ಡ್ರೈವಿಂಗ್ ಲೈಸನ್ಸ್ ಮತ್ತು ನೋಂದಣಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಕೆಲವು ಸೇವೆಗಳನ್ನು ಈಗ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಪಡೆಯಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಸುತ್ತೋಲೆಯನ್ನು ಬಿಡುಗಡೆ ಮಾಡಿದೆ.
ಇದರರ್ಥ ಇಂದಿನಿಂದ ಪ್ರಾದೇಶಿಕ ಸಾರಿಗೆ ಕಚೇರಿ ಅಥವಾ ಆರ್‌ಟಿಒಗೆ ಭೇಟಿ ನೀಡದೆ ಆಧಾರ್ ದೃಢೀಕರಣವನ್ನು ಬಳಸಿಕೊಂಡು, ಸ್ವಯಂಪ್ರೇರಣೆಯಿಂದ ಅಥವಾ ಯಾರಾದರೂ ತಮ್ಮ ಲೈಸನ್ಸ್‌ಅನ್ನು ನವೀಕರಿಸಬಹುದಾಗಿದ್ದು, ಡ್ಯೂಪ್ಲಿಕೆಟ್ ಆರ್ಸಿ ಮತ್ತು ಅಂತಹುದೇ ಸೇವೆಗಳನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: ವಿಶಾಖಪಟ್ಟಣ ಉಕ್ಕು ಕಾರ್ಖಾನೆ ಖಾಸಗೀಕರಣಕ್ಕೆ ವಿರೋಧಿಸಿ ಆಂಧ್ರಪ್ರದೇಶ ಬಂದ್
ಯಾರನ್ನೂ ಸಂಪರ್ಕಿಸದೆ ಗೊಂದಲ ಮುಕ್ತ ಸೇವೆಗಳನ್ನು ಪಡೆಯುವುದು ಇದರ ಉದ್ದೇಶವಾಗಿದ್ದು, ಈ ಮೂಲಕ ಸಚಿವಾಲಯವು ಸುಮಾರು 18 ಸೇವೆಗಳನ್ನು ನೀಡುತ್ತದೆ.
This will reduce the compliance burden on citizens, helping them to avail these services in a hassle free, contact less manner. This will also reduce the footfall in the RTO office, which will further increase efficiency of the RTO offices as well.
— MORTHINDIA (@MORTHIndia) March 4, 2021
ಉತ್ತಮ ಆಡಳಿತವನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಎಲ್ಲ ಅನುಮೋದನೆಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವಾಲಯವು ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಆನ್‌ಲೈನ್ ಸೇವೆಗಳನ್ನು ಬಳಸಲು ಬಯಸುವ ಜನರು ಆಧಾರ್ ದೃಢೀಕರಣಕ್ಕೆ ಒಳಗಾಗಬೇಕಾಗುತ್ತದೆ.
ತನ್ನ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಪ್ರಕಟಿಸಿರುವ ಸಚಿವಾಲಯವು, “ಇದು ನಾಗರಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಈ ಸೇವೆಗಳನ್ನು ಗೊಂದಲ ಮುಕ್ತ, ಯಾರನ್ನೂ ಸಂಪರ್ಕಿಸದೆ ಸೇವೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಆರ್‌ಟಿಒ ಕಚೇರಿಯಲ್ಲಿನ ಓಡಾಟವನ್ನು ಸಹ ಕಡಿಮೆ ಮಾಡುತ್ತದೆ. ಆರ್‌ಟಿಒ ಕಚೇರಿಗಳ ದಕ್ಷತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ” ಎಂದು ತಿಳಿಸಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಫೇಸ್‌ಬುಕ್ ಬ್ಯಾನ್! ಟೆಕ್ ದೈತ್ಯನ ಅಹಂಗೆ ಬಿದ್ದ ಪೆಟ್ಟು: ಎಸ್ ಕುಮಾರ್
ಆನ್‌ಲೈನ್ ಸೇವೆಗಳು ಮಾರ್ಚ್ 3, 2021 ರಿಂದ ಜಾರಿಗೆ ಬಂದಿದ್ದು, ಆಧಾರ್ ದೃಡೀಕರಣಕ್ಕೆ ಒಳಪಟ್ಟ ನಂತರ ಜನರು ಪಡೆಯಬಹುದಾದ ಎಲ್ಲಾ 18 ಆನ್‌ಲೈನ್ ಸೇವೆಗಳು ಈ ಕೆಳಗಿನಂತಿವೆ.
