- Advertisement -
- Advertisement -
ದೆಹಲಿಯ ಚಾಣಕ್ಯಪುರಿಯ ಫೈವ್‌ಸ್ಟಾರ್ ಹೋಟೆಲ್‌ಗೆ ಕರೆದೊಯ್ದು ತನ್ನ ಮೇಲೆ ಟಿವಿ ಆಂಕರ್ ಒಬ್ಬ ಅತ್ಯಾಚಾರ ನಡೆಸಿದ್ದಾನೆ ಎಂದು 22 ವರ್ಷದ ಯುವತಿ ದೆಹಲಿಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯು ಕಳೆದ ವಾರ ಸಂಭವಿಸಿದೆ. 28 ವರ್ಷದ ಆರೋಪಿ ದೆಹಲಿಯ ಖಾನ್ ಬಜಾರ್‌ನಲ್ಲಿ ಯುವತಿಯನ್ನು ಭೇಟಿಯಾಗಿದ್ದ, ನಂತರ ತನ್ನ ಕುಟುಂಬದೊಂದಿಗೆ ತಾನು ವಾಸವಿದ್ದ ಚಾಣಕ್ಯಪುರಿಯ ಹೊಟೆಲ್‌ಗೆ ಕರೆದೊಯ್ದು, ಬೇರೆ ರೂಮಿನಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪೊಲೀಸರ ಪ್ರಕಾರ, ಯುವತಿ ಮತ್ತು ಆರೋಪಿ 3 ವರ್ಷಗಳಿಂದ ಪರಿಚಿತರು, ಟಿವಿ ಚಾನೆಲ್ ಒಂದಕ್ಕೆ ಕೆಲಸ ಮಾಡುವ ಆರೋಪಿ ಮುಂಬೈನ ಉದ್ಯಮಿಯೊಬ್ಬರ ಪುತ್ರ ಎಂದು ಪೊಲೀಸರು ತಿಳಿಸಿದ್ದಾರೆ. ’ಆತನ ವಿರುದ್ಧ ಪ್ರಕರಣ ದಾಖಲಿಸಿದ್ದು, ಆತನನ್ನು ಬಂಧಿಸಲು ಮುಂಬೈಗೆ ಪೊಲೀಸ್ ತಂಡವೊಂದು ಹೋಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆ 19 ಉಪಗ್ರಹ ಉಡಾವಣೆ: ಒಂದು ಉಪಗ್ರಹದ ಮೇಲೆ ಮೋದಿ ಚಿತ್ರ!