ಇತಿಹಾಸ: 60 ಲಕ್ಷ ಜನರ ಹತ್ಯಾಕಾಂಡದ ರೂವಾರಿ ‘ಹಿಟ್ಲರ್‌‌’ ಆತ್ಮಹತ್ಯೆ ಮಾಡಿಕೊಂಡ ದಿನವಿಂದು | ನಾನುಗೌರಿ

ಎಪ್ಪತ್ತೈದು ವರ್ಷಗಳ ಹಿಂದೆ,  1945 ಏಪ್ರಿಲ್ 30 ರ ಇದೇ ದಿನ ಜಗತ್ತನ್ನೇ ಕಾಡಿದ್ದ ಸರ್ವಾಧಿಕಾರಿ, ನಾಝಿ ದಂಡ ನಾಯಕ ಅಡಾಲ್ಫ್‌ ಹಿಟ್ಲರ್‌ ತನ್ನ ಪತ್ನಿ ಇವಾ ಬ್ರಾನ್‌‌ನೊಂದಿಗೆ ಮಧ್ಯಾಹ್ನ 3:15 ರ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಮೂಲಕ ವಿಶ್ವದಾದ್ಯಂತ ಹರಡಿದ್ದ ಎರಡನೆ ವಿಶ್ವ ಯುದ್ದದ ಕರಾಳ ಛಾಯೆಯೊಂದು ಮುಗಿದ ದಿನವಿಂದು.

ತನ್ನ ಆತ್ಮಹತ್ಯೆಗಿಂತಲೂ ಮುಂಚೆ ಅಡಾಲ್ಫ್ ಹಿಟ್ಲರ್ ತನ್ನ ಪತ್ನಿ ಇವಾ ಬ್ರಾನ್‌ನೊಂದಿಗೆ ಭೂಗತ ಬಂಕರ್‌ವೊಂದಕ್ಕೆ ತೆರಳಿದ್ದ. ಅದಕ್ಕಿಂತ ಮುಂಚೆಯೆ ಅವನು ತನ್ನ ಸೇವಕರಿಗೆ ವಿದಾಯ ಹೇಳಿ ತನ್ನ ನಾಯಿಗೆ ವಿಷ ಕೊಟ್ಟಿದ್ದ. ಭೂಗತ ಬಂಕರ್‌ಗೆ ತೆರಳುವ ಮುಂಚೆ ಅವನ ಬಳಿ ಪಿಸ್ತೂಲ್ ಮತ್ತು ಇವಾ ಬ್ರಾನ್ ಬಳಿ ಸೈನೈಡ್ ಇತ್ತು. ಅವರಿಬ್ಬರು ಮದುವೆಯಾಗಿ ಕೇವಲ ಒಂದುವರೆ ದಿನವಷ್ಟೇ ಆಗಿತ್ತು.

ಇದನ್ನೂ ಓದಿ: ಮೋದಿ ದುರಂಹಕಾರವೇ ಕೋವಿಡ್ 2ನೆ ಅಲೆಯ ತೀವ್ರತೆಗೆ ಕಾರಣ: ಫ್ರೆಂಚ್ ಪತ್ರಿಕೆ ಸಂಪಾದಕೀಯ

ಆತ್ಮಹತ್ಯೆ ಮಾಡಿದ ದಿನ ಹಿಟ್ಲರ್‌ ನಾಝಿ ಸಮವಸ್ತ್ರವಾದ ಜಾಕೆಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ. ಇವಾ ಬ್ರಾನ್ ಬಿಳಿ ಬಣ್ಣದಲ್ಲಿ ಟ್ರಿಮ್ ಮಾಡಿದ ನೀಲಿ ಉಡುಪನ್ನು ಧರಿಸಿದ್ದಳು. ಸಾಯುವ ಹೊತ್ತಿಗೆ ಹಿಟ್ಲರ್‌ ವಯಸ್ಸು 56 ಹಾಗೂ ಪತ್ನಿಯ ವಯಸ್ಸು 33.

ಮಧ್ಯಾಹ್ನ 3:15 , ಏಪ್ರಿಲ್ 30, 1945 ರ ಗುರುವಾರ.

