Homeಮುಖಪುಟಜನಪ್ರಿಯ ತಮಿಳು ನಟ ವಿವೇಕ್‌ ಆರೋಗ್ಯ ಸ್ಥಿತಿ ಗಂಭೀರ!

ಜನಪ್ರಿಯ ತಮಿಳು ನಟ ವಿವೇಕ್‌ ಆರೋಗ್ಯ ಸ್ಥಿತಿ ಗಂಭೀರ!

- Advertisement -
- Advertisement -

ಜನಪ್ರಿಯ ತಮಿಳು ನಟ ವಿವೇಕ್ (59) ಅವರು ಶುಕ್ರವಾರ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ವೈದ್ಯಕೀಯ ಸ್ಥಿತಿ ಗಂಭೀರವಾಗಿದೆ ಎಂದು ಎಮೆರ್ಜೆನ್ಸಿ ಕೊಠಡಿಯ ವೈದ್ಯರು ತಿಳಿಸಿದ್ದಾರೆ. ಇದೀಗ ಅವರನ್ನು ಇಸಿಎಂಒಗೆ ಸೇರಿಸಲಾಗಿದೆ.

ಅವರ ಆರೋಗ್ಯ ಸ್ಥಿತಿ ಹಠಾತ್ತನೆ ಹದಗೆಡಲು ಕಾರಣವೇನು ಎಂದು ಇನ್ನೂ ತಿಳಿದು ಬಂದಿಲ್ಲ. “ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ನಾಡಿ ಬಡಿತ ನಿಂತಿದ್ದು, ಅವರನ್ನು ಉಳಿಸಲು ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ” ಎಂದು ವೈದ್ಯರು ಹೇಳಿದ್ದಾರೆಂದು TOI ವರದಿ ಮಾಡಿದೆ.

ಇದನ್ನೂ ಓದಿ: ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಶಾಸಕ ಇರ್ಫಾನ್ ಅನ್ಸಾರಿ ಮೇಲೆ ಕ್ರಮ ಕೈಗೊಳ್ಳಿ- ಬಿಜೆಪಿ ಸಂಸದ

ನಟ ವಿವೇಕ್‌ ಅವರನ್ನು ಗುರುವಾರವಷ್ಟೇ ಸಾರ್ವಜನಿಕ ಆರೋಗ್ಯ ಸಂದೇಶಗಳನ್ನು ಹರಡುವ ರಾಜ್ಯ ರಾಯಭಾರಿಯಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಅಂದು ಅವರು ಸರ್ಕಾರಿ ಒಮಂದುರಾರ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದುಕೊಂಡು, ಎಲ್ಲರೂ ಲಸಿಕೆ ಪಡೆದುಕೊಳ್ಳಲು ಮುಂದೆ ಬರಬೇಕೆಂದು ಒತ್ತಾಯಿಸಿದ್ದರು.

“ಈ ಲಸಿಕೆಗಳಲ್ಲಿ ಯಾವುದೇ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂಬ ಬಗ್ಗೆ ಜನರು ಭಯಪಡಬಾರದು. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡೂ ಸುರಕ್ಷಿತವಾಗಿದ್ದು, ಅದು ಮಾತ್ರ ನಮ್ಮನ್ನು ಉಳಿಸುತ್ತದೆ. ಇದು ಸೋಂಕಿಗೆ ಒಳಗಾಗುವುದನ್ನು ತಡೆಯದಿದ್ದರೂ ಸಹ, ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ” ಎಂದು ಅವರು ಹೇಳಿದ್ದರು.

ತಮಿಳು ಚಿತ್ರರಂಗದ ಜನಪ್ರಿಯ ನಟನಾಗಿರುವ ವಿವೇಕ್ ಅವರನ್ನು ನಿರ್ದೇಶಕ ಕೆ. ಬಾಲಚಂದರ್ ಅವರು ಚಿತ್ರರಂಗಕ್ಕೆ ಪರಿಚಯಿಸಿದ್ದರು. ವಿವೇಕ್‌ ಅವರು “ರನ್” (2002), “ಸಾಮಿ” (2003), “ಪೆರಳಗನ್”(2004), “ಪಾರ್ಥಿಬನ್ ಕನವು” (2003), “ಅನ್ನಿಯನ್” (2005) ಮತ್ತು “ಶಿವಾಜಿ” (2007) ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಹಾಸ್ಯನಟರಾಗಿ ಜನಪ್ರಿಯರಾಗಿದ್ದಾರೆ.

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರ ಹೋರಾಟವನ್ನು ಬೆಂಬಲಿಸಿದ ನಟ ‘ಯಶ್‌’

ವಿಡಿಯೋ ನೋಡಿ: ಮಸ್ಕಿ: ಹಣ ಹಂಚುತ್ತಿದ್ದ ಹಾಸನದ ಮೂವರಿಗೆ ಗೂಸಾ: ಬಂಧನ, 81 ಸಾವಿರ ರೂ. ವಶ!

ಮಸ್ಕಿ: ಹಣ ಹಂಚುತ್ತಿದ್ದ ಹಾಸನದ ಮೂವರಿಗೆ ಗೂಸಾ: ಬಂಧನ, 81 ಸಾವಿರ ರೂ. ವಶ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...