Homeಅಂತರಾಷ್ಟ್ರೀಯಯುದ್ಧ ಪೀಡಿತ ಗಾಝಾದ ನಿರಾಶ್ರಿತರಿಗೆ ಆಶ್ರಯ ನೀಡುವುದಾಗಿ ಘೋಷಿಸಿದ ಸ್ಕಾಟ್ಲೆಂಡ್

ಯುದ್ಧ ಪೀಡಿತ ಗಾಝಾದ ನಿರಾಶ್ರಿತರಿಗೆ ಆಶ್ರಯ ನೀಡುವುದಾಗಿ ಘೋಷಿಸಿದ ಸ್ಕಾಟ್ಲೆಂಡ್

- Advertisement -
- Advertisement -

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ನಿರಾಶ್ರಿತರಾದ ಗಾಝಾದ ಜನರಿಗೆ ಆಶ್ರಯ ನೀಡಲು ತಮ್ಮ ದೇಶ ಸಿದ್ಧವಾಗಿದೆ ಎಂದು ಸ್ಕಾಟ್ಲೆಂಡ್‌ನ ಸಚಿವ ಹುಮ್ಜಾ ಯೂಸಫ್ ಹೇಳಿದ್ದಾರೆ.

ಯೂಸಫ್ ಅವರ ಪ್ರಕಟಣೆಯಿಂದ ಸ್ಕಾಟ್ಲೆಂಡ್ ಯುದ್ಧ ಪೀಡಿತ ಪ್ಯಾಲೆಸ್ತೀನ್‌ ಜನರನ್ನು ಸ್ವಾಗತಿಸಿದ ಮೊದಲ ದೇಶವಾಗಿದೆ. ಯೂಸಫ್ ಅವರು ಸ್ಕಾಟ್ಲೆಂಡ್‌ನಲ್ಲಿ ಮೊದಲ ಮಂತ್ರಿಯಾಗಿದ್ದು, ಇವರು ಕ್ಯಾಬಿನೆಟ್‌ನ್ನು ಮುಂದುವರಿಸುವವರಾಗಿದ್ದಾರೆ. ಇದು ಪ್ರಧಾನ ಮಂತ್ರಿಯ ಹುದ್ದೆಗೆ ಸಮಾನವಾದ ಹುದ್ದೆಯಾಗಿದೆ.

ಯೂಸಫ್ ಅವರ ಮಾವ ಗಾಝಾದಲ್ಲಿದ್ದಾರೆ. ಹಮಾಸ್ ನಿಯಂತ್ರಿತ ಪ್ಯಾಲೇಸ್ತೀನ್‌ ಪ್ರಾಂತ್ಯದಲ್ಲಿ ಅವರ ಸಂಬಂಧಿಕರು ಕೂಡ ಇದ್ದಾರೆ. ಯೂಸಫ್ ಗಾಝಾದಲ್ಲಿ ಕಷ್ಟಕರ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ.

ನಾವು ಸಿರಿಯಾದಿಂದ, ಉಕ್ರೇನ್‌ನಿಂದ ಮತ್ತು ಇತರ ಹಲವು ದೇಶಗಳಿಂದ ಬಂದವರನ್ನು ಸ್ವಾಗತಿಸಿದ್ದೇವೆ ಮತ್ತು ನಾವು ಅದನ್ನು ಮತ್ತೆ ಮಾಡಬೇಕು ಎಂದು ಯೂಸಫ್ ಹೇಳಿದರು. ಈ ಭೀಕರ ದಾಳಿಗಳಲ್ಲಿ ತತ್ತರಿಸಿದವರಿಗೆ ಸುರಕ್ಷತೆ ಮತ್ತು ಅಭಯವನ್ನು ನೀಡುವ ಮೊದಲ ದೇಶವಾಗಲು ಸ್ಕಾಟ್ಲೆಂಡ್ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಒಂದು ಮಿಲಿಯನ್ ಜನರಿಗೆ ಆಶ್ರಯ ಒದಗಿಸಲು ಅವರು ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದು, ಎರಡು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಯುಕೆ ಸರ್ಕಾರವನ್ನು ಒತ್ತಾಯಿಸಿದರು. ಮೊದಲನೆಯದಾಗಿ ಗಾಝಾದ ಜನಿರಾಶ್ರಿತರಿಗೆ ಪುನರ್ವಸತಿ ಯೋಜನೆಯನ್ನು ತಕ್ಷಣವೇ ಪ್ರಾರಂಭಿಸಬೇಕು. ಎರಡನೆಯದಾಗಿ ಗಾಝಾದಲ್ಲಿ ಗಾಯಗೊಂಡ ನಾಗರಿಕರಿಗೆ ವೈದ್ಯಕೀಯ ನೆರವಿಗೆ ಒತ್ತಾಯಿಸಿದ್ದಾರೆ.

ನಾನು ಸ್ಪಷ್ಟವಾಗಿ ಹೇಳುತ್ತೇನೆ, ಸ್ಕಾಟ್ಲೆಂಡ್ ತನ್ನ ಪಾತ್ರವನ್ನು ನಿರ್ವಹಿಸಲು ಸಿದ್ಧವಾಗಿದೆ. ನಮ್ಮ ಆಸ್ಪತ್ರೆಗಳು ಗಾಝಾದ ಗಾಯಗೊಂಡ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಚಿಕಿತ್ಸೆ ನೀಡುತ್ತವೆ ಎಂದು ಹೇಳಿದ್ದಾರೆ.

ನನ್ನ ಸೋದರಮಾವ ಗಾಝಾದಲ್ಲಿ ವೈದ್ಯರಾಗಿದ್ದಾರೆ. ನಾವು ಅವರನ್ನು ಫೋನ್‌ನಲ್ಲಿ ಸಂಪರ್ಕಿಸಿದಾಗ ಅವರು ಸಂಪೂರ್ಣ ಹತ್ಯಾಕಾಂಡದ ಬಗ್ಗೆ ಹೇಳುತ್ತಾರೆ. ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಾಮಗ್ರಿಗಳು ಖಾಲಿಯಾಗುತ್ತಿವೆ. ವೈದ್ಯರು ಮತ್ತು ದಾದಿಯರು ಯಾರಿಗೆ ಚಿಕಿತ್ಸೆ ನೀಡಬೇಕು ಮತ್ತು ಯಾರನ್ನು ಸಾಯಲು ಬಿಡಬೇಕು ಎಂದು ಯೋಚಿಸುವಂತಹ ಭೀಕರ ಪರಿಸ್ಥಿತಿ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ಮಾಜಿ IPS ಬೋರ್ವಾಂಕರ್ ಆತ್ಮಚರಿತ್ರೆಯಲ್ಲಿ ಬರೆದ ಅಂಶ ಸೃಷ್ಟಿಸಿದ ವಿವಾದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...