Homeಮುಖಪುಟಇಶ್ರತ್ ಜಹಾನ್ ನಕಲಿ ಎನ್ಕೌಂಟರ್: 3 ಪೊಲೀಸರನ್ನು ಬಿಡುಗಡೆ ಮಾಡಿದ ಸಿಬಿಐ ಕೋರ್ಟ್

ಇಶ್ರತ್ ಜಹಾನ್ ನಕಲಿ ಎನ್ಕೌಂಟರ್: 3 ಪೊಲೀಸರನ್ನು ಬಿಡುಗಡೆ ಮಾಡಿದ ಸಿಬಿಐ ಕೋರ್ಟ್

- Advertisement -
- Advertisement -

2004 ರ ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಪೊಲೀಸ್ ಅಧಿಕಾರಿಗಳಾದ ಜಿ.ಎಲ್. ಸಿಂಘಾಲ್, ತರುಣ್ ಬರೋಟ್ ಮತ್ತು ಅನಾಜು ಚೌಧರಿ ಅವರನ್ನು ಬಿಡುಗಡೆ ಮಾಡಿದೆ.

ವಿಶೇಷ ಸಿಬಿಐ ನ್ಯಾಯಾಧೀಶ ವಿ.ಆರ್. ರಾವಲ್ ಅವರು ಸಿಂಘಾಲ್, ಬರೋಟ್ (ಈಗ ನಿವೃತ್ತರಾಗಿದ್ದಾರೆ) ಮತ್ತು ಚೌಧರಿ ಅವರು ಸಲ್ಲಿಸಿದ್ದ ಬಿಡುಗಡೆ ಅರ್ಜಿಗಳಿಗೆ ಅನುಮತಿ ನೀಡಿದರು.

ಮೂವರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ ನಿರಾಕರಿಸಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಮಾರ್ಚ್ 20 ರಂದು ನ್ಯಾಯಾಲಯಕ್ಕೆ ತಿಳಿಸಿದೆ.

ಇದನ್ನೂ ಓದಿ: ಕೋರ್ಟ್‌ಗೆ ಹಾಜರಾದ ಸಂತ್ರಸ್ತ ಯುವತಿ: ಅರೆಸ್ಟ್ ಆಗುವರೆ ರಮೇಶ್ ಜಾರಕಿಹೊಳಿ?

ನ್ಯಾಯಾಲಯವು ಅಕ್ಟೋಬರ್ 2020 ರ ತನ್ನ ಆದೇಶದಲ್ಲಿ, “ಮೂವರು ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ” ಎಂದು ಹೇಳಿತ್ತು.

ಮುಂಬೈ ಬಳಿಯ ಮುಂಬ್ರಾ ಮೂಲದ ಇಶ್ರತ್ ಜಹಾನ್ ಎಂಬ 19 ವರ್ಷದ ಯುವತಿಯನ್ನು 2004 ರ ಜೂನ್ 15 ರಂದು ಅಹಮದಾಬಾದ್ ಬಳಿ ನಡೆದ ‘ಎನ್‌ಕೌಂಟರ್’ನಲ್ಲಿ ಗುಜರಾತ್ ಪೊಲೀಸರು ಜಾವೇದ್ ಶೇಖ್ ಅಲಿಯಾಸ್ ಪ್ರಣೇಶ್ ಪಿಳ್ಳೈ, ಅಮ್ಜಾದಾಲಿ ಅಕ್ಬರಲಿ ರಾಣಾ ಮತ್ತು ಜೀಶನ್ ಜೋಹರ್ ಅವರೊಂದಿಗೆ ಹತ್ಯೆ ಮಾಡಿದ್ದರು.

“ಈ ನಾಲ್ವರು ಭಯೋತ್ಪಾದಕರಾಗಿದ್ದು, ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಯೋಜಿಸುತ್ತಿದ್ದರು” ಎಂದು ಪೊಲೀಸರು ಹೇಳಿದ್ದಾರೆ.

ಆದರೆ, ಹೈಕೋರ್ಟ್‌ನಿಂದ ನೇಮಿಸಲ್ಪಟ್ಟ ವಿಶೇಷ ತನಿಖಾ ತಂಡವು ಎನ್‌ಕೌಂಟರ್ ನಕಲಿ ಎಂದು ತೀರ್ಮಾನಿಸಿತ್ತು. ಆದ್ದರಿಂದ ಸಿಬಿಐ ವಿವಿಧ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ಇದನ್ನೂ ಓದಿ: ಪ್ರಧಾನಿಯ ದಕ್ಷಿಣ ಭಾರತ ಭೇಟಿ: ‘ಗೋ ಬ್ಯಾಕ್ ಫ್ಯಾಸಿಸ್ಟ್‌ ಮೋದಿ’ ಟ್ವಿಟರ್‌ ಟ್ರೆಂಡ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತ್ತೆ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

ಮತ್ತೇ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

0
ಜೂನ್ 10 ರಿಂದ ಗೋಧಿಗೆ ಬೋನಸ್ ಮತ್ತು ಭತ್ತ ಬಿತ್ತನೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಒತ್ತಾಯಿಸಿರುವ ಪಂಜಾಬ್‌ನ ರೈತರು ಮೇ 17 ರ ಮಂಗಳವಾರದಂದು ಚಂಡೀಗಢ...