Homeರಾಜಕೀಯಉಡುಪಿ ರಣರಂಗದಲ್ಲಿ ಹಿಮ್ಮೆಟ್ಟುತ್ತಿದೆ ಚೆಡ್ಡಿ ಪಡೆ!!

ಉಡುಪಿ ರಣರಂಗದಲ್ಲಿ ಹಿಮ್ಮೆಟ್ಟುತ್ತಿದೆ ಚೆಡ್ಡಿ ಪಡೆ!!

- Advertisement -
- Advertisement -
  • ನಹುಷ |

ಉಡುಪಿ ಜಿಲ್ಲೆಯ ಐದು ಅಸೆಂಬ್ಲಿ ಕ್ಷೇತ್ರದ ಪೈಕಿ ಕಾರ್ಕಳದಲ್ಲಿ ಮಾತ್ರ ಬಿಜೆಪಿ 2013ರ ಎಲೆಕ್ಷನ್‍ನಲ್ಲಿ ಗೆದ್ದಿತ್ತು. ಕುಂದಾಪುರದಲ್ಲಿ ಬಿಜೆಪಿಯ ಬಂಡಲ್ ಬಂಡುಕೋರ ಚೆಡ್ಡಿ ರಿಂಗ್‍ಮಾಸ್ಟರ್ ಕಲ್ಲಡ್ಕ ಭಟ್ಟನಿಗೆ ಸೆಡ್ಡು ಹೊಡೆದು ಜಯಿಸಿದ್ದ. ಈ ಬಾರಿ ಸಂಘಪರಿವಾರ ಹಿಂದಿನದಕ್ಕಿಂತಲೂ ಹೆಚ್ಚು ಕಳೆಗುಂದಿದೆ. ಒಳಜಗಳ, ಪಕ್ಷಾಂತರಿಗಳ ಪರಾಕ್ರಮ ಜೋರಾಗಿದೆ. ಆರ್‍ಎಸ್‍ಎಸ್ ಯಜಮಾನಿಕೆ ಖದರು ಕಳಕೊಂಡಿದೆ. ಬಿಜೆಪಿಯ ಆಸ್ಥಾನ ಗುರುವರ್ಯ ಪೇಜಾವರ ಸ್ವಾಮಿಯೇ ತನ್ನ ಕಳಂಕಿತ, ಕೊಳಕು ಶಿಷ್ಯನೊಬ್ಬನಿಗೆ ಟಿಕೆಟ್ ಕೊಡಿಸಲು ಉಪವಾಸ ಸತ್ಯಾಗ್ರಹದ ಬ್ಲ್ಯಾಕ್‍ಮೇಲ್ ಮಾಡಬೇಕಾಗಿ ಬಂತು! ಟಿಕೆಟ್ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ, ಜಾತಿಸಮೀಕರಣವನ್ನೂ ಸಮತೋಲನ ಮಾಡಲಾಗದೆ ಬಿಜೆಪಿ ಬಾಸ್‍ಗಳು ಎಡವಿ ಬಿದ್ದಿದ್ದಾರೆ.

ಸಂಘ ಸರದಾರರು ಹಿಂದೂತ್ವದ ಹೋರಾಟಕ್ಕೆ ಕಾಲಾಳುಗಳಂತೆ ಬಳಸಿಕೊಂಡಿದ್ದ ಹಿಂದುಳಿದ ವರ್ಗದ ಬಿಲ್ಲವರಿಗೆ ಅವಕಾಶ ಕೊಡದೆ ಮೋಸ-ವಂಚನೆ ಮಾಡಿದ್ದಾರೆ. ಪ್ರಬಲ ಬಂಟ ಸಮುದಾಯದ ಹಿಡಿತಕ್ಕೆ ಸಿಲುಕಿರುವ ಬಿಜೆಪಿ ಟಿಕೆಟ್ ಕಮಿಟಿ ಕಿಂಗ್‍ಗಳು ಹಲವು ಹಿಂದುಳಿದ ಜಾತಿಯವರಿಗೆ ಘೋರ ಅನ್ಯಾಯ ಮಾಡಿದ್ದಾರೆ. ಅಮಾಯಕ ಬಿಲ್ಲವರ ಹುಡುಗರಿಗೆ ಹಿಂದೂತ್ವದ ಅಮಲೇರಿಸಿ ಅನೈತಿಕ ಪೊಲೀಸರಿಗೆ ದಬ್ಬಿ ಬಲಿ ಹಾಕಿದ ಸಂಘಿ ಸೈತಾನರ ಅಸಲಿ ಅವತಾರ ಆ ಸಮುದಾಯಕ್ಕೆ ಅರ್ಥವಾಗಿದೆ. ಮತ್ತೊಂದೆಡೆ ಬಂಟರಿಗೆ ಹೆಚ್ಚು ಟಿಕೆಟ್ ಕೊಟ್ಟರೂ ಬಿಜೆಪಿ ಭೂಪರು ಅಭ್ಯರ್ಥಿ ಆಯ್ಕೆಯಲ್ಲಿ ತಪ್ಪಿದ್ದಾರೆ. ಹೀಗೆ ಬಂಟರೂ ಬಿಜೆಪಿ ಮೇಲೆ ಬೇಸರಗೊಂಡಿದ್ದಾರೆ. ಮೀನುಗಾರರಿಗೆ ಬಿಜೆಪಿ ಸಹವಾಸ ಸಾಕಾಗಿದೆ. ಇದೆಲ್ಲ ಬಿಜೆಪಿಯವರ ಗೆಲುವಿನ ಗಣಿತವನ್ನು ಬದಲಾಯಿಸಿಬಿಟ್ಟಿದೆ.

