ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮೂರು ತಿಂಗಳೊಳಗೆ ದೆಹಲಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಬಹುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.
ಲಸಿಕೆಯನ್ನು ಖಾತರಿಪಡಿಸುವುದರ ಜೊತೆಗೆ, ಎಲ್ಲರಿಗೂ ಲಸಿಕೆ ಹಾಕಲು ಅವಕಾಶ ನೀಡಿದರೆ ದೆಹಲಿಯಲ್ಲಿರುವ ಎಲ್ಲರಿಗೂ ಮೂರು ತಿಂಗಳೊಳಗೆ ಕೊರೊನಾ ಲಸಿಕೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘PM-CARES’ ಖಾಸಗಿ ನಿಧಿ- ದಾಖಲೆಗಳು ಬಿಚ್ಚಿಟ್ಟ ವೈರುಧ್ಯ!, ದೇಶಕ್ಕೆ ಇಷ್ಟು ದೊಡ್ಡ ಸುಳ್ಳು ಹೇಳಿದರೇ ಪ್ರಧಾನಿ ನರೇಂದ್ರ ಮೋದಿ
ಲಸಿಕೆ ಸ್ವೀಕರಿಸುವವರನ್ನು ವಯಸ್ಸಿನ ಆಧಾರದ ಮೇಲೆ ಬೇರ್ಪಡಿಸಬಾರದು. ನನ್ನ ಪೋಷಕರು ಮತ್ತು ನನಗೆ ಲಸಿಕೆ ನೀಡಲಾಗಿದೆ. ಅದನ್ನು ಹೇಳಲು ಯಾವುದೆ ಹಿಂಜರಿಕೆ ಇಲ್ಲ. ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಎಲ್ಲರಿಗೂ ಮುಕ್ತಗೊಳಿಸಬೇಕು ಎಂದು ಕೇಜ್ರಿವಾಲ್ ಒತ್ತಾಯಿಸಿದರು.
ಲಸಿಕೆಗೆ ಎಲ್ಲರೂ ಅರ್ಹರು. ಪ್ರಸ್ತುತ, ಲಸಿಕೆಯನ್ನು ಪ್ರತಿದಿನ 30,000 ಜನರಿಗೆ ನೀಡಲಾಗುತ್ತದೆ. ಇದನ್ನು 1.25 ಲಕ್ಷಕ್ಕೆ ಹೆಚ್ಚಿಸಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ನಿನ್ನೆ 500 ಜನರು ಕೊರೊನಾ ಪಾಸಿಟಿವ್ ಆಗಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಸಭೆ ಕರೆದ್ದಾರೆ.
ಇದನ್ನೂ ಓದಿ: ಶಬರಿಮಲೆ ಕುರಿತು ಸುಪ್ರೀಂಕೋರ್ಟ್ ಅಂತಿಮ ತೀರ್ಪಿನ ನಂತರ ತೀರ್ಮಾನ: ಪಿಣರಾಯಿ ವಿಜಯನ್


