Homeಮುಖಪುಟಬೆಳ್ಳಿಚುಕ್ಕಿ: ಕಾಲ್ಪನಿಕ ಗಡಿಯಾರದ ಮೂಲಕ ಆಕಾಶಕಾಯಗಳನ್ನು ಗುರುತಿಸುವ ಬಗೆ!

ಬೆಳ್ಳಿಚುಕ್ಕಿ: ಕಾಲ್ಪನಿಕ ಗಡಿಯಾರದ ಮೂಲಕ ಆಕಾಶಕಾಯಗಳನ್ನು ಗುರುತಿಸುವ ಬಗೆ!

- Advertisement -
- Advertisement -

ಚಳಿಗಾಲದ ಶುಭ್ರ ಆಕಾಶದಲ್ಲಿ ಆಕಾಶ ವೀಕ್ಷಣೆ ಮಾರ್ಗದರ್ಶಿಯ ಸಹಾಯದಿಂದ, ಸೌರ ಮಂಡಲದ ಗ್ರಹಗಳು, ಚಂದ್ರನ ಬಿಂಬಾವಸ್ಥೆಗಳು, ನಕ್ಷತ್ರ ಪುಂಜಗಳು, ನಿಹಾರಿಕೆ ಮತ್ತು ನಕ್ಷತ್ರಗಳ ಗೊಂಚಲುಗಳನ್ನು ನೋಡಿದ ಸವಿ ಇನ್ನೂ ಉಳಿದಿರುವಂತೆಯೇ, ಆಕಾಶ ವೀಕ್ಷಣೆಯ ಆಸಕ್ತಿಗಳನ್ನು ಹಾಗೂ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಇದು ಸಕಾಲ.

ಆಕಾಶ ವೀಕ್ಷಣೆಯ ಹವ್ಯಾಸ ಉನ್ನತಿಯಾದಂತೆ, ಆಗಸದಲ್ಲಿ ಕಾಣುವ ಕಾಯಗಳನ್ನು ಸುಲಭವಾಗಿ ವೀಕ್ಷಿಸಲು ಮತ್ತು ಇತರರಿಗೆ ಸುಲಭವಾಗಿ ತಿಳಿಸಲು ಅನುವಾಗುವಂತೆ ಕೆಲವು ಕಾಲ್ಪನಿಕ ಉಪಕರಣಗಳನ್ನು/ ಮಾರ್ಗಸೂಚಿಯನ್ನು ಖಗೋಳ ವಿಜ್ಞಾನಾಸಕ್ತರು ಜಗತ್ತಿನಾದ್ಯಂತ ಬಳಸುತ್ತಾರೆ. ಅಂತಹ ಒಂದು ಕಾಲ್ಪನಿಕ ಉಪಕರಣದ/ಮಾರ್ಗಸೂಚಿ ಸಹಾಯದಿಂದ ಆಕಾಶ ವೀಕ್ಷಣೆ ಮಾಡುವುದು ಹೇಗೆ ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಯೋಣ. ನೆನಪಿರಲಿ, ಇದು ಕಾಲ್ಪನಿಕವಾಗಿ ನಿಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವ ಉಪಕರಣ! ಬೌತಿಕವಾಗಿ ಖರೀದಿ ಮಾಡುವುದಲ್ಲ.

ಅಂದಹಾಗೆ, ಯಾವುದಪ್ಪಾ ಈ ಉಪಕರಣ ಅಂದರೆ, ದಿನ ನಾವು-ನೀವು ಸಮಯ ನೋಡಲು ಬಳಸುವ ಗಡಿಯಾರವೇ ಆ ಉಪಕರಣ! ಹೌದು ಗಡಿಯಾರವನ್ನು ಆಗಸದಲ್ಲಿ ಕಲ್ಪಿಸಿಕೊಂಡು ಆಕಾಶ ವೀಕ್ಷಣೆ ಮಾಡುವುದು ಹವ್ಯಾಸಿ ಆಕಾಶ ವೀಕ್ಷಕರ ತಂತ್ರಗಾರಿಕೆ. ಆಕಾಶ ವೀಕ್ಷಣೆಯ ಸಂದರ್ಭದಲ್ಲಿ ಅತ್ಯಂತ ಸುಲಭವಾಗಿ ಯಾವ ದಿಕ್ಕಿನಲ್ಲಿ, ಯಾವ ನಕ್ಷತ್ರ ಪುಂಜವಿದೆ, ಗ್ರಹವಿದೆ ಮತ್ತು ನಿಹಾರಿಕೆಗಳಿವೆ ಎಂಬುದನ್ನು ಇತರರಿಗೂ ಸೂಚಿಸಲು ಈ ತಂತ್ರಗಾರಿಕೆಯನ್ನು ಆಕಾಶ ವೀಕ್ಷಕರು ಬಳಸುತ್ತಾರೆ.

