Homeಅಂತರಾಷ್ಟ್ರೀಯಕತ್ತಲೆ ತುಂಬಿದ ಬಡವರ ಬಾಳಲ್ಲಿ ಹೊಸ ಸೂರ್ಯನ ರೀತಿ ಉದಯಿಸಿದ ಯುವಕನ ಕುರಿತು...

ಕತ್ತಲೆ ತುಂಬಿದ ಬಡವರ ಬಾಳಲ್ಲಿ ಹೊಸ ಸೂರ್ಯನ ರೀತಿ ಉದಯಿಸಿದ ಯುವಕನ ಕುರಿತು…

- Advertisement -
- Advertisement -

ಕೆಲಸ ಮುಗಿಸಿ ಮನೆಗೆ ಹೋಗುವ ಧಾವಂತ, ಅಯ್ಯಪ್ಪ.. ಯಾವಾಗ ಮನೆ ಸೇರುತ್ತೇವೋ ಏನೋ, ಮನೆಗೆ ಹೋದ ಮೇಲೆ ಇಡೀ ದಿನ ರೆಸ್ಟ್ ಮಾಡಬೇಕು… ಮನೆ.. ಮನೆ.. ಮನೆ, ಲಕ್ಷ ಲಕ್ಷ ರೂ. ಸೇವ್ ಮಾಡಿ ಜನ ಕನಸಿನ ಮನೆ ಖರೀದಿ ಮಾಡುತ್ತಾರೆ. ಫ್ಲಾಟ್ ಖರೀದಿಸಿ, ಸುಂದರವಾದ ಮನೆ ನಿರ್ಮಿಸಿಕೊಳ್ಳುತ್ತಾರೆ. ಜೀವಮಾನದಲ್ಲಿ ದುಡಿದ ದುಡ್ಡನ್ನೆಲ್ಲಾ ಮನೆ ಕಟ್ಟಿಕೊಳ್ಳಲು ವೆಚ್ಚ ಮಾಡುತ್ತಾರೆ…

ಆದರೆ ಕೆಲವರಿಗೆ ಮನೆ ಅಂದರೆ ಹೀಗಿರುತ್ತಾ ಅನ್ನೋದನ್ನು ಕಲ್ಪಿಸಿಕೊಳ್ಳುವುದು ಸಹ ಕಷ್ಟಸಾಧ್ಯ. ಕಿತ್ತು ತಿನ್ನುವ ಬಡತನ, ಅನಾಥ ಬದುಕು, ಎಲ್ಲಿ ನಿಲ್ಲಲು ಜಾಗ ಸಿಗುತ್ತೋ ಅದೇ ಮನೆಯಾಗಿ ಬಿಡುತ್ತೆ. ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ಅಂಗಡಿಗಳ ಮುಂದಿನ ಛಾವಣಿಯ ನೆರಳೇ ಮನೆ. ತಿನ್ನಲು ಆಹಾರವಿಲ್ಲದೇ, ಉಡಲು ಬಟ್ಟೆಯಿಲ್ಲದೇ, ಸ್ನಾನ ಮಾಡಲು ಶೌಚಗೃಹವಿಲ್ಲದೇ ಅದೆಷ್ಟು ದಿನಗಳ ಕಾಲ ಹಾಗೆಯೇ ಇದ್ದು ವ್ಯಥೆ ಪಡುವವರೂ ನಮ್ಮ ನಡುವೆಯೇ ಬದುಕುತ್ತಿದ್ದಾರೆ. ಇಂಥವರನ್ನು ಕಂಡು ಮಮ್ಮಲ ಮರುಗಿದ ಜೇಕ್ ಅಸ್ಟೀನ್ ಎಂಬಾತ ಮಾಡಿದ ಕೆಲಸವೀಗ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಮನೆಯಿಲ್ಲದೇ ಅಲೆಯುತ್ತಿದ್ದ ಜೇಕ್ ಅಸ್ಟೀನ್, ಹಲವು ಕಡೆಗಳಲ್ಲಿ ಸುತ್ತಾಡಿ, ಮನೆಯಿಲ್ಲದವರು, ಕಡುಬಡವರು, ಬೀದಿಬದಿಯಲ್ಲೇ ಅನಾಥವಾಗಿ ವಾಸಿಸುವವರನ್ನು ನೋಡಿದ್ದ. ಸೇಂಟ್ ಲೂಯಿಸ್, ಮಿಸೌರಿ ಏರಿಯಾಗಳಲ್ಲಿ ಸ್ನಾನಕ್ಕೂ ಗತಿಯಿಲ್ಲದೇ, ಕೆಲಸವೂ ಸಿಗದೇ ಒದ್ದಾಡುವವರ ಶೋಚನೀಯ ಸ್ಥಿತಿ ಕಂಡು ಮರುಗಿದ್ದ. ಇಂಥವರಿಗಾಗಿ ಏನಾದರೂ ಸಹಾಯ ಮಾಡಲೇಬೇಕೆಂದು ನಿರ್ಧರಿಸಿದ ಜೇಕ್, ಮೂರು ತಿಂಗಳವರೆಗೆ ಸ್ನಾನ ಮಾಡದಿರುವವರನ್ನು ಬರ್ಗರ್ ಮಾಡುವ ಕೆಲಸಕ್ಕೂ ತೆಗೆದುಕೊಳ್ಳದೇ ಇರುವುದನ್ನು ನೋಡಿದ್ದ.