ಕೇಸರಿ ಪಾಳೆಯದ ಈ ಗೊಂದಲ, ಗಡಿಬಿಡಿಯೇ ಎದುರಾಳಿ ಕಾಂಗ್ರೆಸ್‍ನ ಶಕ್ತಿ ಹೆಚ್ಚಿಸಿದೆ. ಕಾಂಗ್ರೆಸ್ ಈ ಬಾರಿ ಪೈಲ್ವಾನ್‍ಗಳ ಆಯ್ಕೆಯಿಂದ ಹಿಡಿದು ಎದುರಾಳಿಗೆ ಪಟ್ಟು ಹಾಕುವ ತನಕ ವ್ಯವಸ್ಥಿತ ಯುದ್ಧೋಪಾಯ ಹೆಣೆದೇ ರಣರಂಗಕ್ಕೆ ಇಳಿದಿದೆ. ಮಜಾ ಎಂದರೆ, ಕಾಂಗ್ರೆಸ್‍ನ ಪರಂಪರಾಗತ ಭಿನ್ನಮತದ ಬೇನೆ ಬಿಜೆಪಿಗೆ ಶಿಫ್ಟ್ ಆಗಿದೆ.

ಬೈಂದೂರು

ಗೋಪಾಲ ಪೂಜಾರಿ

ಕಳೆದ ಸಲ ಮುಖಾಮುಖಿಯಾಗಿದ್ದ ಕಾಂಗ್ರೆಸ್‍ನ ಗೋಪಾಲ ಪೂಜಾರಿ ಮತ್ತು ಬಿಜೆಪಿಯ ಯಡ್ಡಿ ಹಿಂಬಾಲಕ ಸುಕುಮಾರ ಶೆಟ್ಟಿ ಈ ಬಾರಿಯೂ ಎದುರಾಳಿಗಳು. ಕಳೆದ ಬಾರಿ ಪೂಜಾರಿ 31,149 ಮತದ ಅಂತರದಿಂದ ಶಾಸಕರಾಗಿದ್ದರು. ಈ ಬಾರಿಯೂ ಪೂಜಾರಿಯೇ ಗೆಲ್ಲುವುದು ಗ್ಯಾರಂಟಿಯಾದರೂ ಗೆಲುವಿನ ಅಂತರ ಅಷ್ಟಾಗಲಿಕ್ಕಿಲ್ಲ. ಪೂಜಾರಿಯ ಗೆಲುವಿಗೆ ಎರಡು ಕಾರಣಗಳಿವೆ. ಒಂದು, ಪೂಜಾರಿ ಕ್ಷೇತ್ರದ ಸಮಷ್ಟಿ ಕೆಲಸ ಮಾಡಿರುವುದು ಮತ್ತು ಅಸಹಾಯಕರಿಗೆ ಸ್ಪಂದಿಸುವ ಆತನ ಸ್ವಭಾವ. ಇನ್ನೊಂದು ಕಾರಣ, ಎದುರಾಳಿ ಸುಕುಮಾರ ಶೆಟ್ಟಿಯ ದರ್ಪ-ದುರಹಂಕಾರ ಮತ್ತು ಜನಸಾಮಾನ್ಯರೊಂದಿಗೆ ಬೆರೆಯದಿರುವ ದುರ್ಗುಣ. ಬೈಂದೂರು ಬಿಜೆಪಿಯಲ್ಲಿ ಭರ್ಜರಿ ಭಿನ್ನಮತ ಭುಗಿಲೆದ್ದಿದೆ. ಕಾಂಗ್ರೆಸ್‍ನಿಂದ ಬಿಜೆಪಿಗೆ ನೆಗೆದು ಬೈಂದೂರು ಟಿಕೆಟ್‍ಗಾಗಿ ಕಸರತ್ತು ಮಾಡಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸ್ವಪಕ್ಷದ ಸುಕುಮಾರ ಶೆಟ್ಟಿ ಗೆಲ್ಲಬಾರದೆಂದೇ ಬಯಸಿದ್ದಾರೆ.

ಸುಕುಮಾರ ಶೆಟ್ಟಿ

ನಾಲ್ಕು ಬಾರಿ ಗೆದ್ದಿರುವ ಗೋಪಾಲ ಪೂಜಾರಿ ಒಂದಿಷ್ಟು ಅಭಿವೃದ್ಧಿ ಕಾಮಗಾರಿ ಮಾಡಿ, ಮುಕ್ಕಾಗಿದ್ದ ಇಮೇಜು ರಿಪೇರಿ ಮಾಡಿಕೊಂಡಿದ್ದಾರೆ. ಜನಸಾಮಾನ್ಯರ ಕೈಗೆ ಸುಲಭವಾಗಿ ಎಟಕುವ ಪೂಜಾರಿ ಕ್ಷೇತ್ರದ ಬಹುಸಂಖ್ಯಾತ ಬಿಲ್ಲವರ ಮನೆ ಮಗ! ಮೀನುಗಾರರ-ಮುಸ್ಲಿಮ್ ಮತದಾರರೂ ಪೂಜಾರಿಯೇ ಸುಕುಮಾರ ಶೆಟ್ಟಿಗಿಂತ ಬೆಟರ್ ಅನ್ನುತ್ತಾರೆ.