ಚಿತ್ರ-1

ಈಗ ಚಿತ್ರ (1)ನ್ನು ಗಮನಿಸಿ, ಈ ಚಿತ್ರದಲ್ಲಿರುವ ಪ್ರಸಿದ್ಧ ನಕ್ಷತ್ರ ಪುಂಜವನ್ನು ನೀವು ಈಗಾಗಲೇ ಆಗಸದಲ್ಲಿ ಕಂಡಿದ್ದೀರಿ ಅಲ್ಲವೆ? ಹೌದು ಆ ನಕ್ಷತ್ರ ಪುಂಜ ಒರಿಯಾನ್ ನಕ್ಷತ್ರ ಪುಂಜ. ಈ ತಿಂಗಳ ಯಾವುದೇ ದಿನರಾತ್ರಿ 7 ಗಂಟೆಯಿಂದ 7.30 ಗಂಟೆಯ ಸಮಯದಲ್ಲಿ, ಪೂರ್ವಕ್ಕೆ ಮುಖಮಾಡಿ ನೆತ್ತಿಯಿಂದ ಪೂರ್ವ ದಿಕ್ಕಿಗೆ ಕಣ್ಣಾಡಿಸಿದರೆ, ಈ ಚಿತ್ರದಲ್ಲಿರುವ ಒರಿಯಾನ್ ಮತ್ತು ಎಲ್ಲಾ ನಕ್ಷತ್ರಗಳು ಹಾಗೂ ನಕ್ಷತ್ರ ಪುಂಜಗಳನ್ನು ಕಾಣಬಹುದು. ಇಲ್ಲಿರುವ ಎಲ್ಲಾ ಚಿತ್ರಗಳಲ್ಲು ನಕ್ಷತ್ರ ಪುಂಜಗಳನ್ನು ಗುರುತಿಸಲು ಕಾಲ್ಪನಿಕ ರೇಖೆಗಳನ್ನು ತಂತ್ರಾಂಶದಿಂದ ಸೃಜಿಸಲಾಗಿದೆ.

ಈಗ ನಾವು ನಮ್ಮ ಗಡಿಯಾರದ ತಂತ್ರಗಾರಿಕೆಗೆ ಬರೋಣ. ಚಿತ್ರ (2)ರಲ್ಲಿ ಒರಿಯಾನ್ ನಕ್ಷತ್ರ ಪುಂಜದ ಬೀಟಲ್‌ಜೂಸ್/ಬಿಟಲ್‌ಗೀಸ್ ನಕ್ಷತ್ರವನ್ನು ಕೇಂದ್ರವಾಗಿಟ್ಟುಕೊಂಡು ಒಂದು ಕಾಲ್ಪನಿಕ ಗಡಿಯಾರವನ್ನು ಊಹಿಸಿಕೊಳ್ಳಬಹುದಾಗಿದೆ. ಈ ಕಾಲ್ಪನಿಕ ಗಡಿಯಾರದಲ್ಲಿನ ಸಂಖ್ಯೆ 6 ಪೂರ್ವ ದಿಕ್ಕಿಗಿದೆ. ಅಂದರೆ, ನೀವು ಪೂರ್ವ ದಿಕ್ಕಿಗೆ ಮುಖ ಮಾಡಿ ಒರಿಯಾನ್ ನಕ್ಷತ್ರ ಪುಂಜವನ್ನು ನೋಡಿ, ಅದರ ನಕ್ಷತ್ರ ಬಿಟಲ್‌ಗೀಸ್‌ಅನ್ನು ನೋಡಿ, ಗಡಿಯಾರದ ಸಂಖ್ಯೆ 06, ಪೂರ್ವ ದಿಕ್ಕಿಗೆ ಬರುವಂತೆ ಕಾಲ್ಪನಿಕವಾಗಿ ಗಡಿಯಾರವನ್ನು ಊಹಿಸಿಕೊಳ್ಳಬೇಕು ಎಂದರ್ಥ. ಹಾಗೆ ಊಹಿಸಿಕೊಂಡಾಗ, ಕಾಲ್ಪನಿಕ ಗಡಿಯಾರದ ಸಂಖ್ಯೆ 09 ಉತ್ತರ ದಿಕ್ಕನ್ನು, ಸಂಖ್ಯೆ 12 ಪಶ್ಚಿಮ ದಿಕ್ಕನ್ನು ಮತ್ತು ಸಂಖ್ಯೆ 03 ದಕ್ಷಿಣ ದಿಕ್ಕನ್ನು ಸೂಚಿಸುತ್ತಿರುತ್ತದೆ. ಇದು ಮೊದಲನೇ ಹಂತ.

