೂಲಕ ನಡೆಸಿ ಇತಿಹಾಸದ ಪುಟದಲ್ಲಿ ಅಜರಾಮವಾಗಲಿದ್ದಾರೆ.

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ರೈತರ ಹೋರಾಟ ಇಂದಿಗೆ ಎರಡು ತಿಂಗಳು ಪೂರೈಸಿದೆ. ಸರ್ಕಾರ ಮತ್ತು ರೈತರ ನಡುವೆ ಈವರೆಗೆ 11 ಸುತ್ತಿನ ಮಾತುಕತೆ ನಡೆದಿದ್ದು, ಎಲ್ಲವು ಸಭೆಗಳೂ ಮುರಿದು ಬಿದ್ದಿವೆ. ರೈತ ಅಳಲು-ಆಕ್ರೋಶವನ್ನು ಗಣನೆಗೆ ತೆಗೆದುಕೊಳ್ಳದ ಕೇಂದ್ರ ಸರ್ಕಾರ, ಕೃಷಿ ಕಾನೂನುಗಳ ಹಿಂಪಡೆಯುವುದಿಲ್ಲ ಎಂಬ ಮೊಂಡುತನವನ್ನು ಪ್ರದರ್ಶಿಸುತ್ತಿದೆ. ಹೀಗಾಗಿ ರೈತರು ನಾಳೆ (ಜ.26) ಗಣರಾಜ್ಯೋತ್ಸವ ದಿನದಂದು ದೆಹಲಿ ಗಡಿಯಲ್ಲಿ ಮತ್ತು ದೇಶಾದ್ಯಂತ ಟ್ರಾಕ್ಟರ್‌ ಪರೇಡ್‌ ನಡೆಸಲು ಮುಂದಾಗಿವೆ. ದೇಶಾದ್ಯಂತ ಇದಕ್ಕೆ ಬೆಂಬಲ ವ್ಯಕ್ತವಾಗಿದ್ದು, ಹಲವಾರು ರಾಜ್ಯಗಳಲ್ಲಿ ಟ್ರಾಕ್ಟರ್ ರ್‍ಯಾಲಿ ನಡೆಯಲಿದೆ.

ದೆಹಲಿ ಗಡಿಗಳ ಸುತ್ತಲೂ ನಡೆಯುತ್ತಿರುವ ಹೋರಾಟ 60 ದಿನಗಳನ್ನು ದಾಟುತ್ತಿದ್ದರೂ ದೇಶದ ಮಾಧ್ಯಮಗಳು ಮಾತ್ರ ರೈತರ ಹೋರಾಟವನ್ನು ವರದಿ ಮಾಡುವುದರಿಂದ ದೂರ ಉಳಿದಿವೆ. ಬದಲಾಗಿ, ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು, ಕಾನೂನುಗಳ ಪರವಾದ ಡಿಬೇಟ್ – ಸ್ಪೆಷಲ್‌ ಸ್ಟೋರಿಗಳನ್ನು ಮಾಡುತ್ತಾ, ಬಿಜೆಪಿಗೆ ತನ್ನ ಸ್ವಾಮಿ ನಿಷ್ಠೆಯನ್ನು ತೋರಿಸುತ್ತಿವೆ.

ಗೋದಿ ಮೀಡಿಯಾಗಳು ಎಂದು ಕರೆಸಿಕೊಳ್ಳುತ್ತಿರುವ ಆಜ್‌ತಕ್, ಎಬಿಪಿ, ರಿಪಬ್ಲಿಕ್‌ ಟಿವಿ ಮತ್ತು ಝೀ ನ್ಯೂಸ್ ಚಾನೆಲ್‌ಗಳು ರೈತ ಹೋರಾಟಗಾರರನ್ನು ನಕಲಿ ರೈತರು, ಭಯೋತ್ಪಾದಕರು, ಖಾಲಿಸ್ಥಾನಿಗಳು ಎಂದು ಬಿಂಬಿಸುತ್ತಿವೆ.