ಬರ್ಲಿನ್‌ ಅನ್ನು ನೆಲಸಮ ಮಾಡಿದ ರಷ್ಯಾದ ಪಿರಂಗಿದಳವು ಆರು ವರ್ಷಗಳ ಹಿಟ್ಲರ್‌‌ನ ಹತ್ಯಾಕಾಂಡದ ರಕ್ತಸಿಕ್ತ ಅಧ್ಯಾಯವನ್ನು ಮುಗಿಸಿದರು.

ಇದನ್ನೂ ಓದಿ: ಅಕ್ಕಿ ಕೊಡಿ ಎಂದ ರೈತನಿಗೆ ‘ಸತ್ತೊಗು’ ಎಂದ ಆಹಾರ ಸಚಿವ ಉಮೇಶ್ ಕತ್ತಿ

ಲಕ್ಷಾಂತರ ಜನರ ಹತ್ಯೆಗೆ ಕಾರಣವಾದ, ಇಡೀ ಯುರೋಪ್‌ ಖಂಡವನ್ನು ಎರಡನೆಯ ಮಹಾಯುದ್ಧದಲ್ಲಿ ಮುಳುಗಿಸಿದ, ವಿಶ್ವದಾದ್ಯಂತ ದುಃಖ ಮತ್ತು ವಿನಾಶವನ್ನು ಹರಡಿದ, ತನ್ನನ್ನು ತಾನು ಆರ್ಯ ಜನಾಂಗೀಯ ಎಂದು ಘೋಷಿಸಿದ್ದ, ಜನಾಂಗೀಯವಾದಿ ಕ್ರೂರಿ ವ್ಯಕ್ತಿಯೊಬ್ಬ ಕೊನೆಗೂ ತನ್ನನ್ನು ತಾನೆ ಕೊಂದುಕೊಂಡು ಬಿಟ್ಟಿದ್ದ.

ಮಹಿಳೆ, ಮಕ್ಕಳು ಸೇರಿದಂತೆ ಹಿಟ್ಲರನ ಅಟ್ಟಹಾಸಕ್ಕೆ ಜೀವ ತೆತ್ತಿದ್ದು ಅಮಾಯಕ 60 ಲಕ್ಷ ಜೀವಗಳು!

ಇದಕ್ಕಿಂತಲೂ ಎರಡು ದಿನ ಮುಂಚೆ ಆಸ್ಟ್ರೀಯಾಕ್ಕೆ ಪಲಾಯನಕ್ಕೆ ಹೊರಟಿದ್ದ ಇಟಲಿಯ ಸರ್ವಾಧಿಕಾರಿ ಮುಸ್ಸಲೋನಿ ಮತ್ತು ಆತನ ಪತ್ನಿಯನ್ನು ಕಮ್ಯುನಿಷ್ಟ್‌ ಪಕ್ಷದ ಕಾರ್ಯಕರ್ತರು ಸೆರೆ ಹಿಡಿದಿದ್ದರು. ನಂತರ  ಅವರನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಅವರ ಮೃತದೇಹವನ್ನು ಟ್ರಕ್ ಮೂಲಕ ಇಟಲಿಯ ನಗರವಾದ ಮಿಲನ್‌ಗೆ ಸಾಗಿಸಿ, ಅಲ್ಲಿ ತಲೆಕೆಳಗಾಗಿ ನೇತುಹಾಕಿ ಸಾರ್ವಜನಿಕವಾಗಿ ಪ್ರದರ್ಶಿಸಲಾಯಿತು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಾವಧಿಯಲ್ಲಿ ಕೇವಲ ಒಂದೇ ಒಂದು ಏಮ್ಸ್ ಸ್ಥಾಪನೆಯಾಯಿತೆ…?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

  1. ಇತಿಹಾಸ ಮರುಕಳಿಸುವ ದಿನಗಳು ಸಮೀಪಿಸಿವೆ. ಭಾರತ ದೇಶಕ್ಕೆ ರಾಹುವಿನಂತೆ ಅಂಟಿಕೊಂಡಿರುವ ಮೋ(ದಿ)ರಿ ಕಳಂಕವೊಂದು ಇದೇ ರೀತಿಯ ಅಂತ್ಯ ಕಾಣಬೇಕಿದೆ.

LEAVE A REPLY

Please enter your comment!
Please enter your name here