ಚಿತ್ರ-2

ಇನ್ನು ಎರಡನೇ ಹಂತಕ್ಕೆ ಬರೋಣ. ಚಿತ್ರ (2)ರಲ್ಲಿ ಊಹಿಸಿಕೊಂಡಿರುವ ಗಡಿಯಾರ ಸಮಯ ತಿಳಿಸುವ ಗಡಿಯಾರ ಅಲ್ಲ, ಬದಲಾಗಿ ದಿಕ್ಕುಗಳನ್ನು ಸುಲಭವಾಗಿ ಗುರುತಿಸುವುದಕ್ಕೆ ಕಲ್ಪಿಸಿಕೊಂಡಿರುವ ಗಡಿಯಾರ. ಈಗ ಈ ಗಡಿಯಾರದಲ್ಲಿ ಗಂಟೆಯನ್ನು ಸೂಚಿಸುವ ಮುಳ್ಳನ್ನು ಮಾತ್ರ ಊಹಿಸಿಕೊಳ್ಳೋಣ.

ಈಗ ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ -ಇಲ್ಲಿ ಒಬ್ಬ ಹವ್ಯಾಸಿ ಆಕಾಶ ವೀಕ್ಷಕ, ಹಲವರಿಗೆ ಮಾರ್ಗದರ್ಶನ ನೀಡುತ್ತಿದ್ದಾನೆ..

ಹವ್ಯಾಸಿ ಆಕಾಶ ವೀಕ್ಷಕ: ಎಲ್ಲರೂ ಪೂರ್ವ ದಿಕ್ಕಿಗೆ ತಿರುಗಿ ಒರಿಯಾನ್ ನಕ್ಷತ್ರ ಪುಂಜ ನೋಡಿ, ಒರಿಯಾನ್‌ನ ಬಿಟಲ್‌ಗೀಸ್ ನಕ್ಷತ್ರ ಕೇಂದ್ರದಲ್ಲಿರುವಂತೆ ಒಂದು ಗಡಿಯಾರ ಊಹಿಸಿಕೊಂಡು, ಅದರ 2 ಗಂಟೆಯ ದಿಕ್ಕಿನಲ್ಲಿ ಒಂದು ಕಾಲ್ಪನಿಕ ರೇಖೆ ಎಳೆಯಿರಿ, ಆ ಕಾಲ್ಪನಿಕ ರೇಖೆ ಒಂದು ನಕ್ಷತ್ರದ ಬಳಿ ಬಂದು ತಲುಪುತ್ತದೆ. ಅದೇ, ರೀಗಲ್ ನಕ್ಷತ್ರ!

ವೀಕ್ಷಕರು: [ಸಹಾಯಕ್ಕೆ ಚಿತ್ರ (3)ನ್ನು ಗಮನಿಸಿ] ಮೊದಲು ಪೂರ್ವ ದಿಕ್ಕಿಗೆ ತಿರುಗುತ್ತಾರೆ. ನಂತರ ಒರಿಯಾನ್ ನಕ್ಷತ್ರ ಪುಂಜವನ್ನು ಗುರುತಿಸಿ ಹವ್ಯಾಸಿ ಆಕಾಶ ವೀಕ್ಷಕ ಹೇಳಿದ್ದನ್ನು ಅನುಸರಿಸಿ ರೀಗಲ್ ನಕ್ಷತ್ರವನ್ನು ವೀಕ್ಷಿಸುತ್ತಾರೆ…

