Homeಅಂತರಾಷ್ಟ್ರೀಯಜೂಮ್ ಕಾನ್ಫರೆನ್ಸ್‌ನಲ್ಲಿ ಬೆತ್ತಲೆ ಕಾಣಿಸಿಕೊಂಡ ಕೆನಡಾ ಸಂಸದ!

ಜೂಮ್ ಕಾನ್ಫರೆನ್ಸ್‌ನಲ್ಲಿ ಬೆತ್ತಲೆ ಕಾಣಿಸಿಕೊಂಡ ಕೆನಡಾ ಸಂಸದ!

- Advertisement -
- Advertisement -

ಕೆನಡಾದ ಹೌಸ್ ಆಫ್ ಕಾಮನ್ಸ್ ಜೂಮ್ ಕಾನ್ಫರೆನ್ಸ್‌ನಲ್ಲಿ ಎಂಪಿಯೊಬ್ಬರು ನಗ್ನರಾಗಿ ಕಾಣಿಸಿಕೊಂಡು ನಂತರ ಕ್ಷಮೆ ಯಾಚಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಲಿಬರಲ್ ಸಂಸದ ಅಮೋಸ್ ವಿಲಿಯಮ್ಸ್, ವರ್ಚುವಲ್ ಕಾರ್ಯಕ್ರಮದಲ್ಲಿ ಲ್ಯಾಪ್‌ಟಾಪ್ ಕ್ಯಾಮೆರಾ ಆನ್ ಮಾಡಿದಾಗ ತನ್ನ ದೇಹದ ಮುಂಭಾಗವನ್ನು ಮುಚ್ಚಿಕೊಳ್ಳಲು ಒದ್ದಾಡಿ ನಂತರ ಮಾಯವಾದರು.

“ನಾನು ಇಂದು ನಿಜವಾಗಿಯೂ ದುರದೃಷ್ಟಕರ ತಪ್ಪು ಮಾಡಿದ್ದೇನೆ. ಇದರಿಂದ ನಾನು ಮುಜುಗರಕ್ಕೊಳಗಾಗಿದ್ದೇನೆ” ಎಂದು 46 ವರ್ಷದ ಸಂಸದ, ಬುಧವಾರ ತಡರಾತ್ರಿ ತಮ್ಮ ಕಚೇರಿಯಲ್ಲಿ ನಡೆದ ಘಟನೆಯನ್ನು ಸಾರ್ವಜನಿಕಗೊಳಿಸಿದ ನಂತರ ಟ್ವೀಟ್ ಮಾಡಿದ್ದಾರೆ.

“ನಾನು ಜಾಗಿಂಗ್‌ಗೆ ಹೋಗಿ ಬಂದ ನಂತರ ನಂತರ ದಿನಿತ್ಯದ ಬಟ್ಟೆ ಬದಲಾಯಿಸುವ ಸಂದರ್ಭದಲ್ಲಿ ನನ್ನ ಲ್ಯಾಪ್‌ಟಾಪ್ ಕ್ಯಾಮೆರಾ ಆಕಸ್ಮಿಕವಾಗಿ ಆನ್ ಆಗಿಯೇ ಇತ್ತು. ಸದನದಲ್ಲಿನ ನನ್ನ ಎಲ್ಲ ಸಹೋದ್ಯೋಗಿಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ, ಇದು ಮತ್ತೆ ಸಂಭವಿಸುವುದಿಲ್ಲ” ಎಂದು ಸಂಸದ ಕ್ಷಮಾಪಣೆ ಕೇಳಿದ್ದಾರೆ.

ಆಗ ಪ್ರಶ್ನೋತ್ತರ ಅವಧಿ ನಡೆಯುತ್ತಿತ್ತು. ಈ ಸಂಸದ ಆಗ ಸಭೆ ಉದ್ದೇಶ ಮಾತನಾಡಿದ್ದರೆ ಹೌಸ್ ಆಫ್ ಕಾಮನ್ಸ್ ಮಾರ್ಗದರ್ಶಿ ಪುಸ್ತಕವನ್ನು ಉಲ್ಲಂಘಿಸುತ್ತಿದ್ದರು. ಆದರೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿಲ್ಲ.

‘ರೂಲ್ಸ್ ಆಫ್ ಆರ್ಡರ್ ಮತ್ತು ಡೆಕೋರಮ್’ ವಿಭಾಗದ ಅಡಿಯಲ್ಲಿ, ಚರ್ಚೆಯಲ್ಲಿ ಭಾಗವಹಿಸಲು ಯಾವುದೇ ಡ್ರೆಸ್ ಕೋಡ್ ಅಗತ್ಯವಿಲ್ಲ, ಆದರೆ ಪುರುಷ ಭಾಷಣಕಾರರು ಜಾಕೆಟ್, ಶರ್ಟ್ ಮತ್ತು ಟೈಗಳಂತಹ “ಸಮಕಾಲೀನ ವ್ಯವಹಾರ ಉಡುಪನ್ನು ಧರಿಸಿರಬೇಕು” ಎಂದು ನವಿವರಿಸಲಾಗಿದೆ.

ಅಮೋಸ್‌ರ ಲಿಬರಲ್ ಪಕ್ಷವನ್ನು ಮುನ್ನಡೆಸುತ್ತಿರುವ ಪ್ರಧಾನಿ ಜಸ್ಟಿನ್ ಟ್ರುಡೊ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಬೇಕಾಗಿಲ್ಲ ಎಂದಿದ್ದಾರೆ.

ವಿಪಕ್ಷ ನಾಯಕಿ ಕ್ಲಾಡ್ ಡೆಬೆಲ್ಲೆಫ್ಯೂಲೆ “ಸಂಸದ ಉತ್ತಮ ದೈಹಿಕ ಆಕಾರದಲ್ಲಿದ್ದಾರೆ ಎಂದು ನಾವು ನೋಡಿದ್ದೇವೆ, ಆದರೆ ಸದಸ್ಯರು ಜಾಗರೂಕರಾಗಿರಿ ಮತ್ತು ಕ್ಯಾಮೆರಾವನ್ನು ಚೆನ್ನಾಗಿ ನಿಯಂತ್ರಿಸಲು ಎಚ್ಚರ ವಹಿಸಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾಗಿ ಕೆನಡಿಯನ್ ಪ್ರೆಸ್ ವರದಿ ಮಾಡಿದೆ.

“ಟೈ ಮತ್ತು ಜಾಕೆಟ್ ಕಡ್ಡಾಯವಾಗಿದೆ ಎಂದು ಸದಸ್ಯರಿಗೆ, ವಿಶೇಷವಾಗಿ ಪುರುಷರಿಗೆ ನೆನಪಿಸುವ ಅಗತ್ಯವಿರಬಹುದು, ಆದರೆ ಶರ್ಟ್, ಬಾಕ್ಸರ್ ಶಾರ್ಟ್ಸ್ ಅಥವಾ ಪ್ಯಾಂಟ್ ಕೂಡಾ ಇದೆ” ಎಂದು ಕೆನಡಿಯನ್ ಪ್ರೆಸ್ ವರದಿ ಮಾಡಿದೆ.


ಇದನ್ನೂ ಓದಿ: ಕೊರೊನಾ ಉಲ್ಬಣ: ಮೇ 15ರ ವರೆಗೆ ತಾಜ್‌ ಮಹಲ್, ಕುತುಬ್‌ ಮಿನಾರ್‌ ಬಂದ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...