Homeಅಂತರಾಷ್ಟ್ರೀಯಇಸ್ರೇಲ್- ಹಮಾಸ್ ನಡುವೆ ಮುಂದುವರಿದ ಕದನ: ಮೃತರ ಸಂಖ್ಯೆ 613ಕ್ಕೆ ಏರಿಕೆ

ಇಸ್ರೇಲ್- ಹಮಾಸ್ ನಡುವೆ ಮುಂದುವರಿದ ಕದನ: ಮೃತರ ಸಂಖ್ಯೆ 613ಕ್ಕೆ ಏರಿಕೆ

- Advertisement -
- Advertisement -

ಇಸ್ರೇಲ್ ಮೇಲೆ ಹಮಾಸ್‌ ಗುಂಪು ನಡೆಸಿದ ಹಠಾತ್ ರಾಕೆಟ್‌ ದಾಳಿ ಬಳಿಕ ಕಳೆದ 24 ಗಂಟೆಗಳಿಂದ ಇಸ್ರೇಲ್ ಮಿಲಿಟರಿ ಮತ್ತು ಪ್ಯಾಲೆಸ್ತೀನ್ ಗುಂಪು ಹಮಾಸ್ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.

ಉತ್ತರ ಇಸ್ರೇಲ್ ಮೇಲೆ ಲೆಬನಾನ್‌ ಶೆಲ್ ದಾಳಿಯನ್ನು ನಡೆಸಿದೆ. ಲೆಬನಾನಿನ ಹೆಜ್ಬೊಲ್ಲಾಹ್ ಸಂಘಟನೆ ಭಾನುವಾರ ಇಸ್ರೇಲ್ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇಸ್ರೇಲ್ ಲೆಬನಾನ್‌ಗೆ ಫಿರಂಗಿ ದಾಳಿ ನಡೆಸಿದೆ ಮತ್ತು ಗಡಿಯ ಸಮೀಪವಿರುವ ಹೆಜ್ಬೊಲ್ಲಾಹ್ ಪೋಸ್ಟ್‌ನ ಮೇಲೆ ಡ್ರೋನ್ ದಾಳಿ ನಡೆಸಿದೆ.

ಶನಿವಾರ ಬೆಳಗ್ಗೆ ಪ್ಯಾಲೇಸ್ತೀನ್‌ನ ಹಮಾಸ್ ಗುಂಪು ನಡೆಸಿದ ದಾಳಿ ಬಳಿಕ  ಇಸ್ರೇಲ್‌ನಲ್ಲಿ 300ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ  ಆಪರೇಷನ್ ಐರನ್ ಸ್ವೋರ್ಡ್ಸ್, ಇಸ್ರೇಲ್ ರಕ್ಷಣಾ ಪಡೆಗಳ ದಾಳಿಯಲ್ಲಿ ಗಾಜಾದಲ್ಲಿ 313 ಜನರು ಬಲಿಯಾಗಿದ್ದಾರೆ. ಇದರಿಂದಾಗಿ ಒಟ್ಟು ಸಾವಿನ ಸಂಖ್ಯೆ 613ಕ್ಕೆ ಏರಿಕೆಯಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿದೆ.

ಹಮಾಸ್ ಸಶಸ್ತ್ರ ವಿಭಾಗ, ಕಸ್ಸಾಮ್ ಬ್ರಿಗೇಡ್ಸ್, ಇಸ್ರೇಲ್‌ನ ಹಲವಾರು ಪ್ರದೇಶಗಳಲ್ಲಿ  ತೀವ್ರ ಘರ್ಷಣೆಯಲ್ಲಿ ತೊಡಗಿದೆ.

ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್) ತನ್ನ ಸೈನಿಕರು ಇಸ್ರೇಲ್‌ನೊಳಗೆ ಪ್ಯಾಲೇಸ್ತೀನಿ ಗುಂಪು ಹಮಾಸ್‌ನೊಂದಿಗೆ ಇನ್ನೂ ಯುದ್ಧದಲ್ಲಿ ತೊಡಗಿದ್ದಾರೆ ಎಂದು ಹೇಳಿದೆ. ಒಫಾಕಿಮ್, ಸ್ಡೆರೋಟ್, ಯಾದ್ ಮೊರ್ಡೆಚೈ, ಕ್ಫರ್ ಅಜ್ಜಾ, ಬೆಯೆರಿ, ಯತಿದ್ ಮತ್ತು ಕಿಸ್ಸುಫಿಮ್ ಸೇರಿದಂತೆ ಗಾಜಾ ಪಟ್ಟಿಯ ಗಡಿಯಲ್ಲಿರುವ ಇಸ್ರೇಲಿ ಪ್ರದೇಶಗಳಲ್ಲಿ ಹಮಾಸ್ ಜೊತೆ ಕದನ ನಡೆಯುತ್ತಿದೆ ಎಂದು ಇಸ್ರೇಲ್ ಹೇಳಿದೆ.

ಉತ್ತರ ಇಸ್ರೇಲ್‌ನ ಗಡಿ ಪ್ರದೇಶಗಳು ಲೆಬನಾನ್‌ನಿಂದ ಶೆಲ್‌ ದಾಳಿಗೆ ಗುರಿಯಾಗಿವೆ. ಲೆಬನಾನಿನ ಹೆಜ್ಬೊಲ್ಲಾಹ್ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇಸ್ರೇಲಿ ಪಡೆಗಳು ಹಿಜ್ಬುಲ್ಲಾ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ರಾಕೆಟ್‌ಗಳ ಮೂಲಕ ಪ್ರತಿ ದಾಳಿ ನಡೆಸುತ್ತಿದೆ. ದಕ್ಷಿಣ ಇಸ್ರೇಲ್‌ನ ಹಲವು ಭಾಗಗಳಲ್ಲಿ ರಾಕೆಟ್ ಸೈರನ್‌ಗಳು ಸದ್ದು ಮಾಡುತ್ತಲೇ ಇವೆ ಎಂದು ಇಸ್ರೇಲ್‌ ಮಾದ್ಯಮ ವರದಿ ಮಾಡಿದೆ.

ಇಸ್ರೇಲ್‌ ನಡೆಸಿದ ವಾಯುದಾಳಿಯಿಂದ ಗಾಜಾ ನಗರದ ವಟಾನ್ ಟವರ್, ಅಲ್-ಅಕ್ಲೌಕ್ ಟವರ್ ಮತ್ತು ಮಾಟರ್ ವಸತಿ ಕಟ್ಟಡ ಸೇರಿದಂತೆ ಹೆಚ್ಚಿನ ವಸತಿ ಕಟ್ಟಡಗಳು ನೆಲಕ್ಕೆ ಉರುಳಿದೆ ಎಂದು ವರದಿ ತಿಳಿಸಿದೆ.

ಇಸ್ರೇಲ್ ಸರ್ಕಾರವು  ಗಾಜಾ ಪಟ್ಟಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಶನಿವಾರ ಗಾಜಾ ಪಟ್ಟಿಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವಂತೆ ಇಸ್ರೇಲ್‌ ವಿದ್ಯುತ್ ಕಂಪನಿಗೆ ಆದೇಶ ನೀಡಿರುವುದಾಗಿ ಇಂಧನ ಸಚಿವರು ತಿಳಿಸಿದ್ದಾರೆ.

ಇದನ್ನು ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ: ಜೆರುಸಲೇಂನಲ್ಲಿ ಸಿಲುಕಿಕೊಂಡ ಭಾರತದ ಯಾತ್ರಿಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...