ಚಿತ್ರ-3

ಮೇಲಿನ ಸನ್ನಿವೇಶದಲ್ಲಿ, ಗಡಿಯಾರದ ಗಂಟೆ-ಮುಳ್ಳು ತೋರಿಸುವ ದಿಕ್ಕುಗಳಲ್ಲಿ ಕಾಲ್ಪನಿಕ ರೇಖೆಗಳನ್ನು ಉಹಿಸಿಕೊಂಡು, ಆಗಸದಲ್ಲಿ ಒಂದು ನಕ್ಷತ್ರ ಪುಂಜದಿಂದ ಇನ್ನೊಂದು ನಕ್ಷತ್ರ ಪುಂಜಕ್ಕೆ ನೋಟವನ್ನು ಬದಲಿಸಿ, ಆಕಾಶ ಕಾಯಗಳನ್ನು ವೀಕ್ಷಿಸಬೇಕು. ಇಂತಹ ಆಕಾಶ ವೀಕ್ಷಣೆಗೆ ಯಾವುದೇ ಭೌತಿಕ ಉಪಕರಣಗಳು ಬೇಕಿಲ್ಲಾ. ಅಂತೆಯೇ ಈ ಗಡಿಯಾರವನ್ನು ಬಿಟಲ್‌ಗೀಸ್ ನಂತರ ರೀಗಲ್ ನಕ್ಷತ್ರಕ್ಕೂ ಊಹಿಸಿಕೊಂಡು (ಕೇಂದ್ರವಾಗಿಸಿಕೊಂಡು) ಅಲ್ಲಿಂದ ಮುಂದೆ ತೆರಳಬಹುದು.

ಇದು, ಹವ್ಯಾಸಿ ಖಗೋಳ ವಿಜ್ಞಾನಿಗಳು ಯಾವುದೇ ಅನ್ಯ ಉಪಕರಣಗಳಿಲ್ಲದೆ ಆಕಾಶ ವೀಕ್ಷಣೆಯನ್ನು ಮಾಡಲು ಕಂಡುಕೊಂಡ ಮಾರ್ಗ ಮತ್ತು ಇದು ಸುಲಭವಾಗಿ ಆಕಾಶ ವೀಕ್ಷಣೆ ಕಲಿಸುವ ಮಾರ್ಗ. ಇದೊಂದೇ ನಿಯಮ ಅಥವಾ ಅಧಿಕೃತವಾದ ಆಕಾಶ ವೀಕ್ಷಣೆಯ ಮಾರ್ಗವೆಂದೇನಲ್ಲ. ಆಕಾಶ ವೀಕ್ಷಣೆಯು ಅಭ್ಯಾಸವಾದ ಮೇಲೆ, ಎಲ್ಲರೂ ತಮ್ಮತಮ್ಮ ಸೃಜನಶೀಲತೆಯಿಂದ ಇಂತಹ ಇನ್ನೂ ಹತ್ತು ಹಲವು ಮಾರ್ಗಗಳನ್ನು ಕಂಡುಕೊಳ್ಳಬಹುದು.

ಚಿತ್ರ-4

ಚಿತ್ರ (4): ಗಡಿಯಾರದ 11 ಗಂಟೆಯ ಆಸುಪಾಸಿನ ದಿಕ್ಕಿನಲ್ಲಿ, ಒಂದು ಕಾಲ್ಪನಿಕ ರೇಖೆಯನ್ನು ಉಹಿಸಿಕೊಳ್ಳಿ, ಆ ರೇಖೆಯು ಕಿತ್ತಳೆ ಬಣ್ಣದ ನಕ್ಷತ್ರದ ಬಳಿ ಬರುತ್ತದೆ. ಇದೇ ರೋಹಿಣಿ ನಕ್ಷತ್ರ. ಹಿಂದಿನ ಸಂಚಿಕೆಯ ಲೇಖನದಲ್ಲಿ ರೋಹಿಣಿ ನಕ್ಷತ್ರವನ್ನು ಒರಿಯಾನ್ ನಕ್ಷತ್ರ ಪುಂಜದಿಂದ ಹೇಗೆ ಗುರುತಿಸಿದೆವು ಎಂಬುದನ್ನು ನೆನಪಿಸಿಕೊಳ್ಳಿ. ಕಾಲ್ಪನಿಕ ಗಡಿಯಾರದ ಮೂಲಕ ಗುರುತಿಸುವುದು ಸಲಭವೋ ಅಥವಾ ಹಿಂದಿನ ಸಂಚಿಕೆಯ ಮಾರ್ಗಸೂಚಿ ಸುಲಭವೋ ನೀವೇ ಕಂಡುಕೊಳ್ಳಿ. ರೋಹಿಣಿ ನಕ್ಷತ್ರವು ವೃಷಭ ನಕ್ಷತ್ರ ಪುಂಜದಲ್ಲಿದೆ (ಇದು ರಾಶಿಯೂ ಹೌದು). ಈ ರೋಹಿಣಿ ನಕ್ಷತ್ರ ಸೂರ್ಯನಿಗೆ ಹೋಲಿಸಿದರೆ 44 ಪಟ್ಟು ದೊಡ್ಡದಿದೆ ಹಾಗೂ ಸುಮಾರು 65 ಜ್ಯೋತಿರ್ವರ್ಷಗಳ ದೂರವಿದೆ [1 ಜ್ಯೋತಿರ್ವರ್ಷವೆಂದರೆ 9.5 ಟ್ರಿಲಿಯನ್ (1012) ಕಿಲೋಮೀಟರ್]. ನಮ್ಮ ಸೂರ್ಯ 8 ಜ್ಯೋತಿರ್ವರ್ಷಗಳ ದೂರದಲ್ಲಿದ್ದಾನೆ.