- ಕಲಿಕಾ ಪರವಾನಗಿ (ಎಲ್‌ಎಲ್‌ಆರ್)
- ಚಾಲನೆಯ ಸಾಮರ್ಥ್ಯದ ಪರೀಕ್ಷೆ ಅಗತ್ಯವಿಲ್ಲದವರ ಡ್ರೈವಿಂಗ್ ಲೈಸನ್ಸ್ ನವೀಕರಣ.
- ಡ್ಯೂಪ್ಲಿಕೆಟ್ ಡ್ರೈವಿಂಗ್ ಲೈಸನ್ಸ್.
- ಡ್ರೈವಿಂಗ್ ಲೈಸನ್ಸ್ ಮತ್ತು ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆ.
- ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸನ್ಸ್ ನೀಡುವಿಕೆ.
- ಲೈಸನ್ಸ್‌ಗೆ ಇತರ ವರ್ಗದ ವಾಹನವನ್ನು ಸೇರಿಸುವುದು.
- ಮೋಟಾರು ವಾಹನದ ತಾತ್ಕಾಲಿಕ ನೋಂದಣಿಗೆ ಅರ್ಜಿ.
- ಸಂಪೂರ್ಣವಾಗಿ ಬಾಡಿಗಳನ್ನು ಕಟ್ಟಿರುವ ಮೋಟಾರು ವಾಹನದ ನೋಂದಣಿಗೆ ಅರ್ಜಿ.
- ನೋಂದಣಿಯ ಡ್ಯೂಪ್ಲಿಕೆಟ್ ಪ್ರಮಾಣಪತ್ರ ವಿತರಣೆಗಾಗಿ ಅರ್ಜಿ.
- ನೋಂದಣಿ ಪ್ರಮಾಣಪತ್ರಕ್ಕಾಗಿ ಎನ್ಒಸಿ ಒದಗಿಸಲು ಅರ್ಜಿ.
- ಮೋಟಾರು ವಾಹನದ ಮಾಲೀಕತ್ವದ ವರ್ಗಾವಣೆಗೆ ನೋಟಿಸ್.
- ಮೋಟಾರು ವಾಹನದ ಮಾಲೀಕತ್ವದ ವರ್ಗಾವಣೆಗೆ ಅರ್ಜಿ.
- ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆಯ ಮಾಹಿತಿ.
- ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರದಿಂದ ಚಾಲಕ ತರಬೇತಿಗಾಗಿ ನೋಂದಣಿಗೆ ಅರ್ಜಿ.
- ರಾಜತಾಂತ್ರಿಕ ಅಧಿಕಾರಿಯ ಮೋಟಾರು ವಾಹನದ ನೋಂದಣಿಗೆ ಅರ್ಜಿ.
- ರಾಜತಾಂತ್ರಿಕ ಅಧಿಕಾರಿಯ ಮೋಟಾರು ವಾಹನದ ಮೊದಲ ನೋಂದಣಿ ಗುರುತು ನಿಯೋಜನೆಗಾಗಿ ಅರ್ಜಿ.
- ಬಾಡಿಗೆ-ಖರೀದಿ ಒಪ್ಪಂದದ ಅನುಮೋದನೆ.
- ಬಾಡಿಗೆ-ಖರೀದಿ ಒಪ್ಪಂದದ ಮುಕ್ತಾಯ.
ಇದನ್ನೂ ಓದಿ: ಸೀಟು ಹಂಚಿಕೆ ವಿವಾದ: ಅಪಾಯದ ಅಂಚಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ?


