ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರ ಬೆಂಗಾವಲಿನ ಮೇಲೆ ರಾಜಸ್ಥಾನದ ಅಲ್ವಾರ್‌ನಲ್ಲಿ ಬಿಜೆಪಿ ಬೆಂಬಲಿಗರು ಶುಕ್ರವಾರ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಯಲ್ಲಿ ರಾಕೇಶ್ ಟಿಕಾಯತ್ ಅವರ ಕಾರಿನ ಕಿಟಕಿಗಳಿಗೆ ಹಾನಿಯಾಗಿದೆ.
ರಾಕೇಶ್ ಟಿಕಾಯತ್ ಅವರು ಅಲ್ವಾರ್‌ನ ಹರ್ಸೋರಾ ಗ್ರಾಮದಿಂದ ಬನ್ಸೂರ್‌ಗೆ ತೆರಳುತ್ತಿದ್ದಾಗ ದಾಳಿ ನಡೆಸಲಾಗಿದೆ. ಟಿಕಾಯತ್ ಅವರು ಹರ್ಸೋರಾದಲ್ಲಿ ನಡೆದ ರೈತ ಸಭೆ ಮುಗಿಸಿಕೊಂಡು ಬನ್ಸೂರ್‌ಗೆ ತೆರಳುತ್ತಿದ್ದರು. ಅಲ್ವಾರ್ ಜಿಲ್ಲೆಯ ತತಾರ್ಪುರ್ ಗ್ರಾಮದ ಬಳಿ ಟಿಕಾಯತ್ ಬೆಂಗಾವಲಿನ ಮೇಲೆ ಬಿಜೆಪಿ ಬೆಂಬಲಿಗರು ಕಲ್ಲು ಎಸೆಯಲು ಪ್ರಾರಂಭಿಸಿದರು ಎಂದು ಆರೋಪಿಲಾಗಿದೆ.
ರಾಕೇಶ್ ಟಿಕಾಯತ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಘಟನೆ ಬಗ್ಗೆ ಬರೆದುಕೊಂಡು, ಹಾನಿಗೊಳಗಾದ ಕಾರಿನ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ, ಈ ದಾಳಿಯನ್ನು “ಬಿಜೆಪಿ ಗೂಂಡಾಗಳು” ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ ರೈತ ಮಹಾಪಂಚಾಯತ್: ಕಿತ್ತೂರು ರಾಣಿ ಚೆನ್ನಮ್ಮನ ಮಾದರಿಯಲ್ಲಿ ಹೋರಾಡೋಣ- ರಾಕೇಶ್ ಟಿಕಾಯತ್
राजस्थान के अलवर जिले के ततारपुर चौराहा, बानसूर रोड़ पर भाजपा के गुंडों द्वारा जानलेवा पर हमला किए गए, लोकतंत्र के हत्या की तस्वीरें pic.twitter.com/aBN9ej7AXS
— Rakesh Tikait (@RakeshTikaitBKU) April 2, 2021
“ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತತಾರ್ಪುರದ ಬನ್ಸೂರ್ ರಸ್ತೆಯಲ್ಲಿ ಬಿಜೆಪಿ ಗೂಂಡಾಗಳಿಂದ ದಾಳಿ. ಇದು ಪ್ರಜಾಪ್ರಭುತ್ವದ ಹತ್ಯೆ” ಎಂದು ಟಿಕಾಯತ್ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. ದಾಳಿಯ ನಂತರ ಟಿಕಾಯತ್ ಬೆಂಬಲಿಗರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ.
ಘಟನೆ ಬಗ್ಗೆ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಪತ್ರಕರ್ತ ಮಂದೀಪ್ ಪುನಿಯಾ, ಇದು ಬಿಜೆಪಿ ಕಾರ್ಯಕರ್ತ ನಡೆಸಿರುವ ಹಲ್ಲೆ ಎಂದು ಸಾಕ್ಷಿ ಸಮೇತ ವಿವರಿಸಿದ್ದಾರೆ.
