ಕೊರೊನಾ ಚಿಕಿತ್ಸೆಗೆ ಮೀಸಲಾದ ಆಸ್ಪತ್ರೆಗಳು, ಖಾಲಿ ಇರುವ ಹಾಸಿಗೆಗಳು ಮತ್ತು ಪರೀಕ್ಷೆಗಳ ಅಂಕಿ-ಅಂಶವನ್ನು ಸರಿಯಾಗಿ ನಿರ್ವಹಿಸದ ಕಾರಣಕ್ಕಾಗಿ ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ನ್ಯಾಯಪೀಠವು ರಾಜ್ಯದ ಆರೋಗ್ಯ ಸೌಲಭ್ಯದ ವೆಬ್‌ಸೈಟ್ ಪ್ರಸ್ತುತ ಸಮಯದ ಅಂಕಿಅಂಶಗಳನ್ನು ಒದಗಿಸುವುದಿಲ್ಲ ಎಂದು ಹೇಳಿದ್ದಾರೆ. “ಅದರಲ್ಲಿ ಆರೋಗ್ಯ ಸೌಲಭ್ಯದ ಲಭ್ಯತೆ ಇದೆ ಎಂದು ಇದು ತೋರಿಸುತ್ತದೆ, ಆದರೆ ಆಸ್ಪತ್ರೆಗೆ ಹೋಗಿ ನೋಡಿದಾಗ ಅಲ್ಲಿ ಸೌಲಭ್ಯವು ಇಲ್ಲದೆ ಇರುವುದನ್ನು ಕಾಣಬಹುದು” ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಸತತ ಅಂತ್ಯಕ್ರಿಯೆ ನಡೆಸುತ್ತಿರುವ ಸೂರತ್‌ನ ವಿದ್ಯುತ್ ಚಿತಾಗಾರದಲ್ಲಿ ಕರಗಿ ಹೋಗುತ್ತಿವೆ ಲೋಹದ ಯಂತ್ರಗಳು!
ಆರೋಗ್ಯ ಸೌಲಭ್ಯದ ಪೋರ್ಟಲ್ ಅನ್ನು ಆಸ್ಪತ್ರೆಗಳ ಸಂಘವು ನಿರ್ವಹಿಸುತ್ತಿದೆ ಎಂದು ರಾಜ್ಯ ಸರ್ಕಾವು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು ಅಂಕಿ ಅಂಶವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಮತ್ತು ನಿಖರವಾದ ಮಾಹಿತಿಯನ್ನು ಒದಗಿಸಬೇಕು ಎಂದು ಆದೇಶ ನೀಡಿದೆ.
“ಅದನ್ನು ಆಸ್ಪತ್ರೆಗಳ ಸಂಘಕ್ಕೆ ಬಿಡಲು ಸಾಧ್ಯವಿಲ್ಲ. ಬಹಳಷ್ಟು ಕುಟುಂಬಗಳು ಸಣ್ಣ ಮನೆಯಲ್ಲಿ ವಾಸಿಸುತ್ತವೆ. ಎರಡು ಪರೀಕ್ಷೆಗಳಲ್ಲೂ ಪಾಸಿಟಿವ್ ಬಂದರೆ, ಇತರರು ಏನು ಮಾಡಬೇಕು? ಪೋಷಕರು ಪಾಸಿಟಿವ್ ಆದರೆ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಕುಟುಂಬ ಸದಸ್ಯರಿಗೆ ಏನಾದರೂ ವ್ಯವಸ್ಥೆ ಇದೆಯೇ?” ಎಂದು ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ.
ಗುಜರತ್‌ನಲ್ಲಿ ಕೊರೊನಾ ತಾಂಡವಾಡುತ್ತಿದ್ದು, ಪರಿಸ್ಥಿತಿ ಕೈಮೀರಿದೆ ಎಂದು ವರದಿಯಾಗಿದೆ. ಸೋಂಕಿನಿಂದಾಗಿ ಮೃತಪಟ್ಟವರ ಅಂತ್ಯಕ್ರಿಯೆಗೂ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು: ಮಣಿಪಾಲ ಆಸ್ಪತ್ರೆಗೆ ದಾಖಲು
ಈ ನಡುವೆ ಕೊರೊನಾ ಸೋಂಕು ದೃಢಪಟ್ಟು ಅಸ್ವಸ್ಥರಾಗಿ ಮರಣ ಹೊಂದಿರುವ ರೋಗಿಗಳನ್ನು ಕೊರೊನಾ ಸಾವುಗಳಿಗೆ ಸೇರಿಸದಂತೆ ಸರ್ಕಾರದಿಂದ ಆದೇಶಗಳಿವೆ ಎಂದು ಅಧಿಕೃತ ಮೂಲಗಳು ದೃಢಪಡಿಸಿವೆ.
ಸೂರತ್ ಮೂಲದ ಡಾ. ಚಂದ್ರೇಶ್ ಜರ್ದೋಶ್, “ಇದು ಹೊಸ ವಿಷಯವೇನಲ್ಲ. ಲಾಕ್‌ಡೌನ್ ಯಶಸ್ವಿಯಾಗಿದೆ ಎಂದು ಸಾಬೀತುಪಡಿಸಲು ಕಳೆದ ವರ್ಷದಿಂದ ಕೊರೊನಾ ಸಾವುಗಳ ಸಂಖ್ಯೆಗಳನ್ನು ಕಡಿಮೆ ಮಾಡುವುದು ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಸೂರತ್‌ನ ಚಿತಾಗಾರಗಳಲ್ಲಿ ಸ್ಥಳಾವಕಾಶವಿಲ್ಲದೇ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ, ವಿದ್ಯುತ್ ಚಿತಾಗಾರದ ಲೋಹದ ಯಂತ್ರಗಳು ಸತತ ಅಂತ್ಯಕ್ರಿಯೆಯಿಂದ ಕರಗಿ ಹೋಗುತ್ತಿವೆ. ಆದರೆ, ಸರ್ಕಾರ ಮಾತ್ರ ಕೊರೊನಾ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ವ್ಯತ್ಯಾಸ ತೋರಿಸುವ ಅಂಕಿ ಅಂಶಗಳನ್ನು ನೀಡುತ್ತಿದೆ.
ಇದನ್ನೂ ಓದಿ: ಸಭೆ-ಸಮಾರಂಭಗಳಲ್ಲಿ 200 ಜನಕ್ಕಷ್ಟೇ ಅವಕಾಶ: ಕುಂಭಮೇಳಕ್ಕೆ ವಿನಾಯಿತಿ ನೀಡಿದ ಉತ್ತರಾಖಂಡ ಸರ್ಕಾರ


