Homeಅಂತರಾಷ್ಟ್ರೀಯಜಾರ್ಜ್ ಫ್ಲಾಯ್ಡ್‌‌ನನ್ನು ಉಳಿಸಲುಲಾಗದೆ ಇದ್ದಿದ್ದಕ್ಕೆ ಹಲವಾರು ರಾತ್ರಿ ಕಣ್ಣೀಟ್ಟಿದ್ದೆ: ಘಟನೆಯ ವಿಡಿಯೋ ಚಿತ್ರಿಸಿದ ಪ್ರತ್ಯಕ್ಷದರ್ಶಿ ಯುವತಿ

ಜಾರ್ಜ್ ಫ್ಲಾಯ್ಡ್‌‌ನನ್ನು ಉಳಿಸಲುಲಾಗದೆ ಇದ್ದಿದ್ದಕ್ಕೆ ಹಲವಾರು ರಾತ್ರಿ ಕಣ್ಣೀಟ್ಟಿದ್ದೆ: ಘಟನೆಯ ವಿಡಿಯೋ ಚಿತ್ರಿಸಿದ ಪ್ರತ್ಯಕ್ಷದರ್ಶಿ ಯುವತಿ

- Advertisement -
- Advertisement -

ಅಮೆರಿಕಾದ ಮಿನ್ನಿಯಾಪೊಲೀಸ್‌‌ನಲ್ಲಿ ಪೊಲೀಸ್ ಅಧಿಕಾರಿಯಿಂದ ಹತ್ಯೆಗೀಡಾದ ಆಫ್ರಿಕನ್-ಅಮೆರಿಕನ್‌‌ ಜಾರ್ಜ್ ಫ್ಲಾಯ್ಡ್ ಪ್ರಕರಣದ ವಿಚಾರಣೆ ಪ್ರಾರಂಭವಾಗಿದೆ. ವೈರಲ್ ವಿಡಿಯೋವನ್ನು ಚಿತ್ರೀಕರಿಸಿದ ಹದಿಹರೆಯದ ಯುವತಿ, ಘಟನೆ ನಡೆಯುತ್ತಿದ್ದಾಗ ಅವರ ಜೀವ ಉಳಿಸಲು ಬೇಕಾಗಿ ತನ್ನಿಂದ ಏನೂ ಮಾಡಲಾಗಿಲ್ಲ ಎಂದು ಮಂಗಳವಾರ ಪಶ್ಚಾತ್ತಾಪ ಪಟ್ಟಿದ್ದಾರೆ.

ಮಿನ್ನಿಯಾಪೋಲಿಸ್‌ನ ಮಾಜಿ ಪೊಲೀಸ್ ಅಧಿಕಾರಿ, ಹತ್ಯೆಯ ಪ್ರಮುಖ ಆರೋಪಿ ಡೆರೆಕ್ ಚೌವಿನ್‌ನ ವಿಚಾರಣೆ ನಡೆಯುತ್ತಿರುವಾಗ ಘಟನೆಯನ್ನು ಚಿತ್ರೀಕರಿಸಿದ 18 ವರ್ಷದ ಯುವತಿ ಡಾರ್ನೇಲ್ಲಾ ಫ್ರೇಜಿಯರ್‌ ಭಾವನಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

44 ವರ್ಷದ ಚೌವಿನ್‌ ಮೇಲೆ ಜಾರ್ಜ್‌ ಫ್ಲಾಯ್ಡ್‌ ಅವರನ್ನು ಮೇ 25, 2020 ರಂದು ಹತ್ಯೆ ಮಾಡಿದ ಆರೋಪವಿದೆ. ಇದನ್ನು ಫ್ರೇಜಿಯರ್ ವೀಡಿಯೊದಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಭಾರಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಜಗತ್ತಿನಾದ್ಯಂತ ವರ್ಣಭೇದ ನೀತಿ ವಿರೋಧಿ ಪ್ರತಿಭಟನೆಯಾದ ‘ಬ್ಲಾಕ್ ಲೈವ್ಸ್‌ ಮ್ಯಾಟರ್ಸ್‌ ಚಳವಳಿಗೆ ಕಾರಣವಾಯಿತು.

ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್ ಹತ್ಯೆಯ ಪ್ರಧಾನ ಆರೋಪಿ ‘ಡೆರೆಕ್ ಚೌವಿನ್’‌ ವಿಚಾರಣೆ ಪ್ರಾರಂಭ

ವೈರಲ್ ವಿಡಿಯೋದಲ್ಲಿ ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡ್‌ ಅವರ ಕುತ್ತಿಗೆ ಮೇಲೆ ಪೊಲೀಸ್ ಅಧಿಕಾರಿ ಚೌವಿನ್ ಒಂಬತ್ತು ನಿಮಿಷಗಳಿಗಿಂತ ಹೆಚ್ಚು ಕಾಲ ತನ್ನ ಮಂಡಿಯನ್ನು ಒತ್ತಿ ಹಿಡಿದಿದ್ದನು. ಜಾರ್ಜ್‌ ಪ್ಲಾಯ್ಡ್‌ ತನಗೆ ಉಸಿರಾಡಲು ಆಗುತ್ತಿಲ್ಲ ಎಂದು ಮಾಡಿದ್ದರಾದರೂ ಪೊಲೀಸ್ ಅಧಿಕಾರಿ ಅದನ್ನು ಮನ್ನಿಸದೆ ಅವರ ಹತ್ಯೆಗೆ ಕಾರಣವಾಗುತ್ತಾನೆ.