ಕುಂದಾಪುರ

ಹಾಲಾಡಿ ಶೆಟ್ಟಿ

‘‘ನಂಗೆ ಮಂತ್ರಿ ಮಾಡ್ತೆ ಹೇಳಿ ಮೋಸ ಮಾಡಿದ್ರು ಮಾರಾಯ್ರೆ… ಆ ಕಲ್ಲಡ್ಕ ಭಟ್ಟನೇ ಅಡ್ಡಗಾಲು ಹಾಕಿದ್ದು… ಎಂಥ ಅನ್ಯಾಯ ಗೊತ್ತಾ…?’’ ಎಂದು ಬಾಯ್ಬಾಯಿ ಬಡಿದುಕೊಳ್ಳುತ್ತ ಬಿಜೆಪಿಯಿಂದ ಹೊರಬಿದ್ದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇತರನಾಗಿ ಸ್ಪರ್ಧಿಸಿ ಕಳೆದ ಬಾರಿ ಶಾಸಕನಾಗಿದ್ದರು. ಈ ಅಖಂಡ ಬ್ರಹ್ಮಚಾರಿಗೆ ಕುಂದಾಪುರದ ವಾಜಪೇಯಿ ಎಂಬ ಅಡ್ಡ ಹೆಸರೂ ಇದೆ. ಒಂಥರಾ ರಾಬಿನ್ ಹುಡ್ ಥರದವರು. ಜನರ ಬಳಕೆಯ ಮುಂದಾಳು ಎಂಬ ಹೆಗ್ಗಳಿಕೆಯಿದ್ದರೂ ಗಿಮಿಕ್ ವೀರನೆಂಬ ಇಮೇಜು ಇದೆ.

ಹಾಲಾಡಿ ಮೊದಲಿನ ಸಾಮಥ್ರ್ಯ, ಜನಪ್ರಿಯತೆ, ಸದ್ಭಾವನೆ ಉಳಿಸಿಕೊಂಡಿಲ್ಲ. ಬಿಜೆಪಿಯಲ್ಲಿ ದೊಡ್ಡದೊಂದು ಟೀಮು ಆತನ ವಿರುದ್ಧವಿದೆ. ಕಲ್ಲಡ್ಕ ಭಟ್ಟನ ಚೆಡ್ಡಿ ಪಡೆಗೆ ಹಾಲಾಡಿ ಕಂಡರಾಗದು. ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರಿರುವ ಜಯಪ್ರಕಾಶ್ ಹೆಗ್ಡೆ ಹಾಲಾಡಿಗೆ ಹತ್ತಿರದ ಸಂಬಂಧಿಯಾದರೂ ಹಾವು-ಮುಂಗುಸಿ. ಶೋಭಕ್ಕ-ಯಡ್ಡಿ ವಶೀಲಿಬಾಜಿಯಿಂದ ಬಿಜೆಪಿ ಸೇರಿದ ಹಾಲಾಡಿಗೆ ಟಿಕೆಟ್ ಪಡೆಯಲು ತಿಪ್ಪರಲಾಗ ಹಾಕಬೇಕಾಗಿ ಬಂತು. ಕಾಂಗ್ರೆಸ್ ಜೆಡಿಎಸ್‍ಗೆ ನೆಗೆಯುವ ಯೋಚನೆಗೂ ಬಿದ್ದಿದ್ದ ಹಾಲಾಡಿ ಬಿಜೆಪಿ ಟಿಕೆಟ್ ಪಡೆದರೂ ಪಾರ್ಟಿಯಲ್ಲಿ ಅಸ್ಪøಶ್ಯನೇ. ಈ ಸಲ ಆತನಿಗೆ ಭೂಗತ ಜಗತ್ತಿನ ನಂಟಿನ ರೌಡಿ ಇಮೇಜಿನ ರಾಕೇಶ್ ಮಲ್ಲಿ ಎದುರಾಳಿ. ಬಂಟ್ವಾಳ ಮೂಲದ ಮಲ್ಲಿ ಸ್ಥಳೀಯ ಕಾಂಗ್ರೆಸ್‍ನೊಳಗಿನ ನಿರ್ವಾತ ಬಳಸಿಕೊಂಡು ವಲಸೆ ಬಂದಿದ್ದಾನೆ.

ರಾಕೇಶ್ ಮಲ್ಲಿ

ಕಳೆದ ಆರೆಂಟು ತಿಂಗಳಿಂದಲೇ ಮಲ್ಲಿ ಕುಂದಾಪುರದ ಹಳ್ಳಿಗಳಲ್ಲಿ ತನ್ನ ಗನ್‍ಧಾರಿ ಬಾಡಿಗಾರ್ಡ್ ಸಮೇತ ಓಡಾಡುತ್ತಿದ್ದಾನೆ. ಮಲ್ಲಿಯ ರಕ್ತಚರಿತೆ ಕಾಂಗ್ರೆಸ್‍ಗೆ ಮೈನಸ್. ಆದರೂ ಮಲ್ಲಿ ಕುಂದಾಪುರದಲ್ಲಿ ಬೇರಂತೂ ಇಳಿಸಿದ್ದಾನೆ. ಕಾಂಗ್ರೆಸ್ ಗೆಲ್ಲಲಾರದಾದರು ಹಾಲಾಡಿ ಶೆಟ್ಟಿಯ ಗೆಲುವಿನ ಅಂತರ ಗಣನೀಯವಾಗಿ ಕುಗ್ಗಲಿದೆ.

ಕಲ್ಲಡ್ಕ ಭಟ್ಟನೊಂದಿಗಿನ ತವರಿನ ನಂಟು ಮಲ್ಲಿಗೆ ನೆರವಾಗಿದೆ. ಆರ್‍ಎಸ್‍ಎಸ್ ಆತನ ಪರವಾಗಿ ರಹಸ್ಯವಾಗಿ ಪ್ರಚಾರ ನಡೆಸಿದೆ. ಜೆಪಿ ಹೆಗ್ಡೆ, ಭಿನ್ನಮತೀಯ ಮೂಲ ಬಿಜೆಪಿಗರು ಹಾಲಾಡಿಗೆ ಮಾಜಿ ಮಾಡುವ ತಂತ್ರ ಹೆಣೆದಿದ್ದಾರೆ. ಕದನ ಕುತೂಹಲ ಏರ್ಪಟ್ಟಿದೆ!

