ಪಡಿತರ ಕಡಿತಗೊಳಿಸಿ ಹಣ ಉಳಿತಾಯ - ನೀತಿ ಆಯೋಗದ ಹೊಸ ಶಿಫಾರಸ್ಸು!

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ)-2013 ರ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ವ್ಯಾಪ್ತಿಯನ್ನು ಕ್ರಮವಾಗಿ ಶೇ.60 ಮತ್ತು 40 ಕ್ಕೆ ಇಳಿಸಲು ಸರ್ಕಾರದ ಥಿಂಕ್ ಟ್ಯಾಂಕ್ ನೀತಿ ಆಯೋಗ ಶಿಫಾರಸು ಮಾಡಿದೆ. ಇದರಿಂದ ಅಂದಾಜು ಪ್ರಕಾರ, ವಾರ್ಷಿಕ 47,229 ಕೋಟಿ.ರೂ.ಗಳ ಉಳಿತಾಯವಾಗಬಹುದು ಎಂದು ಆಯೋಗ ಹೇಳಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪ್ರಸ್ತುತ, ಎನ್‌ಎಫ್‌ಎಸ್‌ಎ ಗ್ರಾಮೀಣ ವ್ಯಾಪ್ತಿಯು ಜನಸಂಖ್ಯೆಯ ಶೇಕಡಾ 75 ಕ್ಕೆ ಸಮಾನವಾಗಿದೆ ಮತ್ತು ನಗರ ವ್ಯಾಪ್ತಿಯು ನಗರ ಜನಸಂಖ್ಯೆಯ ಶೇಕಡಾ 50 ರಷ್ಟಿದೆ. ಒಟ್ಟಾರೆಯಾಗಿ, ಎನ್‌ಎಫ್‌ಎಸ್‌ಎ ಒಟ್ಟು ಜನಸಂಖ್ಯೆಯ ಶೇಕಡಾ 67 ರಷ್ಟಿದೆ.

ಮೂಲಗಳ ಪ್ರಕಾರ, ನೀತಿ ಆಯೋಗದ ಶಿಫಾರಸುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳಿಸಲಾಗಿದೆ. ಪ್ರಸ್ತುತ ಜನಗಣತಿ 2011 ರ ಆಧಾರದ ಮೇಲೆ ಜನಸಂಖ್ಯಾ ಮಟ್ಟವನ್ನು ನವೀಕರಿಸಲು ನೀತಿ ಆಯೋಗ ಸೂಚಿಸಿದೆ.

ಇದನ್ನೂ ಓದಿ: ದುಡಿಯೋದು ಯಾರೋ? ಸ್ವಾರ್ಥಕ್ಕೆ ಮಾಡಿಕೊಳ್ಳೋದು ಇನ್ಯಾರೋ?- BSY ವಿರುದ್ಧ ಶ್ರೀನಿವಾಸ್ ಪ್ರಸಾದ್ ಆಕ್ರೋಶ

ಎನ್‌ಎಫ್‌ಎಸ್‌ಎ ಅಡಿಯಲ್ಲಿ, ಪ್ರತಿ ಅಂತ್ಯೋದಯ ಅನ್ನ ಯೋಜನೆ ಕುಟುಂಬಗಳು (ಅಂದಾಜು 2.37 ಕೋಟಿ ಕುಟುಂಬಗಳು ಅಥವಾ 9.01 ಕೋಟಿ ವ್ಯಕ್ತಿಗಳು, ಫೆಬ್ರವರಿ 1, 2021 ರಂತೆ) ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳಿಗೆ ಅರ್ಹರಾಗಿದ್ದರೆ, ಆದ್ಯತೆಯ ಕುಟುಂಬಗಳ (ಅಂದಾಜು 70.35 ಕೋಟಿ ವ್ಯಕ್ತಿಗಳು) ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ. ಆಹಾರಧಾನ್ಯ ನೀಡಲಾಗುತ್ತದೆ.

ಗ್ರಾಮೀಣ ಮತ್ತು ನಗರ ವ್ಯಾಪ್ತಿಯ ಅನುಪಾತದ ಆಧಾರದ ಮೇಲೆ, ಹಿಂದಿನ ಯೋಜನಾ ಆಯೋಗವು 2011-12ರ ಮನೆಯ ಬಳಕೆ ವೆಚ್ಚದ ವ್ಯಾಪ್ತಿಯನ್ನು ಬಳಸಿಕೊಂಡು ರಾಜ್ಯವಾರು ವ್ಯಾಪ್ತಿ ಅನುಪಾತವನ್ನು ನಿರ್ಧರಿಸಿದೆ. ಜುಲೈ 5, 2013 ರಿಂದ ಕಾನೂನು ಜಾರಿಗೆ ಬಂದಾಗಿನಿಂದ ವ್ಯಾಪ್ತಿ ಅನುಪಾತವನ್ನು ಪರಿಷ್ಕರಿಸಲಾಗಿಲ್ಲ.

