Homeಮುಖಪುಟಮೋದಿಯೊಂದಿಗೆ ಮಾತನಾಡಿ: ಬ್ರಿಟನ್‌ ಪ್ರಧಾನಿಗೆ ಪತ್ರಬರೆದ ಅಲ್ಲಿನ 100 ಸಂಸದರು

ಮೋದಿಯೊಂದಿಗೆ ಮಾತನಾಡಿ: ಬ್ರಿಟನ್‌ ಪ್ರಧಾನಿಗೆ ಪತ್ರಬರೆದ ಅಲ್ಲಿನ 100 ಸಂಸದರು

"ಭಾರತದಲ್ಲಿ ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಅಶ್ರುವಾಯು, ಜಲಫಿರಂಗಿಗಳನ್ನು ವಿವೇಚನಾರಹಿತವಾಗಿ ಬಳಸುತ್ತಿರುವುದನ್ನು ಕಂಡು ಇಲ್ಲಿನ ವಿವಿಧ ಕ್ಷೇತ್ರಗಳ ಸಂಸದರು ಆಘಾತಗೊಂಡಿದ್ದಾರೆ"

- Advertisement -
- Advertisement -

ಬ್ರಿಟನ್‌ನ 100 ಕ್ಕೂ ಹೆಚ್ಚು ಬ್ರಿಟಿಷ್ ಸಂಸತ್ ಸದಸ್ಯರು ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಪತ್ರ ಬರೆದಿದ್ದು, ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಿಕ್ಕಟ್ಟನ್ನು ಪರಿಹರಿಸಲು ಭಾರತದ ಪ್ರಧಾನಿ ಮೋದಿಯೊಂದಿಗೆ ಮಾತನಾಡುವಂತೆ ಒತ್ತಾಯಿಸಿದ್ದಾರೆ.

ಈ ಪತ್ರವನ್ನು ಜನವರಿ 5 ರಂದು ಸ್ಲಫ್‌ನ ಸಂಸತ್‌ ಸದಸ್ಯರಾದ ಟಾನ್ ದೇಶಿ ಪ್ರಧಾನಿ ಬೋರಿಸ್‌ ಜಾನ್ಸನ್‌ಗೆ  ಬರೆದಿದ್ದು, “ಭಾರತದಲ್ಲಿ ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಅಶ್ರುವಾಯು, ಜಲಫಿರಂಗಿಗಳನ್ನು ವಿವೇಚನಾರಹಿತವಾಗಿ ಬಳಸುತ್ತಿರುವುದನ್ನು ಕಂಡು ಇಲ್ಲಿನ ವಿವಿಧ ಕ್ಷೇತ್ರಗಳ ಸಂಸದರು (ವಿಶೇಷವಾಗಿ ಪಂಜಾಬ್‌ ಮತ್ತು ಸಿಖ್‌ ಹಿನ್ನೆಲೆಯುಳ್ಳ) ಆಘಾತಗೊಂಡಿದ್ದಾರೆ. ಭಾರತದಲ್ಲಿ ಕೃಷಿ ಭೂಮಿಯನ್ನು ಹೊಂದಿರುವವರೊಂದಿಗೆ ಸಂಬಂಧ ಹೊಂದಿರುವ ಪಂಜಾಬ್‌ ಮತ್ತು ಸಿಖ್‌ ಹಿನ್ನೆಲೆಯುಳ್ಳವರು ಬ್ರಿಟನ್‌ನಾದ್ಯಂತ ಜಾಗತಿಕ ಪ್ರತಿಭಟನೆಯಲ್ಲಿ ತೊಡಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಇದನ್ನೂ ಓದಿ: ಭಾರತದ ರೈತರ ಬೆಂಬಲಕ್ಕೆ ನಿಂತ ಸಿಖ್-ಅಮೆರಿಕನ್ನರಿಂದ ಪ್ರತಿಭಟನಾ ರ್‍ಯಾಲಿ

