Homeಅಂತರಾಷ್ಟ್ರೀಯಏಷ್ಯನ್ ವಿರೋಧಿ ಹಿಂಸಾಚಾರ ನಿಗ್ರಹಿಸಲು ಕ್ರಮ: ಅಮೆರಿಕ

ಏಷ್ಯನ್ ವಿರೋಧಿ ಹಿಂಸಾಚಾರ ನಿಗ್ರಹಿಸಲು ಕ್ರಮ: ಅಮೆರಿಕ

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಏಷ್ಯನ್ ಅಮೆರಿಕನ್ನರು ಮತ್ತು ಪೆಸಿಫಿಕ್ ದ್ವೀಪವಾಸಿಗಳ ವಿರುದ್ಧದ ಹಿಂಸಾಚಾರ ಮತ್ತು ತಾರತಮ್ಯವನ್ನು ತಡೆಗಟ್ಟಲು ಹೆಚ್ಚುವರಿ ಧನಸಹಾಯ ಮತ್ತು ಕ್ರಾಸ್-ಏಜೆನ್ಸಿ ಉಪಕ್ರಮ ಸೇರಿದಂತೆ ಹೊಸ ಕ್ರಮಗಳನ್ನು ಶ್ವೇತಭವನ ಮಂಗಳವಾರ ಪ್ರಕಟಿಸಿದೆ ಎಂದು ಐಎಎನ್ಎಸ್ ವರದಿಯೊಂದು ತಿಳಿಸಿದೆ.

“ಜನಾಂಗೀಯ ನ್ಯಾಯಕ್ಕಾಗಿ ಸರ್ಕಾರದ ಮೂಲಕ ಏಷ್ಯನ್ ಅಮೇರಿಕನ್, ಸ್ಥಳೀಯ ಹವಾಯಿಯನ್ ಮತ್ತು ಪೆಸಿಫಿಕ್ ದ್ವೀಪ ಸಮುದಾಯಗಳಿಗೆ ಸಮತೆಯನ್ನು ಖಚಿತಪಡಿಸಲು ಬಿಡೆನ್ ಆಡಳಿತ ನಿರ್ಧಿರಿಸಿದೆ” ಎಂದು ವರದಿ ಹೇಳಿದೆ.

ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್‌‌ನನ್ನು ಉಳಿಸಲುಲಾಗದೆ ಇದ್ದಿದ್ದಕ್ಕೆ ಹಲವಾರು ರಾತ್ರಿ ಕಣ್ಣೀಟ್ಟಿದ್ದೆ: ಘಟನೆಯ ವಿಡಿಯೋ ಚಿತ್ರಿಸಿದ ಪ್ರತ್ಯಕ್ಷದರ್ಶಿ ಹೇಳಿಕೆ

ಅಧ್ಯಕ್ಷ ಜೋ ಬಿಡನ್‌, ಏಷ್ಯನ್ ಅಮೇರಿಕನ್, ಸ್ಥಳೀಯ ಹವಾಯಿಯನ್ ಮತ್ತು ಪೆಸಿಫಿಕ್ ದ್ವೀಪ ಸಮುದಾಯಗಳ ಮೇಲೆ ಪರಿಣಾಮ ಬೀರುವ ಅಮೆರಿಕ ಸರ್ಕಾರದ ನೀತಿಗಳ ಸಮನ್ವಯದಲ್ಲಿ ಉಪಕ್ರಮವನ್ನು ಸಾಧಿಸಲು ಶಾಶ್ವತ ನಿರ್ದೇಶಕರನ್ನು ನೇಮಿಸಲಿದ್ದಾರೆ ಎಂದು ವೈಟ್‌ಹೌಸ್ ಪ್ರಕಟಣೆ ಹೇಳಿದೆ.