ಹೀಗಾಗಿ ಮನುಷ್ಯನಿಗೆ ಹೊಸ ಬಟ್ಟೆ ಇರದಿದ್ದರೂ, ನಿತ್ಯವೂ ಸ್ನಾನ ಮಾಡುವಂಥ ವ್ಯವಸ್ಥೆ ಮಾಡಬೇಕು ಎಂದು ಆಲೋಚಿಸಿದ. ಬದಲಾವಣೆ ತರಲೇಬೇಕು ಎಂದು ತೀರ್ಮಾನಿಸಿ, ಮಿಸೌರಿ ನಗರದಲ್ಲಿ ’ಮೊಬೈಲ್ ಶವರ್ ಆನ್ ವ್ಹೀಲ್ಸ’ ಎಂಬ ಪ್ರಾಜೆಕ್ಟ್ ನ್ನು ರೆಡಿ ಮಾಡಿದ. 5 ಸಾವಿರ ಡಾಲರ್ ಗೆ ಹಳೆಯ ಟ್ರಕ್ ನ್ನು ಖರೀದಿಸಿ, ನವೀಕರಿಸಿದ. ತನ್ನ ಯೋಜನೆಗಾಗಿ ಆನ್ ಲೈನ್ ನಲ್ಲಿ ಸಂದೇಶ ಪೋಸ್ಟ್ ಮಾಡಿ, ಧನಿಕರಿಂದ ಹಣ ಸಹಾಯ ಪಡೆದುಕೊಂಡ. ಟ್ರಕ್ ನ ಸುತ್ತ ಮೊಬೈಲ್ ಶವರ್ ಯುನಿಟ್, ಶವರ್ ಯುನಿಟ್ ಟು ದಿ ಪೀಪಲ್ ( ಜನರಿಗಾಗಿ ಸ್ನಾನಗೃಹ) ಎಂದು ಬರೆಸಿದ. ಟ್ರಕ್ ಒಳಗೆ ಕೋಣೆಗಳನ್ನು ನಿರ್ಮಿಸಿ, ಸ್ನಾನಗೃಹಗಳನ್ನು ನಿರ್ಮಿಸಿದ. ಜತೆಗೆ ಸೋಪ್, ಟವೆಲ್ ಸೇರಿದಂತೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಇರಿಸಿದ. ಸ್ವಚ್ಛ ಹಾಗೂ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸಲು ಸಾಧ್ಯವಾಗುವಂತಹ ಸ್ನಾನದ ಕೋಣೆಗಳನ್ನು ನಿರ್ಮಿಸಿದ. ನಂತರ ಶವರ್ ಯುನಿಟ್ ಟ್ರಕ್ ಸಂಚಾರ ಆರಂಭಿಸಿತು. ಎಲ್ಲೆಲ್ಲಿ ಜನಕ್ಕೆ ಸ್ನಾನಗೃಹದ ಅವಶ್ಯಕತೆಯಿದೆಯೋ ಅಲ್ಲೆಲ್ಲಾ ಟ್ರಕ್ ಸಂಚಾರ ಮಾಡುತ್ತೆ. ಈಗ ದಿನಕ್ಕೆ 60 ಮಂದಿ ಶವರ್ ಯುನಿಟ್ ಬಳಕೆ ಮಾಡುತ್ತಿದ್ದಾರೆ.