ನಾಸಿಕ್‌

ಇದನ್ನೂ ಓದಿ: ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್‌ ನಡೆಸಿಯೇ ತೀರುತ್ತೇವೆ: ರೈತ ಮುಖಂಡರ ಒಕ್ಕೊರಲ ಘೋಷಣೆ

ಪ್ರಮುಖವಾಗಿ ಆರು ರಾಜ್ಯಗಳ ರೈತರು ಮತ್ತು ವಿವಿಧ ರಾಜ್ಯಗಳ ರೈತರು ದೆಹಲಿ ಗಡಿಯಲ್ಲಿ ಬೀಡುಬಿಟ್ಟು ಹೋರಾಟ ನಡೆಸುತ್ತಿದ್ದಾರೆ. ಚಳಿ-ಗಾಳಿ-ಮಳೆಗೆ ಅಳುಕದೆ ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ. ಆದರೆ, ಮಾಧ್ಯಮಗಳು ಈ ಹೋರಾಟ ಕೇವಲ ಪಂಜಾಬಿಗಳ ಹೋರಾಟ, ಅದರಲ್ಲೂ ಖಾಲಿಸ್ತಾನಕ್ಕಾಗಿ ಬೇಡಿಕೆ ಇಟ್ಟವರ ಹೋರಾಟ, ರೈತರನ್ನು ಹಾದಿ ತಪ್ಪಿಸಲು ಮತ್ತು ದೇಶವನ್ನು ಒಡೆಯುವುದಕ್ಕಾಗಿ ಈ ಹೋರಾಟವನ್ನು ಮಾಡುತ್ತಿದ್ದಾರೆ ಎಂದು ಕತೆ ಕಟ್ಟಿ, ಸುಳ್ಳುಗಳ ಸರಮಾಲೆ ಎಣೆದು ರೈತ ವಿರೋಧಿ ಧೋರಣೆಯನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿವೆ.

ಅಲ್ಲದೆ, ಬಿಜೆಪಿಯ ಎಂಜಲು ಕಾಸಿಗಾಗಿಯೂ, ಹಿಂದೂತ್ವದ ಕೋಮು ವಿಷಪ್ರಾಶನವನ್ನು ಗಂಟಲಿಗೇರಿಸಿಕೊಂಡು ದ್ವೇಷವನ್ನು ಹರಡುವುದರಲ್ಲಿ ನಿರತವಾಗಿವೆ. ಈ ಕಾರಣಕ್ಕಾಗಿಯೇ ಲಕ್ಷಾಂತರ ರೈತರ ಹೋರಾಟವನ್ನು ಮಾಧ್ಯಮಗಳು ನಿರ್ಲಕ್ಷಿಸಿವೆ. ಹಾಗಾಗಿ, ಸರ್ಕಾರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನೂ –ಪ್ರತಿಭಟನಾಕಾರರನ್ನು ದೇಶದ್ರೋಹಿಗಳು, ಭಯೋತ್ಪಾದರು ಎಂದು ಬಿಂಬಿಸುತ್ತಿವೆ.

ರೈತರ ವಿಚಾರದಲ್ಲೂ ವಿಷ ಕಕ್ಕುತ್ತಿರುವ ರಿಪಬ್ಲಿಕ್‌ ಟಿವಿ, “ಈ ಹಿಂದೆ ಪ್ರತಿ ಬಾಗ್‌ಗಳನ್ನು ಶಾಹೀನ್‌ ಬಾಗ್‌ ಮಾಡಿ ಎಂದು ಕರೆಕೊಟ್ಟಿದ್ದ ಚಂದ್ರಶೇಖರ್ ಆಜಾದ್ ಇದ್ದಕ್ಕಿದ್ದಂತೆ ರೈತರ ಪ್ರತಿಭಟನೆಯಲ್ಲಿ ಇಳಿಯುತ್ತಾರೆ. ಕಳೆದ ಡಿಸೆಂಬರ್‌ನಲ್ಲಿ ಶಾಹೀನ್‌ಬಾಗ್‌ನಲ್ಲಿ ಸಿಎಎ ವಿರುದ್ಧ ಜನರನ್ನು ಸಜ್ಜುಗೊಳಿಸುತ್ತಿದ್ದ ಅದೇ ಯೋಗೇಂದ್ರ ಯಾದವ್ ರೈತ ಮಸೂದೆಗಳ ವಿರುದ್ದ ರೈತರಲ್ಲಿ ತಪ್ಪು ಮಾಹಿತಿ ಹರಡುವ ಅಭಿಯಾನ ನಡೆಸುತ್ತಿದ್ದಾರೆ” ಎಂದು ವರದಿ ಮಾಡಿತ್ತು.

ಟ್ರಾಕ್ಟರ್‌, ರ್‍ಯಾಲಿ

ಇದನ್ನೂ ಓದಿ: ರ್‍ಯಾಲಿಗೆ ಟ್ರಾಕ್ಟರ್‌ ತರಬೇಡಿ ಎಂದ ಬೆಂಗಳೂರು ಪೊಲೀಸರು: ತಂದೇ ತರುತ್ತೇವೆ ಎಂದ ರೈತರು!

