ನಿಷೇಧದ ನಡುವೆಯೂ ದಕ್ಷಿಣ ಭಾರತದಲ್ಲಿ ಅಕ್ರಮ ಕೋಳಿ ಪಂದ್ಯಗಳು ನಡೆಯುತ್ತಿದ್ದು, ಪಂದ್ಯಕ್ಕಾಗಿ ಕೋಳಿ ಕಾಲಿಗೆ ಕಟ್ಟಲಾಗಿದ್ದ ಚಾಕುವಿಗೆ ಕೋಳಿ ಮಾಲೀಕನೇ ಬಲಿಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪಂದ್ಯದ ಆಯೋಜಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣ ರಾಜ್ಯದ ಲೋಥುನೂರ್ ಗ್ರಾಮದಲ್ಲಿ ಕೋಳಿ ಪಂದ್ಯಕ್ಕಾಗಿ ಹುಂಜದ ಕಾಲಿಗೆ ಚಾಕುವನ್ನು ಜೋಡಿಸಲಾಗಿತ್ತು, ಪಂದ್ಯದಲ್ಲಿ ಅದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಮಾಲೀಕನ ಮೇಲೆ ಹಾರಿದೆ. ಸ್ಥಳೀಯವಾಗಿ ಚಾಕು ಎಂದು ಕರೆಯಲ್ಪಡುವ ‘ಕೋಡಿ ಕಥಿ’ಯಿಂದ ಆತನ ತೊಡೆಸಂದಿಗೆ ಗಾಯವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಬಿ ಜೀವನ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ‘ಕೋಡಿ ಕಥಿ’ ಮೂರು ಇಂಚು ಉದ್ದವಿರುತ್ತದೆ. ಕೆಲವೊಮ್ಮೆ ಅದನ್ನು ಇನ್ನೊಂದು ಮೂರು ಇಂಚುಗಳಷ್ಟು ವಿಸ್ತರಿಸುವ ಅವಕಾಶವನ್ನು ಹೊಂದಿರುತ್ತದೆ. ಸುಮಾರು ವರ್ಷಗಳ ನಂತರ ರಾಜ್ಯದಲ್ಲಿ ನಡೆದ ಇಂತಹ ಸಾವು ಇದಾಗಿದೆ.
ಇದನ್ನೂ ಓದಿ: ಇಲ್ಲೊಂದು ಪಾಕಕ್ರಾಂತಿಯ ಗಮ್ಮತ್ತು; ತಮಿಳುನಾಡಿನ ಯುಟ್ಯೂಬ್ ಚಾನೆಲ್‌ನ ಕರಾಮತ್ತು
ಲೋಥುನೂರ್ ಗ್ರಾಮದಲ್ಲಿ ಕೋಳಿ ಪಂದ್ಯ ಆಯೋಜಿಸಿದ 16 ಜನರಲ್ಲಿ ಈ ಮೃತ ವ್ಯಕ್ತಿಯೂ ಸೇರಿದ್ದಾನೆ ಎಂದು ಅಧಿಕಾರಿ ಜೀವನ್ ತಿಳಿಸಿದ್ದಾರೆ. ಕೋಳಿ ಸಾಕಣೆ ಕೇಂದ್ರಕ್ಕೆ ಕಳುಹಿಸುವ ಮೊದಲು ಹುಂಜವನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೆಲ ಕಾಲ ಇರಿಸಲಾಗಿತ್ತು.
“ಅಕ್ರಮ ಕೋಳಿ ಪಂದ್ಯಗಳನ್ನು ಆಯೋಜಿಸುವಲ್ಲಿ ತೊಡಗಿರುವ ಇತರ 15 ಜನರನ್ನು ನಾವು ಹುಡುಕುತ್ತಿದ್ದೇವೆ” ಎಂದು ಜೀವನ್ ಹೇಳಿದರು. ಈ ಕೃತ್ಯದಲ್ಲಿ ತೋಡಗಿರುವವರು ನರಹತ್ಯೆ, ಅಕ್ರಮ ಬೆಟ್ಟಿಂಗ್ ಮತ್ತು ಕೋಳಿ ಪಂದ್ಯಕ್ಕೆ ಆತಿಥ್ಯ ವಹಿಸಿದ ಆರೋಪ ಎದುರಿಸಬೇಕಾಗುತ್ತದೆ.
ದಕ್ಷಿಣ ಭಾರತದಲ್ಲಿ ನಡೆಯುವ ಕೋಳಿ ಪಂದ್ಯಗಳನ್ನು ನಿಷೇಧಿಸಲಾಗಿದೆ. ಆದರೆ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಒಡಿಶಾ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಹಿಂದೂ ಹಬ್ಬದ ಸಂಕ್ರಾಂತಿಯ ಸುತ್ತ ಮುತ್ತ ಈ ಪಂದ್ಯ ಆಯೋಜನೆಯಾಗುತ್ತದೆ.
ವಿಶೇಷವಾಗಿ ಬೆಳೆಸಿದ ಕೋಳಿಗಳು ತಮ್ಮ ಕಾಲಿಗೆ 7.5cm ಚಾಕುಗಳು ಅಥವಾ ಬ್ಲೇಡ್‌ಗಳನ್ನು ಕಟ್ಟಿಕೊಂಡು ಭಯಂಕರ ಹೋರಾಟ ನಡೆಸುತ್ತವೆ. ಯಾವ ಕೋಳಿ ಗೆಲ್ಲುತ್ತದೆ ಎಂಬುದರ ಮೇಲೆ ಪಂದ್ಯ ಕಟ್ಟಲಾಗುತ್ತದೆ. ಅನೇಕ ಪ್ರಾಣಿದಯಾ ಸಂಘ ಸಂಸ್ಥೆಗಳ ಪ್ರಯತ್ನಗಳ ಹೊರತಾಗಿಯೂ, ಹೆಚ್ಚಿನ ಜನಸಂದಣಿಯನ್ನು ಆಕರ್ಷಿಸುವ ೀ ಪಂದ್ಯಗಳಲ್ಲಿ ಪ್ರತಿವರ್ಷ ಸಾವಿರಾರು ಕೋಳಿಗಳು ಬಲಿಯಾಗುತ್ತವೆ.
ಇದನ್ನೂ ಓದಿ: ಸಮಾಜದ ಆರೋಗ್ಯ ಮುಖ್ಯ, ಆದಾಯ ಅಲ್ಲ: ಅಕ್ರಮ ಮದ್ಯ ನಿಷೇದಕ್ಕೆ ಆಗ್ರಹಿಸಿ ಟ್ವಿಟರ್ ಅಭಿಯಾನ



ಇನ್ನಾದರೂ ಬುದ್ದಿ ಬರಲಿ.
ಕೋಳಿಗಳು ಕೂಡ ಇಂತಹ ಸಾವು ಸಾಯುತ್ತವೆ ಎಂದು.