ಶವರ್ ಟು ದಿ ಪೀಪಲ್ ಟ್ರಕ್ ಸೇವೆಯನ್ನು ಸಾಕಷ್ಟು ಜನ ಪಡೆಯುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೇಕ್ ಅವರ ಅದ್ಭುತ ಕಾರ್ಯದಿಂದ ತಾವು ಖುಷಿಯಾಗಿರುವುದಾಗಿ ಹೇಳುತ್ತಾರೆ. ತಮಗೆ ಸ್ನಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಜೇಕ್ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೇಕ್ ಇಂತಹ ಅವಕಾಶ ಕಲ್ಪಿಸದಿದ್ದರೆ, ತಮ್ಮ ಸ್ಥಿತಿ ಸುಧಾರಣೆ ಆಗುತ್ತಿರಲಿಲ್ಲ ಎಂದು ಕಣ್ಣೀರು ಹಾಕುತ್ತಾರೆ. ಟ್ರಕ್ ಒಳಗಡೆ, ಬಿಸಿನೀರು, ತಣ್ಣೀರಿನ ವ್ಯವಸ್ಥೆ, ಶೇವ್ ಮಾಡಿಕೊಳ್ಳಲು ಬೇಕಾದ ಸಾಮಗ್ರಿ, ಶಾಂಪೂ ಸೇರಿದಂತೆ ಎಲ್ಲವನ್ನೂ ಇರಿಸಲಾಗಿದೆ.

ಮನೆಯಿಲ್ಲದವರಿಗೆ ಸ್ನಾನ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿರುವ ಜೇಕ್ ಅಸ್ಟೀನ್ ತಮ್ಮ ಕಾರ್ಯದ ಬಗ್ಗೆ ಹೇಳುತ್ತಾರೆ. ‘ಮನೆಯಿಲ್ಲದವರು, ಕಡು ಬಡವರಿಗೆ ಊಟ, ಬಟ್ಟೆ ಸಿಕ್ಕೇ ಸಿಗುತ್ತದೆ. ಆದರೆ ಅವರಿಗೆ ಮೂರು ತಿಂಗಳಾದರೂ ಸ್ನಾನ ಮಾಡುವ ಅವಕಾಶ ಮಾತ್ರ ಸಿಗುವುದಿಲ್ಲ. ಹೀಗಾಗಿ ಅವರಿಗೆ ಯಾರೂ ಕೆಲಸ ಕೊಡುವುದಿಲ್ಲ. ಮನೆ ಹಾಗೂ ಕೆಲಸ ಎರಡೂ ಇಲ್ಲದೇ ಅವರ ಸ್ಥಿತಿ ಶೋಚನೀಯವಾಗಿರುತ್ತದೆ. ಇದನ್ನು ಕಂಡುಕೊಂಡ ಬಳಿಕ ಶವರ್ ಟು ದಿ ಪೀಪಲ್ ಶುರು ಮಾಡಿದೆ’ ಅಂತಾರೆ.

