Homeಮುಖಪುಟಜಾಬ್‌ಕಿ ಬಾತ್, ಕಿಸಾನ್ ಕಿ ಬಾತ್ ಬೇಕು: ಮೋದಿ ವಿರುದ್ಧ ಸಿಡಿದೆದ್ದ ಯುವಜನರು - ಮನ್‌ಕಿ...

ಜಾಬ್‌ಕಿ ಬಾತ್, ಕಿಸಾನ್ ಕಿ ಬಾತ್ ಬೇಕು: ಮೋದಿ ವಿರುದ್ಧ ಸಿಡಿದೆದ್ದ ಯುವಜನರು – ಮನ್‌ಕಿ ಬಾತ್‌ಗೆ ಡಿಸ್‌ಲೈಕ್‌ಗಳ ಸುರಿಮಳೆ

ಯುವಜನರ ಕಮೆಂಟ್‌ಗಳಿಗೆ ಹೆದರಿ ಎಲ್ಲಾ ಚಾನೆಲ್‌ಗಳಲ್ಲಿಯೂ ಸಹ ಕಮೆಂಟ್ ಸೆಕ್ಷನ್‌ ಅನ್ನು ಬ್ಲಾಕ್ ಮಾಡಲಾಗಿದ್ದು, ಯಾರೂ ಸಹ ಕಮೆಂಟ್ ಮಾಡದಂತೆ ತಡೆಯಲಾಗಿದೆ.

- Advertisement -
- Advertisement -

ಇಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾಸಿಕ ‘ಮನ್ ಕಿ ಬಾತ್’ ಕಾರ್ಯಕ್ರಮ ನಡೆಸಿಕೊಟ್ಟರು. ಆದರೆ ಇದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯುವಜನರು ಯೂಟ್ಯೂಬ್, ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿಯವರ ವಿರುದ್ಧ ಹರಿಹಾಯ್ದಿದ್ದು, ನಮಗೆ ನಿಮ್ಮ ಮನ್ ಕಿ ಬಾತ್ ಬೇಕಾಗಿಲ್ಲ, ಬದಲಿಗೆ ಜಾಬ್‌ಕಿ ಬಾತ್, ಕಿಸಾನ್ ಕಿ ಬಾತ್ ಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಲಕ್ಷಾಂತರ ಯುವಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಅಭಿವ್ಯಕ್ತಿಯಾಗಿ ಟ್ವಿಟರ್‌ನಲ್ಲಿ ಜಾಬ್‌ಕಿ ಬಾತ್, ಕಿಸಾನ್ ಕಿ ಬಾತ್ ಹ್ಯಾಷ್‌ಟ್ಯಾಗ್‌ಗಳು ಮೊದಲೆರಡು ಸ್ಥಾನಗಳಲ್ಲಿ ಟ್ರೆಂಡ್ ಆಗಿವೆ. ಅಲ್ಲದೆ ಮನ್ ಕಿ ಬಾತ್ ಬಕ್ವಾಸ್ ಎಂದು ಸಹ ಟ್ರೆಂಡ್ ಮಾಡಲಾಗಿದೆ.