“ಆದ್ದರಿಂದ, ಕಳೆದ ದಶಕದ ಬೆಳವಣಿಗೆ ಮತ್ತು ಅಭಿವೃದ್ಧಿ ಗಮನಿಸಿ, ಸಬ್ಸಿಡಿಯನ್ನು ಕಡಿತ ಮಾಡಿ, ಉಳಿತಾಯದ ಪ್ರಮಾಣವನ್ನು ಆರೋಗ್ಯ ಮತ್ತು ಶಿಕ್ಷಣದಂತಹ ಇತರ ಪ್ರಮುಖ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು. ವಿಶೇಷವಾಗಿ ಪ್ರಸ್ತುತ ಸಾಂಕ್ರಾಮಿಕ ಸಮಯದಲ್ಲಿ, ಜನಸಂಖ್ಯಾ ಮಟ್ಟವನ್ನು ಪ್ರಸ್ತುತ ಮಟ್ಟಕ್ಕೆ ನವೀಕರಿಸುವಾಗ (ಜನಸಂಖ್ಯಾ ಅಂದಾಜಿನ ಆಧಾರದ ಮೇಲೆ) ಎನ್‌ಎಫ್‌ಎಸ್‌ಎ ಅಡಿಯಲ್ಲಿ ರಾಷ್ಟ್ರೀಯ ಗ್ರಾಮೀಣ-ನಗರ ವ್ಯಾಪ್ತಿ ಅನುಪಾತವನ್ನು 75-50 ರಿಂದ 60-40ಕ್ಕೆ ಇಳಿಸಲು ಶಿಫಾರಸು ಮಾಡಲಾಗಿದೆ’ ಎಂದು ಆಯೋಗದ ಪ್ರಕಟಣೆ ವಿವರಿಸಿದೆ.

ಇದನ್ನೂ ಓದಿ: ಮೋದಿ ಹೆದರಿದ್ದಾರೆ ಎಂದು ಚೀನಾಕ್ಕೆ ಗೊತ್ತಾಗಿದೆ: ಅತಿಕ್ರಮಣದ ವಿರುದ್ಧ ರಾಹುಲ್ ವಾಗ್ದಾಳಿ

ರಾಷ್ಟ್ರೀಯ ಗ್ರಾಮೀಣ-ನಗರ ವ್ಯಾಪ್ತಿ ಅನುಪಾತವು ಒಂದೇ ಆಗಿದ್ದರೆ (75-50), ಜನಸಂಖ್ಯೆಯ ಮಟ್ಟವನ್ನು 2011 ರ ಜನಗಣತಿಯಿಂದ ಪ್ರಸ್ತುತ ಮಟ್ಟಕ್ಕೆ ನವೀಕರಿಸುವುದು (2020 ರಲ್ಲಿ ಯೋಜಿತ ಜನಸಂಖ್ಯೆ) ಎನ್‌ಎಫ್‌ಎಸ್‌ಎ ವ್ಯಾಪ್ತಿಗೆ ಬರುವ ಒಟ್ಟು ಜನರ ಸಂಖ್ಯೆಯನ್ನು ವಿಸ್ತರಿಸುತ್ತದೆ ಎಂದು ಆಯೋಗ ಅಂದಾಜಿಸಿದೆ. ಅಸ್ತಿತ್ವದಲ್ಲಿರುವ 81.35 ಕೋಟಿಯಿಂದ 89.52 ಕೋಟಿಗೆ 8.17 ಕೋಟಿ ಹೆಚ್ಚಳ.

ಆದರೆ, ಇದನ್ನು 60-40ಕ್ಕೆ ಇಳಿಸಿದರೆ, ಎನ್‌ಎಫ್‌ಎಸ್‌ಎ ಅಡಿಯಲ್ಲಿ ಫಲಾನುಭವಿಗಳ ಸಂಖ್ಯೆ 71.62 ಕೋಟಿಗೆ ಇಳಿಯುತ್ತದೆ.
ನೀತಿ ಆಯೋಗ ಸದಸ್ಯ ರಮೇಶ್ ಚಂದ್ ಅವರ ಅಧ್ಯಕ್ಷತೆಯಲ್ಲಿ ಹಲವು ಸುತ್ತಿನ ಸಭೆಗಳ ನಂತರ ಶಿಫಾರಸುಗಳನ್ನು ಸಿದ್ಧಪಡಿಸಲಾಗಿದೆ. ಈ ಸಭೆಗಳಲ್ಲಿ ಮುಖ್ಯ ಆರ್ಥಿಕ ಸಲಹೆಗಾರ, ಆಹಾರ ಕಾರ್ಯದರ್ಶಿ, ಕಾರ್ಯದರ್ಶಿ, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ನೀತಿ ಆಯೋಗ ಉಲ್ಲೇಖಿಸಿರುವ ಶಿಫಾರಸುಗಳ ಬಗ್ಗೆ ಕೇಳಿದಾಗ, ಆಹಾರ ಸಚಿವಾಲಯದ ಅಧಿಕಾರಿಯೊಬ್ಬರು, “ಇನ್ನೂ ಯಾವುದೇ ಔಪಚಾರಿಕ ಪ್ರಸ್ತಾಪವಿಲ್ಲ. ಆಹಾರ ಭದ್ರತಾ ಕಾನೂನನ್ನು ಬದಲಾಯಿಸುವ ಅಧಿಕಾರ ಇಲಾಖೆಗೆ ಇಲ್ಲ. ಸಂಸತ್ತು ಮಾತ್ರ ಕಾನೂನನ್ನು ತಿದ್ದುಪಡಿ ಮಾಡಬಹುದು” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಟಿವಿ ಆಂಕರ್ ವಿರುದ್ಧ ಅತ್ಯಾಚಾರ ಆರೋಪ: ದೂರು ದಾಖಲು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮಲ್ಲನಗೌಡರ್‌ ಪಿ.ಕೆ
+ posts

LEAVE A REPLY

Please enter your comment!
Please enter your name here