ಉಡುಪಿ

ಪ್ರಮೋದ್ ಮದ್ವರಾಜ್

ಇದು ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರ. ಜಿಲ್ಲಾ ಮಂತ್ರಿ ಪ್ರಮೋದ್ ಮಧ್ವರಾಜ್ ಎಂಬ ಎಡಬಿಡಂಗಿ ಕೋಟ್ಯಾಧಿಪತಿ ಕಳೆದ ಆರೆಂಟು ತಿಂಗಳಿಂದ ಬಿಜೆಪಿಯತ್ತ ಕಣ್ಣು ಮಿಟುಕಿಸುತ್ತಲೇ ಇದ್ದರು. ಪ್ರಮೋದರ ಮೀನು ಎಣ್ಣೆ ಉದ್ಯಮ, ಪೆಟ್ರೋಲ್ ಬಂಕ್, ಬಹುಮಹಡಿ ವಸತಿ ಸಮುಚ್ಛಯ, ಸಿಂಡಿಕೇಟ್ ಬ್ಯಾಂಕಿಂದ ಎತ್ತಿದ ಕೋಟ್ಯಾಂತರ ರೂ. ಸಾಲದ ಒಳಮರ್ಮ ಪತ್ತೆ ಹಚ್ಚಿದ್ದ ಮೋದಿ-ಶಾ ಗ್ಯಾಂಗು ಆತನ ಬ್ಲ್ಯಾಕ್‍ಮೇಲ್ ಮಾಡುತ್ತ ಬಂದಿತ್ತು. ಕಂಗಾಲಾದ ಪ್ರಮೋದ್ ಬಿಜೆಪಿಗೆ ಹೋಗಲು ರೆಡಿಯಾಗಿದ್ದರು. ಆದರೆ ಸ್ಥಳೀಯ ಕೇಸರಿ-ಕಾವಿ ಪಡೆ ಆತನಿಗೆ ಗೇಟ್ ತೆರೆಯಲು ಒಪ್ಪದೇ ರಾದ್ಧಾಂತ ಎಬ್ಬಿಸಿ ಬಿಟ್ಟಿತ್ತು. ಉಡುಪಿ ಬಿಜೆಪಿಯಲ್ಲಿ ಪ್ರಮೋದ್‍ನ ಎದುರಿಸುವ ತಾಕತ್ತಿನ ಪುಢಾರಿ ಇಲ್ಲದಿದ್ದುದೇ ಚೆಡ್ಡಿ ದೊರೆಗಳನ್ನು ಪಕ್ಷಾಂತರ ಆಪರೇಷನ್‍ಗೆ ಪ್ರೇರೇಪಿಸಿತ್ತು.

ಪೊಲಿಟಿಕಲ್ ಸ್ವಾಮಿ ಖ್ಯಾತಿಯ ಪೇಜಾವರರೂ ಪ್ರಮೋದ್ ಬಿಜೆಪಿಗೆ ಬರದಂತೆ ನೋಡಿಕೊಂಡರು. ತಮ್ಮ ಅಚ್ಚುಮೆಚ್ಚಿನ ಶಿಷ್ಯ-ಮಾಜಿ ಶಾಸಕ ರಂಗೀಲಾ ರಘುಪತಿ ಭಟ್ಟನನ್ನೇ ಬಿಜೆಪಿ ಹುರಿಯಾಳಾಗಿಸುವ ಆಸೆ ಪೇಜಾವರರದಾಗಿತ್ತು. ಆದರೆ ಆರ್‍ಎಸ್‍ಎಸ್ ತಂಡಕ್ಕೆ ಕ್ಷೇತ್ರದಲ್ಲಿ ಹೆಣ್ಣುಬಾಕ ಬುದ್ಧಿಯಿಂದ ಹೆಸರು ಕೆಡಿಸಿಕೊಂಡಿರುವ ರಘುಪತಿಗೆ ಟಿಕೆಟ್ ಕೊಡುವ ಮನಸ್ಸು ಇರಲಿಲ್ಲ. ಒಂದು ಹಂತದಲ್ಲಿ ಪೇಜಾವರರು ಈ ರಘುಪತಿಗೆ ಅವಕಾಶ ಕೊಡದಿದ್ದರೆ ಬಿಜೆಪಿ ಆಫೀಸಿನ ಎದುರು ಉಪವಾಸ ಕೂರುವ ಬೆದರಿಕೆ ಸ್ವಾಮೀಜಿ ಹಾಕಿದ್ದರು. ಅಂತೂಇಂತೂ ರೌಡಿ ರಘುಪತಿ ಬಿಜೆಪಿ ಅಭ್ಯರ್ಥಿ; ಪ್ರಮೋದ್ ಕಾಂಗ್ರೆಸ್ ಹುರಿಯಾಳು. ಪ್ರೈಮರಿ-ಹೈಸ್ಕೂಲು ಮಟ್ಟದಲ್ಲಿ ಆತ್ಮೀಯ ದೋಸ್ತಿಗಳಾಗಿದ್ದವರು ಈಗ ಮುಖಾಮುಖಿ ಕಾಳಗಕ್ಕೆ ನಿಂತಿದ್ದಾರೆ.