“ಜನವರಿಯಲ್ಲಿ ನೀವು ಭಾರತಕ್ಕೆ ನೀಡಬೇಕಿದ್ದ ಭೇಟಿ ರದ್ದಾಗಿದೆ. ಆದರೆ ಶೀಘ್ರದಲ್ಲೇ ನೀವು ಭಾರತದ ಪ್ರತಿನಿಧಿಯನ್ನು ಭೇಟಿಯಾಗಲಿದ್ದೀರಿ. ಈ ಪ್ರತಿಭಟನೆಯ ವಿಷಯವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಆತಂಕಗಳನ್ನು ಭಾರತದ ಪ್ರಧಾನಿಗೆ ತಲುಪಿಸುತ್ತೀರಿ ಎನ್ನುವ ಭರವಸೆಯನ್ನು ನೀಡುತ್ತೀರಾ? ಪ್ರಸ್ತುತ ಬಿಕ್ಕಟ್ಟಿನ ಪರಿಹಾರಕ್ಕಾಗಿ ಮತ್ತು ಪ್ರಜಾಪ್ರಭುತ್ವದ ಮಾನವ ಹಕ್ಕುಗಳಿಗಾಗಿ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗಾಗಿ ನೀವು ತ್ವರಿತವಾಗಿ ಕ್ರಮಕೈಗೊಳ್ಳುತ್ತೀರಾ? ನಿಮ್ಮ ಸಮಯೋಚಿತ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ” ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆ ಅಮೆರಿಕದ ಸಂಸದರು ಅಲ್ಲಿನ ರಾಯಾಭಾರಿ ಮೈಕ್‌ ಪೊಂಪಿಯೋ ಅವರಿಗೆ ಪತ್ರ ಬರೆದು ಭಾರತದೊಟ್ಟಿಗೆ ಈ ರೈತರ ಹೋರಾಟದ ಕುರಿತು ಮಾತನಾಡುವಂತೆ ಒತ್ತಾಯಿಸಿದ್ದರು.

ಇನ್ನು ಭಾರತದಲ್ಲಿನ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಜಗತ್ತಿನಾದ್ಯಂತ ಇರುವ ಅನಿವಾಸಿ ಭಾರತೀಯರು ಪ್ರತಿಭಟನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ

ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರೈತರು ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ 8 ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ ಅವುಗಳೆಲ್ಲವೂ ವಿಫಲವಾಗಿವೆ.

ಶುಕ್ರವಾರ 8ನೇ ಸುತ್ತಿನ ಮಾತುಕತೆ ನಡೆದಿದ್ದು ಕೇಂದ್ರ ಸರ್ಕಾರದ ಪರವಾಗಿ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪಿಯೂಶ್ ಗೋಯಲ್ ಮತ್ತು ಸೋಮ್‌ಪ್ರಕಾಶ್‌ ಭಾಗವಹಿಸಿದ್ದರು. 40 ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದು, ಇಂದು ಸಹ ಸಭೆ ಯಾವುದೇ ತಾರ್ಕಿಕ ತೀರ್ಮಾನಗಳಿಗೆ ಬಂದಿಲ್ಲ. ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಿಲ್ಲವೆಂದು ಹಠ ಹಿಡಿದರೆ, ಹೋರಾಟ ನಿಲ್ಲಿಸುವುದಿಲ್ಲವೆಂದು ರೈತರು ಪಟ್ಟು ಹಿಡಿದಿದ್ದಾರೆ. ಹಾಗಾಗಿ ಜನವರಿ 15ಕ್ಕೆ ಮುಂದಿನ ಸಭೆ ನಿಗಧಿಗೊಳಿಸಲಾಗಿದೆ.


ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿ: ದಿಟ್ಟ ರೈತ ಹೋರಾಟದ ಗಮನಸೆಳೆದ 10 ಫೋಟೊಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...