ಚಿತ್ರ-5

ಚಿತ್ರ (5): ಈಗ, ಗಡಿಯಾರದ ಒಂಬತ್ತುವರೆ ಗಂಟೆಯ ದಿಕ್ಕನ್ನು ಉಹಿಸಿಕೊಳ್ಳಿ, ಬಿಟಲ್‌ಗೀಸ್ ನಕ್ಷತ್ರದಿಂದ ನೇರವಾಗಿ ಆ ದಿಕ್ಕು ಮತ್ತೊಂದು ಪ್ರಕಾಶಮಾನವಾದ ನಕ್ಷತ್ರಕ್ಕೆ ಬಡಿಯುತ್ತದೆ. ಇದು ಪೆಲ್ಲಾ ನಕ್ಷತ್ರ. ಆರಿಗಾ ನಕ್ಷತ್ರ ಪುಂಜದ ಅತೀ ಹೆಚ್ಚು ಪ್ರಕಾಶಮಾನವಾದ ನಕ್ಷತ್ರ. ಈ ನಕ್ಷತ್ರವನ್ನು ಬ್ರಹ್ಮ ಹೃದಯ ಎಂದೂಕರೆಯುತ್ತಾರೆ. ಈ ನಕ್ಷತ್ರ 42 ಜ್ಯೋತಿರ್ವರ್ಷಗಳ ದೂರವಿದ್ದು, ಸೂರ್ಯನಿಗಿಂತ 12 ಪಟ್ಟು ದೊಡ್ಡದಿದೆ. ಹಾಗೆಯೇ ಚಿತ್ರ (5)ರಲ್ಲಿ ಗುರುತಿಸಿರುವ ಆರಿಗಾ ನಕ್ಷತ್ರ ಪುಂಜದ ಪೆಂಟಗನ್‌ನಲ್ಲಿರುವ ನಕ್ಷತ್ರಗಳನ್ನು ವೀಕ್ಷಿಸಲು ಪ್ರಯತ್ನಿಸಿ.

ಚಿತ್ರ-6

ಚಿತ್ರ (6): ಇದೇ ರೀತಿ, ಗಡಿಯಾರದ 07.30 ದಿಕ್ಕಿನಲ್ಲಿ ನೋಡಿ, ಈ ದಿಕ್ಕಿನಲ್ಲಿ ಕಾಣುವ ಪ್ರಕಾಶಮಾನವಾದ ನಕ್ಷತ್ರ ಪೊಲಾಕ್ಸ್. ಅದರ ಪಕ್ಕದಲ್ಲಿರುವ ಇನ್ನೊಂದು ಪ್ರಕಾಶಮಾನವಾದ ನಕ್ಷತ್ರ ಕ್ಯಾಸ್ಟರ್ ಎಂದು. ಈ ಕ್ಯಾಸ್ಟ್‌ರ್ ಮತ್ತು ಪೊಲಾಕ್ಸ್ ಮಿಥುನ ನಕ್ಷತ್ರ ಪುಂಜದಲ್ಲಿದೆ. ಮಿಥುನ ನಕ್ಷತ್ರ ಪುಂಜ ರಾಶಿಯು ಹೌದು. ನೀವು ಮಿಥುನ ರಾಶಿಯ ಪುನರ್ವಸು ನಕ್ಷತ್ರ ಎಂದು ಕೇಳಿರಬಹುದು. ಈ ಪುನರ್ವಸು ನಕ್ಷತ್ರವೇ ಪೊಲಾಕ್ಸ್ ನಕ್ಷತ್ರ. ಇದು 33 ಜ್ಯೋತಿರ್ವರ್ಷಗಳ ದೂರವಿದ್ದು, ಸೂರ್ಯನಿಗಿಂತ 8 ಪಟ್ಟು ದೊಡ್ಡದಿದೆ.