ರಘುಪತಿ ಭಟ್

ಧಿಮಾಕಿನ ಸ್ವಭಾವ ಬಿಟ್ಟರೆ ಪ್ರಮೋದ್ ಅಭಿವೃದ್ಧಿ ಕೆಲಸಗಾರ; ಕಾರ್ಯಕರ್ತರನ್ನು ಸಂಭಾಳಿಸುವ ಕಲೆ ಗೊತ್ತಿಲ್ಲದ ಈತ ಹಣದಿಂದ ಎಲ್ಲವೂ ಸಾಧ್ಯವೆಂಬ ತೀರ್ಮಾನದ ತಿಕ್ಕಲು ಪುಢಾರಿ. ಐದು ವರ್ಷದಲ್ಲಿ ಅನೇಕ ಕಣ್ಣಿಗೆ ಕಾಣುವ ಕೆಲಸ-ಕಾಮಗಾರಿ ಮಾಡಿದ್ದಾರೆ. ಪ್ರಗತಿಯ ದಿಶೆಯಲ್ಲಿ ಉಡುಪಿ ಅಸೆಂಬ್ಲಿ ಕ್ಷೇತ್ರ ಇಡೀ ರಾಜ್ಯದಲ್ಲೇ ನಂಬರ್ ಒನ್ ಎಂಬ ಖ್ಯಾತಿ ಪಡೆದಿದೆ. ಹೀಗಾಗಿ ಪ್ರಮೋದ್ ಜನಮನ್ನಣೆ ಗಳಿಸಿದ್ದಾರೆ. ಸುಮಾರು 40 ಸಾವಿರ ಮತದಾರರಿರುವ ಮೊಗವೀರ (ಮೀನುಗಾರ) ಸಂಕುಲದ ಪ್ರಮೋದ್‍ಗೆ ಸರಿಸುಮಾರು ಅಷ್ಟಷ್ಟೇ ಇರುವ ಬಿಲ್ಲವ ಮತ್ತು ಬಂಟರು ಬೆಂಬಲಿಸುತ್ತಾರೆ. ಒಂಚೂರು ಚೆಡ್ಡಿ ಬುದ್ಧಿಯವನಾದರೂ ಕಾಂಗ್ರೆಸಿಗನೆಂಬ ಕಾರಣಕ್ಕೆ ಮುಸ್ಲಿಮ್-ಕ್ರಿಶ್ಚಿಯನ್ನರು ಓಟು ಕೊಡುತ್ತಾರೆ. ಕಳೆದ ಬಾರಿ 39,524 ಮತದಂತರದಿಂದ ಗೆದ್ದಿದ್ದ ಪ್ರಮೋದ್ ಈ ಬಾರಿಯೂ ಗೆಲ್ಲುತ್ತಾರಾದರೂ ಲೀಡ್ ಅಷ್ಟು ದೊಡ್ಡದಿರಲಾರದು.

ಬಿಜೆಪಿ ಕ್ಯಾಂಡಿಡೇಟ್ ರಘುಪತಿ 33,000 ಇರುವ ಬ್ರಾಹ್ಮಣ (ಮಾಧ್ವರು ಮತ್ತು ಕೊಂಕಣಿಗರು)ರ ಮತ ಬಾಚುತ್ತಾರೆ. ಬಿಲ್ಲವ, ಬಂಟರ ಕಡೆಯ ಸಣ್ಣ ಪಾಲೂ ಸಿಗಲಿದೆ. ಆದರೆ 1.5 ಲಕ್ಷದಷ್ಟಿರುವ ಮಹಿಳಾ ಮತದಾರರ ಒಂದೂ ಓಟು ಈತನಿಗೆ ಸಿಗಲಾರದೆಂದು ವ್ಯಾಖ್ಯಾನಿಸಲಾಗುತ್ತಿದೆ. ಇದಕ್ಕೆ ಆತನ ಹಗ್ಗ ಕಡಿಯುವ ಚಾಳಿಯ ಕರಾಳ ಇತಿಹಾಸವೇ ಕಾರಣ. ಭಟ್ಟನ ಹೆಂಡತಿಯ ಬಲವಂತದ ‘ಆತ್ಮ’ಹತ್ಯೆ, ಸಾಬಿ ಹುಡುಗಿ ಜತೆಗಿನ ಕೂಡಿಕೆ, ನೀಲಿ ಸಿಡಿ ನಟನೆ, ರೇವ್ ಪಾರ್ಟಿ ಪುರಾಣ, ಮರುಮದುವೆ, ರೆಸಾರ್ಟ್-ರಿಯಲ್ ಎಸ್ಟೇಟ್ ದಂಧೆ ದಗಲುಬಾಜಿಗಳು ಇವತ್ತಿಗೂ ಆತನ ಮುರುಕು ಇಮೇಜನ್ನು ರಿಪೇರಿ ಮಾಡಲು ಬಿಡುತ್ತಿಲ್ಲ. ಉಡುಪಿ ಅಷ್ಟಮಠದ ರಂಗೀಲಾ ಸ್ವಾಮಿ ಲಕ್ಷ್ಮೀವರ ತೀರ್ಥ, ಆರ್‍ಎಸ್‍ಎಸ್ ದೊರೆ ಕಲ್ಲಡ್ಕ ಭಟ್ಟನಂಥವರಿಗೆ ರಘುಪತಿ ಮುಸುಡಿ ಕಂಡರಾಗದು. ಸ್ಥಳೀಯ ಬಿಜೆಪಿಯಲ್ಲಿ ಆತನಿಗೆ ದೊಡ್ಡ ವಿರೋಧವಿದೆ. ಕತ್ತುಕತ್ತಿನ ಜಿದ್ದಾಜಿದ್ದಿಯಲ್ಲಿ ಪ್ರಮೋದ್ ಗೆಲ್ಲುವ ಛಾನ್ಸೇ ಜಾಸ್ತಿ!