ವಿಚಾರಣೆ ಸಮಯದಲ್ಲಿ ಕಣ್ಣೀರಿಡುತ್ತಾ ಹೇಳಿಕೆ ನೀಡಿದ ಫ್ರೇಜಿಯರ್‌, “ನನಗೆ ಕಪ್ಪುವರ್ಣೀಯ ತಂದೆ, ಸಹೋದರರಿದ್ದಾರೆ. ಜಾರ್ಜ್ ಫ್ಲಾಯ್ಡ್ ಅವರ ಜೀವ ಉಳಿಸಲು ಏನೂ ಮಾಡದಿದ್ದಕ್ಕಾಗಿ ಹಲವಾರು ರಾತ್ರಿ ಕಣ್ಣೀರಿಟ್ಟಿದ್ದೇನೆ. ಅವರನ್ನು ಉಳಿಸಲು ದೈಹಿಕವಾಗಿ ಪ್ರತಿಕ್ರಿಯೆ ನೀಡದ್ದಕ್ಕಾಗಿ ನಾನು ಅವರಲ್ಲಿ ಕ್ಷಮೆಯಾಚಿಸುಯತ್ತಿದ್ದೇನೆ ಮತ್ತು ಕ್ಷಮೆಯಾಚಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.

“ಜಾರ್ಜ್ ಫ್ಲಾಯ್ಡ್ ಭಯಭೀತರಾಗಿ, ಪ್ರಾಣ ಭಿಕ್ಷೆ ಬೇಡುತ್ತಿದ್ದರು. ಅವರು ನೋವಿನಿಂದ ಬಳಲುತ್ತಿದ್ದರು. ಚೌವಿನ್ ಮಾಡುತ್ತಿರುವುದು ತಪ್ಪು ಎಂದು ನನಗೆ ಹಾಗೂ ಅಲ್ಲಿದ್ದ ಎಲ್ಲರಿಗೂ ತಿಳಿದಿತ್ತು. ಅಂತಿಮವಾಗಿ ಕೊಲೆಗೆ ಸಾಕ್ಷಿಯಾಗಿದೆ” ಎಂದು ಫ್ರೇಜಿಯರ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಟ್ರಂಪ್ ಸೋತರೂ, ಟ್ರಂಪ್‌ಯಿಸಂ ಉಳಿದಿದೆ: ಆದರೂ ಯುವ ಅಮೆರಿಕ ಭರವಸೆ ಮೂಡಿಸಿದೆ

ಘಟನೆ ನಡೆದ ಕೂಡಲೆ ನಾನು ತುರ್ತು 911 ಕರೆ ಮಾಡಿದ್ದೇನೆ ಎಂದು ಮತ್ತೊಬ್ಬ ಸಾಕ್ಷಿ ಹೇಳಿದ್ದಾರೆ.

ಜಾರ್ಜ್ ಫ್ಲಾಯ್ಡ್‌ನನ್ನು ಹತ್ಯೆ ಮಾಡಿದ ಪ್ರಧಾನ ಆರೋಪಿ ಮಿನ್ನಿಯಾಪೋಲಿಸ್‌ನ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ ವಿಚಾರಣೆ ಅಧಿಕೃತವಾಗಿ ಪ್ರಾರಂಭವಾಗಿದೆ ಎಂದು ಐಎಎನ್‌ಎಸ್ ನಿನ್ನೆ ವರದಿ ಮಾಡಿತ್ತು.

ಸೋಮವಾರದ ವಿಚಾರಣೆಯಲ್ಲಿ ಆರಂಭಿಕ ಹೇಳಿಕೆಗಳನ್ನು ಪಡೆಯಲಾಗಿದ್ದು, ಹತ್ಯೆಗೀಡಾದ ಫ್ಲಾಯ್ಡ್ ಕುಟುಂಬದ ಸದಸ್ಯರು ಮತ್ತು ಅವರ ಕಾನೂನು ತಂಡದ ತಂಡವು ಮಿನ್ನಿಯಾಪೋಲಿಸ್ ನ್ಯಾಯಾಲಯದ ಮುಂದೆ ಎಂಟು ನಿಮಿಷ 46 ಸೆಕೆಂಡುಗಳ ಕಾಲ ಹೇಳಿಕೆ ನೀಡಿತ್ತು.

ಘಟನಾ ಸ್ಥಳದಲ್ಲಿದ್ದ ಇತರ ಮೂವರು ಮಾಜಿ ಅಧಿಕಾರಿಗಳಾದ ಜೆ. ಅಲೆಕ್ಸಾಂಡರ್ ಕುಯೆಂಗ್, ಥಾಮಸ್ ಲೇನ್ ಮತ್ತು ಟೌ ಥಾವೊ ಕೂಡ ಹತ್ಯೆಗೆ ಸಹಾಯ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಅವರ ವಿಚಾರಣೆ ಆಗಸ್ಟ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.


 

 

ಇದನ್ನೂ ಓದಿ: ವರ್ಣಬೇಧ ನೀತಿಯ ಬಲಿಪಶು ಜಾರ್ಜ್ ಫ್ಲಾಯ್ಡ್ ಕುಟುಂಬಕ್ಕೆ 196 ಕೋಟಿ ರೂ. ಪರಿಹಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...