ಅಲ್ಲದೆ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇದು ಸಂಭವಿಸಿದೆ. ಈಗ ಸಿಂಗುವಿನಲ್ಲಿನ ಅದೇ ನಡೆಯುತ್ತಿದೆ. ಅವರೆಲ್ಲರೂ “ಖಲಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಎತ್ತುವವರು” ಎಂದು ರೈತರ ವಿರುದ್ದ ಜೀ ನ್ಯೂಸ್‌ ವರದಿ ಮಾಡಿತ್ತು.

ಹೀಗಾಗಿಯೇ, “ರಾಷ್ಟ್ರೀಯ ಮಾಧ್ಯಮ ನಮ್ಮೊಂದಿಗಿಲ್ಲ… ಆಜ್ ತಕ್, ಝೀ ನ್ಯೂಸ್, ಎಬಿಪಿಗಳಂತಹ ಮಾಧ್ಯಮಗಳು ಸರ್ಕಾರವನ್ನು ಸಮರ್ಥಿಸಲು ರೈತರನ್ನು ಪ್ರತ್ಯೇಕವಾದಿಗಳು, ಭಯೋತ್ಪಾದಕರು ಎಂದು ಬೊಗಳೆ ಬಿಡುತ್ತಿವೆ. ಇವು ರೈತ ವಿರೋಧಿ ನಡೆಯನ್ನು ಅನುಸರಿಸುತ್ತಿವೆ ಎಂದು ರೈತರು ಕಿಡಿಕಾರಿದ್ದಾರೆ.

ದೆಹಲಿ

“ನಮ್ಮಲ್ಲಿ ಯಾವ ಶಸ್ತ್ರಾಸ್ತ್ರಗಳಿವೆ? ನಿಮಗೆ ನಾವು ಯಾವ ರೀತಿಯಲ್ಲಿ ಭಯೋತ್ಪಾದಕರಂತೆ ಕಾಣುತ್ತಿದ್ದೇವೆ. ನಾವು ಭಯೋತ್ಪಾದಕರು ಎಂದು ಎಂದು ಯಾರಿಗಾಗಿ ಹೇಳುತ್ತಿದ್ದೀರಿ? ನಾವು ರೈತರು, ವಿದ್ಯಾವಂತ ರೈತರು” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರವು ಧಾನ್ಯಗಳ ಸಂಗ್ರಹ ಮಿತಿಯನ್ನು ಹೆಚ್ಚಿಸಲು ಹೊರಟಿದೆ. “ಅಗತ್ಯ ದಾಸ್ತಾನುಗಳ ಸಂಗ್ರಹ ಮಿತಿ ಮೀರಿದ ದಿನ, ಸಾಮಾನ್ಯ ಜನರು ಸಾಯುತ್ತಾರೆ.” ಇದು ಜನರಿಗೆ ತಿಳಿದಿಲ್ಲ. ಮಾಧ್ಯಮಗಳಿಗೆ ಇದರ ಪರಿಣಾಮ ಅರ್ಥವಾಗುತ್ತಿಲ್ಲ. ರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ತುಟಿಬಿಚ್ಚುವುದಿಲ್ಲ ಎಂದು ರೈತರು ಹೇಳಿದ್ದಾರೆ.

ಕೇಂದ್ರದ ನೀತಿಗಳು ರೈತರಿಗೆ ಸರಿಯಾಗಿ ಅರ್ಥವಾಗಿಲ್ಲ ಎಂದು ಮಾಧ್ಯಮಗಳು ಹೇಳುತ್ತಿವೆ. ನಾನೊಬ್ಬ ಅನಕ್ಷರಸ್ಥ ರೈತ, ಆದರೆ, ಈ ನೀತಿಗಳು ಹೇಗೆ ರೈತರಿಗೆ ಪ್ರಯೋಜಕಾರಿಯಾಗಿವೆ ಎಂದು ಯಾರಾದರು ನನ್ನನ್ನು ಒಪ್ಪಿಸಲಿ ಎಂದು ರೈತರೊಬ್ಬರು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದ 21 ಜಿಲ್ಲೆಯಿಂದ ಮುಂಬೈಗೆ ಭೋರ್ಗರೆದ ರೈತರ ದಂಡು