ಕಾಪು

ಸೊರಕೆ

ಮಾಜಿ ಮಂತ್ರಿ ಕಾಂಗ್ರೆಸ್‍ನ ವಿನಯಕುಮಾರ್ ಸೊರಕೆ ಮತ್ತು ಬಿಜೆಪಿಯ ಮಾಜಿ ಶಾಸಕ ಲಾಲಾಜಿ ಮೆಂಡನ್‍ರ ಖಡಕ್ ಲಡಾಯಿ ಅಖಾಡ ಈ ಕಾಪು. ಹತ್ತು ವರ್ಷ ಕೇಸರಿ ಗ್ಯಾಂಗ್‍ನ ಶಾಸಕನಾಗಿದ್ದ ಲಾಲಾಜಿ ತನಗಾಗಿ ಆಸ್ತಿ-ಅಂತಸ್ತು ಮಾಡಿಕೊಂಡಿದ್ದನೇ ಹೊರತು ಕ್ಷೇತ್ರದ ಜನರಿಗಾಗಿ ಏನೂ ಮಾಡಿರಲಿಲ್ಲ. ಹೀಗಾಗಿ 2013ರ ಚುನಾವಣೆಯಲ್ಲಿ ಕಾಪು ಜನರು ಮನೆಗೆ ಕಳಿಸಿದ್ದರು. ಈ ಐದು ವರ್ಷ ಜನರ ಸಂಪರ್ಕ ಕಡಿದುಕೊಂಡ ಲಾಲಾಜಿ ಈಗ ಔಟ್‍ಡೇಟೆಡ್ ಪುಢಾರಿಯಂತಾಗಿದ್ದಾರೆ. ಸಂಘ ಸರದಾರರ ನಿಷ್ಠಾವಂತ ಗುಲಾಮನಾದ ಲಾಲಾಜಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಆತನಿಗೆ ಕಾಂಗ್ರೆಸ್‍ನ ವಿನಯ್‍ಕುಮಾರ್ ಸೊರಕೆ ತೊಡೆ ತಟ್ಟುತ್ತ ಸೆಡ್ಡು ಹೊಡೆಯುತ್ತಿದ್ದಾರೆ. ಸೊರಕೆಗೆ ಪಾರ್ಟಿಯಲ್ಲಿ ಕಿರಿಕಿರಿ ಇಲ್ಲದಿರುವುದು ಪ್ಲಸ್ ಪಾಯಿಂಟ್.

ಬಿಜೆಪಿಯಲ್ಲಿ ಟಿಕೆಟ್‍ಗೆ ಗಣಿ-ಹೊಟೇಲ್ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಶತಾಯಗತಾಯ ಪ್ರಯತ್ನ ನಡೆಸಿದ್ದರು. ತಾನೇ ಕ್ಯಾಂಡಿಡೇಟಾಗುತ್ತೇನೆಂಬ ಭ್ರಮೆಯಲ್ಲಿ ಕಳೆದೈದು ವರ್ಷದಿಂದ ಕ್ಷೇತ್ರದಲ್ಲಿ ಓಡಾಡಿಕೊಂಡು ಕಾಸು ಖರ್ಚು ಮಾಡಿ ಪಾರ್ಟಿ ಕಟ್ಟಿಕೊಂಡಿದ್ದರು. ಅದೇನು ದೌರ್ಭಾಗ್ಯವೋ ಏನೋ? 2013ರ ಎಲೆಕ್ಷನ್ ಮುಂಚೆ ಕಾಂಗ್ರೆಸ್‍ಲ್ಲಿದ್ದ ಗುರ್ಮೆ ಸುರೇಶ್ ಅಲ್ಲಿ ತನಗೇ ಟಿಕೆಟ್ ಖಾತ್ರಿಯೆಂದು ಭಾವಿಸಿ ನೆಲಕಚ್ಚಿದ್ದ ಕಾಂಗ್ರೆಸನ್ನು ಅಂದು ಸರಿಮಾಡಿಕೊಂಡಿದ್ದರು. ಕೊನೆಘಳಿಗೆಯಲ್ಲಿ ಪುತ್ತೂರು ಮೂಲದ ಸೊರಕೆ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದು ಗುರ್ಮೆ ಸುರೇಶ್‍ಗೆ ಬರಸಿಡಿಲು ಬಡಿದಂತಾಗಿ ರಾತ್ರೋರಾತ್ರಿ ಬಿಜೆಪಿ ಪಾಲಾಗಿದ್ದರು. ಈಗ ಬಿಜೆಪಿ ಟಿಕೆಟ್ ವಂಚನೆಯಾಗಿದೆ. ಆರ್‍ಎಸ್‍ಎಸ್ ಸರದಾರರು ಆತನ ಕಾಸು ಖರ್ಚು ಮಾಡಿಸಿ ಮೋಸ ಮಾಡಿದ್ದಾರೆ. ಇದು ಕ್ಷೇತ್ರದ ಬಹುಸಂಖ್ಯಾತ ಬಂಟರನ್ನು ಕೆರಳಿಸಿದೆ. ಭಿನ್ನಮತ ಲಾಲಾಜಿಯನ್ನು ಹಗಲಿರುಳೂ ಬಾಧಿಸುತ್ತಿದೆ.

