- Advertisement -
- Advertisement -
ಭಾರತದ ಅತ್ಯುತ್ತಮ ಕಾನೂನು ತಜ್ಞರಲ್ಲಿ ಒಬ್ಬರಾದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅವರು ಇಂದು ಬೆಳಿಗ್ಗೆ ಕೋವಿಡ್‌ನಿಂದಾಗಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಹಿರಿಯ ವಕೀಲ ಮತ್ತು ಪದ್ಮವಿಭೂಷಣ ಪುರಸ್ಕೃತ ಸೋಲಿ ಸೊರಾಬ್ಜಿ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸೋಲಿ ಜೆಹಂಗೀರ್ ಸೊರಾಬ್ಜಿ 1930ರಲ್ಲಿ ಮುಂಬೈನಲ್ಲಿ ಜನಿಸಿದರು. ಅವರು 1953ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲಿಕೆ ಪ್ರಾರಂಭಿಸಿದರು. 1971ರಲ್ಲಿ ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ನೇಮಕಗೊಂಡರು.
ಸೊರಾಬ್ಜಿ ಮೊದಲು 1989 ರಲ್ಲಿ ಅಟಾರ್ನಿ ಜನರಲ್ ಆದರು ಮತ್ತು ನಂತರ 1998 ರಿಂದ 2004 ರವರೆಗೆ ಈ ಹುದ್ದೆಯಲ್ಲಿದ್ದರು.
ಉತ್ಸಾಹಭರಿತ ಮಾನವ ಹಕ್ಕುಗಳ ವಕೀಲರಾಗಿದ್ದ ಅವರನ್ನು 1997ರಲ್ಲಿ ವಿಶ್ವಸಂಸ್ಥೆಯು ನೈಜೀರಿಯಾದ ವಿಶೇಷ ವರದಿಗಾರರಾಗಿ ನೇಮಿಸಿತ್ತು.
ಇದನ್ನೂ ಓದಿ: ಎಕ್ಸಿಟ್ ಪೋಲ್: ತಮಿಳುನಾಡಿನಲ್ಲಷ್ಟೇ ಬದಲು, ಉಳಿದೆಡೆ ಅವೇ ಸರ್ಕಾರ ಮುಂದುವರಿಕೆ – ಕೊರೊನಾ ಮಾತ್ರ ತೀವ್ರ ಏರಿಕೆ!


