Homeಅಂತರಾಷ್ಟ್ರೀಯಅಮೆರಿಕ ಕ್ಯಾಪಿಟಲ್ ಗಲಭೆ: ತ್ರಿವರ್ಣ ಧ್ವಜ ಹಾರಿಸಿದವರ‌ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲು

ಅಮೆರಿಕ ಕ್ಯಾಪಿಟಲ್ ಗಲಭೆ: ತ್ರಿವರ್ಣ ಧ್ವಜ ಹಾರಿಸಿದವರ‌ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲು

ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ‌ ವಿನ್ಸೆಂಟ್‌ ಕ್ಸೇವಿಯರ್‌ನ ಖಾತೆಗಳನ್ನು ಬ್ಯಾನ್‌ ಮಾಡಬೇಕು. ಭಾರತ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.

- Advertisement -
- Advertisement -

ಅಮೆರಿಕದ ಶ್ವೇತಭವನದ‌ ಮೇಲಿನ ದಾಳಿಯ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದ ಭಾರತ ಮೂಲದ ವಿನ್ಸೆಂಟ್‌ ಕ್ಸೇವಿಯರ್‌ ವಿರುದ್ಧ ಇಂದು (ಜ.9) ದೂರು ದಾಖಲಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಬೆಂಬಲಿಗರು ಶುಕ್ರವಾರ ಶ್ವೇತ ಭವನಕ್ಕೆ ಮುತ್ತಿಗೆ ಹಾಕಿದ್ದರು.

ತ್ರಿವರ್ಣ ಧ್ವಜ ದುರ್ಬಳಕೆಗೆ ಸಂಬಂಧಿಸಿದಂತೆ ದೀಪಕ್‌ ಕೆ ಸಿಂಗ್‌ ಎಂಬುವವರು ದೆಹಲಿಯ ಕಲ್ಕಾಜಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, “ಈ ಘಟನೆಯ ತನಿಖೆ ನಡೆಸಬೇಕು ಎಂದು ನಾನು ದೆಹಲಿ ಪೊಲೀಸರಲ್ಲಿ ಮನವಿ ಮಾಡುತ್ತೇನೆ. ಪ್ರತಿಭಟನೆಯ ವೇಳೆ ತ್ರಿವರ್ಣ ಧ್ವಜ ಹಿಡಿದಿದ್ದ ವ್ಯಕ್ತಿಯ ಮೇಲೆ ನನಗೆ ವೈಯಕ್ತಿಕ ದ್ವೇಷವೇನೂ ಇಲ್ಲ. ಆದರೆ, ಆತನ ಕೃತ್ಯವು ಭಾರತ ಮತ್ತು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನವಾಗಿದೆ. ಇದು ದೇಶದ್ರೋಹ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ’: ಅಂತರ್‌ಧರ್ಮೀಯ ಮದುವೆ ಎತ್ತಿ ಹಿಡಿದ ಅಲಹಾಬಾದ್ ಹೈಕೋರ್ಟ್

“ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ‌ ವಿನ್ಸೆಂಟ್‌ ಕ್ಸೇವಿಯರ್‌ನ ಖಾತೆಗಳನ್ನು ಬ್ಯಾನ್‌ ಮಾಡಬೇಕು. ಭಾರತ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ದೀಪಕ್‌‌ ಮನವಿ ಮಾಡಿದ್ದಾರೆ. ಈ ಕುರಿತು ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ: ಮೋದಿಯೊಂದಿಗೆ ಮಾತನಾಡಿ: ಬ್ರಿಟನ್‌ ಪ್ರಧಾನಿಗೆ ಪತ್ರಬರೆದ ಅಲ್ಲಿನ 100 ಸಂಸದರು

ಈ ಕುರಿತು ಟ್ವೀಟ್‌ ಮಾಡಿರುವ ಭಾರತೀಯ ಮೂಲದ, ವರ್ಜೀನಿಯಾದಲ್ಲಿ ವಾಸವಾಗಿರುವ ಟೆಕ್ಕಿ ವಿನ್ಸೆಂಟ್‌ ಕ್ಸೇವಿಯರ್‌, “ಅಮೆರಿಕದ ದೇಶಭಕ್ತರು- ವಿಯೆಟ್ನಾಂನವರು, ಭಾರತೀಯರು, ಕೊರಿಯನ್ನರು, ಇರಾನಿಯನ್ನರು, ಇನ್ನೂ ಹಲವು ದೇಶಗಳ ವಿವಿಧ ಜನಾಂಗಗಳ ಜನರು ಅಮೆರಿಕ ಚುನಾವಣೆಯಲ್ಲಿ ನಡೆದಿರುವ ಅಕ್ರಮದ ವಿರುದ್ಧ ಮೆರವಣಿಗೆ ನಡೆಸಿ, ಟ್ರಂಪ್‌ಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಹೋರಾಡುತ್ತಿರುವ ಪ್ರತಿಭಟನಾಕಾರರು” ಎಂದು ಬರೆದುಕೊಂಡು ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಅಮೆರಿಕದ ಚುನಾವಣೆ ಮುಗಿದು, ಜೋ ಬೈಡೆನ್‌ ಗೆಲುವು ಸಾಧಿಸಿದ್ದರೂ ಸಹ ಡೊನಾಲ್ಡ್‌ ಟ್ರಂಪ್‌ ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಮೊದಲಿನಿಂದಲೂ ಆರೋಪಿಸುತ್ತಲೇ ಇದ್ದಾರೆ. ಇದರ ಭಾಗವಾಗಿ ಟ್ರಂಪ್‌ ಬೆಂಬಲಿಗರು ಇತ್ತೀಚೆಗೆ ಶ್ವೇತ ಭವನಕ್ಕೆ ಮುತ್ತಿಗೆ ಹಾಕಿದ್ದರು. ಇಲ್ಲಿ ಭಾರತದ ಧ್ವಜವನ್ನೂ ಬಳಸಲಾಗಿತ್ತು. ಇದಕ್ಕೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಟ್ರಂಪ್‌ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಅವರ ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆಗಳನ್ನು ಬ್ಯಾನ್‌ ಮಾಡಲಾಗಿದೆ.


ಇದನ್ನೂ ಓದಿ: ಟ್ರಂಪ್‌ ಟ್ವಿಟರ್‌ ಖಾತೆ ಬ್ಯಾನ್: ಭಾರತದಲ್ಲಿ‌ ಬೆದರಿದ BJP ನಾಯಕರ ಪ್ರತಿಕ್ರಿಯೆ ಏನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...