Homeಅಂತರಾಷ್ಟ್ರೀಯಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ: 2000 ಮಂದಿ ಸಾವು

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ: 2000 ಮಂದಿ ಸಾವು

- Advertisement -
- Advertisement -

ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ ಸಂಭವಿಸಿ 2,000 ಮಂದಿ ಮೃತಪಟ್ಟಿದ್ದು, ನೆಲಸಮವಾದ ಹಳ್ಳಿಗಳ ಅವಶೇಷಗಳ ನಡುವೆ ಬದುಕುಳಿದವರ ರಕ್ಷಣೆಗೆ ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿದೆ.

ಶನಿವಾರ 6.3 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಬಳಿಕ 8 ಬಾರಿ ಭೂಕಂಪನ ಸಂಭವಿಸಿದೆ. ಪ್ರಾಂತೀಯ ರಾಜಧಾನಿ ಹೆರಾತ್‌ನ ವಾಯುವ್ಯಕ್ಕೆ 30 ಕಿಮೀ ದೂರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮನೆಗಳು ನೆಲಕ್ಕೆ ಉರುಳಿದೆ.

ಘಟನೆಯಲ್ಲಿ ಸಾವುನೋವುಗಳು ತುಂಬಾ ಹೆಚ್ಚಾಗಿದೆ ಎಂದು ಸರ್ಕಾರದ ಉಪ ವಕ್ತಾರ ಬಿಲಾಲ್ ಕರಿಮಿ ಅವರು ಹೇಳಿದ್ದಾರೆ.

ಜಿಂದಾ ಜಾನ್‌ ಜಿಲ್ಲೆಯ ಸರ್ಬೋಲ್ಯಾಂಡ್ ಗ್ರಾಮದಲ್ಲಿ ಭೂಕಂಪದ ಕೇಂದ್ರಬಿಂದುವಾಗಿದ್ದು, ಅಲ್ಲಿ ಹತ್ತಾರು ಮನೆಗಳು ನೆಲಸಮವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಹೆರಾತ್ ಪ್ರಾಂತ್ಯದ ಕನಿಷ್ಠ 12 ಹಳ್ಳಿಗಳಲ್ಲಿ 600 ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದೆ. ಸುಮಾರು 4,200 ಜನರು ಭೂಕಂಪಕ್ಕೆ ಸಿಲುಕಿದ್ದಾರೆ ಎಂದು ಹೇಳಿದೆ.

ಭೂಕಂಪನದ ಬಗ್ಗೆ ಅನುಭವವನ್ನು ಹಂಚಿಕೊಂಡ 42 ವರ್ಷದ ಬಶೀರ್ ಅಹ್ಮದ್,  ಮೊದಲ ಬಾರಿ ಸಂಭವಿಸಿದ ಭೂಮಿಯ ನಡುಕದಲ್ಲಿ ಎಲ್ಲಾ ಮನೆಗಳು ಕುಸಿದಿವೆ. ಮನೆಯೊಳಗಿದ್ದವರು ಜೀವಂತವಾಗಿ ಸಮಾಧಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ: ಜೆರುಸಲೇಂನಲ್ಲಿ ಸಿಲುಕಿಕೊಂಡ ಭಾರತದ ಯಾತ್ರಿಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...