ಕಲ್ಲಿದ್ದಲು ಕಳ್ಳಸಾಗಣೆ ಆರೋಪದ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ತನಿಖೆಗೆ) ಹಾಜರಾಗಲು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಈ ಪ್ರಕರಣದಲ್ಲಿ ಅವರಿಗೆ ಸಮನ್ಸ್ ಜಾರಿಗೊಳಿಸಲು ಸಿಬಿಐ ತಂಡ ಇಂದು ಕೋಲ್ಕತ್ತಾದ ಅಭಿಷೇಕ್ ಬ್ಯಾನರ್ಜಿ ಅವರ ಮನೆಗೆ ಹೋಗಿತ್ತು ಎನ್ನಲಾಗಿದೆ.
ಕಲ್ಲಿದ್ದಲು ಮಾಫಿಯಾವು ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮುಖಂಡರಿಗೆ ನಿಯಮಿತವಾಗಿ ಕಿಕ್‌ಬ್ಯಾಕ್ ನೀಡಿದೆ ಎಂಬುದು ಆರೋಪ. ಪ್ರಕರಣದ ಪ್ರಮುಖ ಆರೋಪಿ ಎನಿಸಿರುವ ಮತ್ತು ಪ್ರಸ್ತುತ ಪರಾರಿಯಾಗಿರುವ ಪಕ್ಷದ ಯುವ ಮುಖಂಡ ವಿನಯ್ ಮಿಶ್ರಾ ಮೂಲಕ ಹಣವನ್ನು ಚಾನೆಲ್ ಮಾಡಲಾಗಿದೆ. ಏಜೆನ್ಸಿ ಆತನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಇದನ್ನೂ ಓದಿ: ಪ.ಬಂಗಾಳಕ್ಕೆ ಸ್ವಂತ ಮಗಳು ಬೇಕು: ಟಿಎಂಸಿಯ ಚುನಾವಣಾ ಘೋಷವಾಕ್ಯ
ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ ಕುನುಸ್ಟೋರಿಯಾ ಮತ್ತು ಕಜೋರಿಯಾ ಕಲ್ಲಿದ್ದಲು ಕ್ಷೇತ್ರಗಳಿಂದ ಅಕ್ರಮ ಗಣಿಗಾರಿಕೆ ಮತ್ತು ಕಲ್ಲಿದ್ದಲು ಕಳ್ಳತನವಾಗಿದೆ ಎಂದು ತನಿಖೆ ನಡೆಸಲು ಕೇಂದ್ರ ಸಂಸ್ಥೆ ಕಳೆದ ನವೆಂಬರ್‌ನಲ್ಲಿ ಈ ಪ್ರಕರಣವನ್ನು ದಾಖಲಿಸಿತ್ತು.
3 ದಿನದ ಹಿಂದೆ, ಅಭಿಷೇಕ್ ಬ್ಯಾನರ್ಜಿಯವರು ಅಮಿತ್ ಶಾ ವಿರುದ್ಧ ಹೂಡಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿನ ಜನಪ್ರತಿನಿಧಿಗಳ ನ್ಯಾಯಾಲಯವು ಅಮಿತ್ ಶಾ ಅಥವಾ ಅವರ ವಕೀಲರು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್ ಹೊರಡಿಸಿದ್ದನ್ನು ಇಲ್ಲಿ ಗಮನಿಸಬಹುದು.
ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ಮುನ್ನ ಇಂತಹ ಇನ್ನಷ್ಟು ವಿದ್ಯಮಾನಗಳು ಜರುಗುವ ಲಕ್ಷಣಗಳಿವೆ.
ಇದನ್ನೂ ಓದಿ: ವಿದೇಶ ಸುತ್ತುವ ಮೋದಿಗೆ ರೈತರನ್ನು ಭೇಟಿ ಮಾಡಲು ಸಮಯವಿಲ್ಲ – ಪ್ರಿಯಾಂಕ ಆಕ್ರೋಶ



ಹೇಗಾದರೂ ಮಾಡಿ ಮಮತಾ ಬ್ಯಾನರ್ಜಿಯವನ್ನು ತಿಳಿಯಬೇಕು ಎಂಬುದು ಮನುವಾದಿಗಳ ಶಡ್ಯಂತ್ರ.