Homeಚಳವಳಿವಿಶಾಖಪಟ್ಟಣ ಉಕ್ಕು ಕಾರ್ಖಾನೆ ಖಾಸಗೀಕರಣಕ್ಕೆ ವಿರೋಧಿಸಿ ಆಂಧ್ರಪ್ರದೇಶ ಬಂದ್

ವಿಶಾಖಪಟ್ಟಣ ಉಕ್ಕು ಕಾರ್ಖಾನೆ ಖಾಸಗೀಕರಣಕ್ಕೆ ವಿರೋಧಿಸಿ ಆಂಧ್ರಪ್ರದೇಶ ಬಂದ್

- Advertisement -
- Advertisement -

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿನ ಉಕ್ಕು ಕಾರ್ಖಾನೆ ಖಾಸಗೀಕರಣಗೊಳಿಸಲು ಹೊರಟ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ನಡೆದ ಆಂಧ್ರಪ್ರದೇಶ ಬಂದ್‌ ಶಾಂತಿಯುತವಾಗಿ ನಡೆದಿದೆ. ರಾಜ್ಯಾದ್ಯಂತ ನಡೆದ ಪ್ರತಿಭಟನೆಗೆ ಜನರು ಬೆಂಬಲ ನೀಡಿದ್ದಾರೆ.

‘ವಿಶಾಖಪಟ್ಟಣ ಉಕ್ಕು ಸಂರಕ್ಷಣಾ ಸಮಿತಿ’ ಆಯೋಜಿಸಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಬಿಜೆಪಿ ಬಿಟ್ಟು ಉಳಿದೆಲ್ಲಾ ರಾಜಕೀಯ ಪಕ್ಷಗಳು, ವಿವಿಧ ಸಾರ್ವಜನಿಕ ಸಂಘಟನೆಗಳು, ಕಾರ್ಮಿಕ ಸಂಘಟನೆ‌ಗಳು ಪಾಲ್ಗೊಂಡಿದ್ದವು.

ಆಂಧ್ರಪ್ರದೇಶ ಬಂದ್‌ಗೆ ಸರ್ಕಾರ ಕೂಡ ಬೆಂಬಲ ನೀಡುವುದಾಗಿ ಘೋಷಿಸಿದ್ದರಿಂದ ಆರ್‌ಟಿಸಿ ಬಸ್‌ಗಳು ಸ್ಥಗಿತಗೊಂಡಿದ್ದವು. ರಾಜ್ಯದ 128 ಡಿಪೋಗಳ ಬಸ್‌ಗಳು ರಸ್ತೆಗಿಳಿಯಲಿಲ್ಲ. ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿತ್ತು. ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು.

ಇದನ್ನೂ ಓದಿ: ಕಾಡನ್ನೂ ಖಾಸಗೀಕರಣಗೊಳಿಸುತ್ತಿರುವ ಸರ್ಕಾರ: ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಆರೋಪ

ಖಾಸಗಿ ವಾಹನಗಳು ಕೂಡ ಬಂದ್‌ಗೆ ಬೆಂಬಲಿಸಿದ್ದವು. ಕೆಲವು ಪ್ರದೇಶಗಳಲ್ಲಿ, ಖಾಸಗಿ ಲಾರಿ ಸಾರಿಗೆ ನಿರ್ವಾಹಕರು ಮತ್ತು ಆಟೋ ಯೂನಿಯನ್‌ಗಳು ಸಹ ಮುಷ್ಕರದಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಭದ್ರತಾ ಕ್ರಮಗಳನ್ನು ರೂಪಿಸಿದ್ದರು.

స్టీల్‌ప్లాంట్ ప్రైవేటీకరణకు వ్యతిరేకంగా వివిధ పార్టీలు నిరసనలు కార్యక్రమాలు నిర్వహిస్తున్నాయి.

ವಿಶಾಖಪಟ್ಟಣಂ ಉಕ್ಕು ಸಂರಕ್ಷಣಾ ಸಮಿತಿಯ ಕರೆಯ ಮೇರೆಗೆ ಆಚರಿಸಲಾದ ಬಂದ್‌ನಲ್ಲಿ, ಆಡಳಿತಾರೂಢ ವೈಎಸ್‌ಆರ್‌ಸಿಪಿ ಮತ್ತು ಮುಖ್ಯ ವಿರೋಧ ಪಕ್ಷದ ಟಿಡಿಪಿ ಜೊತೆಗೆ, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು, ಕಾರ್ಮಿಕ ಸಂಘಗಳು, ಪತ್ರಕರ್ತರ ಸಂಘಗಳು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿ, ರ್‍ಯಾಲಿಗಳನ್ನು ಆಯೋಜಿಸಿದ್ದರು.

ಆಂಧ್ರಪ್ರದೇಶ ಎನ್‌ಜಿಒ ಸಂಘದ ಮುಖಂಡ ಎನ್.ಚಂದ್ರಶೇಖರ್ ರೆಡ್ಡಿ, ವಿಶಾಖಪಟ್ಟಣಂ ಉಕ್ಕಿನ ಉದ್ಯಮಕ್ಕಾಗಿ ಯಾವುದೇ ಹೋರಾಟಕ್ಕೆ ಸಿದ್ಧ ಎಂದು ಘೋಷಿಸಿದ್ದಾರೆ. ಎಪಿ ಎನ್‌ಜಿಒ ಸಂಘದೊಂದಿಗೆ ಪತ್ರಕರ್ತ ಸಂಘಗಳ ಮುಖಂಡರು ಕೂಡ ಬಂದ್‌ನಲ್ಲಿ ಭಾಗವಹಿಸಿದ್ದರು.

“ಸುಮಾರು 26,000 ಎಕರೆ ವಿಸ್ತೀರ್ಣದ ಕಾರ್ಖಾನೆ ಖಾಸಗೀಕರಣಗೊಳಿಸಿ 16,000 ಖಾಯಂ ನೌಕರರನ್ನು ಮತ್ತು 17,500 ಗುತ್ತಿಗೆ ಕಾರ್ಮಿಕರನ್ನು ಬೀದಿಗೆ ಹಾಕುವುದು ಸೂಕ್ತವಲ್ಲ. ಮತ್ತೊಂದು ಲಕ್ಷ ಜನರು ಈ ಕಾರ್ಖಾನೆಯಿಂದ ಪರೋಕ್ಷವಾಗಿ ಉದ್ಯೋಗದಲ್ಲಿದ್ದಾರೆ. ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ” ಎಂದು ಎನ್.ಚಂದ್ರಶೇಖರ್ ರೆಡ್ಡಿ ಹೇಳಿದ್ದಾರೆ.


ಇದನ್ನೂ ಓದಿ: ಆತ್ಮನಿರ್ಭರಕ್ಕಾಗಿ ಖಾಸಗಿಯವರನ್ನು ಬೆಂಬಲಿಸಿ: ಮೋದಿ ಹೇಳಿಕೆಗೆ ಕೆಲವು ಪ್ರಶ್ನೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...