ರಾಕೇಶ್ ಟಿಕಾಯತ್ ಅವರ ಮೇಲೆ ನಡೆಸಿರುವವರ ಹಲ್ಲೆ ಬಗ್ಗೆ ಈವರೆಗೆ ನನಗೆ ತಿಳಿದಿರುವ ವಿವರಗಳನ್ನು ಹಂಚಿಕೊಳ್ಳತ್ತಿದ್ದೇನೆ ಎಂದಿರುವ ಮಂದೀಪ್ ಪುನಿಯಾ, ಹಲ್ಲೆ ನಡೆಸಿದ ಕಪ್ಪು ಬಣ್ಣದ ಕಾರು ಬಿಜೆಪಿಯ ರಾವ್ ಕುಲ್‌ದೀಪ್ ಯಾದವ್ ಅವರ ಗಾಡಿ ಎಂಬುದನ್ನು ತಿಳಿಸಿದ್ದಾರೆ.
ಬಿಜೆಪಿಯೊಂದಿಗೆ ನೇರ ಸಂಪರ್ಕದಲ್ಲಿರುವ, ರಾಜಸ್ಥಾನದ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿರುವ ಸತೀಶ್ ಪುನಿಯಾ ಅವರೊಂದಿಗಿನ ಕವರ್ ಫೋಟೋ ಇರುವ ರಾವ್ ಕುಲ್‌ದೀಪ್ ಯಾದವ್ ಅವರ ಫೇಸ್‌ಬುಕ್‌ನಲ್ಲಿ ಈ ಕಾರು ಕಾಣಿಸಿಕೊಂಡಿದೆ.
ಇದನ್ನೂ ಓದಿ: ಇನ್ನು 8 ತಿಂಗಳು ಈ ರೈತ ಹೋರಾಟ ನಡೆಯಲಿದೆ- ರಾಕೇಶ್ ಟಿಕಾಯತ್
ब्रेकिंग: बीजेपी के राव कुलदीप यादव ने किया है @RakeshTikaitBKU पर हमला. हमलावरों से बरामद हुई कार राव कुलदीप यादव की ही है. pic.twitter.com/LmsL7bOfLO
— Mandeep Punia (@mandeeppunia1) April 2, 2021
ರಾವ್ ಕುಲ್‌ದೀಪ್ ಯಾದವ್, ಎಬಿವಿಪಿ ಸದಸ್ಯನಾಗಿದ್ದು, ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಇವರ ಕಾರನ್ನು ರಾಕೇಶ್ ಟಿಕಾಯತ್ ಮೇಲೆ ನಡೆದ ಹಲ್ಲೆಯಲ್ಲಿ ಬಳಸಲಾಗಿದೆ ಎಂಬುದನ್ನು ಪತ್ರಕರ್ತ ಮಂದೀಪ್ ಪುನಿಯಾ ಸಾಕ್ಷಿಗಳ ಸಮೇತ ವಿವರಿಸಿದ್ದಾರೆ.
ದೆಹಲಿ-ಉತ್ತರ ಪ್ರದೇಶದ ಗಾಜಿಪುರ ಗಡಿಯಲ್ಲಿ ಕೇಂದ್ರದ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಅವರು ನಾಲ್ಕು ತಿಂಗಳಿನಿಂದ ಮುನ್ನಡೆಸುತ್ತಿದ್ದಾರೆ. ದೇಶದಾದ್ಯಂತ ನಡೆಯುತ್ತಿರುವ ರೈತ ಮಹಾಪಂಚಾಯತ್‌ಗಳಲ್ಲಿ ಬಂದು ರೈತರ ಪ್ರತಿಭಟನೆ ಬಗ್ಗೆ, ರೈತ ಹೋರಾಟದ ಪ್ರಾಮುಖ್ಯತೆ ಬಗ್ಗೆ ವಿವರಿಸುತ್ತಿದ್ದಾರೆ.
ಇದನ್ನೂ ಓದಿ: ವಿವಾದಿತ ಕೃಷಿ ಕಾಯ್ದೆಗಳ ಬಗ್ಗೆ ಅಧ್ಯಯನ: ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದ ಸ್ಥಾಯಿ ಸಮಿತಿ



Assasination of democracy