Homeಅಂತರಾಷ್ಟ್ರೀಯಭಾರತದ ರೈತರ ಬೆಂಬಲಕ್ಕೆ ನಿಂತ ಸಿಖ್-ಅಮೆರಿಕನ್ನರಿಂದ ಪ್ರತಿಭಟನಾ ರ್‍ಯಾಲಿ

ಭಾರತದ ರೈತರ ಬೆಂಬಲಕ್ಕೆ ನಿಂತ ಸಿಖ್-ಅಮೆರಿಕನ್ನರಿಂದ ಪ್ರತಿಭಟನಾ ರ್‍ಯಾಲಿ

ರೈತರಿಲ್ಲದೆ, ಆಹಾರವಿಲ್ಲ. ಕೃಷಿ ಇಲ್ಲದೆ, ಪಂಜಾಬ್‌ನಲ್ಲಿ ಲಕ್ಷಾಂತರ ಜನರಿಗೆ ಜೀವನೋಪಾಯವಿಲ್ಲ, ಅವರು ಹಲವು ಪೀಳಿಗೆಯಿಂದ ಆದಾಯದ ಮೂಲವಾಗಿ ಕೃಷಿಯನ್ನು ಅವಲಂಬಿಸಿದ್ದಾರೆ

- Advertisement -
- Advertisement -

ದೇಶದಲ್ಲಿ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ರೈತರನ್ನು ಬೆಂಬಲಿಸಿ ನೂರಾರು ಸಿಖ್-ಅಮೆರಿಕನ್ನರು ಅಮೆರಿಕದಾದ್ಯಂತ ಹಲವಾರು ನಗರಗಳಲ್ಲಿ ಶಾಂತಿಯುತ ಪ್ರತಿಭಟನಾ ರ್‍ಯಾಲಿಗಳನ್ನು ನಡೆಸಿದ್ದಾರೆ.

ಕ್ಯಾಲಿಫೋರ್ನಿಯಾದ ವಿವಿಧ ಭಾಗಗಳಿಂದ ಬಂದಿದ್ದ ಪ್ರತಿಭಟನಾಕಾರರ ದಂಡು ಬೇ ಸೇತುವೆ ಮೇಲೆ ಟ್ರಾಫಿಕ್ ಜಾಮ್‌ಗೆ ಕಾರಣವಾಗಿತ್ತು. ಪ್ರತಿಭಟನಾಕಾರರು ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ರಾಯಭಾರಿ ಕಚೇರಿ ಕಡೆಗೆ ಸಾಗುತ್ತಿದ್ದರು. ಇತ್ತ ನೂರಾರು ಜನರು ಡೌನ್‌ಟೌನ್ ಇಂಡಿಯಾನಾಪೊಲಿಸ್‌ನಲ್ಲಿ ಜಮಾಯಿಸಿದ್ದರು.

ಎರಡೂ ಸ್ಥಳಗಳಲ್ಲಿ ಪ್ರತಿಭಟನಾಕಾರರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಈ ಕಾನೂನುಗಳು ಭಾರತೀಯ ರೈತರನ್ನು ಬಡತನದತ್ತ ತಳ್ಳುತ್ತವೆ ಮತ್ತು ಕಾರ್ಪೊರೇಟ್ ಕ್ಷೇತ್ರಗಳಿಗೆ ಏಕಸ್ವಾಮ್ಯವನ್ನು ನೀಡುತ್ತದೆ ಎಂದು ವಾದಿಸಿದ್ದಾರೆ.

ಇದನ್ನೂ ಓದಿ: ರೈತರನ್ನು ರಾಷ್ಟ್ರ ವಿರೋಧಿಗಳಂತೆ ಬಿಂಬಿಸಬೇಡಿ: ಮಾಧ್ಯಮಗಳಿಗೆ ಎಡಿಟರ್ಸ್ ಗಿಲ್ಡ್ ಸಲಹೆ

