Homeಅಂತರಾಷ್ಟ್ರೀಯಇಸ್ರೇಲ್‌-ಪ್ಯಾಲೆಸ್ತೀನ್‌ ಸಂಘರ್ಷ 'ಜಾಗತಿಕ ಬಿಕ್ಕಟ್ಟು': ಮಾರ್ಟಿನ್ ಗ್ರಿಫಿತ್ಸ್

ಇಸ್ರೇಲ್‌-ಪ್ಯಾಲೆಸ್ತೀನ್‌ ಸಂಘರ್ಷ ‘ಜಾಗತಿಕ ಬಿಕ್ಕಟ್ಟು’: ಮಾರ್ಟಿನ್ ಗ್ರಿಫಿತ್ಸ್

- Advertisement -
- Advertisement -

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ಗೆ ಎರಡು ದಿನಗಳ ಪ್ರವಾಸದ ಬಳಿಕ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳು ಮತ್ತು ತುರ್ತು ಪರಿಹಾರ ಸಂಯೋಜಕರಾದ ಮಾರ್ಟಿನ್ ಗ್ರಿಫಿತ್ಸ್ ಅವರು ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಪ್ಯಾಲೆಸ್ತೀನ್‌ ಮೇಲಿನ ಇಸ್ರೇಲ್‌ ದಾಳಿಯನ್ನು ಜಾಗತಿಕ ಬಿಕ್ಕಟ್ಟು ಎಂದು ಕರೆದಿದ್ದು, ಇದು ಮುಂದುವರಿಯಬಾರದು ಎಂದು ಹೇಳಿದ್ದಾರೆ.

ಯದ್ಧ ವಿರಾಮದ ಅಗತ್ಯವಿದೆ. ಇದು ಮಾತ್ರ ಗಾಝಾಕ್ಕೆ ಪರಿಹಾರ ವಸ್ತುಗಳನ್ನು ತಲುಪಿಸಲು ಇರುವ ಆಯ್ಕೆಯಾಗಿದೆ. ಇಸ್ರೇಲ್‌ ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ನಡಸಿದ ದಾಳಿಯಲ್ಲಿ ಹಲವಾರು ನಾಗರಿಕರು ಮೃತಪಟ್ಟಿದ್ದಾರೆ. ಗಾಜಾದ ಜನರಿಗೆ ಇದು ಇತ್ತೀಚಿನ ದೌರ್ಜನ್ಯವಷ್ಠೆ, ಅಕ್ಟೋಬರ್ 7 ಮತ್ತು ಅದರ ನಂತರದ ಪರಿಣಾಮಗಳು ಲಕ್ಷಾಂತರ ಜನರ ಜೀವನದಲ್ಲಿ ಅಳಿಸಲಾಗದ ಗಾಯಗಳನ್ನು ಮಾಡಿದೆ ಎಂದು ಮಾರ್ಟಿನ್ ಗ್ರಿಫಿತ್ಸ್ ಹೇಳಿದ್ದಾರೆ.

ಗಾಝಾದಲ್ಲಿ, ಮಹಿಳೆಯರು, ಮಕ್ಕಳು ಮತ್ತು ಪುರುಷರು ಹಸಿವಿನಿಂದ ಬಳಲುತ್ತಿದ್ದಾರೆ. ಆಘಾತಕ್ಕೊಳಗಾಗಿದ್ದಾರೆ ಮತ್ತು ಬಾಂಬ್ ದಾಳಿಯಿಂದ ಸಾಯುತ್ತಿದ್ದಾರೆ. ಅವರು ಮಾನವೀಯತೆಯ ಮೇಲಿನ ಎಲ್ಲಾ ನಂಬಿಕೆ ಮತ್ತು ಭವಿಷ್ಯದ ಭರವಸೆಯನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಹತಾಶೆ ಎದ್ದುಕಾಣುತ್ತಿದೆ ಎಂದು ಹೇಳಿದ್ದಾರೆ.

ಪಶ್ಚಿಮ ದಂಡೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಹಿಂಸಾಚಾರ ಮತ್ತು ಚೆಕ್‌ಪೋಸ್ಟ್‌ಗಳನ್ನು ಮುಚ್ಚುವುದರಿಂದ ಜನರು ಆಹಾರ, ಉದ್ಯೋಗಗಳು, ಆರೋಗ್ಯ ರಕ್ಷಣೆ ಮತ್ತು ಇತರ ಅಗತ್ಯ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದು ಮುಂದುವರಿಯಲು ಸಾಧ್ಯವಿಲ್ಲ. ನಮಗೆ ಒಂದು ಹಂತದ ಬದಲಾವಣೆಯ ಅಗತ್ಯವಿದೆ. ಒತ್ತೆಯಾಳುಗಳನ್ನು ತಕ್ಷಣವೇ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕಾಗಿದೆ. ನಾವು ಬದುಕುಳಿಯಲು ಅಗತ್ಯವಾದವುಗಳನ್ನು ವಿಶೇಷವಾಗಿ ನೀರು, ಆಹಾರ, ಔಷಧ ಮತ್ತು ಇಂಧನ ತಕ್ಷಣವೇ ಒದಗಿಸಬೇಕು ಎಂದು ಹೇಳಿದ್ದಾರೆ.

ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿದ ದಾಳಿಯಲ್ಲಿ 1,400 ಜನರ ಹತ್ಯೆಯಾಗಿದೆ. 200 ಮಂದಿಯನ್ನು ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿದೆ. ಬಳಿಕ ಗಾಝಾದ ಮೇಲೆ ಇಸ್ರೇಲ್‌ ನಡೆಸಿದ ಬಾಂಬ್‌ ದಾಳಿಯಲ್ಲಿ ಮಹಿಳೆಯರು ಮಕ್ಕಳು ಸೇರಿ 8000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಇದನ್ನು ಓದಿ: ಪ್ಯಾಲೆಸ್ತೀನ್ ನಾಗರಿಕರ ನರಮೇಧ: ಇಸ್ರೇಲ್‌ ಜೊತೆಗೆ ರಾಜತಾಂತ್ರಿಕ ಸಂಬಂಧ ಕಡಿತಗೊಳಿಸಿದ ಬೊಲಿವಿಯಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...