ಲಾಲಾಜಿ ಮೆಂಡನ್

ಕ್ಷೇತ್ರದಲ್ಲಿ ಬಿಲ್ಲವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಸ್ವಜಾತಿ ಬಂಧುಗಳ ಮತ ಸಾರಾಸಗಟಾಗಿ ಪಡೆಯುವ ಸೊರಕೆಗೆ ಬಂಟರ, ಮುಸ್ಲಿಮರ, ಕ್ರಿಶ್ಚಿಯನ್ನರ ಓಟು ಸಿಗಲಿದೆ. ಲಾಲಾಜಿಗೆ ಸ್ವಜಾತಿ ಮೊಗವೀರರ ಒಂದು ಪಾಲು ಮತದ ಜತೆ ಹಿಂದೂತ್ವ ಬ್ರೈನ್‍ವಾಶ್ಡ್ ಯುವ ಸಮುದಾಯ ಒಂದಿಷ್ಟು ಓಟು ಸಿಗುತ್ತಿದೆ. ಸಿದ್ದು ಸರ್ಕಾರದಲ್ಲಿ ಎರಡು ವರ್ಷ ಮಂತ್ರಿಯಾಗಿದ್ದ ಸೊರಕೆ ‘ಕಾಪು ಮಿನಿಸ್ಟರ್’ ಎಂದೇ ಹೆಸರು ವಾಸಿಯಾಗಿದ್ದರು. ಮಂತ್ರಿಗಿರಿ ಸ್ವ-ಕ್ಷೇತ್ರದಲ್ಲಿ ಧಾರೆಯೆರೆದ ಸೊರಕೆ ಹಲವು ಜನಮನ ಗೆಲ್ಲುವ ಕೆಲಸ-ಕಾಮಗಾರಿ ಮಾಡಿದ್ದಾರೆ. ಜನರೊಂದಿಗೆ ಸರಳವಾಗಿ ಬೆರೆಯುವ ಈತ ಬಿಜೆಪಿಯ ಗುಡ್ ಫಾರ್ ನಥಿಂಗ್ ‘ಕ್ಯಾತಿ’ಯ ಲಾಲಾಜಿಗಿಂತ ಬೆಟರ್ ಎಂಬ ಜನಾಭಿಪ್ರಾಯವಿದೆ. ಸೊರಕೆಗೆ ಮತ್ತೆ ಶಾಸಕನಾಗುವ ಸೌಭಾಗ್ಯ ಇರುವಂತಿದೆ!

ಕಾರ್ಕಳ

ಸುನಿಲ್ ಕುಮಾರ್

ಕಳೆದ ಚುನಾವಣೆಯಲ್ಲಿ ಬಿಜೆಪಿ ಮಾನ ಜಿಲ್ಲೆಯಲ್ಲಿ ಕಾಪಾಡಿದ ಏಕೈಕ ಕ್ಷೇತ್ರ ಈ ಕಾರ್ಕಳ. ಬಾಬಾಬುಡನಗಿರಿ- ದತ್ತಪೀಠ ಭಾನ್ಗಡಿಯ ಬೈಪ್ರಾಡಕ್ಟ್ ಸುನಿಲ್‍ಕುಮಾರ್ ಇಲ್ಲಿಯ ಶಾಸಕ ಸಾಹೇಬ. ಪಕ್ಕಾ ಬ್ರಾಹ್ಮಣನಾದ ಈತ ಕ್ಷೇತ್ರದ ಬಹುಸಂಖ್ಯಾತ ಬಿಲ್ಲವರ ಕುಲದ ಕುಡಿಯೆಂದು ಹೇಳೋದೇ ವಿಚಿತ್ರವಾಗಿದೆ. ಹಿಂದೂತ್ವದ ಸುಳ್ಳುಗಾರಿಕೆ ಕರಗತ ಮಾಡಿಕೊಂಡಿರುವ ಸುನಿಲ್‍ನ ತಂದೆ ಶುದ್ಧ ಬ್ರಾಹ್ಮಣ; ತಾಯಿ ಕಾರ್ಕಳದ ಬಿಲ್ಲವರ ಹೆಣ್ಣು. ಹಿಂದುಳಿದವರ ಮರುಳು ಮಾಡುವ ಜನಿವಾರಿಕೆ ತಂತ್ರಗಾರಿಕೆಯ ಸುನಿಲ್ ದತ್ತಾವದೂತನ ಮಂತ್ರ ಜಪಿಸುತ್ತಲೇ ಭರ್ಜರಿ ಆಸ್ತಿ-ಅಂತಸ್ತು-ದೋಖಾ ದಂಧೆ ಕಟ್ಟಿಕೊಂಡಿರುವುದು ಕಾರ್ಕಳಿಗರಿಗೆ ಹಿಂದೂತ್ವ ಅಸಲಿ ಅವತಾರ ತೋರಿಸಿದೆ. ಕಳೆದ ಬಾರಿ ಕಾಂಗ್ರೆಸ್‍ನ ಸರಳ-ಸಜ್ಜನ-ಜನಪರ ಶಾಸಕನಾಗಿದ್ದ ಗೋಪಾಲ ಭಂಡಾರಿ ಎದುರು ಕೇವಲ 4,254 ಮತದಂತರದಿಂದ ಗೆದ್ದಿದ್ದ ಸುನಿಲ್‍ಗೆ ಈ ಬಾರಿ ಗೆಲುವು ಅಷ್ಟು ಸುಲಭವಲ್ಲ; ಆತನಿಗೆ ಈ ಬಾರಿಯೂ ಅದೇ ಭಂಡಾರಿಯೇ ಎದುರಾಳಿ.

ಸುನಿಲ್ ಬಳಿ ಹಣಬಲ-ಜಾತಿ ತಾಕತ್ತು ಇದೆ. ಗೋಪಾಲ ಭಂಡಾರಿ ಹಣ ಇಲ್ಲದ ಜನಾನುರಾಗಿ ರಾಜಕಾರಣಿ. ಸದಾ ಜನರೊಂದಿಗೆ ಹಮ್ಮು-ಬಿಮ್ಮು ಇಲ್ಲದ ಭಂಡಾರಿ ಅತಿ ಸಣ್ಣ ಜಾತಿ (ಕ್ಷೌರಿಕ)ಗೆ ಸೇರಿದವರು. ಕ್ಷೇತ್ರದ ಶಾಸಕನಾಗುವ ಅರ್ಹತೆ, ಯೋಗ್ಯತೆ ಇರುವುದು ಗೋಪಾಲ ಭಂಡಾರಿಗೇ ವಿನಃ ಗಂಡಾಗುಂಡಿ ಪುಂಡ ಸುನಿಲ್‍ಗೆ ಅಲ್ಲ. ಗೋಪಾಲ ಭಂಡಾರಿ ಎಲೆಕ್ಷನ್ ಖರ್ಚಿಗೂ ಕಾಸಿಲ್ಲದ ಮುಗ್ಧ ಮನುಷ್ಯ.