“ರೈತರು ಯಾವುದೇ ರಾಷ್ಟ್ರದ ಆತ್ಮ. ನಾವು ನಮ್ಮ ಆತ್ಮವನ್ನು ರಕ್ಷಿಸಬೇಕು. ಯುಎಸ್ ಮತ್ತು ಕೆನಡಾದ ಅನೇಕ ನಗರಗಳು ಒಟ್ಟಾಗಿ ಭಾರತದ ಕೃಷಿ ಮಾರುಕಟ್ಟೆಯನ್ನು ಖಾಸಗಿ ವಲಯಕ್ಕೆ ತೆರೆಯುವ ಮಸೂದೆಗಳನ್ನು ವಾಪಸ್ ಪಡೆಯಲು ಒಗ್ಗೂಡಿದ್ದಾರೆ. ಇದರಿಂದ ಸ್ವತಂತ್ರ ಕೃಷಿ ಸಮುದಾಯಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಬೆಳೆಗಳ ಮಾರುಕಟ್ಟೆ ಮೌಲ್ಯವನ್ನು ದುರ್ಬಲಗೊಳಿಸಲಾಗುತ್ತದೆ “ಎಂದು ಇಂಡಿಯಾನದ ದ ಗುರಿಂದರ್ ಸಿಂಗ್ ಖಲ್ಸಾ ಹೇಳಿದ್ದಾರೆ.

ಇಂಡಿಯಾನಾಪೊಲಿಸ್‌ನ ಡೌನ್‌ಟೌನ್‌ನಲ್ಲಿ ನಡೆದ ರ್‍ಯಾಲಿಯ ಸಂಘಟಕರಲ್ಲಿ ಖಲ್ಸಾ ಕೂಡ ಒಬ್ಬರು. ಪತ್ರತಿಭಟನೆಯಲ್ಲಿ ಇಂಡಿಯಾನಾದ ವಿವಿಧ ಭಾಗಗಳಿಂದ ಸುಮಾರು 500 ಸಿಖ್ ಅಮೆರಿಕನ್ನರು ಭಾಗವಹಿಸಿದ್ದರು.

ಶುಕ್ರವಾರ(ಡಿ.4) ರಂದು ಚಿಕಾಗೋದಲ್ಲಿ ಸಿಖ್-ಅಮೆರಿಕನ್ನರ ಸಭೆ ಮತ್ತು ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮುಂದೆ ಪ್ರತಿಭಟನಾ ರ್‍ಯಾಲಿ ನಡೆದಿತ್ತು.

ಬೇ ಏರಿಯಾದಲ್ಲಿ ಭಾನುವಾರ ನಡೆದ ಪ್ರತಿಭಟನೆ, ನ್ಯೂಯಾರ್ಕ್, ಹೂಸ್ಟನ್, ಮಿಚಿಗನ್, ಚಿಕಾಗೊ ಮತ್ತು ವಾಷಿಂಗ್ಟನ್ ಡಿ.ಸಿ ಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳು ಒಗ್ಗಟ್ಟಿನ ಪ್ರದರ್ಶನವಾಗಿದೆ ಎಂದು ಸಂಘಟಕರು ಹೇಳಿದ್ದಾರೆ. ಏಕೆಂದರೆ ವಿಶ್ವದಾದ್ಯಂತ ನೆಲೆಸಿರುವ ಸಿಖ್ಖರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಒತ್ತಾಯಿಸುತ್ತಿದ್ದಾರೆ ಎಂದಿದ್ದಾರೆ.

“ರೈತರಿಲ್ಲದೆ, ಆಹಾರವಿಲ್ಲ. ಕೃಷಿ ಇಲ್ಲದೆ, ಪಂಜಾಬ್‌ನಲ್ಲಿ ಲಕ್ಷಾಂತರ ಜನರಿಗೆ ಜೀವನೋಪಾಯವಿಲ್ಲ, ಅವರು ಹಲವು ಪೀಳಿಗೆಯಿಂದ ಆದಾಯದ ಮೂಲವಾಗಿ ಕೃಷಿಯನ್ನು ಅವಲಂಬಿಸಿದ್ದಾರೆ ಎಂದಿದ್ದಾರೆ.

ಭಾರತದಲ್ಲಿ ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಲು ಡಿಸೆಂಬರ್ 8 ರ ಮಂಗಳವಾರ ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ.


ಇದನ್ನೂ ಓದಿ: ‘ರೈತರಿಗಾಗಿ ಗಲ್ಲಿಗೇರಲು ಸಿದ್ಧ- ತಾಕತ್ತಿದ್ದರೆ ಬಂಧಿಸಿ’: ನಿತೀಶ್‌ಗೆ ತೇಜಸ್ವಿ ಯಾದವ್ ಸವಾಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ದೇಶದ ಶ್ರೀಮಂತ ಉದ್ಯಮಿಗಳ ‘ಸಾಧನ’: ರಾಹುಲ್ ಗಾಂಧಿ

0
ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಕೆಲವೇಕೆಲವು ಶ್ರೀಮಂತ ಉದ್ಯಮಿಗಳ ಸಾಧನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ನೈಜ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯುವುದು, ಭಾರತದ...