ಇನ್ನು ಎಂದಿನಂತೆ ಇಂದಿನ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಯೂಟ್ಯೂಬ್ ಲೈವ್‌ ವಿಡಿಯೋಗೂ ಸಹ ಲೈಕ್‌ಗಿಂತ ಡಿಸ್‌ಲೈಕ್‌ಗಳ ಸಂಖ್ಯೆಯೇ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ 9,400 ಜನ ಡಿಸ್‌ಲೈಕ್ ಒತ್ತಿದರೆ, 7,800 ಜನ ಮಾತ್ರ ಲೈಕ್ ಒತ್ತಿದ್ದಾರೆ. ಅದೇ ರೀತಿ ಪಿಎಂಓ ಇಂಡಿಯಾ ಮತ್ತು ಭಾರತೀಯ ಜನತಾ ಪಾರ್ಟಿ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಲೈಕ್‌ಗಿಂತ ಡಿಸ್‌ಲೈಕ್‌ಗಳ ಸಂಖ್ಯೆಯೇ ಹೆಚ್ಚಾಗಿದೆ. ಹಾಗಾಗಿ ಮುಜುಗರದಿಂದ ತಪ್ಪಿಸಿಕೊಳ್ಳಲು ಅವುಗಳ ಸಂಖ್ಯೆಯನ್ನು ಕಾಣದಂತೆ ಮರೆಮಾಚಲಾಗಿದೆ. ಅಲ್ಲದೇ ಯುವಜನರ ಕಮೆಂಟ್‌ಗಳಿಗೆ ಹೆದರಿ ಎಲ್ಲಾ ಚಾನೆಲ್‌ಗಳಲ್ಲಿಯೂ ಸಹ ಕಮೆಂಟ್ ಸೆಕ್ಷನ್‌ ಅನ್ನು ಬ್ಲಾಕ್ ಮಾಡಲಾಗಿದ್ದು, ಯಾರೂ ಸಹ ಕಮೆಂಟ್ ಮಾಡದಂತೆ ತಡೆಯಲಾಗಿದೆ.

ಮೂರು ದಿನಗಳ ಹಿಂದೆ ಫೆಬ್ರವರಿ 25 ರಂದು ದೇಶಾದ್ಯಂತ ಯುವಜನರು ಉದ್ಯೋಗ ಬೇಕು ಎಂದು ಟ್ವಿಟರ್‌ನಲ್ಲಿ ಪ್ರಚಾರಾಂದೋಲನ ನಡೆಸಿದ್ದರು. ಒಂದೇ ದಿನ 80 ಲಕ್ಷಕ್ಕೂ ಹೆಚ್ಚು ಜನ ಟ್ವೀಟ್ ಮಾಡುವ ಮೂಲಕ #modi_job_do, #modi_rojgar_do, ಉದ್ಯೋಗ ಕೊಡಿ ಮೋದಿ ಎಂಬ ಹ್ಯಾಷ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ವಿಶ್ವದಲ್ಲಿಯೇ ಟ್ರೆಂಡಿಂಗ್‌ ಆಗಿದ್ದವು.

2020 ಆಗಸ್ಟ್ 30ರ ಮನ್ ಕಿ ಬಾತ್‌ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಯೂಟ್ಯೂಬ್‌ನಲ್ಲಿ ಬರೋಬ್ಬರಿ ಹತ್ತುಲಕ್ಷ ಡಿಸ್‌ಲೈಕ್‌ಗಳು ದಾಖಲಾಗಿದ್ದವು. ನಂತರ ಅದು ಯಾರಿಗೂ ಕಾಣದಂತೆ ಡಿಸ್‌ಲೈಕ್‌ಗಳನ್ನು ಡಿಲೀಟ್ ಮಾಡಲಾಗಿತ್ತು. ಅಲ್ಲಿಂದ ಮೋದಿಯವರ ಮನ್‌ ಕಿ ಬಾತ್‌ ಚರ್ಚೆಗೆ ಯೂಟ್ಯೂಬ್‌ ನಲ್ಲಿ ಲೈಕ್‌ಗಿಂತ ಡಿಸ್‌ಲೈಕ್‌ಗಳೇ ಹೆಚ್ಚಾಗುತ್ತಿವೆ. ಇದು ಯುವಜನರ ನಡುವೆ ಮೋದಿಯವರ ಜನಪ್ರಿಯತೆ ಕುಸಿದಿದೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.


10 ಲಕ್ಷ ಡಿಸ್‌ಲೈಕ್ ಮೂಲಕ ದಾಖಲೆ ಬರೆದ ಮೋದಿಯ ‘ಮನ್-ಕಿ-ಬಾತ್’!: ಡಿಸ್‌ಲೈಕ್‌ ತೆಗೆದುಹಾಕಲಾಗಿದೆಯೆಂಬ ಆರೋಪ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...