ಗೋಪಾಲ ಭಂಡಾರಿ

ಕಾಂಗ್ರೆಸ್‍ನ ಭಿನ್ನಮತ ಭಂಡಾರಿಗೆ ತೊಡಕಾಗಿದೆ. ಕಾಂಗ್ರೆಸ್‍ನ ‘ದೊಡ್ಡ’ ನಾಯಕರಲ್ಲೊಬ್ಬರಾದ ಮಾಜಿ ಸಿಎಂ ವೀರಪ್ಪ ಮೊಯ್ಲಿ ತನ್ನ ತವರೂರು ಕಾರ್ಕಳದಿಂದ ಕುಲೋದ್ಧಾರ ಪುತ್ರರತ್ನ ಹರ್ಷನನ್ನು ಕಾಂಗ್ರೆಸ್ ಕ್ಯಾಂಡಿಡೇಟು ಮಾಡಲು ಮಸಲತ್ತು ನಡೆಸಿದ್ದರು. ಪಿಡಬ್ಲ್ಯೂಡಿ ಮಂತ್ರಿ ಮಹದೇವಪ್ಪರ ಖಾಸಾ ಆದ್ಮಿಯಾದ ಗುತ್ತಿಗೆದಾರ ಮುನಿಯಾಲು ಉದಯಕುಮಾರ್ ಶೆಟ್ಟಿ ಒಂದು ವರ್ಷದಿಂದ ಕ್ಷೇತ್ರದಾದ್ಯಂತ ತಾನೇ ಕಾಂಗ್ರೆಸ್ ಕ್ಯಾಂಡಿಡೇಟೆಂದು ಹಣ ಹರಿಸುತ್ತಾ ಬಂದಿದ್ದರು. ಇದು ಮೊಯ್ಲಿಯನ್ನು ಕೆರಳಿಸಿತ್ತು. ಪುತ್ರ ವ್ಯಾಮೋಹದಿಂದ ಮೊಯ್ಲಿ ಸ್ವ-ಸಂಘದ ವಿರುದ್ಧವೇ ಟ್ವೀಟಿಸಿ ಸಿಕ್ಕಿಬಿದ್ದರು. ಹೈಕಮಾಂಡ್ ಅವಕೃಪೆಗೆ ಒಳಗಾದ ಮೊಯ್ಲಿ ಅಂತಿಮವಾಗಿ ತನ್ನ ಮಗನಿಗೆ ಕಾರ್ಕಳ ಟಿಕೆಟ್ ಬೇಡವೆಂದು ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿ ಬಂತು. ಆ ನಂತರ ಮೊಯ್ಲಿ ಮುನಿಯಾಲು ಉದಯ್‍ಗೆ ಟಿಕೆಟ್ ತಪ್ಪಿಸುವ ತಂತ್ರ ಮಾಡಿದರು. ಈ ತಿಕ್ಕಾಟದಲ್ಲಿ ಗೋಪಾಲ ಭಂಡಾರಿಗೆ ಕಾಂಗ್ರೆಸ್ ಅಭ್ಯರ್ಥಿತನ ಒಲಿದು ಬಂತು. ಬಂಡೆದ್ದ ಮುನಿಯಾಲು ಶೆಟ್ಟಿ ಬಳಗ ಭಂಡಾರಿಗೆ ಮಗ್ಗಲು ಮುಳ್ಳಾಗಿದೆ.

ಕ್ಷೇತ್ರದಲ್ಲಿ ನಿರ್ಣಾಯಕರಾದ ಕೊಂಕಣಿಗರು ಬಿಜೆಪಿ ಒಲವಿನವರಾದರೂ ಸುನಿಲ್ ಬಗ್ಗೆ ಬೇಸರದಲ್ಲಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಸ್ವಯಂಘೋಷಿತ ಬಿಲ್ಲವ ಸುನಿಲ್‍ಗೆ ಬಂಟರು ಮತ ಕೊಡುವುದಿಲ್ಲ. ಬಂಟರು ಮುಂದಿನ ಎಲೆಕ್ಷನ್‍ನಲ್ಲಿ ಮುನಿಯಾಲು ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ ಬಿಟ್ಟುಕೊಡುವ ‘ರಾಜಿ’ ಪಂಚಾಯ್ತಿಕೆಯಲ್ಲಿ ಗೋಪಾಲ ಭಂಡಾರಿಯನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ. ಶಾಸಕನಾಗಿ ಸುನಿಲ್ ಬಣ್ಣಗೆಟ್ಟಿದ್ದರೆ, ಭಂಡಾರಿ ಬಗ್ಗೆ ಅನುಕಂಪ-ಅಭಿಮಾನವಿದೆ. ಸಣ್ಣ ಅಂತರದಲ್ಲಿ ಕಾಂಗ್ರೆಸ್‍ನ ಗೋಪಾಲ ಭಂಡಾರಿ ಗೆಲ್ಲುವ ಎಲ್ಲ ಲಕ್ಷಣ ಕಾಣಿಸುತ್ತಿದೆ ಕಾರ್ಕಳದಲ್ಲಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...