ಅಂದಹಾಗೇ ‘ಜನರಿಗೆ ಕೇವಲ ಸ್ವಚ್ಛತೆ ಹಾಗೂ ಸ್ನಾನದ ಅರಿವು ಮೂಡಿಸಲು ಮಾತ್ರ ನಾನು ಈ ಕೆಲಸ ಮಾಡುತ್ತಿಲ್ಲ. ಬದಲಿಗೆ ಜನರ ಜತೆಗಿನ ಬಾಂಧವ್ಯ ಹೆಚ್ಚಿಸಲು, ಮನುಷ್ಯನಿಗೆ ತಲುಪಬೇಕಾದ ಮೂಲಸೌಕರ್ಯ ಒದಗಿಸಲು, ಬೀದಿ ಬದಿ ಜೀವನದಿಂದ ಮುಕ್ತಗೊಳಿಸಲು ಮತ್ತು ಉತ್ತಮ ಸೇವೆ ನೀಡಲು ಈ ಕೆಲಸ ಮಾಡುತ್ತಿದ್ದೇನೆ. ನನ್ನ ಜತೆಗೆ ಅನೇಕ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲಾ ಸಾಕಷ್ಟು ಮಂದಿಗೆ ಶವರ್ ಟು ದಿ ಪೀಪಲ್ ಸೇವೆಯನ್ನು ತಲುಪಿಸಿದ್ದಾರೆ. ಚಾಲಕರಿಗೆ ಲೈಸೆನ್ಸ್ ನೀಡಲಾಗಿದ್ದು, ನೌಕರಿಯನ್ನೂ ಪಡೆದುಕೊಂಡಿದ್ದಾರೆ’ ಎಂದು ಹೇಳುತ್ತಾರೆ.

ಶವರ್ ಟು ದಿ ಪೀಪಲ್ ಸೇವೆಯನ್ನು ಮನೆ ಹೊಂದಿರದ ಜನರಿಗಾಗಿ ಮಾಡಲಾಗುತ್ತಿದೆ. ದಿನವೂ ಅವರು ಶುಚಿಯಾಗಿ, ಪ್ರೀತಿಯಿಂದ ಜೀವಿಸುವಂತೆ ಮಾಡುವ ಒಂದು ಪ್ರಯತ್ನವೂ ಇದೆ. ಮನೆಯಿಲ್ಲದ ಇವರಿಗೆ ಕುಟುಂಬದವರೂ ಇರುವುದಿಲ್ಲ. ಯಾರೂ ಸಹಾಯ ಮಾಡಲು ಮುಂದೆ ಬರುವುದಿಲ್ಲ. ನೋವಿಗೆ ಮಿಡಿಯುವ ಮನಸ್ಸುಗಳು ಮಾತ್ರ ಸ್ಪಂದಿಸಲು ಸಾಧ್ಯ, ಕತ್ತಲೆ ತುಂಬಿದ ಬಡವರ ಬಾಳಲ್ಲಿ ಹೊಸ ಸೂರ್ಯನ ಉದಯವಾಗಲು ಸಾಧ್ಯ ಅನ್ನೋದು ಜೇಕ್ ಅಭಿಪ್ರಾಯ.

ಅದೇನೇ ಇರಲಿ, ಬೀದಿ ಬದಿಯಲ್ಲಿರುವವರು, ಕೊಳೆ ಬಟ್ಟೆ ಧರಿಸಿ ಓಡಾಡುವವರು, ಕೆಲಸವಿಲ್ಲದೆ ಅಲೆಯುವವರ ಬಾಳಲ್ಲಿ ನಗು, ಪ್ರೀತಿ, ಜೀವನೋತ್ಸಾಹ ತುಂಬುತ್ತಿರುವ ಜೇಕ್ ಕಾರ್ಯ ಶ್ಲಾಘನೀಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...