ಬ್ರೆಜಿಲ್‌ನ ಉಪಗ್ರಹವನ್ನು ಇಸ್ರೊ ಮೊದಲ ಬಾರಿಗೆ ಶ್ರೀಹರಿಕೋಟಾದಿಂದ ಭಾನುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. 2021ರಲ್ಲಿ ಇಸ್ರೊ ನಡೆಸಿರುವ ಮೊದಲ ಬಾಹ್ಯಾಕಾಶ ಉಡಾವಣೆ ಇದಾಗಿದೆ. ವಿಶೇಷವೆಂದರೆ ಉಪಗ್ರಹವೊಂದರಲ್ಲಿ ಭಗವದ್ಗೀತೆ ಮತ್ತು ಪ್ರಧಾನಿ ಮೋದಿ ಚಿತ್ರವನ್ನಿಟ್ಟು ಕಳುಹಿಸಲಾಗಿದೆ.
ಹವಾಮಾನಕ್ಕೆ ಅನುಗುಣವಾಗಿ ಉಡಾವಣೆಯನ್ನು ಬೆಳಿಗ್ಗೆ 10:24ಕ್ಕೆ ನಿಗದಿ ಪಡಿಸಲಾಗಿತ್ತು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ–ಸಿ51 ರಾಕೆಟ್ ಬ್ರೆಜಿಲ್‌ನ ಅಮೆಜಾನಿಯಾ–1 ಉಪಗ್ರಹವನ್ನು ಹೊತ್ತೊಯ್ಯಲಿದೆ.
ಇದನ್ನೂ ಓದಿ: ಇಂದು 19 ಉಪಗ್ರಹ ಉಡಾವಣೆ: ಒಂದು ಉಪಗ್ರಹದ ಮೇಲೆ ಮೋದಿ ಚಿತ್ರ!
ಇದು ಇಸ್ರೊ ಪಿಎಸ್‌ಎಲ್‌ವಿ ರಾಕೆಟ್‌ನ 53ನೇ ಮಿಷನ್ ಆಗಿದ್ದು, ಪಿಎಸ್‌ಎಲ್‌ವಿ–ಸಿ51 ರಾಕೆಟ್ ಅಮೆಜಾನಿಯಾ–1 ಉಪಗ್ರಹದ ಜೊತೆಗೆ ಇತರೆ 18 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ. ಚೆನ್ನೈ ಮೂಲದ ಸ್ಪೇಸ್ ಕಿಡ್ಜ್ ಇಂಡಿಯಾದ (ಎಸ್‌ಕೆಐ) ಸತೀಶ್ ಧವನ್ ಸ್ಯಾಟ್ (ಎಸ್‌ಡಿ ಸ್ಯಾಟ್), ಭಾರತದ ಶೈಕ್ಷಣಿಕ ಸಂಸ್ಥೆಗಳಿಂದ ಮೂರು ಯೂನಿಟಿಸ್ಯಾಟ್‌ಗಳು (UNITYsats) ಹಾಗೂ ಇಸ್ರೊದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್‌ಐಎಲ್) 14 ಉಪಗ್ರಹಗಳಿವೆ.
‘ಎಸ್‌ಡಿ ಸ್ಯಾಟ್ ಜೊತೆಗೆ 25,000 ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ’ ಎಂದು ಎಸ್‌ಕೆಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಾಹ್ಯಾಕಾಶ ನೌಕೆಯ ಮೇಲಿನ ಪ್ಯಾನೆಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಸೃಜಿಸಲಾಗಿದೆ ಹಾಗೂ ಎಸ್‌ಡಿ ಕಾರ್ಡ್‌ನಲ್ಲಿ ಭಗವದ್ಗೀತೆಯನ್ನು ಕಳುಹಿಸಲಾಗುತ್ತಿದೆ.
ಇದನ್ನೂ ಓದಿ: ದುಡಿಯೋದು ಯಾರೋ? ಸ್ವಾರ್ಥಕ್ಕೆ ಮಾಡಿಕೊಳ್ಳೋದು ಇನ್ಯಾರೋ?- BSY ವಿರುದ್ಧ ಶ್ರೀನಿವಾಸ್ ಪ್ರಸಾದ್ ಆಕ್ರೋಶ