ಚಿತ್ರ (7): ಗಡಿಯಾರದ ನಾಲ್ಕು ಗಂಟೆಯ ದಿಕ್ಕು. ಈ ದಿಕ್ಕಿನಲ್ಲಿ ಯಾವ ನಕ್ಷತ್ರ ಇದೆ? ಸಿರಿಯಸ್ ನಕ್ಷತ್ರ. ಈ ಸಿರಿಯಸ್ ನಕ್ಷತ್ರ ಆಕಾಶದ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ. ಇದನ್ನು ಲುಬ್ದಕ ನಕ್ಷತ್ರ ಎಂದೂ ಕರೆಯುತ್ತಾರೆ. ಇದು ಕ್ಯಾನಿಸ್ ಮೇಜರ್ ಎನ್ನುವ ನಕ್ಷತ್ರ ಪುಂಜದಲ್ಲಿದೆ. ಈ ನಕ್ಷತ್ರದ ವಿಶೇಷವೆಂದರೆ, ಸಿರಿಯಸ್ ಮೂರು ನಕ್ಷತ್ರಗಳುಳ್ಳ ಒಂದು ವ್ಯವಸ್ಥೆ ಎಂದು ಗ್ರಹಿಸಿರುವುದು. ಅಂದರೆ, ಮೂರು ನಕ್ಷತ್ರಗಳು ಒಟ್ಟಾಗಿ ತಿರುಗುತ್ತಿರುವಂತೆ. ಬರಿಗಣ್ಣಿಗೆ ಸಿರಿಯಸ್ ಒಂದೇ ನಕ್ಷತ್ರವಾಗಿ ಕಾಣಿಸಿದರೂ, ದೊಡ್ಡ ದೂರದರ್ಶಕದಲ್ಲಿ ಸಿರಿಯಸ್‌ನ ಇತರೆ ನಕ್ಷತ್ರಗಳನ್ನು ಕಾಣಬಹುದಾಗಿದೆ. ಈ ನಕ್ಷತ್ರ ಸುಮಾರು 8.5 ಜ್ಯೋತಿರ್ವರ್ಷಗಳ ದೂರವಿದ್ದು, ಸೂರ್ಯನಿಗಿಂತಲೂ 1.7 ರಷ್ಟು ದೊಡ್ಡದಾಗಿದೆ.

ಚಿತ್ರ-7

ಇಂತಹ ಕಾಲ್ಪನಿಕ ಗಡಿಯಾರವನ್ನು ಊಹಿಸಿಕೊಂಡು ಆಕಾಶ ವೀಕ್ಷಣೆಯು ಅಭ್ಯಾಸವಾದರೆ, ಆಗಸದ ವಿವಿಧ ಭಾಗಗಳಲ್ಲಿರುವ ನಕ್ಷತ್ರ, ನಕ್ಷತ್ರ ಪುಂಜಗಳು ಮತ್ತು ನಿಹಾರಿಕೆಗಳ ಪರಿಚಯ ಬಹಳ ವೇಗವಾಗಿ ಮತ್ತು ಸುಲಭವಾಗಿ ಲಭಿಸುತ್ತದೆ.

ಈ ಕಾಲ್ಪನಿಕ ಗಡಿಯಾರದ ಆಕಾಶ ವೀಕ್ಷಣೆ ಕ್ರಮವನ್ನು ಇನ್ನಷ್ಟು ಅನ್ವೇಷಿಸಿ. ಏನಾದರೂ ಪ್ರಶ್ನೆಗಳಿದ್ದರೆ ಇಲ್ಲಿ ಹಂಚಿಕೊಳ್ಳಿ- [email protected]


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ರಾತ್ರಿ ಆಕಾಶದಲ್ಲಿ ಒರಿಯಾನ್ ನಿಹಾರಿಕೆ ಮತ್ತು ಕೃತಿಕಾ ನಕ್ಷತ್ರ ಪುಂಜ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...