ಸರ್ಕಾರವನ್ನು ಪ್ರಶ್ನಿಸುವವರೆಲ್ಲರೂ ರಾಷ್ಟ್ರ ವಿರೋಧಿಗಳಾದರೆ, ದೇಶದ ಪ್ರಜೆ ಯಾರು? ದೇಶದ ನಾಗರಿಕರು ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಯಾವಾಗಲೂ ಸರ್ಕಾರವೇ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಆದರೆ, ಸರ್ಕಾರ ಕೈಗೊಂಬೆಯಾಗಿರುವ ಮಾಧ್ಯಮಗಳು ಪ್ರಶ್ನೆ ಮಾಡುವ ನಾಗರಿಕರನ್ನು ಅಪರಾಧಿಗಳೆಂದು ಬಿಂಬಿಸುತ್ತಿವೆ. ಈ ಮಾಧ್ಯಮಗಳು ಎಂದಿಗೂ ನಮ್ಮೊಂದಿಗೆ ಇರಲಾರವು ಎಂದು ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ರೈತರು ತಮ್ಮದೇ ಆದ ವಾರ ಪತ್ರಿಕೆಯನ್ನೂ, ಯೂಟ್ಯೂಬ್‌ ಚಾನೆಲ್‌ಅನ್ನೂ ಆರಂಭಿಸಿದ್ದಾರೆ. ರೈತ ಹೋರಾಟ ಪ್ರತಿ ಅಪ್‌ಡೇಟ್‌ಗಳನ್ನೂ ಆ ಮೂಲಕ ಜನರಿಗೆ, ರೈತರಿಗೆ ತಲುಪಿಸುವ ಕೆಲಸವನ್ನೂ ರೈತರೇ ಮಾಡುತ್ತಿದ್ದಾರೆ. ಈ ಮೂಲಕ ರೈತರು ಏಕಕಾಲದಲ್ಲಿ ಮಾಧ್ಯಮ ಮತ್ತು ಸರ್ಕಾರದ ವಿರದ್ದು ಸಮರ ಸಾರಿದ್ದಾರೆ. ವಿಶ್ವದ ಅತೀ ದೊಡ್ಡ ಗಣರಾಜ್ಯದ ರೈತರು ಮಂಗಳವಾರ ತಮ್ಮ ಗಣರಾಜ್ಯೋತ್ಸವನ್ನು ಟ್ರಾಕ್ಟರ್‌ ರ್‍ಯಾಲಿ ಮೂಲಕ ನಡೆಸಿ ಇತಿಹಾಸದ ಪುಟದಲ್ಲಿ ಅಜರಾಮವಾಗಲಿದ್ದಾರೆ. ಹಾಗೆಯೆ ಭಾರತದಲ್ಲಿರುವ ಮಾಧ್ಯಮಗಳು ಅದೇ ಇತಿಹಾಸದ ಪುಟಗಳಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಲಿದೆ.

(ಲೇಖಕರು ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವು)

ಇದನ್ನೂ ಓದಿ: ಗಡಿಯಲ್ಲಿ ಮೃತಪಟ್ಟರೆ ದೇಶಪ್ರೇಮಿ, ಹಕ್ಕುಗಳನ್ನು ಕೇಳಿದರೆ ಖಾಲಿಸ್ಥಾನಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ದೇಶದ ರಾಜಧಾನಿಯಲ್ಲಿ ಇವತ್ತು ಗಲಭೆ ಮಾಡುವ ಮೂಲಕ, ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ದೇಶದ್ರೋಹಿಗಳು ದಲ್ಲಾಳಿಗಳ ಅಸಲೀ ಬಣ್ಣ ಬಟಾ ಬಯಲಾಗಿದೆ.

    ನಿಜವಾದ ಭಾರತೀಯ ರೈತ ತ್ರಿವರ್ಣ ಧ್ವಜದ ಜಾಗದಲ್ಲಿ ಖಲೀಸ್ಥಾನ್ ಧ್ವಜ ಹಾರಿಸಲಾರ, ರಸ್ತೆಯಲ್ಲಿ ತಲ್ಚಾರ್ ಝಳುಪಿಸಲಾರ

  2. Farmers are not terrorists but there is a paid mafia working along poor farmers to disintigrate our great nation…paid and divisive media like….are supporting anti national activities…. it’s to everyone s knowledge that neither apmc’s are closed nor msp is withdrawn…
    The only motto is to dislodge the present patriot govt by hook or crook….

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...