Homeಮುಖಪುಟಡ್ರಗ್ಸ್‌ ಪ್ರಕರಣ: ಎನ್‌ಸಿಬಿ ಪೊಲೀಸರಿಂದ ನಟ ಅಜಾಜ್ ಖಾನ್ ಬಂಧನ

ಡ್ರಗ್ಸ್‌ ಪ್ರಕರಣ: ಎನ್‌ಸಿಬಿ ಪೊಲೀಸರಿಂದ ನಟ ಅಜಾಜ್ ಖಾನ್ ಬಂಧನ

- Advertisement -
- Advertisement -

ಡ್ರಗ್ಸ್ ಪ್ರಕರಣ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿ ಅಜಾಜ್ ಖಾನ್ ಅನ್ನು ಇಂದು (ಮಾ.31) ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಬಂಧಿಸಿದೆ.

ಡ್ರಗ್ ಪೆಡ್ಲರ್ ಶಾದಾಬ್ ಬಟಾಟಾ ವಿಚಾರಣೆ ವೇಳೆ ಅಜಾಜ್ ಖಾನ್ ಹೆಸರೂ ಕೇಳಿಬಂದಿತ್ತು. ಈ ಸಂಬಂಧ ಮಂಗಳವಾರ ರಾಜಸ್ಥಾನದಿಂದ ಬಂದ ಅಜಾಜ್ ಖಾನ್ ಅನ್ನು ಮುಂಬೈ ವಿಮಾನ ನಿಲ್ದಾಣದಲ್ಲಿಯೇ ವಶಕ್ಕೆ ಪಡೆಯಲಾಗಿತ್ತು. ನಂತರ ನಗರದ ಅಂಧೇರಿ ಮತ್ತು ಲೋಖಂಡ್ವಾಲಾ ಪ್ರದೇಶಗಳಲ್ಲಿ ಶೋಧದ ವೇಳೆ ಅವರ ನಿವಾಸದಿಂದ ಆಲ್‌ಪ್ರಜೋಲಮ್ ಮಾತ್ರೆಗಳು ಪತ್ತೆಯಾಗಿವೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಮಂಗಳವಾರವಷ್ಟೇ ಮುಂಬೈಗೆ ಬಂದಿಳಿದಿದ್ದ ಅಜಾಜ್ ಖಾನ್, ದಕ್ಷಿಣ ಮುಂಬೈನ ಎನ್‌ಸಿಬಿ ಕಚೇರಿಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನನ್ನು ಬಂಧಿಸಿಲ್ಲ; ಆದರೆ ಸ್ವತಃ ನಾನೇ ಅಧಿಕಾರಿಗಳನ್ನು ಭೇಟಿ ಮಾಡಲು ಬಂದಿರುವುದಾಗಿ ತಿಳಿಸಿದ್ದರು. ಆದರೆ ಈಗ ಅವರನ್ನು ಬಂಧಿಸಲಾಗಿದೆ.

ಡ್ರಗ್ ಪೆಡ್ಲರ್ ಶಾದಾಬ್ ಬಟಾಟಾ ನಿವಾಸದಲ್ಲಿ 2 ಕಿಲೋಗ್ರಾಂಗಳಷ್ಟು ನಿಷೇಧಿತ ಮೆಫೆಡ್ರೋನ್ ಡ್ರಗ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿತ್ತು.

ಇದನ್ನೂ ಓದಿ: FIR ಎಲ್ಲಿದೆ? ನೀವು ಕಾನೂನಿಗಿಂತ ದೊಡ್ಡವರ?: ಮುಂಬೈ ಮಾಜಿ ಪೊಲೀಸ್ ಮುಖ್ಯಸ್ಥರಿಗೆ ಹೈಕೋರ್ಟ್ ತರಾಟೆ

ಬಾಲಿವುಡ್‌ ನಟ ಸುಶಾಂತ್ ಸಿಂಗ್ ಸಾವಿನ ನಂತರ ದೇಶದ ಚಿತ್ರರಂಗ ವಲಯದಲ್ಲಿ ಡ್ರಗ್ಸ್‌ ಮಾಫಿಯಾ ಬಗ್ಗೆ ಸಾಕಷ್ಟು ಸುದ್ದಿಗಳು ಹೊರಬಂದಿದ್ದವು. ಇದರಲ್ಲಿ ಹಲವಾರು ತಾರೆಯರೂ ಸೇರಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಲ್ಲಿಯೂ ಈ ಜಾಲ ಹರಡಿಕೊಂಡಿದೆ ಎಂಬ ಸುಳಿವು ಸಿಕ್ಕ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ 25 ಮಂದಿ ವಿರುದ್ಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಪಾರ್ಟಿಗಳಲ್ಲಿ ಡ್ರಗ್ಸ್ ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ಪ್ರಕರಣವನ್ನು ಬೆನ್ನತ್ತಿದ ಸಿಸಿಬಿ ಪೊಲೀಸರು, ಕೆಲವರನ್ನು ಬಂಧಿಸಿದ್ದರು. ಕೆಲವರು ಈಗಾಗಲೇ ಜಾಮೀನು ಮೇಲೆ ಹೊರಗೆ ಬಂದಿದ್ದಾರೆ. ಇದೀಗ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, 2,900 ಪುಟಗಳ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: ಏಷ್ಯನ್ ವಿರೋಧಿ ಹಿಂಸಾಚಾರ ನಿಗ್ರಹಿಸಲು ಕ್ರಮ: ಅಮೆರಿಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...