Homeಅಂತರಾಷ್ಟ್ರೀಯಅಮೆರಿಕಾದ ಜಿಲ್ಲಾ ನ್ಯಾಯಾಲಯದ ಜಡ್ಜ್ ಆಗಲಿರುವ ಭಾರತೀಯ ಮೂಲದ ರೂಪಾ ರಂಗ

ಅಮೆರಿಕಾದ ಜಿಲ್ಲಾ ನ್ಯಾಯಾಲಯದ ಜಡ್ಜ್ ಆಗಲಿರುವ ಭಾರತೀಯ ಮೂಲದ ರೂಪಾ ರಂಗ

- Advertisement -
- Advertisement -

ಭಾರತ ಮೂಲದ ಇಂಡಿಯನ್-ಅಮೆರಿಕನ್ ರೂಪಾ ರಂಗ ಪುಟ್ಟಗುಂಟಾ ಅವರನ್ನು ಫೆಡರಲ್ ನ್ಯಾಯಾಧೀಶರನ್ನಾಗಿ ನೇಮಿಸುವ ಉದ್ದೇಶವನ್ನು ಅಮೆರಿಕ ಅಧ್ಯಕ್ಷ ಜೋ ಬಿಡನ್ ವ್ಯಕ್ತಪಡಿಸಿ, ನಾಮನಿರ್ದೇಶನ ಮಾಡಿದ್ದಾರೆ. ನ್ಯಾಯಾಂಗದ 10 ಉನ್ನತ ಸ್ಥಾನಗಳಿಗೆ ಅಧ್ಯಕ್ಷರು ನಾಮನಿರ್ದೇಶನ ಮಾಡಿದ್ದು, ಅದರಲ್ಲಿ ಭಾರತೀಯ-ಅಮೆರಿಕನ್, ಆಫ್ರಿಕನ್-ಅಮೆರಿಕನ್ ಮತ್ತು ಮುಸ್ಲಿಂ ಅಮೆರಿಕನ್ ಅಭ್ಯರ್ಥಿಗಳು ಇದ್ದಾರೆ.

10 ಫೆಡರಲ್ ಸರ್ಕ್ಯೂಟ್ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಗಳಿಗೆ ಮತ್ತು ಒಂದು ಕೊಲಂಬಿಯಾ ಜಿಲ್ಲೆಯ ಸುಪೀರಿಯರ್ ಕೋರ್ಟ್ ನ್ಯಾಯಾಧೀಶ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲಾಗಿದೆ.

ಈ ಅರ್ಹ ಅಭ್ಯರ್ಥಿಗಳು ತಮ್ಮ ಹಿನ್ನೆಲೆ ಮತ್ತು ವೃತ್ತಿಪರ ಅನುಭವದಲ್ಲಿ ಅಮೆರಿಕಾದ ಜನರ ಸಂಪೂರ್ಣ ವೈವಿಧ್ಯತೆಯನ್ನು ಪ್ರತಿಬಿಂಬಿಸಬೇಕು ಎಂಬುದು ಅಧ್ಯಕ್ಷರ ಆಳವಾದ ನಂಬಿಕೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್‌‌‌‌: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ವಿರುದ್ದ ಪ್ರಕರಣ

ಯುಎಸ್ ಸೆನೆಟ್ ದೃಢಪಡಿಸಿದರೆ, ನ್ಯಾಯಾಧೀಶೆ ರೂಪಾ ರಂಗ ಪುಟ್ಟಗುಂಟಾ ಅಮೆರಿಕಾದ ಜಿಲ್ಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿದ ಮೊದಲ ಏಷ್ಯನ್ ಅಮೆರಿಕನ್ ಮತ್ತು ಪೆಸಿಫಿಕ್ ಐಲ್ಯಾಂಡರ್ (AAPI) ಮಹಿಳೆಯಾಗಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ರೂಪಾ ರಂಗ ಪುಟ್ಟಗುಂಟಾ ಅವರು 2007 ರಲ್ಲಿ ಓಹಿಯೋ ಸ್ಟೇಟ್ ಮೊರಿಟ್ಜ್ (Ohio State Moritz) ಕಾಲೇಜ್ ಆಫ್ ಲಾದಿಂದ ಪದವಿ ಪಡೆದಿದ್ದಾರೆ.  2008 ರಿಂದ 2010 ರವರೆಗೆ ವಾಷಿಂಗ್ಟನ್ ಡಿ.ಸಿ. ಸುಪೀರಿಯರ್ ಕೋರ್ಟ್‌ನ ನ್ಯಾಯಾಧೀಶ ವಿಲಿಯಂ ಎಂ. ಜಾಕ್ಸನ್‌ಗೆ ಕಾನೂನು ಸಹಾಯಕಿಯಾಗಿ ತಮ್ಮ ಕಾನೂನು ವೃತ್ತಿಜೀವನವನ್ನು ಪ್ರಾರಂಭಿಸಿದರು, ಜೊತೆಗೆ 2010 ರಿಂದ 2011 ರವರೆಗೆ ಡಿ.ಸಿ. ಮೇಲ್ಮನವಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆಯಾಗಿದ್ದರು.

ನ್ಯಾಯಾಧೀಶೆ ಪುಟ್ಟಗುಂಟಾ ಪ್ರಸ್ತುತ ವಾಷಿಂಗ್ಟನ್ ಡಿ.ಸಿ. ಬಾಡಿಗೆ ವಸತಿ ಆಯೋಗದ ಆಡಳಿತಾತ್ಮಕ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2019 ರಲ್ಲಿ ಆಯೋಗಕ್ಕೆ ಸೇರುವ ಮೊದಲು, ನ್ಯಾಯಾಧೀಶೆ ಪುಟ್ಟಗುಂಟ ಅವರು 2013 ರಿಂದ 2019 ರವರೆಗೆ ಸ್ವಂತ ಪ್ರಾಕ್ಟೀಸ್ ಮಾಡುತ್ತಿದ್ದರು.


ಇದನ್ನೂ ಓದಿ: `1232 ಕಿ.ಮೀ’ | ಕರಾಳ ಲಾಕ್‌ಡೌನ್‌‌ನಲ್ಲಿ ಕಾರ್ಮಿಕರ ‘ಮಹಾವಲಸೆ’ಯ ಕತೆ ಹೇಳುವ ಸಾಕ್ಷ್ಯಚಿತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...