ಎಫ್‌ಬಿಐ ಹೊಸ ಸಂವಾದಾತ್ಮಕ ವೆಬ್‌ಸೈಟ್‌ ಅನ್ನು ಪ್ರಕಟಿಸಿದ್ದು, ಅದರಲ್ಲಿ ಏಷ್ಯನ್ ಅಮೇರಿಕನ್‌ ಮತ್ತು ಪೆಸಿಫಿಕ್ ದ್ವೀಪ ಸಮುದಾಯದ ವಿರುದ್ಧದ ಅಪರಾಧಗಳನ್ನು ದಾಖಲಿಸುತ್ತದೆ ಎಂದು ಹೇಳಿದೆ. ಅಲ್ಲದೆ ಏಷ್ಯನ್ ವಿರೋಧಿ ಪಕ್ಷಪಾತವನ್ನು ಗುರುತಿಸುವ ಮತ್ತು ವರದಿ ಮಾಡುವ ಬಗ್ಗೆ ಏಜೆಂಟರಿಗೆ ಶಿಕ್ಷಣ ನೀಡಲು ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಪ್ರಾರಂಭಿಸುತ್ತದೆ ಎಂದು ಅದು ತಿಳಿಸಿದೆ.

ಇದನ್ನೂ ಓದಿ: ಅಮೆರಿಕಾದ ಜಿಲ್ಲಾ ನ್ಯಾಯಾಲಯದ ಜಡ್ಜ್ ಆಗಲಿರುವ ಭಾರತೀಯ ಮೂಲದ ರೂಪಾ ರಂಗ

ಕೌಟುಂಬಿಕ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ಸಂತ್ರಸ್ತರಾದ ಏಷ್ಯನ್‌ ಅಮೇರಿಕನ್‌ ಮತ್ತು ಪೆಸಿಫಿಕ್ ದ್ವೀಪ ಸಮುದಾಯದ ಜನರಿಗೆ ಸಹಾಯ ಮಾಡಲು ಆರೋಗ್ಯ ಇಲಾಖೆಯು ಅಮೆರಿಕನ್ ಪಾರುಗಾಣಿಕಾ ಯೋಜನೆಯಿಂದ ಸುಮಾರು 50 ಮಿಲಿಯನ್ ಡಾಲರ್‌ ಒದಗಿಸುತ್ತಿದೆ.

ಜನವರಿಯಲ್ಲಿ ಸ್ಥಾಪಿಸಲಾದ ಕೋವಿಡ್ -19 ಹೆಲ್ತ್ ಈಕ್ವಿಟಿ ಟಾಸ್ಕ್ ಫೋರ್ಸ್, ಸ್ಟ್ರಕ್ಚರಲ್ ಡ್ರೈವರ್ಸ್ ಆಫ್ ಹೆಲ್ತ್ ಇನೀಕ್ವಿಟಿ ಆಂಡ್‌ ಸೆನೋಫೋಬಿಯಾ ಕುರಿತು ಉಪಸಮಿತಿಯನ್ನು ಸ್ಥಾಪಿಸಿದೆ ಎಂದು ಶ್ವೇತಭವನ ತಿಳಿಸಿದೆ. ಈ ಉಪಸಮಿತಿಯು ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಏಷ್ಯನ್ ವಿರೋಧಿ ಪಕ್ಷಪಾತದ ಉಲ್ಬಣವನ್ನು ಎದುರಿಸಲು ನಿರ್ದಿಷ್ಟವಾಗಿ ಗಮನ ಹರಿಸಲಿದೆ.

ಸಂಪನ್ಮೂಲಗಳನ್ನು ವಿಸ್ತರಿಸಲು ಮತ್ತು ಏಷ್ಯನ್-ಅಮೇರಿಕನ್ ಇತಿಹಾಸದ ಬಗ್ಗೆ ಮಾಹಿತಿಯನ್ನು ಒದಗಿಸಲು ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಹ್ಯುಮಾನಿಟೀಸ್ ಈಗಾಗಲೆ ವರ್ಚುವಲ್ ಲೈಬ್ರರಿಯನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: ’ಮಾನವ ಹಕ್ಕುಗಳ ಕುರಿತು ಭಾರತದ ಸಚಿವರೊಂದಿಗೆ ಚರ್ಚಿಸಿದ್ದೇನೆ’: ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಸ್ಟಿನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...